KGF Film Actor: ಕೆಜಿಎಫ್ ತಾತನಿಗೆ ಒಲಿದ ಅದೃಷ್ಟ, ಮುದುಕನ ಲವ್ ಸ್ಟೋರಿ ಚಿತ್ರಕ್ಕೆ ಅವರೇ ಹೀರೋ!

New Film Update: ಕೆಜಿಎಫ್ ಕಾರಣದಿಂದ ನನಗೆ ನೆಮ್ಮದಿ ಜೀವನ ನಡೆಸಲು ಸಹಾಯವಾಗಿದೆ ಎಂದು ಹೇಳಿಕೊಂಡಿದ್ದಾರೆ.  ಇನ್ನು ಮುದುಕನ ಲವ್ ಸ್ಟೋರಿ ನಿಜಕ್ಕೂ ವಿಭಿನ್ನ ಕತೆಯನ್ನು ಹೊಂದಿದ್ದು, ಕಾಮಿಡಿ ಚಿತ್ರವಾಗಿದೆ ಎಂದು ಚಿತ್ರತಂಡ ತಿಳಿಸಿದೆ.

ಕೃಷ್ಣ ಜಿ ರಾವ್

ಕೃಷ್ಣ ಜಿ ರಾವ್

  • Share this:
ಯಶ್ (Yash) ನಟನೆಯ ಕೆಜಿಎಫ್ ಚಾಪ್ಟರ್ (KGF 1) ಒಂದು ಮತ್ತು ಕೆಜಿಎಫ್ 2 (KGF 2)  ಕನ್ನಡ ಚಿತ್ರರಂಗ (Sandalwood) ಮಾತ್ರವಲ್ಲದೇ ಭಾರತದ (India) ಚಿತ್ರೋದ್ಯಮದಲ್ಲಿ ಹೊಸ ಅಲೆಯನ್ನು ಸೃಷ್ಟಿ ಮಾಡಿದೆ. ಅದರಲ್ಲಿ ಅಭಿನಯಿಸಿರುವ ಪ್ರತಿಯೊಬ್ಬರಿಗೆ ಅವಕಾಶಗಳ ಸುರಿಮಳೆ ಸಹ ಸುರಿಯುತ್ತಿದೆ. ಅವರ ಬದುಕು ಒಂದು ರೀತಿಯಲ್ಲಿ ಬದಲಾಗಿದೆ ಎಂದರೆ ತಪ್ಪಲ್ಲ. ಈಗ ಇದರಲ್ಲಿ ನಟಿಸಿದ ಹಿರಿಯ ನಟರೊಬ್ಬರಿಗೆ ನಾಯಕನಾಗುವ ಅದೃಷ್ಟ ಒದಗಿ ಬಂದಿದೆ.

ಹೌದು, ಕೆಜಿಎಫ್​ ಸಿನಿಮಾದಲ್ಲಿ ದೃಷ್ಟಿ ವಿಶೇಷಚೇತನ ಮುದುಕನಾಗಿ ಕಾಣಿಸಿಕೊಂಡು ಅದ್ಭುತ ನಟನೆ ಮಾಡಿ ಫೇಮಸ್ ಆಗಿದ್ದ ಹಿರಿಯ ನಟ ಕೃಷ್ಣ ಜಿ ರಾವ್ ಇದೀಗ ವಿಶೇಷ ಸಿನಿಮಾ ಒಪ್ಪಿಕೊಂಡಿದ್ದು, ಅದರಲ್ಲಿ ಅವರೇ ನಾಯಕ. ಇದು ಆಶ್ಚರ್ಯವಾದ್ರೂ ಸತ್ಯ. ಈ ಹೊಸ ಚಿತ್ರಕ್ಕೆ ‘ಮುದುಕನ ಲವ್ ಸ್ಟೋರಿ’ ಎಂದು ಹೆಸರು ಇಡಲಾಗಿದ್ದು, ಕೃಷ್ಣ ಜಿ ರಾವ್ ಏನು ಮೋಡಿ ಮಾಡಲಿದ್ದಾರೆ ನೋಡಬೇಕಿದೆ.

ಕೆಜಿಎಫ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ನಂತರ ಕೃಷ್ಣ ಜಿ ರಾವ್ ಅವರಿಗೆ ಹಲವಾರು ಅವಕಾಶಗಳು ಒದಗಿಬಂದಿದೆ. ಅವರು ಸಹ ಒಳ್ಳೆಯ ಕತೆಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.   ಕೆಜಿಎಫ್ ಸಿನಿಮಾದಲ್ಲಿ ಇವರ ಪಾತ್ರ ಜಾಸ್ತಿ ಇರಲಿಲ್ಲ. ಆದರೂ ಸಹ ಸಣ್ಣ ಪಾತ್ರದ ಮೂಲಕವೇ ಜನರ ಮನಸಲ್ಲಿ ನೆನಪುನಲ್ಲಿ ಉಳಿಯುವಂತೆ ಮಾಡಿದ್ದರು. ಅಲ್ಲದೇ ಅವರ ಪಾತ್ರ ಸಣ್ಣದಿದ್ದರೂ ಸಹ ವಿಶೇಷವಾಗಿತ್ತು, ಹಾಗಾಗಿ ಜನರಿಗೆ ಬಹಳ ಇಷ್ಟ ಎನ್ನಬಹುದು.

ಕೆಜಿಎಫ್​ ಚಿತ್ರದಿಂದ ಈ ಅವಕಾಶ ಬರುತ್ತಿದೆ

ಹಾಗಾಗಿ ಅವರಿಗೆ ಮತ್ತೆ ಹಲವಾರು ಅವಕಾಶಗಳು ಬರುತ್ತಿದೆ ಎನ್ನಬಹುದು. ಇನ್ನು ಮಾಹಿತಿ ಪ್ರಕಾರ ಮುದುಕನ ಲವ್ ಸ್ಟೋರಿ ಚಿತ್ರದ ಶೂಟಿಂಗ್ ಈಗಾಗಲೇ ಮುಗಿದಿದೆ. ಸದ್ಯ ಡಬ್ಬಿಂಗ್ ನಡೆಯುತ್ತಿದ್ದು, ಇನ್ನೂ ಬಿಡುಗಡೆಯ ದಿನಾಂಕ ನಿಗಧಿಯಾಗಿಲ್ಲ.  ಇನ್ನು ಈ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ಅವರು, ನನಗೆ ಹಲವಾರು ಚಿತ್ರಗಳ ಆಫರ್ ಬರುತ್ತಿದೆ. ಅದಕ್ಕೆ ಕಾರಣ ಕೆಜಿಎಫ್ ಚಿತ್ರ ಎಂದು ಪ್ರಶಾಂತ್ ನೀಲ್​ ಹಾಗೂ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.

ಕೆಜಿಎಫ್ 1 ಸಿನಿಮಾದ ನಂತರ ಕೃಷ್ಣ ರಾವ್ ಅವರಿಗೆ ಬಂದ ಆಫರ್​ ಹಲವಂತೆ. ಆದರೆ ಅವರು ಒಳ್ಳೆಯ ಕತೆಯನ್ನು ಆಯ್ಕೆ ಮಾಡಿದ್ದಾರೆ. ಆದರು ಸಹ ಚಾಪ್ಟರ್ 1 ರ ನಂತರ ಬರೋಬ್ಬರಿ  ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದೀನಿ ಎನ್ನುತ್ತಾರೆ ಕೃಷ್ಣ ಜಿ ರಾವ್. ಇನ್ನು ಕೆಜಿಎಫ್​ 2 ಬಿಡಿಗಡೆಯ ನಂತರ 15 ಚಿತ್ರದಲ್ಲಿ ನಟಿಸಿದ್ದು, ನಿಜಕ್ಕೂ ಒಳ್ಳೆಯ ಆಪರ್​ಗಳು ಬರುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಇಂದು ಸ್ಯಾಂಡಲ್​ವುಡ್​ ಕ್ರೇಜಿಸ್ಟಾರ್​ ಜನ್ಮದಿನ - 'ಬೋಪಣ್ಣ'ಗೆ ಭರ್ಜರಿ ಬರ್ತ್ ಡೇ ಗಿಫ್ಟ್

ಒಂದು ಚಿಕ್ಕ ಪಾತ್ರ ಹೆಸರು ನೀಡಿದೆ

ಇನ್ನು ಚಿತ್ರರಂಗದಲ್ಲಿ ಬಹಳ ವರ್ಷಗಳಿಂದ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿರುವ ಕೃಷ್ಣ ಅವರು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದು, ಇಷ್ಟು ವರ್ಷಗಳಲ್ಲಿ ಯಾರೂ ಗುರುತಿಸಿರಲಿಲ್ಲ. ಕಷ್ಟಪಟ್ಟು ದುಡಿದಿದ್ದೇನೆ, ಆದರೆ ಎನೂ ಸಂಪಾದನೆ ಮಾಡಿಲ್ಲ. ಈ ಒಂದು ಚಿಕ್ಕ ಪಾತ್ರ ನನಗೆ ಹೆಸರು ಕೊಟ್ಟಿದೆ ಜೊತೆಗೆ ಸಂಪಾದನೆಯನ್ನು ಸಹ ಎಂದಿದ್ದಾರೆ.

ಕೆಜಿಎಫ್ ಕಾರಣದಿಂದ ನನಗೆ ನೆಮ್ಮದಿ ಜೀವನ ನಡೆಸಲು ಸಹಾಯವಾಗಿದೆ ಎಂದು ಹೇಳಿಕೊಂಡಿದ್ದಾರೆ.  ಇನ್ನು ಮುದುಕನ ಲವ್ ಸ್ಟೋರಿ ನಿಜಕ್ಕೂ ವಿಭಿನ್ನ ಕತೆಯನ್ನು ಹೊಂದಿದ್ದು, ಕಾಮಿಡಿ ಚಿತ್ರವಾಗಿದೆ ಎಂದು ಚಿತ್ರತಂಡ ತಿಳಿಸಿದೆ.

ಇದನ್ನೂ ಓದಿ: ಶಾರುಖ್ ಖಾನ್ ಮನೆಯ 25 ಲಕ್ಷದ ನೇಮ್ ಪ್ಲೇಟ್‌ ನಾಪತ್ತೆ! 'ಮನ್ನತ್' ಬೋರ್ಡ್ ಕಳೆದೇ ಹೋಯ್ತಾ?

ಅಲ್ಲದೇ ಇದರಲ್ಲಿ ಹೇಗೆ ಹಿರಿಯ ವ್ಯಕ್ತಿಯೊಬ್ಬರು ಮದವೆಯಾಗಲು ಪರದಾಡುತ್ತಾರೆ, ಏನೆಲ್ಲಾ ಸಾಹಸ ಮಾಡುತ್ತಾರೆ ಎಂಬುದನ್ನು ಎಳೆ ಎಳೆಯಾಗಿ, ಕಾಮಿಡಿ ಮುಖಾಂತರ ತೋರಿಸಲಾಗಿದೆ. ಸದ್ಯ ಕೃಷ್ಣ ಜಿ ರಾವ್​ ಅವರು ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದು, ಬಿಡುಗಡೆ ನಂತರ ಏನಾಗಲಿದೆ ಎಂದು ನೋಡಬೇಕಿದೆ.
Published by:Sandhya M
First published: