ರಾಕಿಭಾಯ್​ ಹುಟ್ಟುಹಬ್ಬಕ್ಕಿದೆ ಎರಡೇ ದಿನ: ಬ್ರೇಕ್​ ಬೀಳಲಿದೆಯಾ ಈ ಬಾರಿಯ ಆಚರಣೆಗೆ..?

ಒಂದು ಕಡೆ ಯಶ್​ಗೆ ಸಂತೋಷದ ಸುದ್ದಿಯ ಜತೆಗೆ ಕಹಿ ಘಟನೆಯ ಅನುಭವವೂ ಆಗುತ್ತಿದೆ. ಈ ಹಿಂದೆ ಅಂಬಿಯ ಅಗಲಿಕೆಯ ನೋವು ಇದರ ಬೆನ್ನಲ್ಲೇ ಮಗಳು ಹುಟ್ಟಿದ ಸಂಭ್ರಮ, ನಂತರ ಕೆ.ಜಿ.ಎಫ್​ ಸಿನಿಮಾದ ಯಶಸ್ಸು... ಅದರ ಹಿಂದೆಯೇ ಐಟಿ ದಾಳಿ... ಕಳೆದ ವರ್ಷಾಂತ್ಯ ಹಾಗೂ ಹೊಸ ವರ್ಷದ ಆರಂಭ ಯಶ್​ಗೆ ಒಂದು ರೀತಿ ಸಿಹಿ-ಕಹಿಯ ಹೂರಣವಾಗಿತ್ತು. ಇದರಿಂದಾಗಿ ಈ ಸಲದ ಅವರ ಹುಟ್ಟುಹಬ್ಬಕ್ಕೂ ಬೀಳಲಿದೆಯಂತೆ ಬ್ರೇಕ್​...

Anitha E | news18
Updated:January 6, 2019, 4:22 PM IST
ರಾಕಿಭಾಯ್​ ಹುಟ್ಟುಹಬ್ಬಕ್ಕಿದೆ ಎರಡೇ ದಿನ: ಬ್ರೇಕ್​ ಬೀಳಲಿದೆಯಾ ಈ ಬಾರಿಯ ಆಚರಣೆಗೆ..?
ಯಶ್​
  • News18
  • Last Updated: January 6, 2019, 4:22 PM IST
  • Share this:
ನೆಚ್ಚಿನ ನಟನ ಹುಟ್ಟುಹಬ್ಬದ ದಿನಾಂಕ ಹತ್ತಿರವಾಗುತ್ತಿದೆ ಎಂದರೆ ಸಾಕು ತಿಂಗಳು ಮುಂಚಿತವಾಗೇ ಅದಕ್ಕೆ ತಯಾರಿ ನಡೆಸುತ್ತಾರೆ ಅಭಿಮಾನಿಗಳು. ಹಾಗೆಯೇ ಜನವರಿ ಅಂದರೆ ನೆನಪಾಗೋದು ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ. 'ಕೆ.ಜಿ.ಎಫ್' ಸಿನಿಮಾ ಬಿಡುಗಡೆಯಾಗಿ ಅದ್ದೂರಿ ಯಶಸ್ಸು ಕಂಡಿದೆ. ಇದರಿಂದಾಗಿ ಈ ಬಾರಿಯ ಹುಟ್ಟುಹಬ್ಬದ ಸಂಭ್ರಮವೂ ಜೋರಾಗಿರಲಿದೆ ಎಂದುಕೊಂಡಿದ್ದಾರೆ ಅಭಿಮಾನಿಗಳು. ಆದರೆ ರಾಕಿಂಗ್ ಅಡ್ಡದಿಂದ ಒಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ ಅದು ಏನಂತಿರಾ? ಈ ವರದಿ ಓದಿ ನಿಮಗೆ ತಿಳಿಯುತ್ತೆ...

ಇದನ್ನೂ ಓದಿ: ದೀಪಿಕಾ-ರಣವೀರ್​ ಇನ್ನೂ ಒಂದು ವರ್ಷ ಇರಬೇಕು ದೂರ-ದೂರ..!

ಜನವರಿ 8 ಯಶ್​ ಹುಟ್ಟಿದ ಹಬ್ಬ. ಅದಕ್ಕಾಗಿ ಅವರ ಅಭಿಮಾನಿಗಳೆಲ್ಲ ಸಿಕ್ಕಾಪಟ್ಟೆ ತಯಾರಿ ನಡೆಸುತ್ತಿದ್ದಾರೆ. ಹೀಗಿರುವಾಗಲೇ ಗಾಂಧಿನಗರದ ಗಲ್ಲಿಯಿಂದ ಸುದ್ದಿಯೊಂದು ಹೊರ ಬಿದ್ದಿದೆ. ಅದೇ ಯಶ್ ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎನ್ನುವುದು.

ಅರೇ ಹೌದಾ.. ಚಾನ್ಸೇ ಇಲ್ಲ ಅಂತ ನೀವು ಅಂದುಕೊಂಡಿರಬಹುದು. ಆದರೂ ಇದು ನಿಜ ಎನ್ನುತ್ತಿದೆ ಮೂಲಗಳು. ಸದ್ಯ ಈ ರೀತಿಯ ವಿಷಯಗಳಿಂದಾಗಿ  ಅಭಿಮಾನಿಗಳು ಗೊಂದಲದಲ್ಲಿದ್ದಾರೆ. ಕಾರಣ ತಿಳಿಯದೇ ಸಪ್ಪಗಾಗಿದ್ದಾರೆ. ಅಷ್ಟಕ್ಕೂ ಯಶ್‍ರ ಈ ನಿರ್ಧಾರದ ಹಿಂದೆರೋ ಕಾರಣ ಏನು ಅಂತ ತಿಳಿದರೆ ನೀವೂ ಸುಮ್ಮನಾಗುತ್ತೀರಾ. ಒಳ್ಳೆಯ ತೀರ್ಮಾನ ಅಂತ ಹಾಡಿ ಹೊಗಳುತ್ತೀರಾ. ಹೌದು ಇದರ ಹಿಂದಿರೋ ಕಾರಣ ಅಂಬಿಯ ನಿಧನ.

ಅಂಬರೀಷರ ನಿಧನ ಇಡೀ ಸ್ಯಾಂಡಲ್‍ವುಡ್‍ಗೆ ತುಂಬಲಾರದ ನಷ್ಟವಾಗಿದೆ. ಅಂಬಿ ನಿಧನದ ಸುದ್ದಿಯಿಂದ ಈಗಲು ಅದೆಷ್ಟೋ ಮಂದಿ ಹೊರ ಬಂದಿಲ್ಲ.. ಹೀಗಿರಬೇಕಾದರೆ ಅಂಬರೀಷ ಅವರಿಗೆ ಮಗನಂತಿದ್ದ, ಕಷ್ಟಕ್ಕೆ ಹೆಗಲು ಕೊಡುತ್ತಿದ್ದ ಯಶ್‍ಗೆ ಈ ಸುದ್ದಿ ಸಿಡಿಲು ಬಡಿದಂತಾಗಿತ್ತು. ಈಗಲೂ ಅಂಬರೀಷರನ್ನ ಕಳೆದುಕೊಂಡ ನೋವಿನಿಂದ ಹೊರಬಾರದ ಯಶ್, ಸದಾ ಅವರನ್ನ ನೆನೆಯುತ್ತಲೇ ಇರುತ್ತಾರೆ. ಯಶ್ ಮತ್ತು ರಾಧಿಕಾಗೆ ಮಗು ಜನಿಸಿದಾಗಲು ಯಶ್ ಅಂಬಿಯ ಸ್ಮರಣೆ ಮಾಡಿದ್ದರು. ಅಂಬರೀಷ್​ ಇದ್ದಿದ್ದರೆ ತುಂಬ ಖುಷಿ ಪಡುತ್ತಿದ್ದರು ಅಂತ ನೊಂದುಕೊಂಡಿದ್ದರು.

ಇದನ್ನೂ ಓದಿ: ಪ್ರೀತಿಗಾಗಿ ಅವನಾದ ಅವಳ ಕತೆ: ಆದರೆ ನಂತರ ಆಗಿದ್ದೇನು ಗೊತ್ತಾ..?

ಈ ಕಾರಣದಿಂದಲೇ ಯಶ್ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಅನುಮಾನ ಎನ್ನುತ್ತಿದೆ ಆಪ್ತ ಮೂಲಗಳು. ಅಭಿಮಾನಿಗಳು ಈ ಸುದ್ದಿ ತಿಳಿದು ಕೊಂಚ ಬೇಸರದಲ್ಲಿದ್ದು, ಕಾರಣ ತಿಳಿದು ಸುಮ್ಮನಾಗುತ್ತಿದ್ದಾರೆ. ಇನ್ನು ಕೆಲವರು ಸರಳವಾಗಿ ಆದರೂ ಹುಟ್ಟುಹಬ್ಬ ಆಚರಿಸಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.ಕೇವಲ ಯಶ್ ಮಾತ್ರವಲ್ಲ. ಅಂಬಿ ನಿಧನದ ನಂತರದಲ್ಲಿ ನಟ ವಿನೋದ್ ಪ್ರಭಾಕರ್ ಹಾಗೂ ನಟ ಮನೋರಂಜನ್​ ರವಿಚಂದ್ರನ್ ಸಹ ಹುಟ್ಟುಹಬ್ಬದ  ಸಂಭ್ರಮಕ್ಕೆ ಬ್ರೇಕ್​ ಹಾಕಿದ್ದರು. ಮುಂದಿನ ತಿಂಗಳು ಅಂದರೆ ಫೆಬ್ರುವರಿ 16 ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಬಹಬ್ಬ ಕೂಡ ಇದ್ದು, ಅವರೂ ಸೆಲಬ್ರೇಟ್ ಮಾಡಿಕೊಳ್ಳುತ್ತಾರಾ ಅಥವಾ ಇಲ್ಲವಾ ಅನ್ನೋ ಚರ್ಚೆ ಈಗಾಗಲೇ ಆರಂಭವಾಗಿದೆ.

ದರ್ಶನ್ ಕೂಡ ಅಂಬಿಗೆ ಬಹಳ ಆತ್ಮೀಯರಾಗಿದ್ದರು. ಅಂಬರೀಷರ ನಿಧನದ ಸಮಯದಲ್ಲಿ ಚಿತ್ರೀಕರಣವನ್ನು ಅರ್ಧಕ್ಕೆ ಬಿಟ್ಟು, ಇಡೀ ಕಾರ್ಯದಲ್ಲಿ ಕುಟುಂಬಸ್ಥರಿಗೆ ನೆರವಾಗಿದ್ದರು. ಹೀಗಾಗಿ ದಾಸನಲ್ಲಿ ಅಂಬರೀಷರನ್ನ ಕಳೆದುಕೊಂಡಿರೋ ನೋವು ಅಗಾಧವಾಗಿದ್ದು, ದಚ್ಚು ಹುಟ್ಟುಹಬ್ಬ ಆಚರಿಸಿ ಕೊಳ್ಳುತ್ತಾರಾ ಅನ್ನೋ ಪ್ರಶ್ನೆ ಕೂಡ ಈಗ ಉದ್ಭವಿಸಿದೆ.

First published:January 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading