Prashanth Neel: ಕೆ.ಜಿ.ಎಫ್.​ ಚಿತ್ರತಂಡದಿಂದ ಹೊಸ ಅಪ್​ಡೇಟ್​​​​; ನಿರ್ದೇಶಕ ಪ್ರಶಾಂತ್​ ನೀಲ್​ ಏನು ಮಾಡುತ್ತಿದ್ದಾರೆ ಗೊತ್ತಾ?

KGF Chapter-2: ಇತ್ತೀಚೆಗೆ ಕೆ.ಜಿ.ಎಫ್-2​ ಚಿತ್ರ ಅಕ್ಟೋಬರ್​ ತಿಂಗಳಿನಲ್ಲಿ ಬಿಡುಗಡೆಯಾಗುತ್ತದೆ ಎಂಬ ಮಾಹಿತಿಯನ್ನು ಬಿಟ್ಟರೆ ಬೇರೆ ಯಾವುದೇ ಮಾಹಿತಿ ಕೆ.ಜಿ.ಎಫ್​ ಚಿತ್ರತಂಡದಿಂದ ಹೊರ ಬಿದ್ದಿರಲಿಲ್ಲ. ಇದೀಗ ಚಿತ್ರದ ಬಗ್ಗೆ ಕಾರ್ತಿಕ್​ ಗೌಡ  ತಮ್ಮ ಟ್ಟಿಟ್ಟರ್​ನಲ್ಲಿ ಹೇಳಿಕೊಂಡಿದ್ದಾರೆ.

news18-kannada
Updated:May 18, 2020, 8:24 AM IST
Prashanth Neel: ಕೆ.ಜಿ.ಎಫ್.​ ಚಿತ್ರತಂಡದಿಂದ ಹೊಸ ಅಪ್​ಡೇಟ್​​​​; ನಿರ್ದೇಶಕ ಪ್ರಶಾಂತ್​ ನೀಲ್​ ಏನು ಮಾಡುತ್ತಿದ್ದಾರೆ ಗೊತ್ತಾ?
ಕೆ.ಜಿ.ಎಫ್-2​
  • Share this:
ಬಹುನಿರೀಕ್ಷಿತ ಕೆ.ಜಿ.ಎಫ್. ಚಾಪ್ಟರ್​​-2​ ಸಿನಿಮಾದ ಬಗ್ಗೆ ಕಾದು ಕುಳಿತ್ತಿದ್ದ ಅಭಿಮಾನಿಗಳಿಗೆ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್​ ಗೌಡ ಹೊಸ ಅಪ್ಡೇಟ್​ ಅನ್ನು ನೀಡಿದ್ದಾರೆ. ಇತ್ತೀಚೆಗೆ ಕೆ.ಜಿ.ಎಫ್-2​ ಚಿತ್ರ ಅಕ್ಟೋಬರ್​ ತಿಂಗಳಿನಲ್ಲಿ ಬಿಡುಗಡೆಯಾಗುತ್ತದೆ ಎಂಬ ಮಾಹಿತಿಯನ್ನು ಬಿಟ್ಟರೆ ಬೇರೆ ಯಾವುದೇ ಮಾಹಿತಿ ಕೆ.ಜಿ.ಎಫ್​ ಚಿತ್ರತಂಡದಿಂದ ಹೊರ ಬಿದ್ದಿರಲಿಲ್ಲ. ಇದೀಗ ಚಿತ್ರದ ಬಗ್ಗೆ ಕಾರ್ತಿಕ್​ ಗೌಡ  ತಮ್ಮ ಟ್ಟಿಟ್ಟರ್​ನಲ್ಲಿ ಹೇಳಿಕೊಂಡಿದ್ದಾರೆ.

ಕಾರ್ತಿಕ್​ ಗೌಡ ಟ್ವಿಟ್ಟರ್​ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು, ಕೆ.ಜಿ.ಎಫ್​ ಚಾಪ್ಟರ್​ 2 ಮ್ಯೂಸಿಕ್​ ಸೆಷನ್​ ಎಂದು ಬರೆದುಕೊಂಡಿದ್ದಾರೆ. ಇನ್ನು ಫೋಟೋದಲ್ಲಿ ನಿರ್ದೇಶಕ ಪ್ರಶಾಂತ್​ನೀಲ್​, ಸಂಗೀತ ಸಂಯೋಜಕ ರವಿ ಬಸ್ರೂರು, ಭುವನ್​ ಗೌಡ ಮತ್ತು ಕಾರ್ತಿಕ್​ ಗೌಡ ಇದ್ದಾರೆ. ಹಾಗಾಗಿ ಲಾಕ್​ಡೌನ್​ ಸಮಯದಲ್ಲಿ ಕೆ.ಜಿ.ಎಫ್​ ಕೆಲಸಗಳು ನಡೆಯುತ್ತಿದ್ದೆ ಎಂಬುದನ್ನು ಫೋಟೋ ಹಾಕುವ ಮೂಲಕ ತಿಳಿಸಿದ್ದಾರೆ.


ಇನ್ನು ಕಾರ್ತಿಕ್​ ಗೌಡ ಹಾಕಿಕೊಂಡಿರುವ ಫೋಟೋ ನೋಡಿ ಅನೇಕರು ಕಾಮೆಂಟ್​ ಬರೆದಿದ್ದಾರೆ. ಟ್ರೇಲರ್​, ಟೀಸರ್​ ಬಗ್ಗೆ ಕಾದು ಕುಳಿತ್ತಿದ್ದೇವೆ ಎಂದು ಅಭಿಮಾನಿಯೊಬ್ಬ ಕಾಮೆಂಟ್​ ಬರೆದರೆ. ಮತ್ತೊಬ್ಬ ಅಭಿಮಾನಿ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಬಹಿನಿರೀಕ್ಷಿತ ಕೆ.ಜಿ.ಎಫ್-2​ ಸಿನಿಮಾ ಈ ಹಿಂದೆ ಹೇಳಿದಂತೆ ಅಕ್ಟೋಬರ್​ 23ರಂದು ತೆರೆಗೆ ಬರಲು ಸಿದ್ಧತೆ ನಡೆಸುತ್ತಿದೆ. ರಾಕಿಂಗ್​ ಸ್ಟಾರ್​ ಯಶ್​ ಮತ್ತೆ ತೆರೆ ಮೇಲೆ ಮೋಡಿ ಮಾಡಲಿದ್ದಾರೆ. ವಿಶೇಷವಾಗಿ ಚಾಪ್ಟರ್​-2ನಲ್ಲಿ ಬಾಲಿವುಡ್​ ಖ್ಯಾತ ನಟರಾದ ಸಂಜಯ್​ ದತ್​ ಮತ್ತು ನಟಿ ರವೀನಾ ಟಂಡನ್​ ನಟಸಿದ್ದಾರೆ. ಹಾಗಾಗಿ ಅಭಿಮಾನಿಗಳ ಕುತೂಹಲ ದುಪ್ಪಟ್ಟಾಗಿದೆ.ಇನ್​ಸ್ಟಾಗ್ರಾಂ ಖಾತೆಯಿಂದ ಹೊರ ಬಂದ ಕಣ್ಸನ್ನೆ ಬೆಡಗಿ; ಅಷ್ಟಕ್ಕೂ ಕಾರಣವೇನು?
Published by: Harshith AS
First published: May 18, 2020, 6:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading