ಪ್ರಶಾಂತ್ ನೀಲ್, ಕೆಜಿಎಫ್ ಮೂಲಕ ಕನ್ನಡ ಚಿತ್ರರಂಗವನ್ನು ಇನ್ನೊಂದು ಮಟ್ಟಕ್ಕೆ ಕೊಂಡೊಯ್ದ ನಿರ್ದೇಶಕ. ಸ್ಯಾಂಡಲ್ವುಡ್ ನಲ್ಲಿ ಈ ಮಟ್ಟಕ್ಕೂ ಮೇಕಿಂಗ್ ಮಾಡಬಹುದಾ? ಅಂತ ಪರಭಾಷಿಗರೂ ಸಹ ಬಾಯಿ ಮೇಲೆ ಬೆರಳಿಟ್ಕೊಳುವಂತೆ ಮಾಡಿದೆ ನಿರ್ದೇಶಕ. ಇಂತಹ ಪ್ರಶಾಂತ್ ನೀಲ್ ಈಗ ಕೆಜಿಎಫ್-2 ನಲ್ಲಿ ಬ್ಯುಸಿ ಇದ್ದಾರೆ. ಕೆಜಿಎಫ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನ ನ್ಯಾಷನಲ್ ಲೆವೆಲ್ಗೆ ಕೊಂಡೊಯ್ದ ಪ್ರಶಾಂತ್, ಚಾಪ್ಟರ್2 ಚಿತ್ರದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಚಂದನವನ ಮಿರುಗುವಂತೆ ಮಾಡೋದರಲ್ಲಿ ಅನುಮಾನವೇ ಇಲ್ಲ.
ಇದರ ನಡುವೆ ಪ್ರಶಾಂತ್ ನೀಲ್ ಮುಂದಿನ ಸಿನಿಮಾ ಯಾವುದಿರಬಹುದು ಅನ್ನೋ ಕುತೂಹಲ ಚಿತ್ರ ಪ್ರೇಮಿಗಳದ್ದು ಮಾತ್ರವಲ್ಲ, ತೆಲುಗು, ತಮಿಳು, ಹಿಂದಿ ಸೇರಿದಂತೆ ಐದು ಭಾಷೆಗಳ ಚಿತ್ರೋದ್ಯಮವನ್ನ ಆವರಿಸಿರುವ ಪ್ರಶ್ಯೆಯಾಗಿದೆ.
Roberrt: ರಾಬರ್ಟ್ ಅಭಿಮಾನಿಗಳಿಗೆ ಡಿ.3ಕ್ಕೆ ಸಿಗಲಿದೆ ದೊಡ್ಡ ಸರ್ಪ್ರೈಸ್..!
ಪ್ರಶಾಂತ್ ನೀಲ್ ಅವರ ಮುಂದಿನ ಸಿನಿಮಾದಲ್ಲಿ ಯಾರು ಮೈನ್ ಲೀಡ್ ಆಗಿರ್ತಾರೆ ಎಂಬ ಚರ್ಚೆ ಕೆಜಿಎಫ್ ಸಿನಿಮಾ ಹಿಟ್ಟಾದಾಗಿನಿಂದಲೂ ನಡೆಯುತ್ತಿದೆ. ಒಮ್ಮೆ ಮಹೇಶ್ ಬಾಬುಗೆ ನೀಲ್ ನಿರ್ದೇಶನ ಇರುತ್ತೆ ಅನ್ನೋ ಟಾಕ್ ಹುಟ್ಟುದರೆ, ಮತ್ತೊಮ್ಮೆ ಜೂನಿಯರ್ ಎನ್ಟಿಆರ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದಿವೆ.
ಈಗ ಲೆಟೆಸ್ಟ್ ವಿಚಾರ ಏನಪ್ಪ ಅಂದ್ರೆ? ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಬಾಹುಬಲಿ ಪ್ರಭಾಸ್ ಆಕ್ಟ್ ಮಾಡಲಿದ್ದಾರೆ ಎಂಬುದು. ಯೆಸ್ ಇದ್ದಕ್ಕಿದ್ದಂತೆ ಈ ಒಂದು ವಿಷಯ ಬೆಂಗಳೂರು ಟು ಹೈದರಾಬಾದ್ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಈ ವಿಚಾರ ಚರ್ಚೆಯಾಗೋಕೆ ಕಾರಣ ಇದೆ.
ಜಾನ್ ಅಬ್ರಹಾಂ ಮನೆ ಸೇರಿದ ದುಬಾರಿ ಸೂಪರ್ ಬೈಕ್; ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಂಡ ನಟ
ಅದೇನೆಂದರೆ ಹೊಂಬಾಳೆ ಫಿಲ್ಮ್ ಬ್ಯಾನರ್ನ ಸಾಮಾಜಿಕ ಜಾಲತಾಣದ ಪೋಸ್ಟ್. ಯೆಸ್ ಡಿಸೆಂಬರ್ ಮೂರರಂದು ಹೊಂಬಾಳೆ ಫಿಲ್ಮ್ಸ್ ವತಿಯಿಂದ ಇಂಡಿಯನ್ ಸಿನಿಮಾ ಅನೌನ್ಸ್ ಆಗಲಿದೆ ಎಂಬ ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್ ಅನ್ನೇ ಆಧರಿಸಿ ಈಗ ಚರ್ಚೆ ಶುರುವಾಗಿದೆ. ಈ ಇಂಡಿಯನ್ ಸಿನಿಮಾದ ನಾಯಕ ಪ್ರಭಾಸ್ ಆಗಿರಬಹುದು ಅಂತ ದೊಡ್ಡ ಟಾಕ್ ಎದ್ದಿದೆ. ಅದಕ್ಕೆ ಉತ್ತರ ಡಿಸೆಂಬರ್ 2ರ ಮಧ್ಯಾಹ್ನವೇ ಸಿಗಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ