• Home
  • »
  • News
  • »
  • entertainment
  • »
  • KGF Chapter 2: ಸಾಮಾಜಿಕ ಜಾಲತಾಣದ ಮೂಲಕ ಸಿನಿ ಅಭಿಮಾನಿಗಳಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಮನವಿ

KGF Chapter 2: ಸಾಮಾಜಿಕ ಜಾಲತಾಣದ ಮೂಲಕ ಸಿನಿ ಅಭಿಮಾನಿಗಳಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಮನವಿ

ಪ್ರಶಾಂತ್ ನೀಲ್

ಪ್ರಶಾಂತ್ ನೀಲ್

ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್, ಅಭಿಮಾನಿಗಳು ಜನರಲ್ಲಿ ಒಂದು ಮನವಿ ಮಾಡಿದ್ದಾರೆ. ಚಿತ್ರ ರಿಲೀಸ್ ಆದ ಮೇಲೆ ಯಾರೂ ಕೂಡ ಚಿತ್ರದ ವಿಡಿಯೋ ತುಣುಕು ಮತ್ತು ಫೋಟೋಗಳನ್ನು ಆನ್ ಲೈನ್ ನಲ್ಲಿ ಹಂಚಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.

  • Share this:

    ‘ಕೆಜಿಎಫ್​ ಚಾಪ್ಟರ್​ 2’ (KGF Chapter 2) ಸಿನಿಮಾ (Movie) ಕನ್ನಡ ಚಿತ್ರರಂಗ ಮಾತ್ರವಲ್ಲದೇ ದೇಶದಾದ್ಯಂತ (Country) ಹೊಸ ತೂಫಾನ್ ಎಬ್ಬಿಸಿದೆ. ಚಿತ್ರ  ನಾಳೆಯೇ ಅಂದರೆ ಏಪ್ರಿಲ್ 14 (April 14) ರಂದು ರಿಲೀಸ್  (Release) ಆಗಲಿದೆ. ಚಿತ್ರ ಮೊದಲ ದಿನವೇ ಹಲವು ದಾಖಲೆ ಬರೆಯುವ ಮುನ್ಸೂಚನೆ ನೀಡುತ್ತಿದೆ. ಗಲ್ಲಾಪೆಟ್ಟಿಗೆಯಲ್ಲಿ ‘ಕೆಜಿಎಫ್​ ಚಾಪ್ಟರ್​ 2’ ಚಿತ್ರ ಹೊಸ ದಾಖಲೆ ಬರೆಯಲಿದೆ. ‘ಕೆಜಿಎಫ್​ 2’ ಬಾಕ್ಸ್​ ಆಫೀಸ್​ ಕಲೆಕ್ಷನ್​ (KGF Chapter 2 Collection) ಬಗ್ಗೆ ಜನರಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಉಂಟಾಗಿದೆ. ಈಗಾಗಲೇ ದೇಶಾದ್ಯಂತ ಸಾವಿರಾರು ಚಿತ್ರಮಂದಿಗಳು ‘ಕೆಜಿಎಫ್​ ಚಾಪ್ಟರ್​ 2’  ಸಿನಿಮಾಗಾಗಿ ಮೀಸಲಾಗಿವೆ. ಅಭಿಮಾನಿಗಳು ಚಿತ್ರ ರಿಲೀಸ್ ಆಗುವುದನ್ನೇ ಕಾಯ್ತಿದ್ದಾರೆ.


    ‘ಕೆಜಿಎಫ್​ ಚಾಪ್ಟರ್​ 2’ ಚಿತ್ರ ಯಾವ ರೀತಿಯಲ್ಲಿ ಮೂಡಿ ಬಂದಿದೆ ಎಂಬುದನ್ನು ಕಣ್ತುಂಬಿಕೊಳ್ಳಲು ಸಿನಿ ರಸಿಕರು ಕಾಯುತ್ತಿದ್ದಾರೆ. ನಟ ಯಶ್​ ನಟನೆಯ ಅಬ್ಬರ, ಪ್ರಶಾಂತ್​ ನೀಲ್​ ನಿರ್ದೇಶನ ತೆರೆಯ ಮೇಲೆ ಧೂಳೆಬ್ಬಿಸುವುದನ್ನು ಕಾಣಲು ಈಗಾಗಲೇ ಜನರು ತುದಿಗಾಲ ಮೇಲೆ ನಿಂತಿದ್ದಾರೆ.


    ಸಿನಿ ಪ್ರೇಮಿಗಳಲ್ಲಿ ಪ್ರಶಾಂತ್ ನೀಲ್ ಮನವಿ


    ಈ ಮಧ್ಯೆ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್, ಅಭಿಮಾನಿಗಳು ಜನರಲ್ಲಿ ಒಂದು ಮನವಿ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಚಿತ್ರ ರಸಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ. “ಚಿತ್ರ ರಿಲೀಸ್ ಆದ ಮೇಲೆ ಯಾರೂ ಕೂಡ ಚಿತ್ರದ ವಿಡಿಯೋ ತುಣುಕು ಮತ್ತು ಫೋಟೋಗಳನ್ನು ಆನ್ ಲೈನ್ ನಲ್ಲಿ ಹಂಚಿಕೊಳ್ಳಬೇಡಿ” ಎಂದು ಮನವಿ ಮಾಡಿದ್ದಾರೆ.


    ಇದನ್ನೂ ಓದಿ: KGF - 2 ಜೊತೆ ಬಿಡುಗಡೆ ಆಗುತ್ತಿದೆ ಕಾಂತಾರಾ, ರಾಘವೇಂದ್ರ ಸ್ಟೋರ್ಸ್ ಚಿತ್ರದ ಟೀಸರ್, ಏನಿದು ಹೊಂಬಾಳೆ ಫಿಲ್ಮಂ ಹೊಸ ಫ್ಲಾನ್?


    “ಪೈರಸಿ ವಿರುದ್ಧ ಹೋರಾಡುವ ಸಮಯ ಬಂದಿದೆ”


    ಅಷ್ಟೇ ಅಲ್ಲ. “ನಾವೆಲ್ಲರೂ ಪೈರಸಿ ವಿರುದ್ಧ ಹೋರಾಡುವ ಸಮಯ ಬಂದಿದೆ”. ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಚಿತ್ರದ ವಿಡಿಯೋ ಮತ್ತು ಫೋಟೋಗಳನ್ನು ಆನ್ ಲೈನ್ ನಲ್ಲಿ ಶೇರ್ ಮಾಡದಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಮನವಿ ಮಾಡಿದ್ದಾರೆ.


    ಇನ್ನು ‘ಕೆಜಿಎಫ್​: ಚಾಪ್ಟರ್​ 2’ ಚಿತ್ರ ಮೊದಲ ದಿನ ಎಷ್ಟು ಗಳಿಕೆ ಮಾಡಬಹುದು ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಅಂದಾಜಿನ ಪ್ರಕಾರ, ಚಿತ್ರವು ಬಾಕ್ಸ್​ ಆಫೀಸ್​ನಲ್ಲಿ ಸುನಾಮಿ ಸೃಷ್ಟಿ ಮಾಡಲಿದೆ. ಉತ್ತರ ಭಾರತದಲ್ಲಿ ಚಿತ್ರಕ್ಕೆ ಸಖತ್​ ಹೈಪ್​ ಸಿಕ್ಕಿದೆ.  ಚಿತ್ರತಂಡ  ಕೂಡ ಭರ್ಜರಿ ಪ್ರಚಾರ ಮಾಡಿದೆ.




    ಕೆಜಿಎಫ್ 2 ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭ


    ಕೆಜಿಎಫ್ 2 ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಕೆಜಿಎಫ್ ​1ರಂತೆ ಇದು ಸಹ ಅದ್ಭುತವಾಗಿರಲಿದೆ ಎಂದು ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ಇತ್ತೀಚೆಗಷ್ಟೇ ಚಿತ್ರದ ತೂಫಾನ್, ಗಗನೀ ಹಾಡು ಹಾಗೂ ಟ್ರೈಲರ್​ ಬಿಡುಗಡೆಯಾಗಿ ಧೂಳೆಬ್ಬಿಸಿದೆ.


    ಇದೀಗ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಈ ಸಿನಿಮಾದ ಮೂರನೇ ಹಾಡು ರಿಲೀಸ್​ ಆಗಿದ್ದು, ಸುಲ್ತಾನ ಲಿರಿಕಲ್ ಹಾಡು ಬಿಡುಗಡೆಯಾಗಿದೆ. ಈ ಹಾಡು ಈಗಾಗಲೇ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ಜನರು ಹಾಡನ್ನು ನೋಡಿ ಇಷ್ಟಪಟ್ಟಿದ್ದಾರೆ.


    ಸಿನಿಮಾದ ಮೂರನೇ ಹಾಡು ರಿಲೀಸ್


    ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದು, ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳಂತೆ ಇದು ಸಹ ಧೂಳೆಬ್ಬಿಸಲಿದೆ ಎಂಬುದು ಯಶ್ ಅಭಿಮಾನಿಗಳ ಅಂಬೋಣ. RRR ರಣಧೀರ ರುದಿರೆಬ್ಬಿ ನಿಂತ ರಣಧೀರ ನರ ಕಸುತಿ ನಿಂತವೋ ಈಗ ಒಬ್ಬಂಟಿ ನಿಂತ ರಣಧೀರ ಎದೆಗಟ್ಟಿ ನಿಂತವೋ ಈಗ, ಎಂದು ಆರಂಭವಾಗುವ ಈ ಹಾಡು


    ಇದನ್ನೂ ಓದಿ: ತೂಫಾನ್​ ನಂತರ ಸುಲ್ತಾನ್​ ಅಬ್ಬರ - ರಿಲೀಸ್​ ಆಯ್ತು ಮೂರನೇ ಹಾಡು


    ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷನ್‌ನಲ್ಲಿ  ಬಿಡುಗಡೆಯಾಗಿದ್ದು, ಹಾಡು ಬಿಡುಗಡೆಯಾದ ಕೆಲವೇ ಹೊತ್ತಿದೆ ಲಕ್ಷಗಟ್ಟಲೆ ಜನರು ಇದನ್ನು ವೀಕ್ಷಿಸಿದ್ದಾರೆ. ಯಶ್​ ಅಭಿಮಾನಿಗಳು ಬಾಸ್​ ಚಿತ್ರಕ್ಕಾಗಿ  ಕಾಯುತ್ತಿದ್ದಾರೆ. ಭಾರತದಲ್ಲಿಯೇ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದೆ.

    Published by:renukadariyannavar
    First published: