ಈ ತಿಂಗಳಾಂತ್ಯದೊಳಗೆ ಕೆ.ಜಿ.ಎಫ್ ಚಿತ್ರತಂಡದಿಂದ ಬಿಗ್ ಸರ್​ಪ್ರೈಸ್..!

K.G.F. Chapter 2: ಒಟ್ಟಿನಲ್ಲಿ ಸಪ್ತಸಾಗರದಾಚೆಯೂ ಭರ್ಜರಿ ಯಶಸ್ಸುಗಳಿಸಿರುವ ಕೆ.ಜಿ.ಎಫ್ ಚಿತ್ರದ 2ನೇ ಭಾಗ ನಾನಾ ಕಾರಣಗಳಿಂದ ಪ್ರೇಕ್ಷಕರಲ್ಲಿ ಕುತೂಹಲವನ್ನು ಹುಟ್ಟು ಹಾಕುತ್ತಿದ್ದು, ಕೆಲ ದಿನಗಳ ಹಿಂದೆ ನರಾಚಿ ಸೆಟ್​ನ ಫೋಟೋಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

zahir | news18
Updated:July 24, 2019, 9:22 PM IST
ಈ ತಿಂಗಳಾಂತ್ಯದೊಳಗೆ ಕೆ.ಜಿ.ಎಫ್ ಚಿತ್ರತಂಡದಿಂದ ಬಿಗ್ ಸರ್​ಪ್ರೈಸ್..!
kgf-2
zahir | news18
Updated: July 24, 2019, 9:22 PM IST
ಹೊಸ ಅಧ್ಯಾಯ ಬರೆಯುವ ಸೂಚನೆಯೊಂದಿಗೆ 'ಕೆ.ಜಿ.ಎಫ್'​ ಚಿತ್ರ ಮುಕ್ತಾಯವಾಗಿತ್ತು. ಇದೀಗ ಹಳೆಯ ಪಾತ್ರಗಳೊಂದಿಗೆ ಮತ್ತಷ್ಟು ಹೊಸ ಪಾತ್ರಗಳು ಸೇರಿ ಕೆ.ಜಿ.ಎಫ್ ಚಾಪ್ಟರ್​- 2 ಚಿತ್ರೀಕರಣ ಆರಂಭವಾಗಿದೆ. ಶೂಟಿಂಗ್ ಪ್ರಾರಂಭವಾಗಿ ತಿಂಗಳುಗಳು ಕಳೆದರೂ  2ನೇ ಭಾಗದ ಯಾವುದೇ ಪಾತ್ರಗಳ ಫಸ್ಟ್​ ಲುಕ್ ಇದುವರೆಗೆ ರಿವೀಲ್ ಆಗಿಲ್ಲ.

ಅದರಲ್ಲೂ 'ಅಧೀರ' ಪಾತ್ರದ ಬಗ್ಗೆ ಕಿಂಚಿತ್ತು ಗುಟ್ಟು ಬಿಟ್ಟು ಕೊಡದೇ ಪ್ರಶಾಂತ್ ನೀಲ್ ಪ್ರೇಕ್ಷಕರನ್ನು ತುದಿಗಾಲಲ್ಲಿ ಇರಿಸಿ 'ಕೆ.ಜಿ.ಎಫ್' ಮೊದಲ ಭಾಗವನ್ನು ಮುಗಿಸಿದ್ದರು. ಇದೀಗ ಕೆ.ಜಿ.ಎಫ್-2 ಚಿತ್ರತಂಡ ಬಿಗ್ ಸರ್​ಪ್ರೈಸ್ ನೀಡಲು ಮುಂದಾಗಿದೆ ಎಂಬ ಸುದ್ದಿಯೊಂದು ಗಾಂಧಿನಗರದಲ್ಲಿ ಹುಟ್ಟಿಕೊಂಡಿದೆ.

ಇದಕ್ಕೆ ಬಹು ಮುಖ್ಯ ಕಾರಣ ನಿರ್ದೇಶಕ ಪ್ರಶಾಂತ್ ನೀಲ್ ಇತ್ತೀಚೆಗೆ ಮಾಡಿರುವ ಟ್ವೀಟ್. ಕಂಪ್ಯೂಟರ್ ಮುಂದೆ ಕೂತಿರುವ ಫೋಟೋ ಹಂಚಿಕೊಂಡಿದ್ದ ನಿರ್ದೇಶಕರು ಶೀಘ್ರದಲ್ಲೇ ಬಿಗ್ ನ್ಯೂಸ್ ನೀಡುವ ಸೂಚನೆ ನೀಡಿದ್ದರು. ಅದುವೇ 'ಅಧೀರ' ಪಾತ್ರದ ಫಸ್ಟ್​ ಲುಕ್  ಎಂಬ ಮಾತುಗಳು ಕೇಳಿ ಬರುತ್ತಿವೆ.

ಚಾಪ್ಟರ್​-2 ಆರಂಭದಿಂದಲೂ ರಾಕಿ ಭಾಯ್​ಗೆ ಟಕ್ಕರ್ ಕೊಡುವ ಪಾತ್ರದಲ್ಲಿ ಬಾಲಿವುಡ್​ ನಟ ಸಂಜಯ್ ದತ್ ನಟಿಸಲಿದ್ದಾರೆ ಎನ್ನಲಾಗಿತ್ತು. ಅಧೀರನ ಪಾತ್ರದಲ್ಲಿ ಅಭಿನಯಿಸಲು 'ಮುನ್ನಭಾಯ್' ಓಕೆ ಅಂದಿದ್ದಾರೆ ಎಂಬ ಸುದ್ದಿಗಳು ಸಹ ಹರಿದಾಡಿದ್ದವು. ಆದರೆ ಸಂಜು ಬಾಬಾ 'ಕೆ.ಜಿ.ಎಫ್-2'ನಲ್ಲಿ ಇರುತ್ತಾರಾ ಎಂಬ ಪ್ರಶ್ನೆಗೆ ಚಿತ್ರತಂಡ ಇದುವರೆಗೆ ಉತ್ತರ ನೀಡಿರಲಿಲ್ಲ.

ಆದರೀಗ ನಿರ್ದೇಶಕ ಪ್ರಶಾಂತ್ ನೀಲ್ ತಯಾರಿ ಹಾಗೂ ಸಂಜಯ್ ದತ್ ಹುಟ್ಟುಹಬ್ಬದೊಂದಿಗೆ ತಳುಕು ಹಾಕಿಕೊಂಡಿದೆ. ಏಕೆಂದರೆ 'ಕೆ.ಜಿ.ಎಫ್' ನಿರ್ದೇಶಕರು ಕಂಪ್ಯೂಟರ್ ಮುಂದೆ ಕೂತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು 'ಅಧೀರ'ನ ಫಸ್ಟ್ ಲುಕ್​ ಕೆಲಸದ ವೇಳೆ ತೆಗೆದ ಫೋಟೋ ಎಂಬ ಮಾತುಗಳು ಕೇಳಿ ಬರುತ್ತಿವೆ.ಇದೇ ತಿಂಗಳ 29 ರಂದು ಸಂಜಯ್ ದತ್ ಅವರ ಹುಟ್ಟುಹಬ್ಬವಿದ್ದು, ಅಂದೇ 'ಕೆ.ಜಿ.ಎಫ್' ಚಿತ್ರದ ಜೀವಾಳವಾಗಿದ್ದ 'ಅಧೀರ' ಪಾತ್ರದ ಲುಕ್ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಮೂಲಕ 'ಕೆ.ಜಿ.ಎಫ್-2' ಚಿತ್ರದ ಪಾತ್ರವೊಂದರ ಫಸ್ಟ್​ ಲುಕ್ ರಿಲೀಸ್ ಮಾಡಲು ಪ್ರಶಾಂತ್ ನೀಲ್ ಮತ್ತು ತಂಡ ಪ್ಲ್ಯಾನ್ ಮಾಡಿಕೊಂಡಿದೆ ಎನ್ನಲಾಗುತ್ತಿದೆ.
Loading...

ಒಟ್ಟಿನಲ್ಲಿ ಸಪ್ತಸಾಗರದಾಚೆಯೂ ಭರ್ಜರಿ ಯಶಸ್ಸುಗಳಿಸಿರುವ 'ಕೆ.ಜಿ.ಎಫ್' ಚಿತ್ರದ 2ನೇ ಭಾಗ ನಾನಾ ಕಾರಣಗಳಿಂದ ಪ್ರೇಕ್ಷಕರಲ್ಲಿ ಕುತೂಹಲವನ್ನು ಹುಟ್ಟು ಹಾಕುತ್ತಿದ್ದು, ಕೆಲ ದಿನಗಳ ಹಿಂದೆ ನರಾಚಿ ಸೆಟ್​ನ ಫೋಟೋಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದರೊಂದಿಗೆ ಬಿಗ್ ಸರ್​ಪ್ರೈಸ್ ಸುದ್ದಿ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳನ್ನು ಕಾತುರದಿಂದ ಕಾಯುವಂತೆ ಮಾಡಿರುವುದು ಸುಳ್ಳಲ್ಲ.

ಇದನ್ನೂ ಓದಿ: ಚಾಪ್ಟರ್-​1 ಅನ್ನು ಮೀರಿಸಲಿದೆ ಕೆ.ಜಿ.ಎಫ್-2: ಅದ್ಧೂರಿ ನರಾಚಿ ಸೆಟ್​ ವಿಡಿಯೋ ವೈರಲ್
First published:July 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...