ಕೆ.ಜಿ.ಎಫ್ ನಿರ್ದೇಶಕನಿಗೆ ಬಂಪರ್ ಆಫರ್: ಬಾಹುಬಲಿಯನ್ನೇ ಮೀರಿಸೋ ಚಿತ್ರಕ್ಕೆ ಆ್ಯಕ್ಷನ್ ಕಟ್?

ಬಹುನಿರೀಕ್ಷಿತ ಕೆಜಿಎಫ್ 2 ಚಿತ್ರದ ಬಳಿಕ ಪ್ರಶಾಂತ್ ನೀಲ್ ಟಾಲಿವುಡ್​ಗೆ ಕಾಲಿಡಲಿದ್ದು, ಬಾಹುಬಲಿ, ಮಗಧೀರ ಸಿನಿಮಾಗಳನ್ನು ಮೀರಿಸುವ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿದೆ.

zahir | news18-kannada
Updated:September 11, 2019, 9:43 PM IST
ಕೆ.ಜಿ.ಎಫ್ ನಿರ್ದೇಶಕನಿಗೆ ಬಂಪರ್ ಆಫರ್: ಬಾಹುಬಲಿಯನ್ನೇ ಮೀರಿಸೋ ಚಿತ್ರಕ್ಕೆ ಆ್ಯಕ್ಷನ್ ಕಟ್?
ಪ್ರಶಾಂತ್ ನೀಲ್-ಮಹೇಶ್ ಬಾಬು
  • Share this:
'ಕೆ.ಜಿ.ಎಫ್' ಎಂಬ ಬ್ಲಾಕ್ ಬ್ಲಾಸ್ಟರ್ ಹಿಟ್ ಸಿನಿಮಾ ನೀಡಿದ್ದ ಸ್ಯಾಂಡಲ್​ವುಡ್​ ನಿರ್ದೇಶಕ ಪ್ರಶಾಂತ್ ನೀಲ್​ಗೆ ಈಗ ಎಲ್ಲಿಲ್ಲದ ಬೇಡಿಕೆ. ಒಂದು ಕಡೆ 'ಕೆ.ಜಿ.ಎಫ್' ಡಬ್ಬಿಂಗ್​ ಮೂಲಕವೇ ಬಾಲಿವುಡ್​ ಕದತಟ್ಟಿರುವ ಕನ್ನಡದ ನಿರ್ದೇಶಕನಿಗೆ ಬಂಡವಾಳ ಹೂಡಲು ಬಿಟೌನ್ ನಿರ್ಮಾಪಕರು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನೊಂದೆಡೆ ಕಾಲಿವುಡ್ ಮತ್ತು ಟಾಲಿವುಡ್ ನಟರುಗಳು ಪ್ರಶಾಂತ್ ನಿರ್ದೇಶಿಸಲಿರುವ ಹೊಸ ಚಿತ್ರಕ್ಕೆ ಕಾಲ್​ ಶೀಟ್​ ನೀಡಲು ರೆಡಿಯಾಗಿದ್ದಾರೆ.

ತಮ್ಮ ಎರಡನೇ ಚಿತ್ರದ ಮೂಲಕವೇ ಇಂತಹದೊಂದು ಹವಾ ಕ್ರಿಯೇಟ್ ಮಾಡಿರುವ ಪ್ರಶಾಂತ್ ನೀಲ್​ ಮುಂದೆ ಇತ್ತೀಚೆಗೆ ಟಾಲಿವುಡ್​ ಸೂಪರ್ ಸ್ಟಾರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಪ್ರಸ್ತಾಪವೊಂದು ಬಂದಿದೆ ಎಂಬ ಸುದ್ದಿ ಈ ಹಿಂದೆಯೇ ಕೇಳಿ ಬಂದಿತ್ತು.

ತೆಲುಗಿನ ಸೂಪರ್ ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು ಅವರ ಮುಂದಿನ ಚಿತ್ರವನ್ನು ನಿರ್ಮಿಸಲು ಮೈತ್ರಿ ಮೂವಿ ಮೇಕರ್ಸ್​ ಎಂಬ ಸಂಸ್ಥೆ ಮುಂದಾಗಿದ್ದು, ಈ ಚಿತ್ರದ ನಿರ್ದೇಶನಕ್ಕಾಗಿ ಸ್ಯಾಂಡಲ್​ವುಡ್​ ನಿರ್ದೇಶಕನಿಗೆ ಬಂಪರ್ ಆಫರ್ ನೀಡಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಅಷ್ಟೇ ಅಲ್ಲದೆ ತೆಲುಗಿನ ಪ್ರಮುಖ ಪತ್ರಿಕೆಯಲ್ಲಿ ನೀಲ್ ಹುಟ್ಟುಹಬ್ಬದಂದು ಶುಭಾಶಯ ತಿಳಿಸಿ ಜಾಹೀರಾತನ್ನು ಕೂಡ ಚಿತ್ರಸಂಸ್ಥೆ ಪ್ರಕಟಿಸಿತ್ತು.

ಇದರಿಂದ 'ಕೆ.ಜಿ.ಎಫ್' ಬಳಿಕ ಪ್ರಶಾಂತ್ ಮಹೇಶ್ ಬಾಬು ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹುಟ್ಟಿಕೊಂಡಿದ್ದವು. ಇದರ ಬೆನ್ನಲ್ಲೇ 'ಉಗ್ರಂ' ನಿರ್ದೇಶಕ ಪ್ರಿನ್ಸ್​ ಚಿತ್ರವನ್ನು ಕೈ ಬಿಟ್ಟಿದ್ದಾರೆಂದು ಪ್ರಮುಖ ವೆಬ್​ಸೈಟ್​ವೊಂದು ವರದಿ ಮಾಡಿತ್ತು.

ಇದಕ್ಕೆ ಕಾರಣ ಪ್ರಶಾಂತ್ ನೀಲ್ ಬರೆದಿರುವ ಹೊಸ ಕಥೆಗೆ ಮಹೇಶ್ ಬಾಬು ಸೂಟ್ ಆಗುವುದಿಲ್ಲ ಎಂಬುದು. 'ಕೆ.ಜಿ.ಎಫ್' ನಿರ್ದೇಶಕ ಹೆಣೆದಿರುವ ಕಥೆಯಲ್ಲಿ ಮಾಸ್ ಅಂಶಗಳೇ ಹೆಚ್ಚಾಗಿದ್ದು, ಆ ಕಥೆಯಲ್ಲಿ ಮಹೇಶ್ ಬಾಬು ಕಾಣಿಸಿಕೊಂಡರೆ ಚೆನ್ನಾಗಿರುವುದಿಲ್ಲ. ಹೀಗಾಗಿ ಅದೇ ಕಥೆಯನ್ನು ಜೂ.ಎನ್​.ಟಿ.ಆರ್ ಜೊತೆ ಮಾಡುವುದಾಗಿ ಸ್ಯಾಂಡಲ್​ವುಡ್ ನಿರ್ದೇಶಕರು ತಿಳಿಸಿದ್ದಾರೆ ಎಂದು ಹೇಳಲಾಗಿತ್ತು.

ಇದರಿಂದಾಗಿ ಮಹೇಶ್ ಬಾಬು ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್​ನಲ್ಲಿ ಚಿತ್ರ ಬರುವುದಿಲ್ಲ ಎಂದೇ ಹೇಳಲಾಗಿತ್ತು. ಆದರೀಗ ಕೆಜಿಎಫ್ ನಿರ್ದೇಶಕರು ಹಾಗೂ ಟಾಲಿವುಡ್ ಪ್ರಿನ್ಸ್ ಭೇಟಿಯಾಗಿದ್ದಾರೆ. ಇಬ್ಬರು ಮುಂದಿನ ಚಿತ್ರದ ಬಗ್ಗೆ ಕಥೆ ಬಗ್ಗೆ ಚರ್ಚೆ ನಡೆಸಿದ್ದಾರೆ.

ಕನ್ನಡಿಗ ಹೇಳಿರುವ ಕಥೆಗೆ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಫಿದಾ ಆಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಮಾಹಿತಿ ಹೊರಬೀಳಲಿದೆ ಎನ್ನಲಾಗಿದೆ. ಸದ್ಯ ಹೈದರಾಬಾದ್​ನಲ್ಲಿ ಬೀಡು ಬಿಟ್ಟಿರುವ ಕೆಜಿಎಫ್ ತಂಡ ಚಾಪ್ಟರ್ 2 ಮುಂದುವರೆಸಲು ಸೆಟ್​ಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ.ಬಹುನಿರೀಕ್ಷಿತ 'ಕೆಜಿಎಫ್ 2' ಚಿತ್ರದ ಬಳಿಕ ಪ್ರಶಾಂತ್ ನೀಲ್ ಟಾಲಿವುಡ್​ಗೆ ಕಾಲಿಡಲಿದ್ದು, 'ಬಾಹುಬಲಿ', 'ಮಗಧೀರ' ಸಿನಿಮಾಗಳನ್ನು ಮೀರಿಸುವ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿದೆ.ಸದ್ಯ ಟಾಲಿವುಡ್​ನಲ್ಲಿ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಪ್ರಶಾಂತ್ ನೀಲ್ ಕೈಗೆತ್ತಿಕೊಳ್ಳಲಿರುವ ಹೊಸ ಚಿತ್ರಕ್ಕೆ ನಿರ್ಮಾಣ ಸಂಸ್ಥೆ 500 ಕೋಟಿ ರೂ ಬಂಡವಾಳ ಹೂಡಲಿದೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಅನೇಕ ದಿನಗಳಿಂದ ಅಭಿಮಾನಿಗಳ ಕಾಯುತ್ತಿದ್ದ ಪ್ರಶಾಂತ್ ನೀಲ್ ಅವರ ಮುಂದಿನ ಚಿತ್ರ ಯಾವುದೆಂಬ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ.
First published:September 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ