ಕೆ.ಜಿ.ಎಫ್​ ನಿರ್ದೇಶಕ ಪ್ರಶಾಂತ್​ ನೀಲ್ 8ದಿನ ಸ್ನಾನ ಮಾಡದೇ ಇರಲು ರಾಕಿಂಗ್​ ಸ್ಟಾರ್​ ಯಶ್​ ಕಾರಣನಾ?

Anitha E | news18
Updated:December 5, 2018, 7:49 PM IST
ಕೆ.ಜಿ.ಎಫ್​ ನಿರ್ದೇಶಕ ಪ್ರಶಾಂತ್​ ನೀಲ್ 8ದಿನ ಸ್ನಾನ ಮಾಡದೇ ಇರಲು ರಾಕಿಂಗ್​ ಸ್ಟಾರ್​ ಯಶ್​ ಕಾರಣನಾ?
  • Advertorial
  • Last Updated: December 5, 2018, 7:49 PM IST
  • Share this:
ಪ್ರಶಾಂತ್ ನೀಲ್ 'ಉಗ್ರಂ' ಸಿನಿಮಾ ಮೂಲಕ ಶ್ರೀ ಮುರಳಿಗೆ ಬ್ರೇಕ್ ಕೊಟ್ಟ ನಿರ್ದೇಶಕ. ಈಗ 'ಕೆ.ಜಿ.ಎಫ್‍'ನಿಂದ ಕೇವಲ ಎರಡನೇ ಸಿನಿಮಾದಲ್ಲೇ ಮಂಡ್ಯ ಟು ಇಂಡಿಯಾ ಅಂತ ಸದ್ದು  ಮಾಡ್ತಿದ್ದಾರೆ. ಕನ್ನಡ ಚಿತ್ರರಂಗದ ದಿಕ್ಕು ದೆಸೆಯನ್ನೇ ಬದಲಿಸಲಿದ್ದಾರೆ ಅಂತ ಹೇಳಲಾಗುತ್ತಿರೋ ಮಾಸ್ಟರ್ ನಿರ್ದೇಶಕ. ಇಂತಹ ಪ್ರಶಾಂತ್ ಒಂದು ವಾರದಿಂದ ಸ್ನಾನವೇ ಮಾಡಿಲ್ಲವಂತೆ. ಅದ್ಯಾಕೆ ಹೀಗೆ ಅಂತೀರಾ... ಇಲ್ಲಿದೆ ವಿವರ ಓದಿ...

ಕನ್ನಡ ಚಿತ್ರರಸಿಕರಂತೂ 'ಕೆ.ಜಿ.ಎಫ್' ಅನ್ನ ತಲೆಮೇಲೆ ಹೊತ್ತು ಮೆರೆಸುತ್ತಿದ್ದಾರೆ. ಇದು ಕನ್ನಡ ಚಿತ್ರರಂಗದ ದಿಕ್ಕು ದೆಸೆ ಬದಲಿಸೋ ಸಿನಿಮಾ ಅಂತ ಮಾತಾಡುತ್ತಿದ್ದಾರೆ. ಅಂದಹಾಗೆ ಇಂತಹದ್ದೊಂದು ಸಿನಿಮಾದ ಹಿಂದಿರೋದು ಪ್ರಶಾಂತ್ ನೀಲ್ ಎಂಬ ಯುವ ಪ್ರತಿಭೆ.

ಇದನ್ನೂ ಓದಿ: ಕೆ.ಜಿ.ಎಫ್​. ಸಿನಿಮಾದ ಲಿರಿಕಲ್​ ವಿಡಿಯೋ ಬಿಡುಗಡೆ

ಪ್ರಶಾಂತ್ ನೀಲ್‍ಗೆ 'ಕೆ.ಜಿ.ಎಫ್' ಎರಡನೇ ಸಿನಿಮಾ. ಈ ಹಿಂದೆ ಅವರು'ಉಗ್ರಂ' ಸಿನಿಮಾ ಮಾಡಿದ್ದರು. ಅಲ್ಲಿಯವರೆಗೂ ಸೋಲಿನ ಮೇಲೆ ಸೋಲು ಕಂಡು ಇನ್ನೇನು ವರತ್ತಿ ಜೀವನ ಮುಗಿದೇ ಹೋಯಿತು ಅನ್ನುವಂತಾಗಿದ್ದ ಶ್ರೀ ಮುರಳಿಗೆ ಹೊಸ ಜನುಮ ಕೊಟ್ಟವರು ಇದೇ ನಿರ್ದೇಶಕ ಪ್ರಶಾಂತ್ ನೀಲ್.

ಪ್ರಶಾಂತ್ ನೀಲ್, ಮಾತು ಕಮ್ಮಿ, ಕೆಲಸ ಜಾಸ್ತಿ ಅನ್ನೋ ಜಾಯಮಾನದವರು. ಹೀಗಾಗಿ ಅವರು ಕ್ಯಾಮೆರಾ ಮುಂದೆ ಮಾತಾಡಿದ್ದೇ ಕಡಿಮೆ. ಇನ್ನು ಸಾಮಾಜಿಕ ಜಾಲತಾಣಗಳಿಂದಂತೂ ದೂರವಿದ್ದಾರೆ ಪ್ರಶಾಂತ್ ನೀಲ್.

ಕುಂತ್ರು ನಿಂತ್ರು ಸಿನಿಮಾವನ್ನೇ ಧ್ಯಾನಿಸೋ ನಿರ್ದೇಶಕ ಪ್ರಶಾಂತ್ ನೀಲ್. ಅದು ನಿಮಗೆ ಟ್ರೈಲರ್​ನಲ್ಲಿಯೇ ಗೊತ್ತಾಗುತ್ತೆ. ಈಗಾಗಲೇ 5 ಭಾಷೆಗಳಲ್ಲೂ ಟ್ರೈಲರ್ ಸಿಕ್ಕಾಪಟ್ಟೆ ಹಿಟ್ ಆಗಿದೆ. ಭಾಷೆ ಭೇದ ಮರೆತು 'ಕೆ.ಜಿ.ಎಫ್‍'ಗಾಗಿ ಎಲ್ಲಾ ಭಾಷೆಯವರು ಕಾಯುತ್ತಿದ್ದಾರೆ.

ಇದನ್ನೂ ಓದಿ: ಬಿಸಿ ಬಿಸಿ ಮುದ್ದೆ ಜತೆಗೆ ಅಲಿಯಾನೂ ಇಷ್ಟ ಎಂದ ರಾಕಿಂಗ್​ ಸ್ಟಾರ್ ಯಶ್​...!
Loading...

'ಕೆ.ಜಿ.ಎಫ್' ಸಿನಿಮಾ ಇದೇ 21ಕ್ಕೆ ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ. ಅದಕ್ಕಾಗಿ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ನಿರ್ದೇಶಕ ಊಟ ನಿದ್ದೆ ಬಿಟ್ಟಿದ್ದಾರೆ. ಹಗಲಿರುಳು ಎನ್ನದೆ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಮಾಧ್ಯಮದವರು ಯಾರಾದರೂ ಕರೆ ಮಾಡಿ, ಸರ್ ಸಿನಿಮಾ ಬಗ್ಗೆ ಮಾತಾಡಿ ಅಂದ್ರೆ ? ಒಂದು ವಾರ ನನ್ನನ್ನ ಬಿಟ್ ಬಿಡಿ ಸಾರ್ ಅಂತಿದ್ದಾರೆ. ಡಿಸೆಂಬರ್ 21 ಆಗಲಿ, ಸಿನಿಮಾ ಮಾತಾಡುತ್ತೆ ಅಂತಿದ್ದಾರೆ.

ಇಷ್ಟೇ ಅಲ್ಲ ನಿರ್ದೇಶಕ ಪ್ರಶಾಂತ್ ನೀಲ್ ಒಂದು ವಾರದಿಂದ ಮನೆಗೆ ಹೋಗಿಲ್ಲ. ಸ್ನಾನ ಕೂಡ ಮಾಡಿಲ್ಲ. ಕೆಲಸ ಅಂದರೆ ಅವರದ್ದು ಅಷ್ಟು ಸಮರ್ಪಣೆ. ಇನ್ನು ಪ್ರಶಾಂತ್ ನೀಲ್ 'ಕೆ.ಜಿ.ಎಫ್‍'ಗಾಗಿ ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕು ವರ್ಷ ಶ್ರಮವಹಿಸಿದ್ದಾರೆ. ಈ ನಾಲ್ಕು ವರ್ಷಗಳಲ್ಲಿ ಅವರು ಯಾವುದೇ ಕಾರ್ಯಕ್ರಮ ಮಾಡಿಲ್ಲ. ಅಥವಾ ಇನ್ಯಾವುದೇ ವೈಯಕ್ತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲ್ಲ. ಅಷ್ಟೇ ಏಕೆ ಮೊನ್ನೆ ನಡೆದ ರಾಧಿಕಾ ಪಂಡಿತ್ ಸೀಮಂತ ಕಾರ್ಯಕ್ರಮದಲ್ಲಿಯೂ ಅವರು ಭಾಗವಹಿಸಿರಲಿಲ್ಲ.

ತಮಿಳಿಗೊಬ್ಬ ಶಂಕರ್ ಇದ್ದಾರೆ. ಅವರು ಕೆಲಸ ಅಂತ ಬಂದರೆ ರಾಕ್ಷಸ. ಊಟ ನಿದ್ದೆ ಬಿಟ್ಟು ಕೆಲಸ ಮಾಡುತ್ತಾರೆ. ತೆಲುಗಿಗೆ ಅಂತ ಬಂದರೆ ರಾಜಮೌಳಿ. ಆದರೆ ಕನ್ನಡಕ್ಕೆ ಯಾರು ಎನ್ನುವ ಹಾಗಿಲ್ಲ. ಪ್ರಶಾಂತ್ ನೀಲ್ ಇದ್ದಾರಲ್ಲ. ಈಗ ಇಬ್ಬರು ಮಹಾನ್ ನಿರ್ದೇಶಕರ ಪಕ್ಕ ಕನ್ನಡದ ಹೆಮ್ಮೆಯಾಗಿ ನಿಲ್ಲೋ ಸೂಚನೆಯನ್ನ 2ನೇ ಸಿನಿಮಾದಲ್ಲಿಯೇ ತೋರಿಸಿದ್ದಾರೆ.

ಒಟ್ಟಾರೆ ಒಬ್ಬ ನಿರ್ದೇಶಕ ಪ್ರಯತ್ನ ಪಟ್ರೆ ಹತ್ತು ಜನ ಸ್ಟಾರ್​ಗಳನ್ನು ಹುಟ್ಟಾಕಬಹುದು ಅನ್ನೋ ಮಾತಿದೆ. ಅದರಂತೆ ಒಬ್ಬೇ ಒಬ್ಬ ನಿರ್ದೇಶಕ ಒಂದು ಸಿನಿ ರಂಗವನ್ನೇ ಇನ್ನೊಂದು ಮಟ್ಟಕ್ಕೆ ಕೊಂಡೊಯ್ಯಬಹುದು ಅನ್ನೋದನ್ನ ಪ್ರಶಾಂತ್ ನೀಲ್ ಸಾಧಿಸ ಹೊರಟಿದ್ದಾರೆ. ಕೆಜಿಎಫ್ 21ಕ್ಕೆ ವಿಶ್ವದಾದ್ಯಂತ ತೆರೆ ಕಾಣಲಿದೆ. ನಿರೀಕ್ಷೆಗೂ ಮೀರಿದ ಯಶಸ್ಸು ಈ ಚಿತ್ರಕ್ಕೆ ಸಿಗಲಿ. ಕನ್ನಡದ ಬಾವುಟ ಗಗನ ಗಾಳಿಯಲಿ, ತಿರುಗೋ ಭುವಿಯಲಿ ಜಿಗಿದು ಜೀವಿಸಲಿ...

First published:December 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...