ಎರಡೇ ದಿನಕ್ಕೆ ಅರ್ಧಶತಕ ಬಾರಿಸಿದ ಕೆಜಿಎಫ್; 50 ಕೋಟಿ ರೂ. ದಾಟಿದ ಬಾಕ್ಸ್ ಆಫೀಸ್ ಕಲೆಕ್ಷನ್!

ಎರಡನೇ ದಿನವೂ ಕೆಜಿಎಫ್​ ಅಬ್ಬರ ಮುಂದುವರಿದಿದ್ದು, ನಿರಾಯಾಸವಾಗಿ 50 ಕೋಟಿ ರೂ. ಕಮಾಯಿ​ ಮಾಡಿದೆ.

Rajesh Duggumane | news18
Updated:December 23, 2018, 11:42 AM IST
ಎರಡೇ ದಿನಕ್ಕೆ ಅರ್ಧಶತಕ ಬಾರಿಸಿದ ಕೆಜಿಎಫ್; 50 ಕೋಟಿ ರೂ. ದಾಟಿದ ಬಾಕ್ಸ್ ಆಫೀಸ್ ಕಲೆಕ್ಷನ್!
ಯಶ್​
  • News18
  • Last Updated: December 23, 2018, 11:42 AM IST
  • Share this:
ಯಶ್​ ನಟನೆಯ ‘ಕೆಜಿಎಫ್​’ ಚಿತ್ರ ಐದೂ ಭಾಷೆಗಳಲ್ಲಿ ಗೆಲುವಿನ ನಗೆ ಬೀರಿದೆ. ಭರ್ಜರಿ ಓಪನಿಂಗ್​ ಪಡೆದುಕೊಂಡಿದ್ದ ಈ ಸಿನಿಮಾ ಮೊದಲ ದಿನವೇ 25 ಕೋಟಿ ರೂ. ಗಳಿಕೆ ಮಾಡಿತ್ತು. ಈಗ ಎರಡನೇ ದಿನಕ್ಕೆ ಮತ್ತೆ 25 ಕೋಟಿ ರೂ. ಬಾಚಿಕೊಳ್ಳುವ ಮೂಲಕ ಅರ್ಧಶತಕ ಬಾರಿಸಿದೆ.

'ಕೆಜಿಎಫ್'​ ಚಿತ್ರಕ್ಕೆ ನಿರ್ಮಾಪಕ ವೆಂಕಟೇಶ್​ ಕೋರ್ಟ್​​ನಿಂದ ತಡೆಯಾಜ್ಞೆ ತಂದಿದ್ದರು. ಹಾಗಾಗಿ ಸಿನಿಮಾ ತೆರೆಕಾಣುವುದು ಅನುಮಾನ ಎನ್ನುವ ಮಾತುಗಳು ಕೇಳಿ ಬಂದಿದ್ದವು. ನಂತರ ಚಿತ್ರಕ್ಕೆ ಎದುರಾಗಿದ್ದ ಕಂಟಕ ದೂರವಾಗಿತ್ತು. ಸಿನಿಮಾ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್​ ಪಡೆದುಕೊಂಡಿತ್ತು. ಪರಿಣಾಮ ಬಾಕ್ಸ್​ ಆಫೀಸ್​ನಲ್ಲಿ ಐದು ಭಾಷೆಗಳಿಂದ 25 ಕೋಟಿ ರೂ. ಕಲೆಕ್ಷನ್​ ಮಾಡಿದೆ.

ಎರಡನೇ ದಿನವೂ ಕೆಜಿಎಫ್​ ಅಬ್ಬರ ಮುಂದುವರಿದಿದ್ದು, ವಿಶ್ವ ಮಾರುಕಟ್ಟೆಯಲ್ಲಿ ನಿರಾಯಾಸವಾಗಿ 50 ಕೋಟಿ ರೂ. ಕಮಾಯಿ​ ಮಾಡಿದೆ. ಭಾನುವಾರದ ಕಲೆಕ್ಷನ್​ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಭಾನುವಾರ ರಜಾ ದಿನವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ. ಹಾಗಾಗಿ ಭಾನುವಾರ 30 ಕೋಟಿ ರೂ. ಗಳಿಕೆ ಆಗಬಹುದು ಎಂಬುದು ಗಾಂಧಿನಗರದ ತಜ್ಞರ ಅಭಿಪ್ರಾಯ. ಕಲೆಕ್ಷನ್​ ವಿಚಾರದಲ್ಲಿ ಚಿತ್ರತಂಡ ಈ ವರೆಗೆ ಅಧಿಕೃತ ಮಾಹಿತಿ ಹರಿಬಿಟ್ಟಿಲ್ಲ.

ಹಿಂದಿಯಲ್ಲಿ ಮೊದಲ ದಿನ 2.10 ಕೋಟಿ ರೂ. ಕಲೆಕ್ಷನ್ ಮಾಡಿದ್ದ 'ಕೆಜಿಎಫ್​' ಎರಡನೇ ದಿನಕ್ಕೆ 3 ಕೋಟಿ ರೂ. ಗಳಿಸಿದೆ. ಹಾಗಾಗಿ ಬಾಲಿವುಡ್​ನಲ್ಲಿ ಚಿತ್ರದ ಒಟ್ಟು ಗಳಿಕೆ 5.10 ಕೋಟಿ ರೂ. ದಾಟಿದೆ.


ಇದನ್ನೂ ಓದಿ: ಕೆಜಿಎಫ್​ ವಿಮರ್ಶೆ: ಈ ಚಿತ್ರದಲ್ಲಿ ಯಶ್ ಒಬ್ಬರೇ ಹೀರೋ ಅಲ್ಲ!

ಸಕ್ಸಸ್​ ಪಾರ್ಟಿಯಲ್ಲಿ ಪ್ರಶಾಂತ್​ ನೀಲ್​, ವಿಜಯ್ ಕಿರಗಂದೂರ್ ಹಾಗೂ ಯಶ್​


ಇನ್ನು ಚಿತ್ರ ತಂಡ ಶನಿವಾರ ಸಕ್ಸಸ್​ ಪಾರ್ಟಿ ನಡೆಸಿತ್ತು. ಈ ವೇಳೆ ನಾಯಕ ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರ್ ಮತ್ತು ಚಿತ್ರತಂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ಸದ್ಯ, ‘ಕೆಜಿಎಫ್​’ ಒಂದನೇ ಅಧ್ಯಾಯ ಮಾತ್ರ ಪೂರ್ಣಗೊಂಡಿದೆ. ಎರಡನೇ ಅಧ್ಯಾಯದ ಮೂಲಕ ಯಶ್ ಮತ್ತೆ ಪ್ರೇಕ್ಷಕರ ಎದುರು ಬರಲಿದ್ದಾರೆ.

ಇದನ್ನೂ ಓದಿ: ಕೆಜಿಎಫ್​ ಚಿತ್ರಕ್ಕೆ ಕಳೆಯಿತು ಕಂಟಕ; ಅರ್ಜಿ ವಾಪಸ್​ ಪಡೆದ ವೆಂಕಟೇಶ್​

ಕೆಜಿಎಫ್​ ಚಿತ್ರತಂಡ


'ಕೆಜಿಎಫ್​' ಚಿತ್ರಕ್ಕೆ ಪ್ರಶಾಂತ್​ ನೀಲ್​ ನಿರ್ದೇಶನ ಮಾಡಿದ್ದಾರೆ. ಯಶ್​ಗೆ ಜೊತೆಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್​ ಬ್ಯಾನರ್​ ಅಡಿಯಲ್ಲಿ ವಿಜಯ್​ ಕಿರಗಂದೂರ್​ ಚಿತ್ರ ನಿರ್ಮಾಣ ಮಾಡಿದ್ದಾರೆ. ವಸಿಷ್ಠ ಸಿಂಹ, ಅಚ್ಯುತ್​ ಕುಮಾರ್​ ಸೇರಿ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ.

First published: December 23, 2018, 9:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading