• Home
 • »
 • News
 • »
 • entertainment
 • »
 • KGF 3 Update: ಕೆಜಿಎಫ್ 3 ಚಿತ್ರದ ಬಿಗ್ ನ್ಯೂಸ್! ಹೊಸ ಸುದ್ದಿ ರಿವೀಲ್ ಮಾಡಿದ ರಾಕಿ ಭಾಯ್!

KGF 3 Update: ಕೆಜಿಎಫ್ 3 ಚಿತ್ರದ ಬಿಗ್ ನ್ಯೂಸ್! ಹೊಸ ಸುದ್ದಿ ರಿವೀಲ್ ಮಾಡಿದ ರಾಕಿ ಭಾಯ್!

ಯಶ್

ಯಶ್

ಇಷ್ಟಕ್ಕೆ ಸುಮ್ಮನೆ ಇರುತ್ತಾರಾ ಈ ರಾಕಿ ಭಾಯ್ ಅಂತ ಅಂದುಕೊಂಡರೆ ಅದು ತಪ್ಪು. ಈಗ ನಟ ಕೆಜಿಎಫ್ ನ ಮುಂದುವರಿದ ಭಾಗದ ಬಗ್ಗೆ ದೊಡ್ಡ ಅಪ್ಡೇಟ್ ಆನ್ನು ನೀಡಿದ್ದಾರೆ ನೋಡಿ.

 • Share this:

  ದೇಶದಾದ್ಯಂತ ಜನರು ದಕ್ಷಿಣದ ಚಿತ್ರಗಳ ಕಡೆ ಮುಖ ಮಾಡಿರುವುದು ಬಾಹುಬಲಿ, ಕೆಜಿಎಫ್ ಚಿತ್ರ (KGF Movie) ಬಂದ ಮೇಲೆಯೇ ಅಂತ ಹೇಳಿದರೆ ಅತಿಶಯೋಕ್ತಿಯಲ್ಲ. ಕೆಜಿಎಫ್ ಚಿತ್ರದ ಸ್ಟಾರ್ ನಟ ಯಶ್ (Rocking Star Yash) ಅವರು ತಮ್ಮ ಚಲನಚಿತ್ರ ಫ್ರ್ಯಾಂಚೈಸಿಯ ಯಶಸ್ಸಿನ ಪ್ರಮಾಣವು ದೇಶದ ಪ್ರತಿಯೊಬ್ಬರಿಗೂ ದೊಡ್ಡ ಆಶ್ಚರ್ಯವನ್ನುಂಟು ಮಾಡಿದೆ ಎಂದು ಹೇಳುತ್ತಾರೆ. ಪ್ರಶಾಂತ್ ನೀಲ್ ನಿರ್ದೇಶನದ ಕನ್ನಡ ಆಕ್ಷನ್ ಚಿತ್ರ "ಕೆಜಿಎಫ್" 2018 ರಲ್ಲಿ ಬಿಡುಗಡೆಯಾಗುವ ಮೂಲಕ ನಟ ಯಶ್ ಒಬ್ಬ ಪ್ಯಾನ್-ಇಂಡಿಯಾ ಸ್ಟಾರ್ (Pan India Star) ಆದರು. ಚಿತ್ರದಲ್ಲಿ ಅವರು ಕೋಲಾರ ಗೋಲ್ಡ್ ಫೀಲ್ಡ್ಸ್ ನ ಅಧಿಪತ್ಯಕ್ಕೆ ಏರುವ ಮುಂಬೈನ ಹಂತಕ ರಾಕಿಯಾಗಿ ಕಾಣಿಸಿಕೊಂಡದ್ದು ನಮಗೆಲ್ಲಾ ಗೊತ್ತೇ ಇದೆ.


  ಏಪ್ರಿಲ್ ನಲ್ಲಿ ಅವರು "ಕೆಜಿಎಫ್: ಚಾಪ್ಟರ್ 2" ನೊಂದಿಗೆ ಮತ್ತೊಮ್ಮೆ ಸಿನಿ ಪ್ರೇಕ್ಷಕರ ಮುಂದೆ ಬಂದರು. ಇದು ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂನಲ್ಲಿ ದೇಶಾದ್ಯಂತ ಬಿಡುಗಡೆಯಾದಾಗ ಗಲ್ಲಾಪೆಟ್ಟಿಗೆಯಲ್ಲಿ ಬಂಪರ್ ಪ್ರತಿಕ್ರಿಯೆ ಪಡೆಯಿತು. ಇದು ವರ್ಷದ ಅತಿ ಹೆಚ್ಚು ಗಳಿಕೆಯ ಚಲನಚಿತ್ರಗಳಲ್ಲಿ ಒಂದಾಗಿತ್ತು ಅಂತ ಹೇಳಬಹುದು.


  ದೇಶವೇ ತನ್ನ ಕಡೆಗೆ ತಿರುಗಿ ನೋಡುವಂತೆ ಮಾಡಿದ ಯಶ್
  ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅವರು ಎರಡು ಬ್ಯಾಕ್-ಟು-ಬ್ಯಾಕ್ ಪ್ಯಾನ್ ಇಂಡಿಯಾ ಚಿತ್ರಗಳ ಮೂಲಕ ಇಡೀ ರಾಷ್ಟ್ರವೇ ತನ್ನ ಕಡೆಗೆ ಒಮ್ಮೆ ತಿರುಗಿ ನೋಡುವಂತೆ ಮಾಡಿಕೊಂಡರು. ಭಾರತೀಯ ಚಲನಚಿತ್ರೋದ್ಯಮದಲ್ಲಿ ತಮ್ಮ ಹೆಸರು ಮತ್ತು ಸ್ಥಾನವನ್ನು ಭದ್ರಪಡಿಸಿಕೊಂಡರು ಅಂತ ಹೇಳಿದರೆ ತಪ್ಪಾಗುವುದಿಲ್ಲ.


  ಇದನ್ನೂ ಓದಿ: Rajinikanth-Yash: ರಜನಿ ಅವರಿಂದ ಹೆಚ್ಚು ಪ್ರಭಾವಕ್ಕೆ ಒಳಗಾಗ್ತಾರಂತೆ ಯಶ್! ರಾಕಿ ಭಾಯ್ ರೋಲ್ ಮಾಡೆಲ್ಸ್ ಯಾರ್ಯಾರು?


  ಇಷ್ಟಕ್ಕೆ ಸುಮ್ಮನೆ ಇರುತ್ತಾರಾ ಈ ರಾಕಿ ಭಾಯ್ ಅಂತ ಅಂದುಕೊಂಡರೆ ಅದು ತಪ್ಪು. ಈಗ ನಟ ಕೆಜಿಎಫ್ ನ ಮುಂದುವರಿದ ಭಾಗದ ಬಗ್ಗೆ ದೊಡ್ಡ ಅಪ್ಡೇಟ್ ಆನ್ನು ನೀಡಿದ್ದಾರೆ ನೋಡಿ.


  ಕೆಜಿಎಫ್ 3 ಬಗ್ಗೆ ನಟ ಯಶ್ ನೀಡಿದ ಅಪ್ಡೇಟ್ ಏನು?
  ಮುಂಬೈನಲ್ಲಿ ಸುದ್ದಿ ಪೋರ್ಟಲ್​ವೊಂದರ ಜೊತೆ ಮಾತನಾಡಿದ ನಟ ಯಶ್ “ನಾನು ಹೇಳಿದಾಗ ಮಾತ್ರ ಕೆಜಿಎಫ್ 3 ಚಿತ್ರ ತಯಾರಾಗುತ್ತದೆ” ಎಂದು ಹೇಳಿದರು. ಇದನ್ನು ಗಮನಿಸಿದರೆ, ಕೆಜಿಎಫ್ ಮತ್ತೊಂದು ಕಂತಿನೊಂದಿಗೆ ಬರುವ ಮೊದಲು ಯಶ್ ಇನ್ನೂ ಒಂದೆರಡು ಬೇರೆ ಚಲನಚಿತ್ರಗಳನ್ನು ಮಾಡಲು ಬಯಸುತ್ತಾರೆ ಎಂದು ತೋರುತ್ತದೆ. ಅಲ್ಲದೆ, ಕೆಜಿಎಫ್ ಮತ್ತು ಕೆಜಿಎಫ್ 2 ರ ಯಶಸ್ಸನ್ನು ಅವರು ಮುಂಚಿತವಾಗಿಯೇ ನಿರೀಕ್ಷಿಸಿದ್ದರಂತೆ, ಆದ್ದರಿಂದ ಎಲ್ಲಾ ಕಡೆಯಿಂದ ಬರುವ ಅನೇಕ ರೀತಿಯ ಪ್ರತಿಕ್ರಿಯೆಗಳು ಅವರನ್ನು ಉತ್ತೇಜಿಸುವುದಿಲ್ಲ ಎಂದು ಅವರು ಹೇಳಿದರು.


  ಕೆಜಿಎಫ್ ನ ಮೂರನೇ ಕಂತು ಕಾರ್ಯರೂಪಕ್ಕೆ ಬರಬೇಕಾದರೆ, ನಿರ್ದೇಶಕರು ಇತರ ಸ್ಟಾರ್ ಗಳೊಂದಿಗೆ ತಮ್ಮ ಶೆಡ್ಯೂಲ್ ಅನ್ನು ಹಾಕಿಕೊಳ್ಳಬೇಕು. ಆದ್ದರಿಂದ ಚಿತ್ರವು ನಿರ್ಮಾಣವಾದರೂ ಸಹ ಅದು 2024 ರಲ್ಲಿ ಪ್ರಾರಂಭಿಸಲಾಗುವ ಸಾಧ್ಯತೆಯಿದೆ.


  ಇದನ್ನೂ ಓದಿ: KrissMi Nest: ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಮನೆ ಗೃಹ ಪ್ರವೇಶ; ಹೇಗಿದೆ ಲವ್ ಮಾಕ್ಟೇಲ್ ಜೋಡಿಯ ಹೊಸ ಗೂಡು?


  ಇನ್ನೂ ಕೆಲಸದ ವಿಷಯಕ್ಕೆ ಬಂದರೆ, ನಟ ಯಶ್ ಇಲ್ಲಿಯವರೆಗೆ ಯಾವುದೇ ಹೊಸ ಚಿತ್ರವನ್ನು ಒಪ್ಪಿಕೊಂಡಂತೆ ಕಾಣುತ್ತಿಲ್ಲ. ಅವರು ಉತ್ತಮ ಸ್ಕ್ರಿಪ್ಟ್ ಗಾಗಿ ಕಾಯುತ್ತಿದ್ದಾರೆ ಎಂದು ತೋರುತ್ತದೆ. ಮತ್ತೊಂದೆಡೆ, ಪ್ರಶಾಂತ್ ನೀಲ್ ಪ್ರಭಾಸ್ ಅವರೊಂದಿಗೆ ತಮ್ಮ ಮುಂದಿನ ಚಿತ್ರ ‘ಸಲಾರ್’ ನ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಅದರ ನಂತರ ಅವರು ಜೂನಿಯರ್ ಎನ್‌ಟಿಆರ್ ಅವರೊಂದಿಗೆ ಚಿತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.


  ಕೆಜಿಎಫ್ ಚಾಪ್ಟರ್ 2 ರ ಕ್ಲೈಮ್ಯಾಕ್ಸ್ ನಲ್ಲಿ ಏನಾಗಿತ್ತು?
  ಕೆಜಿಎಫ್ ಚಾಪ್ಟರ್ 2 ಚಿತ್ರದ ಕೊನೆಯಲ್ಲಿ, ಯಶ್ ಅವರು ಮಾಡಿದ್ದಂತಹ ಪಾತ್ರ ರಾಕಿ ಭಾಯ್ ಭಾರತೀಯ ನೌಕಾಪಡೆಯೊಂದಿಗಿನ ಮುಖಾಮುಖಿಯ ನಂತರ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪುತ್ತಾರೆ ಎಂದು ಭಾವಿಸಲಾಗಿದೆ. ಆದರೂ ಕೊನೆಯಲ್ಲಿ, ನಿರ್ದೇಶಕ ಪ್ರಶಾಂತ್ ನೀಲ್ ಸಹ ಫ್ರ್ಯಾಂಚೈಸ್ ನ ಮೂರನೇ ಕಂತಿನ ಬಗ್ಗೆ ಸುಳಿವಿನಂತಹ ಸಂಕೇತ ನೀಡುವ ಮೂಲಕ ಪ್ರೇಕ್ಷಕರನ್ನು ಗೊಂದಲಕ್ಕೆ ದೂಡಿದ್ದರು. ಅಂದಿನಿಂದ, ಕೆಜಿಎಫ್ 3 ಚಿತ್ರದ ಬಗ್ಗೆ ಇಂಟರ್ನೆಟ್ ನಲ್ಲಿ ವಿವಿಧ ಊಹಾಪೋಹಗಳು ಹರಿದಾಡುತ್ತಿವೆ.

  Published by:ಗುರುಗಣೇಶ ಡಬ್ಗುಳಿ
  First published: