HOME » NEWS » Entertainment » KGF CHAPTER 2 YASH SHARED HIS EXCLUSIVE STILL FROM THE MOVIE KGF CHAPTER 2 AE

KGF Chapter 2: ಕೆಜಿಎಫ್​ ಚಾಪ್ಟರ್ 2 ವಿಲನ್​ ಬಗ್ಗೆ ಯಶ್​ ಕೊಟ್ಟ ಅಪ್ಡೇಟ್​ ಇಲ್ಲಿದೆ..!

Yash Exclusive Still: ನಿರ್ದೇಶಕ ಪ್ರಶಾಂತ್​ ನೀಲ್​ ಕೆಜಿಎಫ್​ ಚಾಪ್ಟರ್​ 2 ಸಿನಿಮಾದ ಕ್ಲೈಮ್ಯಾಕ್ಸ್​ ಚಿತ್ರೀಕರಣದ ಬಗ್ಗೆ ಅಪ್ಡೇಟ್​ ಕೊಟ್ಟರೆ, ಚಿತ್ರದ ನಾಯಕ ಯಶ್​ ವಿಲನ್​ ಬಗ್ಗೆ ಮಾಹಿತಿ ನೀಡಿದ್ದಾರೆ.

Anitha E | news18-kannada
Updated:December 8, 2020, 2:54 PM IST
KGF Chapter 2: ಕೆಜಿಎಫ್​ ಚಾಪ್ಟರ್ 2 ವಿಲನ್​ ಬಗ್ಗೆ ಯಶ್​ ಕೊಟ್ಟ ಅಪ್ಡೇಟ್​ ಇಲ್ಲಿದೆ..!
ಕೆಜಿಎಫ್​ ಚಾಪ್ಟರ್​ 2 ಸಿನಿಮಾದಲ್ಲಿ ಯಶ್​
  • Share this:
ಕೆಜಿಎಫ್​ ಚಾಪ್ಟರ್​ 2 ಸಿನಿಮಾದ ಬಗ್ಗೆ ನಿರ್ದೇಶಕ ಪ್ರಶಾಂತ್​ ಒಂದರ ಹಿಂದೆ ಒಂದರಂತೆ ಅಪ್ಡೇಟ್​ ಕೊಡುತ್ತಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣ ಆರಂಭವಾದ ಬಗ್ಗೆ ಈಗಾಗಲೇ ಪ್ರಶಾಂತ್​ ನೀಲ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಸ್ಟೋರೀಸ್​ನಲ್ಲಿ ಹಂಚಿಕೊಂಡಿದ್ದರು. ಕೆಜಿಎಫ್​ ಚಾಪ್ಟರ್​ 1ನಲ್ಲಿ ಸಾಹಸ ನಿರ್ದೇಶಕರಾಗಿದ್ದ ಡೆಡ್ಲಿ ಬ್ರದರ್ಸ್​ ಅನ್ಬರೀವ್​ ಅವರೇ ಈ ಸಲವೂ ಚಾಪ್ಟರ್​ 2ನಲ್ಲೂ ಕ್ಲೈಮ್ಯಾಕ್ಸ್​ ಫೈಟ್​ ನಿರ್ದೇಶನ ಮಾಡುತ್ತಿದ್ದಾರೆ. ಚಾಪ್ಟರ್​ ಒಂದರ ಕ್ಲೈಮ್ಯಾಕ್ಸ್​ ಯಾವ ಮಟ್ಟದಲ್ಲಿ ಅಭಿಮಾನಿಗಳ ಮನ ಗೆದಿತ್ತು ಎಂದು ಪದೇ ಪದೇ ಹೇಳುವ ಅಗತ್ಯವಿಲ್ಲ. ಚಾಪ್ಟರ್​ 2ನಲ್ಲಿ ಮಾನ್​ಸ್ಟರ್​ ರಾಕಿ ಭಾಯ್​ಗೆ ಎದುರಾಳಿಯಾಗಿ ಬಾಲಿವುಡ್​ ಖಳನಾಯಕ್​ ಸಂಜಯ್​ ದತ್​ ನಿಂತಿದ್ದಾರೆ. ಈ ಜೋಡಿಯ ನಡುವೆ ನಡೆಯಲಿರುವ ಡೆಡ್ಲಿ ಕಾಳಗಕ್ಕೆ ಅಖಾಡ ಸಿದ್ಧವಾಗಿದೆ. ಈಗಾಗಲೇ ಬಾಲಿವುಡ್​ ನಟ ಸಂಜಯ್​ ದತ್​ ಸಹ ಹೈದರಾಬಾದ್​ ಸೇರಿಕೊಂಡಿದ್ದಾರೆ. 

ನಿರ್ದೇಶಕ ಪ್ರಶಾಂತ್​ ನೀಲ್​ ಕೆಜಿಎಫ್​ ಚಾಪ್ಟರ್​ 2 ಸಿನಿಮಾದ ಕ್ಲೈಮ್ಯಾಕ್ಸ್​ ಚಿತ್ರೀಕರಣದ ಬಗ್ಗೆ ಅಪ್ಡೇಟ್​ ಕೊಟ್ಟರೆ, ಚಿತ್ರದ ನಾಯಕ ಯಶ್​ ವಿಲನ್​ ಬಗ್ಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಸಖತ್ ರಗಡ್​ ಲುಕ್​ನಲ್ಲಿರುವ ತಮ್ಮ ಲೆಟೆಸ್ಟ್​ ಫೋಟೋವನ್ನೂ ಹಂಚಿಕೊಂಡಿದ್ದಾರೆ.
View this post on Instagram


A post shared by Yash (@thenameisyash)


ಕಪ್ಪು ಬಣ್ಣದ ಸೂಟ್​ ಹಾಗೂ ಬಿಳಿ ಬಣ್ಣದ ಶರ್ಟ್​ ತೊಟ್ಟಿರುವ ಯಶ್​ ಕೂಲಿಂಗ್​ ಗ್ಲಾಸ್​ ತೊಟ್ಟು ಸ್ಟೈಲಿಶ್ ಆಗಿ ನಡೆದು ಬರುತ್ತಿರುವ ಸ್ಟಿಲ್​ ಅನ್ನು ತಮ್ಮ ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಈ ಫೋಟೋವನ್ನು ಭುವನ್​ ಗೌಡ ಅವರು ತೆಗೆದಿದ್ದಾರೆ ಎಂದು ಕ್ರೆಡಿಟ್ ಸಹ ಕೊಟ್ಟಿದ್ದಾರೆ.

ಅಷ್ಟೇಅಲ್ಲ, ಸಿನಿಮಾದ ಕ್ಲೈಮ್ಯಾಕ್ಸ್​ ಹಾಗೂ ವಿಲನ್​ ಬಗ್ಗೆ ತಮ್ಮದೇ ಆದ ಸ್ಟೈಲ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಎಲ್ಲ ಒಳ್ಳೆಯ ಸಂಗತಿಗಳಿಗೂ ಒಂದಲ್ಲಾ ಒಂದು ದಿನ ಅಂತ್ಯವಾಗುತ್ತದೆ. ಇದು ಕೆಜಿಎಫ್​ ಸಿನಿಮಾದ ಕೊನೆಯ ಹಂತ ಚಿತ್ರೀಕರಣ ಇರಬಹುದು. ಆದರೆ, ವಿಲನ್​ ಮಾತ್ರ ಸದಾ ಇರುತ್ತಾನೆ ಎಂದಿದ್ದಾರೆ ರಾಕಿ ಭಾಯ್​. ಇನ್ನು ಯಶ್​ ಹಂಚಿಕೊಂಡಿರುವ ಈ ಹೊಸ ಸ್ಟಿಲ್​ಗೆ ಲಕ್ಷಗಟ್ಟಲೆ ಲೈಕ್ಸ್ ಸಿಕ್ಕಿದ್ದು, ಸಾವಿರಾರು ಮಂದಿ ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: Power Of Youth: ಪವರ್​ ಆಫ್​ ಯೂತ್ ಡ್ಯಾನ್ಸ್​ ಚಾಲೆಂಜ್​: ಗೆದ್ದವರಿಗೆ ಪುನೀತ್ ರಾಜ್​ಕುಮಾರ್​ ಕಡೆಯಿಂದ ಸಿಗಲಿದೆ ಸರ್ಪ್ರೈಸ್​

ಲಾಕ್​ಡೌನ್​ನಿಂದಾಗಿ ಕೆಜಿಎಫ್​ ಚಾಪ್ಟರ್​ 2 ಚಿತ್ರದ ಶೂಟಿಂಗ್​ಗೆ ಬ್ರೇಕ್​ ಬಿದ್ದಿತ್ತು. ಆದರೆ ಈಗ ಚಿತ್ರತಂಡ ಸಿನಿಮಾದ ಕ್ಲೈಮ್ಯಾಕ್ಸ್​ ಶೂಟಿಂಗ್​ ನಡೆಸುತ್ತಿದೆ. ಸಿನಿಮಾದ ಕ್ಲೈಮ್ಯಾಕ್ಸ್​ ಬಗ್ಗೆ ನಿರ್ದೇಶಕ ಪ್ರಶಾಂತ್​ ನೀಲ್​ ಅಪ್ಡೇಟ್​ ಕೊಡುತ್ತಿದ್ದಂತೆಯೇ ಈಗ ಮತ್ತೆ ಟ್ವಿಟರ್​ನಲ್ಲಿ #KGFChapter2 ಟ್ರೆಂಡ್​ ಆಗುತ್ತಿದೆ.

#KGFChapter2TeaserOnJan08🔥ಇನ್ನು ಯಶ್​ ಹುಟ್ಟಿದ ಹಬ್ಬದಂದು ಅಂದರೆ, ಜನವರಿ 8ಕ್ಕೆ ಕೆಜಿಎಫ್​ ಚಾಪ್ಟರ್ 2 ಸಿನಿಮಾದ ಟ್ರೇಲರ್​ ರಿಲೀಸ್​ ಆಗುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಅದಕ್ಕೆ ಅಭಿಮಾನಿಗಳು ಟ್ರೇಲರ್​ ನಿರೀಕ್ಷೆಯಲ್ಲಿದ್ದಾರೆ.
Published by: Anitha E
First published: December 8, 2020, 10:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories