HOME » NEWS » Entertainment » KGF CHAPTER 2 UPDATES KGFCHAPTER2 HASHTAG TRENDING IN SOCIAL MEDIA RMD

KGF Chapter 2: ಟ್ವಿಟರ್​ನಲ್ಲಿ ಟ್ರೆಂಡ್ ಆಯ್ತು ಕೆಜಿಎಫ್ ಚಾಪ್ಟರ್​ 2; ಕಾರಣವೇನು ಗೊತ್ತಾ?

Happy Birthday Prashanth Neel: ದಸರಾ ಪ್ರಯುಕ್ತ ಅಕ್ಟೋಬರ್​ 23ರಂದು ಕೆಜಿಎಫ್​-2 ತೆರೆಗೆ ಬರುತ್ತಿದೆ. ಪೋಸ್ಟ್​ ಪ್ರೊಡಕಷನ್​ ಕೆಲಸಗಳು ನಡೆಯುತ್ತಿದ್ದು, ಕೆಲವು ಭಾಗದ ಶೂಟಿಂಗ್​ ಇನ್ನೂ ಬಾಕಿ ಉಳಿದಿದೆ ಎನ್ನಲಾಗಿದೆ. ಲಾಕ್​ಡೌ​ನ್​ ಪೂರ್ಣಗೊಂಡ ನಂತರ ಉಳಿದ ಭಾಗದ ಶೂಟಿಂಗ್​ ಪೂರ್ಣಗೊಳಿಸಿಕೊಳ್ಳುವ ಆಲೋಚನೆ ಚಿತ್ರತಂಡದ್ದು.

news18-kannada
Updated:June 4, 2020, 12:19 PM IST
KGF Chapter 2: ಟ್ವಿಟರ್​ನಲ್ಲಿ ಟ್ರೆಂಡ್ ಆಯ್ತು ಕೆಜಿಎಫ್ ಚಾಪ್ಟರ್​ 2; ಕಾರಣವೇನು ಗೊತ್ತಾ?
ಕೆ.ಜಿ.ಎಫ್​
  • Share this:
ಕೆಜಿಎಫ್​ ಚಾಪ್ಟರ್ 2​ ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ತೆರೆಗೆ ಬರಲಿದೆ ಅನ್ನೋ ವಿಚಾರ ಬಹುತೇಕರಿಗೆ ಗೊತ್ತಿದೆ. ಅತ್ತ ಪೋಸ್ಟ್ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗುತ್ತಿದ್ದರೆ, ಇತ್ತ ಅಭಿಮಾನಿಗಳಲ್ಲಿ ಕುತೂಹಲವೂ ಇಮ್ಮಡಿ ಆಗುತ್ತಿದೆ. ಈ ಮಧ್ಯೆ ಇಂದು ಏಕಾಏಕಿ #KGFChapter2 ಹ್ಯಾಶ್​​ಟ್ಯಾಗ್​ ಟ್ರೆಂಡ್​ ಆಗಿದೆ. ಹಾಗಾದರೆ ಇದಕ್ಕೆ ಕಾರಣವೇನು? ಅದಕ್ಕೆ ಇಲ್ಲಿದೆ ಉತ್ತರ.

ಸಾಮಾನ್ಯವಾಗಿ ಒಂದು ವಿಚಾರದ ಬಗ್ಗೆ ಹೊಸ ಅಪ್ಟೇಡ್​ ಆದಾಗ ಆ ವಿಚಾರ ಟ್ವಿಟ್ಟರ್​ನಲ್ಲಿ ಟ್ರೆಂಡ್​ ಆಗುತ್ತೆ. ಇಂದು ಏಕಾಏಕಿ KGFChapter2 ಟ್ರೆಂಡ್​ ಆಗಿದ್ದು ನೋಡಿ ಅನೇಕರು ಸಿನಿಮಾ ಬಗ್ಗೆ ಹೊಸ ಅಪ್ಡೇಟ್​ ಬಿಟ್ಟಿರಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಹುಡುಕಾಡಿದ್ದಾರೆ.

ಆದರೆ, ಅಸಲಿವಿಚಾರ ಏನೆಂದರೆ ಇಂದು ಕೆಜಿಎಫ್​ ಸಿನಿಮಾ ನಿರ್ದೇಶಕ ಪ್ರಶಾಂತ್​ ನೀಲ್​ ಜನ್ಮದಿನ. ಹೀಗಾಗಿ, ಸಾಕಷ್ಟು ಜನರು ನೀಲ್​ಗೆ ವಿಶ್​ ಮಾಡಿದ್ದಾರೆ. ಈ ವೇಳೆ ಕೆಜಿಎಫ್​ ಚಾಪ್ಟರ್​2 ಹ್ಯಾಶ್​ಟ್ಯಾಗ್​ ಕೂಡ ಬಳಕೆ ಮಾಡಲಾಗಿದೆ. ಹೀಗಾಗಿ KGFChapter2 ಹ್ಯಾಶ್​ಟ್ಯಾಗ್​ ಟ್ರೆಂಡ್​ ಆಗಿದೆ.

ಇದನ್ನೂ ಓದಿ: ಗರ್ಭಿಣಿ ಆನೆ ಹತ್ಯೆಗೆ ನ್ಯಾಯ ಕೊಡಿಸೋಕೆ ಕೈ ಜೋಡಿಸಿದ ನಟಿ ರಮ್ಯಾ; ಫೇಸ್​ಬುಕ್​ಗೆ ಕಂಬ್ಯಾಕ್​​

ದಸರಾ ಪ್ರಯುಕ್ತ ಅಕ್ಟೋಬರ್​ 23ರಂದು ಕೆಜಿಎಫ್​-2 ತೆರೆಗೆ ಬರುತ್ತಿದೆ. ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿದ್ದು, ಕೆಲವು ಭಾಗದ ಶೂಟಿಂಗ್​ ಇನ್ನೂ ಬಾಕಿ ಉಳಿದಿದೆ ಎನ್ನಲಾಗಿದೆ. ಲಾಕ್​ಡೌ​ನ್​ ಪೂರ್ಣಗೊಂಡ ನಂತರ ಉಳಿದ ಭಾಗದ ಶೂಟಿಂಗ್​ ಪೂರ್ಣಗೊಳಿಸಿಕೊಳ್ಳುವ ಆಲೋಚನೆ ಚಿತ್ರತಂಡದ್ದು.

ಕೆಜಿಎಫ್​-2 ಚಿತ್ರಕ್ಕಾಗಿ ಬಾಲಿವುಡ್​ ನಟ ಸಂಜಯ್ ದತ್​ ಸ್ಯಾಂಡಲ್​ವುಡ್​ಗೆ ಆಗಮಿಸಿದ್ದಾರೆ. ರವೀನಾ ಟಂಡನ್​ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಕನ್ನಡ ಸೇರಿ ಐದು ಭಾಷೆಗಳಲ್ಲಿ ಚಿತ್ರ ತೆರೆಗೆ ಬರುತ್ತಿದೆ.
First published: June 4, 2020, 12:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories