KGF 2 Twitter Review: ಇದಕ್ಕಿಂತ ಅದ್ಭುತ ಬೇರೆ ಇಲ್ಲ ಬಿಡಿ, ರಾಕಿ ಭಾಯ್ ಹವಾ ಕಂಡು ಜನ ಕ್ಲೀನ್ ಬೋಲ್ಡ್!

Twitter Review: ಟ್ವಿಟರ್​ನಲ್ಲಿ ಒಂದೊಂದು ಸೀನ್​ಗಳ ಬಗ್ಗೆಯೂ ಜನ ಮೆಚ್ಚುಗೆ ವ್ಯಕ್ತ ಪಡಿಸಿದ್ದು, ತೂಫಾನ್​ ಹಾಡು ಕೇಳಿ ಬೆಕ್ಕಸ ಬೆರಗಾಗಿದ್ದಾರೆ. ಇನ್ನು ಕೆಲವರು ಇಂಥಹ ಅದ್ಬುತ ಚಿತ್ರ ನೀಡಿದ್ದಕ್ಕೆ ಪ್ರಶಾಂತ್ ನೀಲ್​ಗೆ ಧನ್ಯವಾದ ತಿಳಿಸಿದ್ದು, ಈ ರೀತಿಯ ಮತ್ತೊಂದು ಚಿತ್ರ ನೀಡಿ ಎಂದಿದ್ದಾರೆ.  

ರಾಕಿಂಗ್ ಸ್ಟಾರ್ ಯಶ್

ರಾಕಿಂಗ್ ಸ್ಟಾರ್ ಯಶ್

  • Share this:
ಸಿನಿಪ್ರಿಯರು ಬಹಳ ಕಾತರದಿಂದ ಕಾಯುತ್ತಿದ್ದ, ಬಹು ನಿರೀಕ್ಷಿತ ಚಿತ್ರ ಕೆಜಿಎಫ್ 2 (KGF Chapter 2)  ತೆರೆಕಂಡಿದೆ. ಪ್ರಪಂಚದಾದ್ಯಂತ 10 ಸಾವಿರಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಬಿಡುಗಡೆಯಾಗಿದೆ. ಪೋಸ್ಟರ್, ಟ್ರೇಲರ್ಗಳ (Trailer) ಮೂಲಕ ಕಿಡಿ ಹೊತ್ತಿಸಿದ್ದ ಈ ಚಿತ್ರ ಅಂತೂ ಇಂತೂ ಅಭಿಮಾನಿಗಳ ಕಣ್ಣ ಮುಂದಿದೆ. ಕಳೆದ ರಾತ್ರಿಯಿಂದ ಯಶ್  (Rocking Star Yash) ಅಭಿಮಾನಿಗಳು ಚಿತ್ರವನ್ನು ವೀಕ್ಷಿಸುತ್ತಿದ್ದು, ರಾಕಿ ಬಾಯ್ ನೋಡಿ ಸಂತಸಗೊಂಡಿದ್ದಾರೆ. ಹಾಗೆಯೇ ಅಧೀರ ಮತ್ತು ರಾಕಿ ಬಾಯ್ ಸೆಣೆಸಾಟ ನೋಡಬೇಕು ಎಂದು ಕಾದು ಕುಳಿತ ಪ್ರೇಕ್ಷಕನಿಗೆ ಮೋಸವಿಲ್ಲ ಎನ್ನಬಹುದು. ಈ ಚಿತ್ರದ ಬಗ್ಗೆ ಟ್ವಿಟ್ಟರ್ (Twitter)​ ವೀಕ್ಷಕರು ಏನ್ ಹೇಳಿದ್ದಾರೆ ಎನ್ನುವುದು ಇಲ್ಲಿದೆ.  

ರಾಕಿ ಪಾತ್ರದಲ್ಲಿ ಯಶ್ ಅವರ ಅದ್ಭುತ ಅಭಿನಯ, ಚಿತ್ರದ ನಿರ್ಮಾಣ, ನಿರ್ದೇಶನ, ಉತ್ತಮವಾಗಿ ರಚಿಸಲಾದ ಕಥಾಹಂದರ ಮತ್ತು ನೇರ ನಿರೂಪಣೆಯು ಸಿನಿ ಪ್ರೇಕ್ಷಕರಿಗೆ ಇಷ್ಟವಾಗಿದ್ದು, ನಟರಾದ ಸಂಜಯ್ ದತ್, ರವೀನಾ ಟಂಡನ್ ಮತ್ತು ಶ್ರೀನಿಧಿ ಶೆಟ್ಟಿ ಕೂಡ ತಮ್ಮ ಅತ್ಯುತ್ತಮ ನಟನೆಯ ಮೂಲಕ ಸದ್ದು ಮಾಡಿದ್ದಾರೆ. ಇನ್ನು ದತ್ ಮತ್ತು ಯಶ್ ಅವರ ಕಾದಾಟ ಕೆಜಿಎಫ್ 2 ರ ಹೈಲೈಟ್ ಆಗಿದ್ದು, ಮಿಸ್​ ಮಾಡದೇ ನೋಡಬೇಕು ಎಂದಿದ್ದಾರೆ ಅಭಿಮಾನಿಗಳು.



ಟ್ವಿಟರ್​ನಲ್ಲಿ ಒಂದೊಂದು ಸೀನ್​ಗಳ ಬಗ್ಗೆಯೂ ಜನ ಮೆಚ್ಚುಗೆ ವ್ಯಕ್ತ ಪಡಿಸಿದ್ದು, ತೂಫಾನ್​ ಹಾಡು ಕೇಳಿ ಬೆಕ್ಕಸ ಬೆರಗಾಗಿದ್ದಾರೆ. ಇನ್ನು ಕೆಲವರು ಇಂಥಹ ಅದ್ಬುತ ಚಿತ್ರ ನೀಡಿದ್ದಕ್ಕೆ ಪ್ರಶಾಂತ್ ನೀಲ್​ಗೆ ಧನ್ಯವಾದ ತಿಳಿಸಿದ್ದು, ಈ ರೀತಿಯ ಮತ್ತೊಂದು ಚಿತ್ರ ನೀಡಿ ಎಂದಿದ್ದಾರೆ.

ಅಲ್ಲದೇ ವಿಶ್ವದಾದ್ಯಂತ ಅಭಿಮಾನಿಗಳು ಈ ಚಿತ್ರವನ್ನು ನೋಡಿದ್ದು, ಯುಕೆ, ಯುಸ್​ನಲ್ಲಿ ಕುಳಿತು ಚಿತ್ರ ನೋಡಿ, ರಾಕಿ ಭಾಯ್​ಗೆ ಭೇಷ್​ ಎಂದಿದ್ದಾರೆ. ಕೆಲವರಂತೂ ಕೇವಲ ಫಸ್ಟ್​ ಹಾಫ್ ಮುಗಿಯುತ್ತಿದ್ದಂತೆ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಯಶ್ ಮತ್ತು ಸಂಜಯ್ ದತ್ ಅದ್ಬುತವಾಗಿ ನಟಿಸಿದ್ದಾರೆ ಎಂದಿದ್ದಾರೆ.

ಚಿತ್ರ ಬಹಳ ಅದ್ಬುತವಾಗಿದೆ, ಅಧೀರನ ಎಂಟ್ರಿ ಸೀಸ್​ ಮೈನವಿರೇಳಿಸುವಂತಿತ್ತು ಎಂದು ಥಾಮಸ್​ ಮುಲ್ಲರ್​ ಎನ್ನುವವರು ಹೇಳಿದ್ದಾರೆ. ಬಹಳಷ್ಟು ಜನರು ಈ ಚಿತ್ರಕ್ಕೆ 5 ಸ್ಟಾರ್ ಕೊಟ್ಟಿದ್ದು, ಮಿಸ್​ ಮಾಡದೇ ನೋಡಿ ಎಂದು ಸಲಹೆ ಕೂಡ ನೀಡಿದ್ದಾರೆ.

ಇನ್ನು ಯಶ್ ನಟನೆಯನ್ನು ಹಾಡಿ ಹೊಗಳಿರುವ ಶ್ರೀನಿವಾಸ್​ ಎನ್ನುವವರು, ಅವರ ಡೈಲಾಗ್ ಡೆಲಿವರಿ, ನಟನೆ ಶೈಲಿ ನಿಜಕ್ಕೂ ಮೋಡಿ ಮಾಡುತ್ತದೆ. ಹಾಗೆಯೇ ಬ್ಯಾಗ್ರೌಂಡ್​ ಸ್ಕೋರ್​ ಕೂಡ ಅದ್ಭುತವಾಗಿದ್ದು, ವಿಭಿನ್ನ ಲೋಕಕ್ಕೆ ಹೋಗಿ ಬಂದ ಅನುಭವ ನೀಡುತ್ತದೆ ಎಂದಿದ್ದಾರೆ.



ಟ್ವಿಟರ್​ನಲ್ಲಿ ಒಂದೊಂದು ಸೀನ್​ಗಳ ಬಗ್ಗೆಯೂ ಜನ ಮೆಚ್ಚುಗೆ ವ್ಯಕ್ತ ಪಡಿಸಿದ್ದು, ತೂಫಾನ್​ ಹಾಡು ಕೇಳಿ ಬೆಕ್ಕಸ ಬೆರಗಾಗಿದ್ದಾರೆ. ಇನ್ನು ಕೆಲವರು ಇಂಥಹ ಅದ್ಬುತ ಚಿತ್ರ ನೀಡಿದ್ದಕ್ಕೆ ಪ್ರಶಾಂತ್ ನೀಲ್​ಗೆ ಧನ್ಯವಾದ ತಿಳಿಸಿದ್ದು, ಈ ರೀತಿಯ ಮತ್ತೊಂದು ಚಿತ್ರ ನೀಡಿ ಎಂದಿದ್ದಾರೆ.
Published by:Sandhya M
First published: