ಆನೆ ನಡೆದಿದ್ದೆ ದಾರಿ ಅನ್ನೋ ಮಾತಿದೆ..ಈ ಮಾತು ಈಗ ಕನ್ನಡದ ಗೋಲ್ಡನ್ ಫಿಶ್ (Golden Fish) ಕೆಜಿಎಫ್ 2(KGF 2) ಚಿತ್ರಕ್ಕೆ ಸರಿಹೊಂದುತ್ತೆ..ಯಾಕಂದ್ರೆ ಈಗ ಕೆಜಿಎಫ್ 2 ಸಿನಿಮಾ ಮಾಡಿದೆ. ಸದ್ಯ ವಿಶ್ವವ್ಯಾಪಿ ಈಗ ಪ್ರಶಾಂತ್ ನೀಲ್(Prashanth Nee;) ಸೃಷ್ಟಿಸಿದ ನರಾಚಿ ಲೋಕದ್ದೆ ಸದ್ದು. ಕನ್ನಡ (Kannada), ತಮಿಳು(Tamil), ತೆಲುಗು(Telugu), ಹಿಂದಿ(Hindi), ಮಲೆಯಾಳಂ(Malayalam) ಭಾಷೆಯಲ್ಲಿ ನಿನ್ನೆ ರಿಲೀಸ್ ಆದ ಕೆಜಿಎಫ್ ಚಾಪ್ಟರ್ 2 ಟ್ರೈಲರ್, ಚಿತ್ರ ರಂಗದಲ್ಲಿ ಹೊಸ ಅಧ್ಯಾಯಕ್ಕೆ ಮುನ್ನಡಿ ಬರೆಯುವ ಸೂಚನೆ ಕೊಟ್ಟಿದೆ. ಟ್ರೈಲರ್(Trailer) ರಿಲೀಸ್ ಆದ 24 ಗಂಟೆಗಳಲ್ಲಿ ಯಾರು ಊಹೆ ಮಾಡದ ರೀತಿ ಅಬ್ಬರಿಸ್ತಿದ್ದಾನೆ ಕೆಜಿಎಫ್ ನ ರಣ ಭೇಟೆಗಾರ .ಕರುನಾಡಲ್ಲಿ ಸದ್ಯ ಹಬ್ಬದ ವಾತಾವರಣ ಇದೆ. ಕಳೆದ 2 ವಾರ ಜೇಮ್ಸ್(James) ಜಾತ್ರೆ ಮಾಡಿದ್ದ ಚಿತ್ರಪ್ರೇಮಿಗಳು ಈ ವಾರ ಕೆಜಿಎಫ್ ಹಬ್ಬದ ಗುಂಗಿನಲ್ಲಿದ್ದಾರೆ. ವಿಶೇಷ ಅಂದ್ರೆ ಕೆಜಿಎಫ್ ಟ್ರೇಲರ್ ಈಗ ಯುಗಾದಿಗೂ ಮೊದಲೆ ಸಿನಿರಸಿಕರ ಅಂಗಳದಲ್ಲಿ ಹಬ್ಬದವಾ ತಾವರಣ ಉಂಟು ಮಾಡಿದೆ.
24 ಗಂಟೆಗಳಲ್ಲಿ 109 ಮಿಲಿಯನ್ ವ್ಯೂಸ್!
ಇನ್ನು ಸಿನಿಮಾ ಬಂದ್ರೆ ಊರಹಬ್ಬ ಅಂತಿದ್ದಾರೆ ಗಾಂಧಿನಗರ ಸಿನಿಪಂಡಿತರು. ಯಾಕಂದ್ರೆ ಅಷ್ಟು ದೊಡ್ಡ ಮಟ್ಟದ ಸೌಂಡ್ ಮಾಡ್ತಿದೆ ಕೆಜಿಎಫ್ 2 ಚಿತ್ರದ ಟ್ರೈಲರ್.ಯೆಸ್.. ನಿನ್ನೆ ಸಂಜೆ 6ಗಂಟೆ 40 ನಿಮಿಷಕ್ಕೆ ಕೆಜಿಎಫ್ ಚಾಪ್ಟರ್2 ಟ್ರೈಲರ್ ಅನ್ನು ಹ್ಯಾಟ್ರಿಕ್ ಹೀರೋ ಶಿವಣ್ಣ ಲಾಂಚ್ ಮಾಡಿ ಅಭಿಮಾನಿಗಳಿಗೆ ಅರ್ಪಿಸಿದ್ರು. ರಿಲೀಸ್ ಗಳಿಗೆಯಿಂದಲೂ ಯೂಟ್ಯೂಬ್ನಲ್ಲಿ ಸೌಂಡ್ ಮಾಡ್ತಿರುವ ಟ್ರೈಲರ್ ನಂ 1 ಟ್ರೆಂಡಿಂಗ್ ನಲ್ಲಿದೆ. ಅಲ್ಲದೆ ರಿಲೀಸ್ ಆದ ಎಲ್ಲಾ ಭಾಷೆಯಲ್ಲೂ ಚಾಪ್ಟರ್ 2 ಮಿಲಿಯನ್ ಗಟ್ಟೆ ವ್ಯೂವ್ಸ್ ಕಂಡು ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.
Records.. Records.. Records..💥
Rocky don't like it, He avoids, But Records likes Rocky!
He Cannot avoid it.
𝟏𝟎𝟗 + 𝐌𝐢𝐥𝐥𝐢𝐨𝐧 𝐕𝐢𝐞𝐰𝐬 𝐢𝐧 𝟐𝟒 𝐇𝐨𝐮𝐫𝐬 ♥️🙏
Kannada: 18M
Telugu: 20M
Hindi: 51M
Tamil: 12M
Malayalam: 8M#KGFChapter2Trailer #KGFChapter2 pic.twitter.com/n6pspljdxj
— Hombale Films (@hombalefilms) March 28, 2022
ಇದನ್ನೂ ಓದಿ: `ರಣ ಬೇಟೆಗಾರ’ನ ರೌದ್ರಾವತಾರ.. ಕೆಜಿಎಫ್ 2 ಟ್ರೈಲರ್ ರಿಲೀಸ್, ರಾಕಿ ಭಾಯ್ ಅಬ್ಬರಕ್ಕೆ ಯೂಟ್ಯೂಬ್ ಕ್ರ್ಯಾಶ್!
ಕನ್ನಡದಲ್ಲೇ 18 ಮಿಲಿಯನ್ ವ್ಯೂವ್ಸ್!
ಕೆಜಿಎಫ್ ಟ್ರೇಲರ್ ಹವಾ ಕಂಡು ಸಿನಿಮಾ ಮಂದಿ ಕೆಜಿಎಫ್ ಗೆ ಕೆಜಿಎಫ್ ಸಾಟಿ ಅಂತಿದ್ದಾರೆ. ಇನ್ನು ಚಾಪ್ಟರ್ 2 ಟ್ರೈಲರ್ 24 ಗಂಟೆಗಳಲ್ಲಿ ಮಾಡಿದ ಸಾಧನೆ ಬಗ್ಗೆ ಹೇಳಬೇಕಂದ್ರೆ ಹೆಮ್ಮೆ ಆಗುತ್ತೆ. ಯಾಕಂದ್ರೆ ರಿಲೀಸ್ ಆದ ಒಂದೇ ದಿನದಲ್ಲಿ 109 ಮಿಲಿಯನ್ ವ್ಯೂವ್ಸ್ ಕಂಡಿದೆ ಕೆಜಿಎಫ್ 2 ಟ್ರೈಲರ್. ಇನ್ನು ಯಾವ ಭಾಷೆಯಲ್ಲಿ ಎಷ್ಟು ವ್ಯೂಸ್ ಆಗಿದೆ ಅನ್ನೋದರ ಬಗ್ಗೆ ಕಣ್ಣಾಡಿಸೋದಾದ್ರೆ, ಕನ್ನಡದ ಟ್ರೈಲರ್ 18ಮಿಲಿಯನ್ ವೀಕ್ಷಣೆಯಾಗಿದ್ರೆ, ತೆಲುಗು ಟ್ರೈಲರ್ 20 ಮಿಲಿಯನ್ ,ಹಿಂದಿ 51 ಮಿಲಿಯನ್ ತಮಿಳು 12,ಮಿಲಿಯನ್, ಮಲೆಯಾಳಂ 8 ಮಿಲಿಯನ್ ವೀಕ್ಷಣೆ ಕಂಡಿದೆ
ಎಲ್ಲೆಲ್ಲೂ ಚಿನ್ನದ ಮೀನಿನ ಆರ್ಭಟ!
ಸದ್ಯ ಸೋಷಿಯಲ್ ಮೀಡಿಯಾ ಅನ್ನೋ ಸಾಗರದಲ್ಲಿ ಕೆಜಿಎಫ್ 2 ಎಂಬ ಚಿನ್ನದ ಮೀನಿನ ಅರ್ಭಟ ಜೋರಾಗಿದ್ದು, ರಾಕಿ ಖದರ್, ಅಧೀರ ಖಡಕ್ ಗೆ ಪ್ಯಾನ್ ಇಂಡಿಯಾ ಫ್ಯಾನ್ಸ್ ಗಳು ಫಿಧಾ ಆಗಿದ್ದು, ಪ್ರಶಾಂತ್ ನೀಲ್ ಕಟ್ಟಿಕೊಟ್ಟಿರುವ ನರಾಚಿ ಲೋಕದ ದೃಶ್ಯಕಾವ್ಯಕ್ಕೆ ಸಲಾಂ ಹೊಡಿತಿದ್ಧಾರೆ. ಅಲ್ಲದೆ ಕೆಜಿಎಫ್ ಟ್ರೈಲರ್ ಹವಾನೆ ಇಷ್ಟು ಜೋರಾಗಿದ್ರೆ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆದ್ರೆ ಸುನಾಮಿ ಆಗೋದಂತು ಗ್ಯಾರಂಟಿ ಅಂತಿದ್ದಾರ ಗಾಂಧಿನಗರ ಸಿನಿಮಾ ಪಂಡಿತರು .
ಇದನ್ನೂ ಓದಿ: ಕೆಜಿಎಫ್ 2 ಟಿವಿ ರೈಟ್ಸ್ ಎಷ್ಟು ಹಣಕ್ಕೆ ಸೇಲ್ ಆಯ್ತು ಗೊತ್ತಾ? ಊಹೆನೂ ಮಾಡಿರಲ್ಲ ನೀವು..
ಕೆಜಿಎಫ್ ವರ್ಸಸ್ ಬೀಸ್ಟ್ ಅಲ್ಲ ಎಂದ ರಾಕಿ ಭಾಯ್
“ಇದು ಕೆಜಿಎಫ್ ಮತ್ತು ಬೀಸ್ಟ್. ಇದು ಕೆಜಿಎಫ್ ವರ್ಸಸ್ ಬೀಸ್ಟ್ ಅಲ್ಲ. ಇದು ಚುನಾವಣೆಯಲ್ಲ. ಚುನಾವಣೆಯಲ್ಲಿ, ಪ್ರತಿಯೊಬ್ಬರಿಗೂ ಕೇವಲ ಒಂದು ಮತವಿದೆ ಮತ್ತು ಆ ಮತಗಳನ್ನು ಗೆಲ್ಲಲು ನಾವು ಹೋರಾಡಬೇಕಾಗುತ್ತದೆ. ಒಬ್ಬರು ಗೆದ್ದರೆ ಮತ್ತೊಬ್ಬರು ಸೋಲಬೇಕು. ಇದು ಸಿನಿಮಾ ಮತ್ತು ಜನರು ನನ್ನ ಚಿತ್ರ ಮತ್ತು ಅವರ ಚಿತ್ರ ಎರಡನ್ನೂ ವೀಕ್ಷಿಸಬಹುದು. ಮತ್ತು ವಿಜಯ್ ಸರ್ ದೊಡ್ಡ ಸ್ಟಾರ್, ನಾವು ಅವರನ್ನು ಗೌರವಿಸಬೇಕು ಎಂದು ಯಶ್ ಹೇಳಿದರು.
(ವರದಿ - ಸತೀಸ್ ಎಂ.ಬಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ