ಒಂದು ಕಡೆ ಚಿತ್ರಮಂದಿರಗಳು ಮತ್ತೆ ಆರಂಭವಾಗಿವೆ, ಮತ್ತೊಂದು ಕಡೆ ಸಿನಿಮಾ ಶೂಟಿಂಗ್ ಸಹ ಶುರುವಾಗಿದೆ. ಇದರ ನಡುವೆ ದೊಡ್ಡ ದೊಡ್ಡ ಸ್ಟಾರ್ ಹಾಗೂ ಬ್ಯಾನರ್ಗಳ ಸಿನಿಮಾಗಳು ಸಿನಿಪ್ರಿಯರಿಗಾಗಿ ಟೀಸರ್, ಮೋಷನ್ ಪೋಸ್ಟರ್ ಅಂತ ರಿಲೀಸ್ ಮಾಡುತ್ತಿವೆ. ಅಷ್ಟೇ ಏಕೆ ಕೆಜಿಎಫ್ ಚಾಪ್ಟರ್ 2 ಚಿತ್ರ ನಿರ್ಮಿಸುತ್ತಿರುವ ಹೊಂಬಾಳೆ ಫಿಲಂಸ್ ಸಹ ಹೊಸ ಸಿನಿಮಾ ಪ್ರಕಟಿಸುತ್ತಾ ಟೈಟಲ್ ಪೋಸ್ಟರ್ ರಿಲೀಸ್ ಮಾಡುತ್ತಿದೆ. ಹೀಗಿರುವಾಗ ಕೆಜಿಎಫ್ ಚಾಪ್ಟರ್ ಚಿತ್ರತಂಡ ಮಾತ್ರ ಇಂತಹ ಯಾವುದೇ ಪ್ರಕಟಣೆ ಮಾಡುತ್ತಿಲ್ಲ. ಇದೇ ಕಾರಣದಿಂದ ಯಶ್ ಅಭಿಮಾನಿಗಳು ಈ ಹಿಂದೆ ಸಹ ಕೆಜಿಎಫ್ ಚಾಪ್ಟರ್ 2 ಟೀಸರ್ ಬಿಡುಗಡೆ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಒತ್ತಡ ಹೇರಿದ್ದರು. ಇನ್ನಾದರೂ ಟೀಸರ್ ರಿಲೀಸ್ ಮಾಡಿ ಎಂದು ನಿರ್ದೇಶಕ ಹಾಗೂ ನಿರ್ಮಾಪಕರನ್ನು ಆಗ್ರಹಿಸಿದ್ದರು. ಆದರೆ ಈಗ ಮತ್ತೆ ಕೆಜಿಎಫ್ ಚಾಪ್ಟರ್ 2 ಟ್ವಿಟರ್ನಲ್ಲಿ ಟ್ರೆಂಡಿಂಗ್ನಲ್ಲಿದೆ. ಇದಕ್ಕೆ ಕಾರಣ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್. ಹೌದು, ಟೀಸರ್ ರಿಲೀಸ್ಗೆ ದಿನಾಂಕ ನಿಗದಿಯಾಗಿದೆಯಂತೆ.
ಒಂದೊಂದು ಚಿತ್ರತಂಡವೂ ತಮ್ಮ ಪ್ರೇಕ್ಷಕರಿಗಾಗಿ ಒಂದೊಂದು ಸರ್ಪ್ರೈಸ್ ಕೊಡುತ್ತಿದ್ದರೆ, ಕೆಜಿಎಫ್ ಚಿತ್ರತಂಡ ಮಾತ್ರ ಯಾವುದೇ ಅಪ್ಡೇಟ್ ನೀಡುತ್ತಿಲ್ಲ. ಆದರೆ ಶೂಟಿಂಗ್ ಆರಂಭವಾದಾಗ ಮಾತ್ರ ಕೆಲವು ಫೋಟೋಗಳನ್ನು ಹಂಚಿಕೊಳ್ಳುತ್ತಿದೆ. ಇದರಿಂದಾಗಿ ಬೇಸತ್ತ ಯಶ್ ಅಭಿಮಾನಿಗಳು ಈಗ ಟ್ವಿಟರ್ನಲ್ಲಿ #KGFChapter2 ಎಂದು ಟ್ರೆಂಡ್ ಮಾಡುತ್ತಿದ್ದಾರೆ.
ಯಶ್ ಅಭಿಮಾನಿಗಳಲ್ಲಿ ಕೆಲವು ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ರಿಲೀಸ್ಗೆ ದಿನಾಂಕ ನಿಗದಿಯಾಗಿದೆ ಎಂದು ಟ್ವೀಟ್ ಮಾಡುತ್ತಿದ್ದಾರೆ. ಅದು ಯಶ್ ಹುಟ್ಟುಹಬ್ಬದಂದು ಚಿತ್ರತಂಡ ಟೀಸರ್ ಬಿಡುಗಡೆ ಮಾಡಲಿದೆ ಎಂದು ಪೋಸ್ಟ್ ಮಾಡುತ್ತಿದ್ದಾರೆ.
ಕೆಜಿಎಫ್ 2 ಟೀಸರ್ ರಿಲೀಸ್ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಪ್ರಕಟಣೆ ಮಾಡಿಲ್ಲ. ಆದರೆ ಯಶ್ ಅಭಿಮಾನಿಯೊಬ್ಬರಿಗೆ ಟ್ವೀಟ್ ಮೂಲಕ ಉತ್ತರ ಕೊಟ್ಟಿರುವ ಹೊಂಬಾಳೆ ಫಿಲಂಸ್ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ, ಹುಟ್ಟುಹಬ್ಬಕ್ಕೆ ನೋಡ್ತಿಯಾ ಬೇರೆ ರೇಂಜ್ನಲ್ಲೇ ಇರುತ್ತೆ ಎಂದು ಉತ್ತರಿಸಿದ್ದಾರೆ.
![KGF Chapter 2, Yash, Birthday, KGF Chapter 2 update, KGF Chapter 2 Teaser Release Date, KGF Chapter 2 Teaser to release on Yash Birthday, ಕೆಜಿಎಫ್-2, ಯಶ್, ಹುಟ್ಟುಹಬ್ಬ, ಯಶ್ ಹುಟ್ಟುಹಬ್ಬಕ್ಕೆ ಕೆಜಿಎಫ್-2 ಟೀಸರ್, ಕೆಜಿಎಫ್-2 ಟೀಸರ್ ರಿಲೀಸ್ ಗೆ ದಿನಾಂಕ ನಿಗದಿ]()
ಟ್ವಿಟರ್ನಲ್ಲಿ ಟ್ರೆಂಡ್ ಆಗುತ್ತಿದೆ ಕೆಜಿಎಫ್ ಚಾಪ್ಟರ್ 2
![KGF Chapter 2, Yash, Birthday, KGF Chapter 2 update, KGF Chapter 2 Teaser Release Date, KGF Chapter 2 Teaser to release on Yash Birthday, ಕೆಜಿಎಫ್-2, ಯಶ್, ಹುಟ್ಟುಹಬ್ಬ, ಯಶ್ ಹುಟ್ಟುಹಬ್ಬಕ್ಕೆ ಕೆಜಿಎಫ್-2 ಟೀಸರ್, ಕೆಜಿಎಫ್-2 ಟೀಸರ್ ರಿಲೀಸ್ ಗೆ ದಿನಾಂಕ ನಿಗದಿ]()
ಕಾರ್ತಿಕ್ ಗೌಡ ಮಾಡಿರುವ ಟ್ವೀಟ್
ಈ ಪೋಸ್ಟ್ ಅನ್ನೇ ರೀಟ್ವೀಟ್ ಮಾಡುತ್ತಿರುವ ಯಶ್ ಅಭಿಮಾನಿಗಳು, ಜನವರಿ 8ಕ್ಕೆ ಟೀಸರ್ ರಿಲೀಸ್ ಆಗಲಿದೆ ಎಂದು ಖುಷಿಯಿಂದ ಪೋಸ್ಟ್ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ