news18-kannada Updated:August 12, 2020, 1:36 PM IST
ಸಂಜಯ್ ದತ್
ನಟ ಸಂಜಯ್ ದತ್ಗೆ ಉಸಿರಾಟದ ತೊಂದರೆ ಇರುವ ಕಾರಣ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಸಂಜಯ್ ದತ್ಗೆ ಶ್ವಾಸಕೋಶದ ಕ್ಯಾನ್ಸರ್ ಇರುವ ವಿಚಾರ ತಿಳಿದು ಬಂದಿದೆ. ಇದು ಅವರ ಅಭಿಮಾನಿಗಳಲ್ಲಿ ಸಾಕಷ್ಟು ಆತಂಕ ಮೂಡಿಸಿದೆ. ಶೀಘ್ರವೇ ಅಮೆರಿಕಕ್ಕೆ ತೆರಳಿ ಸಂಜಯ್ ದತ್ ಚಿಕಿತ್ಸೆ ಪಡೆಯಲಿದ್ದಾರಂತೆ.
ಈ ಬಗ್ಗೆ ಬಾಲಿವುಡ್ ಫಿಲ್ಮ್ ಟ್ರೇಡ್ ಪತ್ರಕರ್ತ ಕೋಮಲ್ ನಹ್ತಾ ಟ್ವೀಟ್ ಮಾಡಿದ್ದಾರೆ. ಸಂಜಯ್ ದತ್ಗೆ ಕ್ಯಾನ್ಸರ್ ಇದೆ. ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸೋಣ, ಎಂಬುದಾಗಿ ಬರೆದುಕೊಂಡಿದ್ದಾರೆ.
ಸಂಜಯ್ ದತ್ ತಮಗೆ ಕ್ಯಾನ್ಸರ್ ಇರುವ ವಿಚಾರವನ್ನು ನೇರವಾಗಿ ಹೇಳಿಕೊಂಡಿಲ್ಲ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ನಾನು ವೈದ್ಯಕೀಯ ಚಿಕಿತ್ಸೆ ದೃಷ್ಟಿಯಿಂದ ಚಿಕ್ಕ ವಿರಾಮ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಕುಟುಂಬ ಹಾಗೂ ಗೆಳೆಯರು ನನ್ನ ಜೊತೆ ಇದ್ದಾರೆ. ನನ್ನ ಬಗ್ಗೆ ಚಿಂತೆ ಬೇಡ. ನಿಮ್ಮ ಹಾರೈಕೆ ನನ್ನ ಮೇಲಿರಲಿ. ನಾನು ಬೇಗ ವಾಪಾಸಾಗುತ್ತೇನೆ, ಎಂದು ಅವರು ಬರೆದುಕೊಂಡಿದ್ದಾರೆ.ಇನ್ನು, ಕ್ಯಾನ್ಸರ್ ಇರುವ ವಿಚಾರ ತಿಳಿದು ಸಂಜಯ್ ದತ್ ಚಿಂತಾಕ್ರಾಂತರಾಗಿದ್ದಾರಂತೆ. ಈ ಬಗ್ಗೆ ಅವರ ಗೆಳೆಯ ವೆಬ್ಸೈಟ್ ಒಂದಕ್ಕೆ ಮಾತನಾಡಿದ್ದಾರೆ. ಸಂಜಯ್ ದತ್ ಇಬ್ಬರು ಮಕ್ಕಳು ತಾಯಿ ಜೊತೆ ದುಬೈನಲ್ಲಿದ್ದಾರೆ. ಇದು ಸಂಜಯ್ ದತ್ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕ್ಯಾನ್ಸರ್ ಅನ್ನು ಗುಣಪಡಿಸಬಹುದು ಆದರೆ, ಅದಕ್ಕೆ ತಕ್ಷಣಕ್ಕೆ ಚಿಕಿತ್ಸೆ ಬೇಕು. ಚಿಕಿತ್ಸೆಗಾಗಿ ಸಂಜಯ್ ದತ್ ಅಮೆರಿಕಕ್ಕೆ ತೆರಳಲಿದ್ದಾರೆ, ಎಂದು ತಿಳಿಸಿದ್ದಾರೆ.
ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಆಗಸ್ಟ್ 8ರಂದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೊರೋನಾ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಾಗಿತ್ತು. ಈ ವೇಳೆ ಅವರಿಗೆ ಕ್ಯಾನ್ಸರ್ ಇರುವ ವಿಚಾರ ಗೊತ್ತಾಗಿದೆ ಎನ್ನಲಾಗಿದೆ.
ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಆಗಸ್ಟ್ 8ರಂದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೊರೋನಾ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಾಗಿತ್ತು. ಈ ವೇಳೆ ಅವರಿಗೆ ಕ್ಯಾನ್ಸರ್ ಇರುವ ವಿಚಾರ ಗೊತ್ತಾಗಿದೆ ಎನ್ನಲಾಗಿದೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ ಕೆಜಿಎಫ್2ನಲ್ಲಿ ಸಂಜಯ್ ದತ್ ನಟಿಸಿದ್ದಾರೆ. ಅವರ ಜನ್ಮದಿನಕ್ಕೆ ಕೆಜಿಎಫ್ನ ಲುಕ್ ರಿವೀಲ್ ಆಗಿತ್ತು.
Published by:
Rajesh Duggumane
First published:
August 12, 2020, 7:44 AM IST