KGF Chapter 2: ಮುಂಬೈನಲ್ಲಿ ಕಾಣಿಸಿಕೊಂಡ Yash​: ಶುರುವಾಯ್ತು ಹೊಸ ಸಿನಿಮಾ ಕುರಿತಾದ ಗುಸು ಗುಸು..!

ಯಶ್ ಅವರನ್ನು ಮುಂಬೈನಲ್ಲಿ ವಿಮಾನ ನಿಲ್ದಾಣದಲ್ಲಿ ನೋಡಿದ ನಂತರ ಈ ವಿಷಯವಾಗಿ ಸಾಕಷ್ಟು ಗುಸು ಗುಸು ಆರಂಭವಾಗಿದೆ. ಹೌದು, ಯಶ್​ ಅವರು ಹೊಸ ಸಿನಿಮಾ ಕುರಿತಾಗಿ ಚರ್ಚಿಸೋಕೆ ಮುಂಬೈ ಹೋಗಿದ್ದಾರೆ. ಅಲ್ಲಿ ಅವರು ನಿರ್ದೇಶಕರು ಹಾಗೂ ನಿರ್ಮಾಪಕರನ್ನು ಭೇಟಿಯಾಗಿದ್ದಾರೆ ಎಂಬೆಲ್ಲ ಸುದ್ದಿಗಳು ಹರಿದಾಡಲಾರಂಭಿಸಿವೆ.

ನಟ ಯಶ್​

ನಟ ಯಶ್​

  • Share this:
ಕೆಜಿಎಫ್​ ಸಿನಿಮಾದ ಮೂಲಕ ನ್ಯಾಷನಲ್​ ಸ್ಟಾರ್ ಪಟ್ಟಕ್ಕೇರಿದ ಯಶ್​ ಈಗ ಆಗಾಗ ಮುಂಬೈನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಇತ್ತೀಚೆಗಷ್ಟೆ ಅವರು ಕನ್ನಡ ಸಿನಿಮಾವೊಂದರಿಂದ ಹೊರ ಬಂದಿದ್ದು, ಇನ್ನು ಮುಂದೆ ತನ್ನ ವರ್ಚಸ್ಸಿಗೆ ತಕ್ಕಂತ ಚಿತ್ರಗಳ ಆಯ್ಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದೂ ಹೇಳಲಾಗಿತ್ತು. ಅಲ್ಲದೆ ಕೆಜಿಎಫ್​ ಚಾಪ್ಟರ್ 2 ಸಿನಿಮಾದ ರಿಲೀಸ್​ಗಾಗಿ ಕಾಯುತ್ತಿರುವ ಯಶ್​ ಅವರು ಮತ್ತೆ ಯಾವ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ ಅನ್ನೋ ಕುತೂಹಲ ಸಿನಿರಂಗ ಸೇರಿದಂತೆ ಅಭಿಮಾನಿಗಳಲ್ಲೂ ಇದೆ. ಹೀಗಿರುವಾಗಲೇ ಯಶ್ ಅವರು ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್​ ಅವರು ಮುಂಬೈನ ಏರಪೋರ್ಟ್​ನಲ್ಲಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. 

ಯಶ್ ಅವರನ್ನು ಮುಂಬೈನಲ್ಲಿ ವಿಮಾನ ನಿಲ್ದಾಣದಲ್ಲಿ ನೋಡಿದ ನಂತರ ಈ ವಿಷಯವಾಗಿ ಸಾಕಷ್ಟು ಗುಸು ಗುಸು ಆರಂಭವಾಗಿದೆ. ಹೌದು, ಯಶ್​ ಅವರು ಹೊಸ ಸಿನಿಮಾ ಕುರಿತಾಗಿ ಚರ್ಚಿಸೋಕೆ ಮುಂಬೈ ಹೋಗಿದ್ದಾರೆ. ಅಲ್ಲಿ ಅವರು ನಿರ್ದೇಶಕರು ಹಾಗೂ ನಿರ್ಮಾಪಕರನ್ನು ಭೇಟಿಯಾಗಿದ್ದಾರೆ ಎಂಬೆಲ್ಲ ಸುದ್ದಿಗಳು ಹರಿದಾಡಲಾರಂಭಿಸಿವೆ.


ಹೀಗಿರುವಾಗಲೇ ಯಶ್ ಅವರು ಮುಂಬೈಗೆ ಹೋಗಿದ್ದೇಕೆ ಎಂಬುದಕ್ಕೆ ಕಾರಣ ಸಿಕ್ಕಿದೆ. ಹೌದು, ಯಶ್​ ಅವರು ಜಾಹೀರಾತೊಂದರ ವಿಷಯವಾಗಿ ಅವರು ಮುಂಬೈಗೆ ಹೋಗಿದ್ದಂತೆ. ಹೌದು, ದೊಡ್ಡ ಬ್ರ್ಯಾಂಡ್​ ಒಂದರ ಜಾಹೀರಾತಿನ ಶೂಟಿಂಗ್​ನಲ್ಲಿ ಭಾಗಿಯಾಗಲು ಯಶ್​ ಮುಂಬೈಗೆ ಹೋಗಿದ್ದಂತೆ.

ಈಗಾಗಲೇ ಯಶ್ ಅವರು ಬಿಯರ್ಡ್​ ಪ್ರಾಡೆಕ್ಟ್​ನ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಯಶ್​ ಮತ್ತೊಂದು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿನ ಸಂತಸಕ್ಕೆ ಕಾರಣವಾಗಿದೆ. ಇನ್ನು ಏರ್​ಪೋರ್ಟ್​ನಲ್ಲಿ ಯಶ್ ಅವರು ಉದ್ದ ಗಡ್ಡ, ಪುಟ್ಟದಾದ ಪೋನಿ ಹಾಗೂ ಕೂಲಿಂಗ್ ಗ್ಲಾಸ್​ ತೊಟ್ಟು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಪಾಪರಾಜಿಗಳು ಯಶ್ ಅವರ ವಿಡಿಯೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಯಶ್ ಅಭಿನಯದ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್​ 2 ಚಿತ್ರದ ವಿಷಯಕ್ಕೆ ಬಂದರೆ, ಅದು ಮುಂದಿನ ವರ್ಷ ತೆರೆ ಕಾಣಲಿದೆ. ಈ ಹಿಂದೆ ಕೊರೋನಾ ಕಾರಣದಿಂದಾಗಿ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೂಡಿದ್ದ ಚಿತ್ರತಂಡ ಇತ್ತೀಚೆಗಷ್ಟೆ ಈ ಚಿತ್ರ ಹೊಸ ಬಿಡುಗಡೆ ದಿನಾಂಕವನ್ನು ರಿಲೀಸ್ ಮಾಡಿತ್ತು. ಮುಂದಿನ ವರ್ಷ ಏಪ್ರಿಲ್ 14ಕ್ಕೆ ಈ ಸಿನಿಮಾ ತೆರೆ ಕಾಣಲಿದೆ.

ರ್ಮಾಪಕರಿಗೆ ಹಣ ಹಿಂತಿರುಗಿಸಿದ್ದಾರಂತೆ ಯಶ್

ಕೆ.ಜಿ.ಎಫ್' ಸಿನಿಮಾ ಮೂಲಕ ನಂ.1 ಸ್ಟಾರ್ ಪಟ್ಟಕ್ಕೇರಿರೋ ರಾಕಿಂಗ್ ಸ್ಟಾರ್ ಯಶ್‍ರ ಪ್ರತಿ ಹೆಜ್ಜೆ ಮೇಲೂ ನಿರೀಕ್ಷೆ ಮೂಡಿದೆ. ಅಭಿಮಾನಿಗಳಿಂದ ಹಿಡಿದು ಪರಭಾಷಾ ಸಿನಿ ರಂಗದಲ್ಲೂ ಯಶ್‍ರ ಮುಂದಿನ ಚಿತ್ರಗಳ ಬಗ್ಗೆ ಮಾತುಗಳು ಹರಿದಾಡುತ್ತಿವೆ. ಸದ್ಯ ಯಶ್‍ಗೆ ಬೇಡಿಕೆಯೂ ಹೆಚ್ಚಾಗಿದ್ದು, ಟಾಲಿವುಡ್, ಮಾಲಿವುಡ್‍ನಿಂದಲೂ ದೊಡ್ಡ ದೊಡ್ಡ ಅವಕಾಶಗಳು ಅರಸಿ ಬರುತ್ತಿವೆಯಂತೆ. ಆದರೆ ಬೇರೆ ಸಿನಿಮಾ ಅವಕಾಶಗಳನ್ನು ಪಕ್ಕಕ್ಕಿಟ್ಟಿರೋ ಯಶ್ ಕನ್ನಡಕ್ಕೆ ಮೊದಲ ಆದ್ಯತೆ ನೀಡಿದ್ದಾರೆ.

ಇದನ್ನೂ ಓದಿ: KGF Chapter 2 Release Date: ಕೆಜಿಎಫ್​ ಚಾಪ್ಟರ್​ 2 ರಿಲೀಸ್​ ಬಗ್ಗೆ ದೊಡ್ಡ ಅಪ್ಡೇಟ್ ಕೊಟ್ಟ ಪ್ರಶಾಂತ್ ನೀಲ್​..!

ಯಶ್ ಅವರ ಹೊಸ ಪ್ರಾಜೆಕ್ಟ್​ಗಳ ಕುರಿತಾಗಿ ಮಾತನಾಡುವಾಗ ಅಲ್ಲಿ ಮೊದಲು ಬರೋದೇ ಕಿರಾತಕ 2. ಹೌದು, ಈ ಚಿತ್ರಕ್ಕೆ 'ಮೈ ನೇಮ್ ಈಸ್ ಕಿರಾತಕ' ಎಂದು ಟೈಟಲ್ ಫಿಕ್ಸ್ ಮಾಡಲಾಗಿತ್ತು. ಕೆಜಿಎಫ್​ ಚಾಪ್ಟರ್ 1 ರಿಲೀಸ್ ಆಗುತ್ತಿದ್ದಂತೆಯೇ ಯಶ್ ಅವರು ತಮ್ಮ ಹೇರ್​ ಸ್ಟೈಲ್​ ಹಾಗೂ ಗಡ್ಡಕ್ಕೆ ಕತ್ತರಿ ಹಾಕಿಸಿದ್ದರು. ಅದರ ಜೊತೆಗೆ 'ಮೈ ನೇಮ್ ಈಸ್ ಕಿರಾತಕ' ಸಿನಿಮಾ ಬಗ್ಗೆ ಪ್ರಕಟಿಸಿದ್ದರು.

ನಂತರದಲ್ಲಿ ಈ ಸಿನಿಮಾದಿಂದ ಹೊರ ಬಂದಿರುವುದಾಗಿ ಸುದ್ದಿಗಳು ಹರಿದಾಡಿದ್ದವು. ಹೌದು, 'ಕೆ.ಜಿ.ಎಫ್' ಸಿನಿಮಾದ ಯಶಸ್ಸಿನ ನಂತರ 'ಮೈ ನೇಮ್ ಈಸ್ ಕಿರಾತಕ' ಚಿತ್ರಕ್ಕೆ ಯಶ್ ಗುಡ್ ಬೈ ಹೇಳಿ, ಚಿತ್ರತಂಡದಿಂದ ಹೊರಬಂದಿದ್ದರು ಎಂಬ ಸುದ್ದಿ ಗಾಂಧಿನರದಲ್ಲಿ ಹಬ್ಬಿತ್ತು. 'ಕೆ.ಜಿ.ಎಫ್' ಪಾರ್ಟ್ 2 ಶೂಟಿಂಗ್‍ಗೆ ಹೆಚ್ಚಿನ ಸಮಯ ನೀಡಬೇಕಿರುವುದರಿಂದ, ಯಶ್ 'ಮೈ ನೇಮ್ ಈಸ್ ಕಿರಾತಕ' ಸಿನಿಮಾ ಕೈ ಬಿಟ್ಟಿದ್ದಾರೆ ಎನ್ನಲಾಗಿತ್ತು. ಅಲ್ಲದೆ ಅವರು ಆಗ ಹೊರ ಬರಲು ಕಾರಣವೇನೆಂದು ತಿಳಿಯಲಿಲ್ಲ. ನಂತರದಲ್ಲಿ ಯಶ್ ಅವರೇ ಸುದ್ದಿಗೋಷ್ಠಿ ಮಾಡಿ, ಈ ಸಿನಿಮಾ ನಿಂತಿಲ್ಲ. ಮಾಡುತ್ತೇವಎ ಎಂದು ಸ್ಪಷ್ಟನೆ ನೀಡಿದ್ದರು. ತಾಂತ್ರಿಕ ಸಮಸ್ಯೆಗಳಿಂದಾಗಿ ಈ ಸಿನಿಮಾಗೆ ಕೊಂಚ ಬ್ರೇಕ್ ಕೊಟ್ಟಿದ್ದೇವೆ ಎಂದಿದ್ದರು. ನಂತರ ಕಿರಾತಕ 2 ಸಿನಿಮಾದಿಂದ ಹೊರ ಬಂದರು.

ಇದನ್ನೂ ಓದಿ: 'ಕೆ.ಜಿ.ಎಫ್​' ನಂತರ 'ಕಿರಾತಕ'ನ ಮುಂದಿನ ನಡೆಯೇನು ಗೊತ್ತಾ..?

ಆಗಲೇ ಸಿನಿಮಾದ ನಿರ್ಮಾಪಕ ಜಯಣ್ಣಅವರು ಯಶ್​ ಅವರಿಗೆ ಕೊಟ್ಟ ಹಣವನ್ನು ಹಿಂತಿರುಗಿಸಂತೆ ಹೇಳಿದ್ದರು. ಅಲ್ಲದೆ ಅದಾಗಲೇ ಶೇ.40ರಷ್ಟು ಚಿತ್ರೀಕರಣ ಬೇರೆ ಪೂರ್ಣಗೊಂಡಿತ್ತು. ಈಗ ಯಶ್​ ಅವರು ಜಯಣ್ಣ ಅವರು ಕೊಟ್ಟಿ ಹಣವನ್ನು ಬಡ್ಡಿ ಸಮೇತ ಹಿಂತಿರುಗಿಸಿದ್ದಾರಂತೆ. ಸಿನಿಮಾ ನಿರ್ಮಾಪಕ ಜಯಣ್ಣ ಅವರು ಖರ್ಚು ಮಾಡಿದ್ದ ಹಾಗೂ ನೀಡಿದ್ದ ಅಡ್ವಾನ್ಸ್​ ಹಣಕ್ಕೆ ಬಡ್ಡಿ ಸೇರಿಸಿ, ಒಟ್ಟಿ 3 ಕೋಟಿ ಹಣ ವಾಪಸ್​ ಕೊಟ್ಟಿದ್ದಾರಂತೆ. ಅಲ್ಲದೆ ಇತ್ತೀಚೆಗಷ್ಟೆ ಯಶ್​ ತಮ್ಮ ಹೊಸ ಮನೆಯ ಕೆಲಸಗಳನ್ನು ಮುಗಿಸಿ, ಗೃಹಪ್ರವೇಶ ಮಾಡಿದ್ದಾರೆ. ಒಟ್ಟಾರೆ ಯಶ್ ಅವರು ಈಗ ಕಿರಾತಕ 2 ಸಿನಿಮಾದ ನಿರ್ಮಾಪಕರಿಗೆ ನೀಡಿದ್ದ ಹಣವನ್ನು ಹಿಂತಿರುಗಿಸಿದ್ದಾರೆ ಅನ್ನೋ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹಾಗೇ 'ಕೆ.ಜಿ.ಎಫ್' ಸಿನಿಮಾದ ರಿಲೀಸ್ ನಂತ್ರ 'ಮೈ ನೇಮ್ ಈಸ್ ಕಿರಾತಕ'ದಲ್ಲಿ ಯಶ್ ಕಾಣಿಸಿಕೊಳ್ಳುತ್ತಾರೆ ಅನ್ನೋ ಸುದ್ದಿ ಇತ್ತು. ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ 'ಮಾಸ್ಟರ್ ಪೀಸ್', ಸಿನಿಮಾದಿಂದ ಹೊರಬಂದಿದ್ದಾರೆ ಅನ್ನೊ ಶಾಕಿಂಗ್ ಸುದ್ದಿ ಕೂಡ ಕೇಳಿಬಂದಿತ್ತು. ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದ್ದು, ನಿರ್ದೇಶಕ ಅನಿಲ್ ಕುಮಾರ್ `ದಾರಿ ತಪ್ಪಿದ ಮಗ' ಸಿನಿಮಾವನ್ನ ಕೈಗೆತ್ತಿಕೊಂಡಿದ್ದಾರೆ. 'ಕಿರಾತಕ' ಮತ್ತೆ ಶುರುವಾಗುತ್ತೆ ಅನ್ನೋ ವಿಷಯ ಖಚಿತವಾಗುತ್ತಿದ್ದಂತೆಯೇ, ಅನಿಲ್ ಕುಮಾರ್ ಹಗಲು ರಾತ್ರಿಯೆನ್ನದೇ 'ದಾರಿ ತಪ್ಪಿದ ಮಗ' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾದರು.
Published by:Anitha E
First published: