KGF 2 Star Yash: ಸಿನಿಮಾದಿಂದ ಹೊರ ಬಂದ ನಂತರ ನಿರ್ಮಾಪಕರಿಗೆ ಹಣ ಹಿಂತಿರುಗಿಸಿದ್ದಾರಂತೆ ಯಶ್​..!

'ಕಿರಾತಕ' ಯಶ್‍ಗೆ ದೊಡ್ಡ ಬ್ರೇಕ್ ನೀಡಿದ್ದ ಚಿತ್ರ. ಯಶ್‍ಗೂ ಈ ಸಿನಿಮಾಗೂ ಭಾವನಾತ್ಮಕ ಸಂಬಂಧವಿದೆ. ಹೀಗಾಗಿ ನಿರ್ದೇಶಕ ಅನಿಲ್ ಕುಮಾರ್, ಕಿರಾತಕ 2 ಕಥೆಯನ್ನ ಯಶ್ ಮುಂದಿಟ್ಟಾಗ ಮರು ಯೋಚಿಸದೇ ಚಿತ್ರಕ್ಕೆ ಹಸಿರು ನಿಶಾನೆ ನೀಡಿದ್ದರು.

ರಾಕಿಂಗ್ ಸ್ಟಾರ್ ಯಶ್​

ರಾಕಿಂಗ್ ಸ್ಟಾರ್ ಯಶ್​

  • Share this:
 'ಕೆ.ಜಿ.ಎಫ್ 2'  (KGF Chapter 2)ಚಿತ್ರದ ಬಳಿಕ ನಾಯಕ ನಟ ಯಶ್, 'ಕಿರಾತಕ 2' (Kirataka 2) ಸೇರಿದಂತೆ ಒಂದಷ್ಟು ಬಿಗ್ ಬಜೆಟ್ ಚಿತ್ರಗಳಿಗೆ ಓಕೆ ಅಂದಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಗುಲ್ಲಾಗಿತ್ತು. ಕೆಜಿಎಫ್​ ಸಿನಿಮಾ ಹಿಟ್​ ಆದ ನಂತರ ರಾಕಿಂಗ್ ಸ್ಟಾರ್ ಯಶ್  (Rocking Star Yash)ಈಗ ಕೇವಲ ನಟನಲ್ಲ... ಗ್ಲೋಬಲ್ ಸ್ಟಾರ್ ಆಗಿ ಗಮನ ಸೆಳೆಯುತ್ತಿರುವ ಸೂಪರ್​ ಸ್ಟಾರ್​. 'ಕೆ.ಜಿ.ಎಫ್' ಸಿನಿಮಾ ಮೂಲಕ ಪ್ರಪಂಚದಾದ್ಯಂತ ತಮ್ಮ ಹವಾ ಸೃಷ್ಟಿಸಿರೋ ಯಶ್, ತಮ್ಮ ತಾರಾ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಹೀಗಿರಬೇಕಾದರೇನೆ ಯಶ್‍ರ ಮುಂದಿನ ಪ್ರಾಜೆಕ್ಟ್ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ. ಇನ್ನು ಯಶ್ ಸಹ ಈಗ ತಮ್ಮ ತಾರಾ ವರ್ಚಸ್ಸಿಗೆ ತಕ್ಕಂಯೆ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದಾರಂತೆ. 

ಕೆ.ಜಿ.ಎಫ್' ಸಿನಿಮಾ ಮೂಲಕ ನಂ.1 ಸ್ಟಾರ್ ಪಟ್ಟಕ್ಕೇರಿರೋ ರಾಕಿಂಗ್ ಸ್ಟಾರ್ ಯಶ್‍ರ ಪ್ರತಿ ಹೆಜ್ಜೆ ಮೇಲೂ ನಿರೀಕ್ಷೆ ಮೂಡಿದೆ. ಅಭಿಮಾನಿಗಳಿಂದ ಹಿಡಿದು ಪರಭಾಷಾ ಸಿನಿ ರಂಗದಲ್ಲೂ ಯಶ್‍ರ ಮುಂದಿನ ಚಿತ್ರಗಳ ಬಗ್ಗೆ ಮಾತುಗಳು ಹರಿದಾಡುತ್ತಿವೆ. ಸದ್ಯ ಯಶ್‍ಗೆ ಬೇಡಿಕೆಯೂ ಹೆಚ್ಚಾಗಿದ್ದು, ಟಾಲಿವುಡ್, ಮಾಲಿವುಡ್‍ನಿಂದಲೂ ದೊಡ್ಡ ದೊಡ್ಡ ಅವಕಾಶಗಳು ಅರಸಿ ಬರುತ್ತಿವೆಯಂತೆ. ಆದರೆ ಬೇರೆ ಸಿನಿಮಾ ಅವಕಾಶಗಳನ್ನು ಪಕ್ಕಕ್ಕಿಟ್ಟಿರೋ ಯಶ್ ಕನ್ನಡಕ್ಕೆ ಮೊದಲ ಆದ್ಯತೆ ನೀಡಿದ್ದಾರೆ.

Yash, Radhika Pandit, Yash and Radhika Pandit new housing ceremony, yash and radhika pandit new house in prestige apartment, ಯಶ್, ರಾಧಿಕಾ ಪಂಡಿತ್, ಯಶ್ ಮತ್ತು ರಾಧಿಕಾ ಪಂಡಿತ್, ಯಶ್ ಹೊಸ ಮನೆ ಗೃಹಪ್ರವೇಶ, ಗೃಹಪ್ರವೇಶ ಸಂಭ್ರಮದಲ್ಲಿ ಯಶ್ ಮತ್ತು ರಾಧಿಕಾ, Actor Yash, Radhika Pandit, Sandalwood, Yash, Rocking Star Yash and Radhika Pandits new house warming ceremony photos ae
ರಾಧಿಕಾ ಪಂಡಿತ್ ಹಾಗೂ ಯಶ್​


ಯಶ್ ಅವರ ಹೊಸ ಪ್ರಾಜೆಕ್ಟ್​ಗಳ ಕುರಿತಾಗಿ ಮಾತನಾಡುವಾಗ ಅಲ್ಲಿ ಮೊದಲು ಬರೋದೇ ಕಿರಾತಕ 2. ಹೌದು, ಈ ಚಿತ್ರಕ್ಕೆ 'ಮೈ ನೇಮ್ ಈಸ್ ಕಿರಾತಕ' ಎಂದು ಟೈಟಲ್ ಫಿಕ್ಸ್ ಮಾಡಲಾಗಿತ್ತು. ಕೆಜಿಎಫ್​ ಚಾಪ್ಟರ್ 1 ರಿಲೀಸ್ ಆಗುತ್ತಿದ್ದಂತೆಯೇ ಯಶ್ ಅವರು ತಮ್ಮ ಹೇರ್​ ಸ್ಟೈಲ್​ ಹಾಗೂ ಗಡ್ಡಕ್ಕೆ ಕತ್ತರಿ ಹಾಕಿಸಿದ್ದರು. ಅದರ ಜೊತೆಗೆ  'ಮೈ ನೇಮ್ ಈಸ್ ಕಿರಾತಕ' ಸಿನಿಮಾ ಬಗ್ಗೆ ಪ್ರಕಟಿಸಿದ್ದರು.

ಇದನ್ನೂ ಓದಿ: Weight Loss: 15 ಕೆಜಿ ತೂಕ ಇಳಿಸಿದ Bharti Singh: ವೇಗವಾಗಿ ತೂಕ ಇಳಿಸಲು ಈ ನಾಲ್ಕು ಕ್ರಮಗಳನ್ನು ಅನುಸರಿಸಿ..!

ಹೇಳಿ ಕೇಳಿ 'ಕಿರಾತಕ' ಯಶ್‍ಗೆ ದೊಡ್ಡ ಬ್ರೇಕ್ ನೀಡಿದ್ದ ಚಿತ್ರ. ಯಶ್‍ಗೂ ಈ ಸಿನಿಮಾಗೂ ಭಾವನಾತ್ಮಕ ಸಂಬಂಧವಿದೆ. ಹೀಗಾಗಿ ನಿರ್ದೇಶಕ ಅನಿಲ್ ಕುಮಾರ್, ಕಥೆಯನ್ನ ಯಶ್ ಮುಂದಿಟ್ಟಾಗ ಮರು ಯೋಚಿಸದೇ ಚಿತ್ರಕ್ಕೆ ಹಸಿರು ನಿಶಾನೆ ನೀಡಿದ್ದರು. ಆದರೆ 'ಕೆ.ಜಿ.ಎಫ್' ಸಿನಿಮಾದ ಶೂಟಿಂಗ್‍ನಲ್ಲಿ ಬ್ಯುಸಿ ಇದ್ದ ಯಶ್, 'ಮೈ ನೇಮ್ ಈಸ್ ಕಿರಾತಕ' ಚಿತ್ರದ ಶೂಟಿಂಗ್‍ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಇದೇ ಸಿನಿಮಾಗಾಗಿಯೇ 'ಕೆ.ಜಿ.ಎಫ್' ಚಿತ್ರೀಕರಣದ ಬಳಿಕ ತನ್ನ ಉದ್ದುದ್ದ ಗಡ್ಡಕ್ಕೆ ಕತ್ತರಿ ಹಾಕಿದ್ದರು. ಅಲ್ಲದೆ 'ಮೈ ನೇಮ್ ಈಸ್ ಕಿರಾತಕ' ಅಡ್ಡಾದಿಂದಲೇ ಹೊರಬಂದಿದ್ದ ಫೋಟೋ ಒಂದರಲ್ಲಿ ಪಂಚೆ, ಕಲರ್ ಕಲರ್ ಶರ್ಟ್ ತೊಟ್ಟು ಪೋಸ್ ನೀಡಿದ್ದರು. ಚಿಕ್ಕಣ್ಣ, ಕುರಿ ಪ್ರತಾಪ್ ಕೂಡ ಈ ಪೋಸ್ಟರ್​ನಲ್ಲಿ ಯಶ್‍ಗೆ ಜೊತೆಯಾಗಿದ್ದರು.

ಹಾಗೇ 'ಕೆ.ಜಿ.ಎಫ್' ಸಿನಿಮಾದ ರಿಲೀಸ್ ನಂತ್ರ 'ಮೈ ನೇಮ್ ಈಸ್ ಕಿರಾತಕ'ದಲ್ಲಿ ಯಶ್ ಕಾಣಿಸಿಕೊಳ್ಳುತ್ತಾರೆ ಅನ್ನೋ ಸುದ್ದಿ ಇತ್ತು. ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ 'ಮಾಸ್ಟರ್ ಪೀಸ್', ಸಿನಿಮಾದಿಂದ ಹೊರಬಂದಿದ್ದಾರೆ ಅನ್ನೊ ಶಾಕಿಂಗ್ ಸುದ್ದಿ ಕೂಡ ಕೇಳಿಬಂದಿತ್ತು. ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದ್ದು, ನಿರ್ದೇಶಕ ಅನಿಲ್ ಕುಮಾರ್ `ದಾರಿ ತಪ್ಪಿದ ಮಗ' ಸಿನಿಮಾವನ್ನ ಕೈಗೆತ್ತಿಕೊಂಡಿದ್ದಾರೆ. 'ಕಿರಾತಕ' ಮತ್ತೆ ಶುರುವಾಗುತ್ತೆ ಅನ್ನೋ ವಿಷಯ ಖಚಿತವಾಗುತ್ತಿದ್ದಂತೆಯೇ, ಅನಿಲ್ ಕುಮಾರ್ ಹಗಲು ರಾತ್ರಿಯೆನ್ನದೇ 'ದಾರಿ ತಪ್ಪಿದ ಮಗ' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾದರು.

ಇದನ್ನೂ ಓದಿ: Happy Birthday: ಕುಟುಂಬದವರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ನಮ್ಮನೆ ಯುವರಾಣಿ ಧಾರಾವಾಹಿಯ ನಟ ರಘು..!

ನಂತರದಲ್ಲಿ ಈ ಸಿನಿಮಾದಿಂದ ಹೊರ ಬಂದಿರುವುದಾಗಿ ಸುದ್ದಿಗಳು ಹರಿದಾಡಿದ್ದವು. ಹೌದು, 'ಕೆ.ಜಿ.ಎಫ್' ಸಿನಿಮಾದ ಯಶಸ್ಸಿನ ನಂತರ 'ಮೈ ನೇಮ್ ಈಸ್ ಕಿರಾತಕ' ಚಿತ್ರಕ್ಕೆ ಯಶ್ ಗುಡ್ ಬೈ ಹೇಳಿ, ಚಿತ್ರತಂಡದಿಂದ ಹೊರಬಂದಿದ್ದರು ಎಂಬ ಸುದ್ದಿ ಗಾಂಧಿನರದಲ್ಲಿ ಹಬ್ಬಿತ್ತು. 'ಕೆ.ಜಿ.ಎಫ್' ಪಾರ್ಟ್ 2 ಶೂಟಿಂಗ್‍ಗೆ ಹೆಚ್ಚಿನ ಸಮಯ ನೀಡಬೇಕಿರುವುದರಿಂದ, ಯಶ್ 'ಮೈ ನೇಮ್ ಈಸ್ ಕಿರಾತಕ' ಸಿನಿಮಾ ಕೈ ಬಿಟ್ಟಿದ್ದಾರೆ ಎನ್ನಲಾಗಿತ್ತು. ಅಲ್ಲದೆ ಅವರು ಆಗ ಹೊರ ಬರಲು ಕಾರಣವೇನೆಂದು ತಿಳಿಯಲಿಲ್ಲ. ನಂತರದಲ್ಲಿ ಯಶ್ ಅವರೇ ಸುದ್ದಿಗೋಷ್ಠಿ ಮಾಡಿ, ಈ ಸಿನಿಮಾ ನಿಂತಿಲ್ಲ. ಮಾಡುತ್ತೇವಎ ಎಂದು ಸ್ಪಷ್ಟನೆ ನೀಡಿದ್ದರು. ತಾಂತ್ರಿಕ ಸಮಸ್ಯೆಗಳಿಂದಾಗಿ ಈ ಸಿನಿಮಾಗೆ ಕೊಂಚ ಬ್ರೇಕ್ ಕೊಟ್ಟಿದ್ದೇವೆ ಎಂದಿದ್ದರು. ನಂತರ ಕಿರಾತಕ 2 ಸಿನಿಮಾದಿಂದ ಹೊರ ಬಂದರು.

ಆಗಲೇ ಸಿನಿಮಾದ ನಿರ್ಮಾಪಕ ಜಯಣ್ಣಅವರು ಯಶ್​ ಅವರಿಗೆ ಕೊಟ್ಟ ಹಣವನ್ನು ಹಿಂತಿರುಗಿಸಂತೆ ಹೇಳಿದ್ದರು. ಅಲ್ಲದೆ ಅದಾಗಲೇ ಶೇ.40ರಷ್ಟು ಚಿತ್ರೀಕರಣ ಬೇರೆ ಪೂರ್ಣಗೊಂಡಿತ್ತು. ಈಗ ಯಶ್​ ಅವರು ಜಯಣ್ಣ ಅವರು ಕೊಟ್ಟಿ ಹಣವನ್ನು ಬಡ್ಡಿ ಸಮೇತ ಹಿಂತಿರುಗಿಸಿದ್ದಾರಂತೆ. ಸಿನಿಮಾ ನಿರ್ಮಾಪಕ ಜಯಣ್ಣ ಅವರು ಖರ್ಚು ಮಾಡಿದ್ದ ಹಾಗೂ ನೀಡಿದ್ದ ಅಡ್ವಾನ್ಸ್​ ಹಣಕ್ಕೆ ಬಡ್ಡಿ ಸೇರಿಸಿ, ಒಟ್ಟಿ 3 ಕೋಟಿ ಹಣ ವಾಪಸ್​ ಕೊಟ್ಟಿದ್ದಾರಂತೆ. ಅಲ್ಲದೆ ಇತ್ತೀಚೆಗಷ್ಟೆ ಯಶ್​ ತಮ್ಮ ಹೊಸ ಮನೆಯ ಕೆಲಸಗಳನ್ನು ಮುಗಿಸಿ, ಗೃಹಪ್ರವೇಶ ಮಾಡಿದ್ದಾರೆ. ಒಟ್ಟಾರೆ ಯಶ್ ಅವರು ಈಗ ಕಿರಾತಕ 2 ಸಿನಿಮಾದ ನಿರ್ಮಾಪಕರಿಗೆ ನೀಡಿದ್ದ ಹಣವನ್ನು ಹಿಂತಿರುಗಿಸಿದ್ದಾರೆ ಅನ್ನೋ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Published by:Anitha E
First published: