• Home
  • »
  • News
  • »
  • entertainment
  • »
  • Rocking Star ಮಹಿಳಾ ಅಭಿಮಾನಿಗಳಿಗಾಗಿ KGF Chapter 2 'ಲೇಡಿಸ್ ಸ್ಪೆಷಲ್ ಶೋ'! ಎಲ್ಲಿ, ಯಾವಾಗ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ

Rocking Star ಮಹಿಳಾ ಅಭಿಮಾನಿಗಳಿಗಾಗಿ KGF Chapter 2 'ಲೇಡಿಸ್ ಸ್ಪೆಷಲ್ ಶೋ'! ಎಲ್ಲಿ, ಯಾವಾಗ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ

ಕೆಜಿಎಫ್‌ ಚಾಪ್ಟರ್ 2

ಕೆಜಿಎಫ್‌ ಚಾಪ್ಟರ್ 2

ಕೆಜಿಎಫ್ ಚಿತ್ರತಂಡ ಯಶ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ಆದರೆ ಇಂದು ರಾಕಿ ಭಾಯ್‌ ಮಹಿಳಾ ಅಭಿಮಾನಿಗಳಿಗೆ ಅನ್ನೋದು ವಿಶೇಷ. ಹಾಗಿದ್ರೆ ಅದೇನಪ್ಪಾ ಸುದ್ದಿ? ಲೇಡಿ ಫ್ಯಾನ್ಸ್‌ಗೆ ಅದೇನಪ್ಪಾ ಕೊಡುತ್ತೆ ಕೆಜಿಎಫ್‌ ಚಾಪ್ಟರ್ 2 ತಂಡ ಅನ್ನೋ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ…

ಮುಂದೆ ಓದಿ ...
  • Share this:

ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್‌ ಚಾಪ್ಟರ್ 2 (KGF Chapter 2) ತೆರೆಗೆ ಬರಲು ಸಜ್ಜಾಗಿದೆ. ಇದೇ ಏಪ್ರಿಲ್ 14ರಂದು ಸಿನಿಮಾ ರಿಲೀಸ್‌ಗೆ (Release) ರೆಡಿಯಾಗಿದ್ದು, ಈಗಾಗಲೇ ದಿನಗಣನೆ ಆರಂಭವಾಗಿದೆ. ಕೆಜಿಎಫ್‌ ಚಾಪ್ಟರ್ 2 ಬರೀ ಕನ್ನಡದಲ್ಲಷ್ಟೇ (Kannada) ಅಲ್ಲ, ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲೂ ಸಂಚಲನ ಮೂಡಿಸಿದೆ.  ಭಾರತ ಸೇರಿದಂತೆ  ವಿಶ್ವದ ಹಲವು ಪ್ರಮುಖ ದೇಶಗಳಲ್ಲಿ ಕೆಜಿಎಫ್‌ ಚಾಪ್ಟರ್ 2 ತೆರೆಗೆ ಅಪ್ಪಳಿಸಿದೆ. ಇದೀಗ ಕೆಜಿಎಫ್ ಚಿತ್ರತಂಡ ಯಶ್ ಅಭಿಮಾನಿಗಳಿಗೆ (Fans) ಮತ್ತೊಂದು ಗುಡ್ ನ್ಯೂಸ್ (Good News) ಕೊಟ್ಟಿದೆ. ಆದರೆ ಇಂದು ರಾಕಿ ಭಾಯ್‌ ಮಹಿಳಾ ಅಭಿಮಾನಿಗಳಿಗೆ (Lady Fans) ಅನ್ನೋದು ವಿಶೇಷ. ಹಾಗಿದ್ರೆ ಅದೇನಪ್ಪಾ ಸುದ್ದಿ? ಲೇಡಿ ಫ್ಯಾನ್ಸ್‌ಗೆ ಅದೇನಪ್ಪಾ ಕೊಡುತ್ತೆ ಕೆಜಿಎಫ್‌ ಚಾಪ್ಟರ್ 2 ತಂಡ ಅನ್ನೋ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ…


 ಮಹಿಳಾ ಅಭಿಮಾನಿಗಳಿಗೆ ವಿಶೇಷ ಶೋ


ರಾಕಿಂಗ್ ಸ್ಟಾರ್ ಯಶ್ ಅಂದ್ರೆ ಯುವಕರಿಗೆ ಅಚ್ಚುಮೆಚ್ಚು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ ರಾಕಿ ಭಾಯ್‌ಗೆ ಮಹಿಳಾ ಅಭಿಮಾನಿಗಳೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಯಶ್ ಗಡ್ಡಕ್ಕೆ, ಸಖತ್ ಲುಕ್‌ಗೆ, ಅವರ ಡ್ರೆಸ್‌ಗೆ, ಅವರ ಸ್ಟೈಲ್‌ಗೆ ಫಿದಾ ಆದ ಮಹಿಳಾ ಅಭಿಮಾನಿಗಳ ಸಂಖ್ಯೆಯೂ ದೊಡ್ಡದಾಗೇ ಇದೆ. ಇದೀಗ ಅಂತಹ ಮಹಿಳಾ ಅಭಿಮಾನಿಗಳಿಗೆ ಕೆಜಿಎಫ್ ಚಾಪ್ಟರ್ 2 ಚಿತ್ರ ತಂಡ ಹೊಸದೊಂದು ಗಿಫ್ಟ್ ನೀಡಲು ಸಜ್ಜಾಗಿದೆ. ಮಹಿಳಾ ಅಭಿಮಾನಿಗಳಿಗೆಂದೇ ಸಿನಿಮಾದ ವಿಶೇಷ ಶೋ ಅರೆಂಜ್ ಆಗಿದೆ.


ಲೇಡಿಸ್ ಸ್ಪೆಷಲ್ ಶೋ ಎಲ್ಲಿ, ಯಾವಾಗ?


ಬೆಂಗಳೂರಿನ ಕೆಂಗೇರಿಯ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಯಶ್ ಮಹಿಳಾ ಅಭಿಮಾನಿಗಳಿಗಾಗಿ ಕೆಜಿಎಫ್ ಚಾಪ್ಟರ್ 2 ಸ್ಪೆಷಲ್ ಶೋ ನಡೆಯಲಿದೆ. ಏಪ್ರಿಲ್ 14ರಂದು ವೆಂಕಟೇಶ್ವರ ಚಿತ್ರಮಂದಿರದಲ್ಲಿ ಬೆಳಗ್ಗೆ 9  ಗಂಟೆ ಶೋ ಮಹಿಳೆಯರಿಗೆ ಮೀಸಲು ಇಡಲಾಗಿದೆ.


ಇದನ್ನೂ ಓದಿ: Rocking Star Yash: "ಈ ಸೂಪರ್‌ಸ್ಟಾರ್‌ಗಳೊಂದಿಗೆ ನನ್ನನ್ನು ಕಂಪೇರ್ ಮಾಡಬೇಡಿ" ಎಂದಿದ್ದೇಕೆ ರಾಕಿಂಗ್ ಸ್ಟಾರ್?


ಈ ಲೇಡಿಸ್ ಸ್ಪೆಷಲ್ ಶೋನ ವಿಶೇಷತೆ ಏನು?


ಇದು ಯಶ್‌ ಅವರ ಮಹಿಳಾ ಅಭಿಮಾನಿಗಳಿಗಾಗಿ ಆಯೋಜನೆ ಗೊಂಡಿರೋ ವಿಶೇಷ ಶೋ ಆಗಿದೆ. ಈ ಶೋನಲ್ಲಿ ಕೇವಲ ಮಹಿಳೆಯರೇ ಕೆಜಿಎಫ್2 ಸಿನಿಮಾ ವೀಕ್ಷಣೆ ಮಾಡಲಿದ್ದಾರೆ. ವೆಂಕಟೇಶ್ವರ ಚಿತ್ರಮಂದಿರದಲ್ಲಿ ಒಟ್ಟು 590 ಸೀಟ್ ಗಳಿದ್ದು, ಈ 590 ಸೀಟ್ ಗಳು ಯಶ್ ಲೇಡಿ ಫ್ಯಾನ್ಸ್ ಗಳಿಗೆ ಮೀಸಲಾಗಲಿವೆ.


ಈ ವಿಚಾರದಲ್ಲೂ ದಾಖಲೆ ಬರೆದ ಕೆಜಿಎಫ್‌ ಚಾಪ್ಟರ್ 2


ಕೆಜಿಎಫ್ ಚಾಪ್ಟರ್ 2 ಈಗಾಗಲೇ ಹಲವು ರೀತಿಯ ದಾಖಲೆ ಮಾಡಿದೆ. ಈ ದಾಖಲೆ ಪಟ್ಟಿಗೆ ಲೇಡಿಸ್ ಸ್ಪೆಶಲ್ ಶೋ ಸಹ ಸೇರಿದೆ. ಈ ಹಿಂದೆ ಯಾವ ಸ್ಟಾರ್ ನಟರ ಚಿತ್ರಕ್ಕೂ ಲೇಡಿ ಫ್ಯಾನ್ಸ್ ಸ್ಪೆಷಲ್ ಶೋ ಏರ್ಪಾಡಿಗಿರಲಿಲ್ಲ. ಇದೀಗ ಕೆಜಿಎಫ್‌ ಹೊಸ ದಾಖಲೆ ಬರೆದಿದೆ. ಈಗಾಗಲೇ ಯಶ್ ಲೇಡಿ ಫ್ಯಾನ್ಸ್ ಅಸೋಸಿಯೇಷನ್ ಈ ವಿಶೇಷ ಪ್ರದರ್ಶನಕ್ಕೆ ಸಿದ್ದತೆ ಮಾಡಿ ಕೊಳ್ಳುತ್ತಿದೆ. ಭಾನುವಾರ ಈ ವಿಶೇಷ ಶೋ ಬಗ್ಗೆ ಅಧಿಕೃತವಾಗಿ ಯಶ್ ಫ್ಯಾನ್ಸ್ ತಿಳಿಸಲಿದ್ದಾರೆ.


ಇದನ್ನೂ ಓದಿ: KGF ಬಗ್ಗೆ ಹಿಂಗೆಲ್ಲಾ ಹೇಳಿದ್ರಾ Urfi Javed? "ನಿಂಗಿದು ಬೇಕಿತ್ತಾ ಉರ್ಫಿ" ಅಂತಿದ್ದಾರೆ ಯಶ್ ಫ್ಯಾನ್ಸ್!


ಏಪ್ರಿಲ್ 14ಕ್ಕೆ ಕೆಜಿಎಫ್​ 2 ಸಿನಿಮಾ ಬಿಡುಗಡೆ


ಬಹುನಿರೀಕ್ಷಿತ ಸಿನಿಮಾ ‘ಕೆಜಿಎಫ್ 2’ ಇದೇ ಏಪ್ರಿಲ್ 14 ಕ್ಕೆ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಪ್ರಚಾರ ಕಾರ್ಯಕ್ರಮದಲ್ಲಿ ಯಶ್ ಬ್ಯುಸಿಯಾಗಿದ್ದು ದೆಹಲಿ, ಮುಂಬೈ, ಪುಣೆಗಳಲ್ಲಿ ಅದ್ಧೂರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೈದರಾಬಾದ್, ಚೆನ್ನೈ, ತಿರುವನಂತಪುರಂ ಬಳಿಕ ಕರ್ನಾಟಕದ ವಿವಿಧ ನಗರಗಳಲ್ಲಿ ಪ್ರಚಾರ ಮಾಡಲಿದ್ದಾರೆ.

Published by:Annappa Achari
First published: