ಕೆಜಿಎಫ್​ ಚಾಪ್ಟರ್​ 2 ಸ್ಯಾಟಲೈಟ್​ ಹಕ್ಕು ಮಾರಾಟ: ಸಿನಿಮಾ ರಿಲೀಸ್​ ಆಗೋದು ಒಟಿಟಿಯಲ್ಲಾ-ಸಿನಿಮಾ ಮಂದಿರಗಳಲ್ಲಾ..?

ವರಮಹಾಲಕ್ಷ್ಮಿ ಹಬ್ಬದಂದು ಕೆಜಿಎಫ್​ ಚಾಪ್ಟರ್​ 2 ತಂಡ ಕೊಟ್ಟಿರುವ ಅಪ್ಡೇಟ್​ ಸ್ಯಾಟಲೈಟ್​ ಹಕ್ಕು ಮಾರಾಟದ ಕುರಿತಾಗಿ. ದಕ್ಷಿಣ ಭಾರತೀಯ ಭಾಷೆಗಳ ಸ್ಯಾಟಲೈಟ್ ಹಕ್ಕು ಮಾರಾಟವಾಗಿದೆ. ಜೀ ವಾಹಿನಿ ಸಿನಿಮಾದ ಸ್ಯಾಟಲೈಟ್​ ಪ್ರಸಾರದ ಹಕ್ಕುಗಳನ್ನು ಖರೀದಿಸಿದೆ. ಈ ಕುರಿತಾಗಿ ಹೊಂಬಾಳೆ ಫಿಲಂಸ್​, ನಿರ್ದೇಶಕ ಪ್ರಶಾಂತ್​ ನೀಲ್, ಯಶ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.

ಕೆಜಿಎಫ್ ಚಾಪ್ಟರ್​ 2​ ಸಿನಿಮಾದ ಸ್ಯಾಟಲೈಟ್ ಹಕ್ಕು ಮಾರಾಟ

ಕೆಜಿಎಫ್ ಚಾಪ್ಟರ್​ 2​ ಸಿನಿಮಾದ ಸ್ಯಾಟಲೈಟ್ ಹಕ್ಕು ಮಾರಾಟ

  • Share this:
ಕನ್ನಡದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ಚಾಪ್ಟರ್​ 2 (KGF Chapter 2) ಚಿತ್ರದ ಕಡೆಯಿಂದ ಹೊಸ ಅಪ್ಡೇಟ್​ ಸಿಕ್ಕಿದೆ. ಒಂದು ಕಡೆ ಅಭಿಮಾನಿಗಳಿಗೆ ಈ ಹೊಸ ಅಪ್ಡೇಟ್​ ವಿಷಯ ಖುಷಿ ಕೊಟ್ಟರೆ, ಮತ್ತೊಂದು ಕಡೆ ಕೊಂಚ ಆತಂಕ ಉಂಟು ಮಾಡಿದೆ. ಹೌದು. ಪ್ರಶಾಂತ್ ನೀಲ್ (Prashanth Neel)​ ನಿರ್ದೇಶನದ ಸಿನಿಮಾ ಕೆಜಿಎಫ್​ ಚಾಪ್ಟರ್​ 1 (KGF Chapter 1) ರಿಲೀಸ್ ಆಗಿ ದೊಡ್ಡ ಮಟ್ಟದಲ್ಲಿ ಹಿಟ್ ಆದ ನಂತರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಕೆಜಿಎಫ್ ಚಾಪ್ಟರ್ 2ಗಾಗಿ ಅಭಿಮಾನಿಗಳು ಕಾತರದಿಂದ ಹಾಗೂ ತಾಳ್ಮೆಯಿಂದ ಕಾಯುತ್ತಿದ್ದಾರೆ. ಯಶ್​ (Yash) ನಾಯಕನಾಗಿ ನಟಿಸಿರುವ ಈ ಚಿತ್ರ ಕೊರೋನಾ ಕಾರಣದಿಂದಾಗಿ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೂಡಿದೆ. ಅಲ್ಲದೆ ಇನ್ನೂ ಸಹ ಹೊಸ ರಿಲೀಸ್​ ಡೇಟ್​ ಪ್ರಕಟಿಸಿಲ್ಲ. ಹೊಸ ರಿಲೀಸ್​ ದಿನಾಂಕಕ್ಕಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಹೊಂಬಾಳೆ ಫಿಲಂಸ್​ (Homable Films) ವರ ಮಹಾಲಕ್ಷ್ಮಿ ಹಬ್ಬದಂದು ಹೊರ ಅಪ್ಡೇಟ್​ ಕೊಟ್ಟಿದೆ. 

ವರಮಹಾಲಕ್ಷ್ಮಿ ಹಬ್ಬದಂದು ಕೆಜಿಎಫ್​ ಚಾಪ್ಟರ್​ 2 ತಂಡ ಕೊಟ್ಟಿರುವ ಅಪ್ಡೇಟ್​ ಸ್ಯಾಟಲೈಟ್​ ಹಕ್ಕು ಮಾರಾಟದ ಕುರಿತಾಗಿ. ದಕ್ಷಿಣ ಭಾರತೀಯ ಭಾಷೆಗಳ ಸ್ಯಾಟಲೈಟ್ ಹಕ್ಕು ಮಾರಾಟವಾಗಿದೆ. ಜೀ ವಾಹಿನಿ ಸಿನಿಮಾದ ಸ್ಯಾಟಲೈಟ್​ ಪ್ರಸಾರದ ಹಕ್ಕುಗಳನ್ನು ಖರೀದಿಸಿದೆ. ಈ ಕುರಿತಾಗಿ ಹೊಂಬಾಳೆ ಫಿಲಂಸ್​, ನಿರ್ದೇಶಕ ಪ್ರಶಾಂತ್​ ನೀಲ್, ಯಶ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.
ಕೆಜಿಎಫ್​ ಚಾಪ್ಟರ್ 2 ಚಿತ್ರದ ಸ್ಯಾಟಲೈಟ್​ ಹಕ್ಕು ಮಾರಾಟವಾಗುತ್ತಿದ್ದಂತೆಯೇ ನೆಟ್ಟಿಗರಲ್ಲಿ ಹಲವರಿಗೆ ಒಂದು ಅನುಮಾನ ಕಾಡಲಾರಂಭಿಸಿದೆ. ಸಿನಿಮಾವನ್ನು ನಿರ್ಮಾಣ ಸಂಸ್ಥೆ ಎಲ್ಲಿ ಒಟಿಟಿಯಲ್ಲಿ ರಿಲೀಸ್​ ಮಾಡುತ್ತೋ ಅಂತ ಕೆಲವರು ಬೇಸರಗೊಂಡಿದ್ದಾರೆ. ಸಿನಿಮಾವನ್ನು ಕೇವಲ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ.

ಇದನ್ನೂ ಓದಿ: Gal Gadot: ಚಿತ್ರೀಕರಣದ ಸೆಟ್​ನಲ್ಲೇ ಮಗುವಿಗಾಗಿ ಬಾಟಲಿಗೆ ಎದೆಹಾಲು ತುಂಬಿಸಿದ ವಂಡರ್ ವುಮನ್​ ಖ್ಯಾತಿಯ ನಟಿ

ಆದರೆ, ಈ ಸ್ಯಾಟಲೈಟ್ ಹಕ್ಕು ಖರೀದಿಸಿದವರು ಸಿನಿಮಾವನ್ನು ಟಿವಿಯಲ್ಲಿ ಪ್ರಸಾರ ಮಾಬಹುದು. ಇದರಿಂದಾಗಿ ಸದ್ಯಕ್ಕೆ ಕೆಜಿಎಫ್​ ಒಟಿಟಿಯಲ್ಲಿ ರಿಲೀಸ್​ ಆಗುತ್ತೋ..! ಇಲ್ಲವೋ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಬಹಳ ದಿನಗಳಿಂದ ಕೆಜಿಎಫ್​ 2 ಸಿನಿಮಾ ಒಟಿಟಿಯಲ್ಲಿ ತೆರೆ ಕಾಣಲಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಅಲ್ಲದೆ ಈ ಹಿಂದೆ ಒಟಿಟಿ ವೇದಿಕೆಯೊಂದರಿಂದ ಕೆಜಿಎಫ್​ ಚಾಪ್ಟರ್ 2 ಚಿತ್ರಕ್ಕೆ 250 ಕೋಟಿ ಆಫರ್ ಸಹ ಸಿಕ್ಕಿದೆಯಂತೆ. ಆದರೆ ಈ ಕುರಿತಾಗಿ ಚಿತ್ರತಂಡದ ಕಡೆಯಿಂದ ಯಾವುದೇ ಹೇಳಿಕೆ ಹೊರ ಬಿದ್ದಿಲ್ಲ.

ಇದನ್ನೂ ಓದಿ: Suhana Khan: ಈ ನಿರ್ದೇಶಕಿಯ ಸಿನಿಮಾದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಡಲಿರುವ ಸುಹಾನಾ ಖಾನ್​..!

ಎಲ್ಲ ಸರಿಯಾಗಿ ಇದ್ದಿದ್ದರೆ  ಜುಲೈ 16ರಂದು ಕೆಜಿಎಫ್​ ಚಾಪ್ಟರ್ 2 ಸಿನಿಮಾ ರಿಲೀಸ್​ ಆಗಿ ಧೂಳೆಬ್ಬಿಸಬೇಕಿತ್ತು. ಆದರೆ ಕೊರೋನಾ ಆತಂಕದಿಂದಾಗಿ ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದವು. ನಂತರ ಹಂತ ಹಂತವಾಗಿ ಮಾಡಲಾದ ಅನ್​ಲಾಕ್​ನಲ್ಲಿ ಸಿನಿಮಾ ಮಂದಿರಗಳ ಬಾಗಿಲು ತೆರೆದಿದೆಯಾದರೂ, ಪೂರ್ಣ ಪ್ರಮಾಣದಲ್ಲಿ ಆಸನ ಭರ್ತಿಗೆ ಅನುಮತಿ ನೀಡಿಲ್ಲ. ಇದೇ ಕಾರಣದಿಂದಾಗಿ ಇನ್ನೂ ಚಿತ್ರತಂಡ ಹೊಸ ರಿಲೀಸ್ ದಿನಾಂಕ ಪ್ರಕಟಿಸಿಲ್ಲ. ಜೊತೆಗೆ ರಿಲೀಸ್​ ಕುರಿತಾಗಿ ಮಾತಾಡುತ್ತಲೇ ಇಲ್ಲ. ಇದರಿಂದಾಗಿಯೇ ವೀಕ್ಷಕರಿಗೆ ಎಲ್ಲಿ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತೋ ಅನ್ನೋ ಅನುಮಾನ ಕಾಡಲಾರಂಭಿಸಿದೆ.  ಅಭಿಮಾನಿಗಳು ಸಿನಿಮಾದ ಒಂದು ಹಾಡನ್ನಾದರೂ ರಿಲೀಸ್​ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ.
Published by:Anitha E
First published: