ಪೊಲೀಸ್ ಭದ್ರತೆಯಲ್ಲಿ ಕೆಜಿಎಫ್ 2 ಚಿತ್ರೀಕರಣ : ಮೂರು ದಿನಗಳಲ್ಲಿ ಸೀಕ್ವಲ್ ಶೂಟಿಂಗ್ ಮುಕ್ತಾಯ !

KGF Chapter 2: ಕೆಜಿಎಫ್.... ಕೋಲಾರ್ ಗೋಲ್ಡ್ ಫೀಲ್ಡ್ಸ್. ಈ ಚಿನ್ನದ ಗಣಿಯಲ್ಲೇ ಸಿನಿಮಾ ರೂಪದಲ್ಲಿ ಮತ್ತೆ ಚಿನ್ನದ ನಿಕ್ಷೇಪ ಪತ್ತೆಹಚ್ಚಿದ್ದು ನಿರ್ದೇಶಕ ಪ್ರಶಾಂತ್ ನೀಲ್. ಅದರ ಬೆನ್ನಿಗೆ ನಿಂತು ಗಣಿಗಾರಿಕೆಗೆ ಹೆಗಲಾದವರು ನಿರ್ಮಾಪಕ ವಿಜಯ್ ಕಿರಗಂದೂರು. ಕಾರ್ಮಿಕನಾಗಿ ದುಡಿದು ಚಿನ್ನ ತೆಗೆದಿದ್ದು ರಾಕಿಂಗ್ ಸ್ಟಾರ್ ಯಶ್ ಅಲಿಯಾಸ್ ರಾಕಿಭಾಯ್. ಈಗ ಕೆಜಿಎಫ್ ಸಿನಿಮಾಗೆ ಸಿಕ್ಕ ಸೂಪರ್ ಸಕ್ಸಸ್ ಇತಿಹಾಸ. ಸದ್ಯ ಎರಡನೇ ಸಿನಿಮಾ ಮೂಲಕ ಎರಡನೇ ನಿಕ್ಷೇಪದಲ್ಲಿ ಚಿನ್ನದ ಗಣಿಗಾರಿಕೆಯ ಕೆಲಸಗಳು ಭರದಿಂದ ಸಾಗಿದೆ.

Anitha E | news18-kannada
Updated:October 18, 2019, 9:03 PM IST
ಪೊಲೀಸ್ ಭದ್ರತೆಯಲ್ಲಿ ಕೆಜಿಎಫ್ 2 ಚಿತ್ರೀಕರಣ : ಮೂರು ದಿನಗಳಲ್ಲಿ ಸೀಕ್ವಲ್ ಶೂಟಿಂಗ್ ಮುಕ್ತಾಯ !
ಕೆ.ಜಿ.ಎಫ್​ ಚಾಪ್ಟರ್​ 2
  • Share this:
'ಕೆಜಿಎಫ್', ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ನೀಡಿದ ಸಿನಿಮಾ. ಹೊಸ ಹೊಸ ದಾಖಲೆಗಳನ್ನು ಬರೆದ ಸಿನಿಮಾ. ಭಾಷೆ, ರಾಜ್ಯ, ದೇಶಗಳ ಗಡಿದಾಟಿ ಜಯಭೇರಿ ಬಾರಿಸಿದ ಕನ್ನಡ ಮಣ್ಣಿನ ಸಿನಿಮಾ. ಆದರೆ ಯಾಕೋ ಏನೋ ಕೆಜಿಎಫ್ ಸೀಕ್ವಲ್‍ಗೆ ಎಲ್ಲಿಲ್ಲದ ಸಮಸ್ಯೆಗಳು. ಅದರಲ್ಲಂತೂ 'ಕೆಜಿಎಫ್‍'ನಲ್ಲೇ 'ಕೆಜಿಎಫ್ 2'ಗೆ ಪ್ರಾಬ್ಲಂ. ಆದರೂ ಎಲ್ಲ ಅಡೆತಡೆಗಳನ್ನೂ ಮೀರಿ 'ಕೆಜಿಎಫ್ 2' ರೆಡಿಯಾಗ್ತಿದೆ. ನಾವ್ ಕೊಡ್ತೀವಿ ನೋಡಿ, 'ಕೆಜಿಎಫ್ 2' ಕುರಿತ ಮಾಹಿತಿ ಇಲ್ಲಿದೆ.

'ಕೆಜಿಎಫ್'.... ಕೋಲಾರ್ ಗೋಲ್ಡ್ ಫೀಲ್ಡ್ಸ್. ಈ ಚಿನ್ನದ ಗಣಿಯಲ್ಲೇ ಸಿನಿಮಾ ರೂಪದಲ್ಲಿ ಮತ್ತೆ ಚಿನ್ನದ ನಿಕ್ಷೇಪ ಪತ್ತೆಹಚ್ಚಿದ್ದು ನಿರ್ದೇಶಕ ಪ್ರಶಾಂತ್ ನೀಲ್. ಅದರ ಬೆನ್ನಿಗೆ ನಿಂತು ಗಣಿಗಾರಿಕೆಗೆ ಹೆಗಲಾದವರು ನಿರ್ಮಾಪಕ ವಿಜಯ್ ಕಿರಗಂದೂರು. ಕಾರ್ಮಿಕನಾಗಿ ದುಡಿದು ಚಿನ್ನ ತೆಗೆದಿದ್ದು ರಾಕಿಂಗ್ ಸ್ಟಾರ್ ಯಶ್ ಅಲಿಯಾಸ್ ರಾಕಿಭಾಯ್. ಈಗ 'ಕೆಜಿಎಫ್' ಸಿನಿಮಾಗೆ ಸಿಕ್ಕ ಸೂಪರ್ ಸಕ್ಸಸ್ ಇತಿಹಾಸ. ಸದ್ಯ ಎರಡನೇ ಸಿನಿಮಾ ಮೂಲಕ ಎರಡನೇ ನಿಕ್ಷೇಪದಲ್ಲಿ ಚಿನ್ನದ ಗಣಿಗಾರಿಕೆಯ ಕೆಲಸಗಳು ಭರದಿಂದ ಸಾಗಿದೆ.

'ಕೆ.ಜಿ.ಎಫ್​ ಚಾಪ್ಟರ್​ 2' ಚಿತ್ರೀಕರಣದಲ್ಲಿ ನಿರ್ದೇಶಕ ಪ್ರಶಾಂತ್​ ನೀಲ್​


'ಕೆಜಿಎಫ್​ ಚಾಪ್ಟರ್ 2' ಸಿನಿಮಾದ ಸೆಟ್​ನಲ್ಲಿ ಪ್ರಶಾಂತ್ ನೀಲ್​ ಹಾಗೂ ಯಶ್​


ಆದರೆ ಕೋಲಾರ ಗೋಲ್ಡ್​ ಫೀಲ್ಡ್ಸ್​ನಲ್ಲಿ ನಿಜವಾಗಲೂ ನಡೆಯುತ್ತಿದ್ದ ಗಣಿಗಾರಿಕೆಯ ವೇಳೆ ಇಷ್ಟೊಂದು ವಿರೋಧವಿತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ, 'ಕೆ.ಜಿ.ಎಫ್' ಶೂಟಿಂಗ್ ವೇಳೆ ಅಷ್ಟೊಂದು ಸಮಸ್ಯೆಗಳನ್ನ ಚಿತ್ರತಂಡ ಎದುರಿಸಿದೆ. ನೂರಾರು ಸೆಟ್ ಕಾರ್ಮಿಕರು, ತಂತ್ರಜ್ಞರನ್ನೊಳಗೊಂಡ ಚಿತ್ರತಂಡ, ಸಾವಿರಾರು ಕಲಾವಿದರ ಜೊತೆಗೆ ಸೈನೈಡ್ ಗುಡ್ಡದಲ್ಲಿ ಶೂಟಿಂಗ್ ಮಾಡಲು ಪಟ್ಟ ಪಾಡು ಅಷ್ಟಿಷ್ಟಲ್ಲ.

ಗಾಳಿಯಲ್ಲಿ ತೂರಿಬರುವ ಕೆಮಿಕಲ್ ಮಿಶ್ರಿತ ಧೂಳು, ಮಳೆಗೆ ಉರುಳಿಬಿದ್ದ ಬೃಹತ್ ಸೆಟ್‍ಗಳು... ಅಬ್ಬಬ್ಬಾ 'ಕೆ.ಜಿ.ಎಫ್' ಸಿನಿಮಾ ನೋಡಲು ಎಷ್ಟು ರೋಚಕವಾಗಿತ್ತೋ, ಸೈನೈಡ್ ಗುಡ್ಡದಲ್ಲಿ ಇಷ್ಟು ದೊಡ್ಡ ಸೆಟ್ ಹಾಗೂ ಸಾವಿರಾರು ಜನರೊಂದಿಗೆ ಶೂಟಿಂಗ್ ಮಾಡಿದ ಅನುಭವವೂ ಅಷ್ಟೇ ರೋಚಕ. ಈಗ ಪ್ರಶಾಂತ್ ನೀಲ್ ಮತ್ತು ಟೀಂಗೆ ಅದೇ ಅನುಭವ, ಮತ್ತೊಮ್ಮೆ, ಮಗದೊಮ್ಮೆ.

ಇದನ್ನೂ ಓದಿ: ನೇಹಾ ಕಕ್ಕರ್​ಗೆ ಬಲವಂತವಾಗಿ ಮುತ್ತಿಟ್ಟ ಅಭಿಮಾನಿ: ಕಣ್ಣೀರಿಟ್ಟ ಗಾಯಕಿ..!'ಕೆ.ಜಿ.ಎಫ್' ಚಿತ್ರದ ಶೂಟಿಂಗ್‍ಗಾಗಿ ಚಿತ್ರತಂಡ ಬರೋಬ್ಬರಿ ಆರು ತಿಂಗಳ ಕಾಲ ಸೈನೈಡ್ ಗುಡ್ಡದಲ್ಲಿ ಬೀಡುಬಿಟ್ಟಿತ್ತು. ಆ ಬಳಿಕ 'ಕೆಜಿಎಫ್ 2' ಶೂಟಿಂಗ್‍ಗಾಗಿಯೂ ಅಲ್ಲಿಯೇ ಬೃಹದಾಕಾರದ ಸೆಟ್‍ಗಳನ್ನು ನಿರ್ಮಿಸಲಾಗಿತ್ತು. ಇದೇ ಮಾರ್ಚ್ ತಿಂಗಳಲ್ಲಿ ಸರಳ ಮುಹೂರ್ತದ ಬಳಿಕ 'ಕೆ.ಜಿ.ಎಫ್ 2' ಚಿತ್ರೀಕರಣಕ್ಕೆ ಚಾಲನೆ ನೀಡಲಾಯ್ತು. ಬೆಂಗಳೂರಿನ ಮಿನರ್ವ ಮಿಲ್, ಕೋಲಾರದ ಸೈನೈಡ್ ಗುಡ್ಡ ಹಾಗೂ ಮೈಸೂರು, ಹೀಗೆ ಮೂರು ಕಡೆಗಳಲ್ಲಿ ಸೆಟ್‍ಗಳನ್ನು ನಿರ್ಮಿಸಿ ಏಕಕಾಲದಲ್ಲೇ ಶೂಟಿಂಗ್ ಪ್ರಾರಂಭಿಸಲಾಯ್ತು.

'ಕೆಜಿಎಫ್​ ಚಾಪ್ಟರ್ 2' ಮುಹೂರ್ತ


'ಕೆಜಿಎಫ್​ ಚಾಪ್ಟರ್ 2' ಮುಹೂರ್ತ


ಜುಲೈ ಮತ್ತು ಆಗಸ್ಟ್, ಎರಡು ತಿಂಗಳ ಕಾಲ 'ಕೆ.ಜಿ.ಎಫ್ 2' ಚಿತ್ರದ ಶೂಟಿಂಗ್ ನಿರಾತಂಕವಾಗಿ ನಡೀತು. ಆದರೆ ಇನ್ನೊಂದು ದಿನ ಚಿತ್ರೀಕರಣ ಬಾಕಿಯಿದೆ ಆಮೇಲೆ ಸೈನೈಡ್ ಗುಡ್ಡಕ್ಕೆ, ಗುಡ್‍ಬೈ ಅನ್ನುವಷ್ಟರಲ್ಲಿ, ಕೆಲವರು ಚಿತ್ರೀಕರಣ ನಡೆಸದಂತೆ ಕೋರ್ಟ್ ಮೆಟ್ಟಿಲೇರಿದ್ದರು. ಸೈನೈಡ್ ಗುಡ್ಡದಲ್ಲಿ ಸಿನಿಮಾ ಚಿತ್ರೀಕರಣ ನಡೀತಿರೋ ಕಾರಣ, ಪರಿಸರಮಾಲಿನ್ಯ ಆಗುತ್ತಿದೆ ಅಂತ ತಡೆಯಾಜ್ಞೆ ತಂದರು. ನಂತರ ಬೇರೆಡೆ ಶೂಟಿಂಗ್‍ನಲ್ಲಿ ಬ್ಯುಸಿಯಾದ ಚಿತ್ರತಂಡ, ಕಾನೂನು ಹೋರಾಟಕ್ಕೂ ಮುಂದಾಯ್ತು.

ಈಗ ಸೈನೈಡ್ ಗುಡ್ಡದಲ್ಲಿ ಶೂಟಿಂಗ್‍ಗೆ ಎದುರಾಗಿದ್ದ ಕಾನೂನು ತೊಡಕನ್ನು, 'ಕೆ.ಜಿ.ಎಫ್' ಟೀಂ ಬಗೆಹರಿಸಿಕೊಂಡಿದೆ. ಹೀಗಾಗಿಯೇ ಚಿತ್ರತಂಡ ಮತ್ತೆ ಸೈನೈಡ್ ಗುಡ್ಡಕ್ಕೆ ಮರಳಿದೆ. ಕೆಜಿಎಫ್‍ನಲ್ಲಿ ಮತ್ತೆ ಮೂರು ದಿನಗಳ ಕಾಲ ಶೂಟಿಂಗ್ ನಡೆಯಲಿದೆ. ಕೆಲ ಕ್ಲೈಮ್ಯಾಕ್ಸ್ ದೃಶ್ಯಗಳ ಜೊತೆಗೆ ಪ್ಯಾಚ್‍ವರ್ಕ್ ಚಿತ್ರೀಕರಣ ಪೂರ್ಣಗೊಂಡರೆ, ಸೈನೈಡ್ ಗುಡ್ಡದ ಭಾಗ ಮುಗಿಯುತ್ತದೆ.

ಕಾನೂನು ತೊಡಕು ಬಗೆಹರಿದರೂ, ಕೆಲ ಸ್ಥಳೀಯರು ವಿರೋಧಿಸುವ ಆತಂಕದಲ್ಲಿ 'ಕೆ.ಜಿ.ಎಫ್' ಚಿತ್ರತಂಡ ಭದ್ರತೆ ಕೋರಿ ಕೋಲಾರ ಪೊಲೀಸರ ಮೊರೆಹೋಗಿದೆ. ಹೀಗಾಗಿಯೇ ಕೋಲಾರ ಎಸ್‍ಪಿ ಮೂರು ದಿನಗಳ ಕಾಲ ನಾಲ್ವರು ಪೊಲೀಸರನ್ನ 'ಕೆಜಿಎಫ್' ತಂಡದ ಭದ್ರತೆಗೆ ನಿಯೋಜಿಸಿದ್ದಾರೆ.

ಈಗ ಬಹುತೇಕ ಶೂಟಿಂಗ್ ಪೂರ್ಣಗೊಂಡಿದೆ. ಜೊತೆಜೊತೆಗೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ನಡೀತಿರೋ ಕಾರಣ, ಚಿತ್ರತಂಡದ ಮೇಲೆ ಹೆಚ್ಚು ಒತ್ತಡವಿಲ್ಲ. ಆದರೂ ಚಿತ್ರದ ಪ್ರತಿಯೊಂದು ಹಂತದಲ್ಲಿಯೂ ಖುದ್ದು ಪ್ರಶಾಂತ್​ ಅವರೇ ಕುಳಿತು ಹಗಲು ರಾತ್ರಿಯೆನ್ನದಂತೆ, ಕೆಲಸ ಮಾಡಿಸುತ್ತಾರೆ. ಅದನ್ನು 'ಕೆ.ಜಿ.ಎಫ್' ಮೂಲಕ ಈಗಾಗಲೇ ಪ್ರೂವ್ ಕೂಡ ಆಗಿದೆ.

ಮುಂದಿನ ವರ್ಷ ಅರ್ಥಾತ್ 2020ರ ಏಪ್ರಿಲ್ ತಿಂಗಳಲ್ಲಿ ಮತ್ತೆ ಸಾಬೀತು ಮಾಡಲಿದ್ದಾರೆ. ಬೇಸಗೆ ರಜೆಗೆ ಬಿಸಿಬಿಸಿ 'ಕೆ.ಜಿ.ಎಫ್ - ಚಾಪ್ಟರ್ 2', ಥಿಯೇಟರ್​ಗಳಿಗೆ ಎಂಟ್ರಿ ಕೊಡಲಿದೆ. ಗ್ಯಾಂಗ್‍ಸ್ಟರ್​ಗಳನ್ನು ಮಟ್ಟಹಾಕೋ ಮಾನ್ಸ್ಟರ್​ ಗರ್ಜಿಸಲಿದ್ದಾನೆ.

ಹರ್ಷವರ್ಧನ್,

Kareena Kapoor: ಮದುವೆಗೆ ಮುಂಚೆ ಕರೀನಾ ಕಪೂರ್​ ಇಟ್ಟಿದ್ದ ಷರತ್ತು ಏನು ಗೊತ್ತಾ..?


 
First published:October 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading