Sanjay Dutt: ಕೆಜಿಎಫ್​ ಚಾಪ್ಟರ್​ 2 ಅಡ್ಡಾಗೆ ಬಿ-ಟೌನ್ ​ಖಳನಾಯಕ ಸಂಜಯ್​ ದತ್​ ಎಂಟ್ರಿ..!

KGF Chapter 2: ದೇಹದ ತೂಕ ಹೆಚ್ಚಿಸಿಕೊಂಡು ಮತ್ತೆ ಮೊದಲಿನಂತೆ ಬಾಡಿ ಬಿಲ್ಡ್​ ಮಾಡುವ ಕಾರ್ಯದಲ್ಲಿ ನಿರತರಾಗಿದ್ದ ಸಂಜಯ್​ ದತ್​ ಅಕ್ಟೋಬರ್​ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೊಸ ಹೇರ್​ ಸ್ಟೈಲ್​ ಜೊತೆಗೆ ಕೆಜಿಎಫ್​ ಚಿತ್ರಕ್ಕೆ ಮಾಡಿಕೊಳ್ಳುತ್ತಿರುವ ತಯಾರಿ ಬಗ್ಗೆಯೂ ಮಾಹಿತಿ ನೀಡಿದ್ದರು.

ಸಂಜಯ್​ ದತ್

ಸಂಜಯ್​ ದತ್

  • Share this:
ಕೆಜಿಎಫ್​ ಸಿನಿಮಾದ ಮೂಲಕ ಸ್ಟಾರ್​ ನಿರ್ದೇಶಕನ ಪಟ್ಟಕ್ಕೇರಿದ ಪ್ರಶಾಂತ್​ ನೀಲ್​ ಅವರ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್​ ಚಾಪ್ಟರ್​ 2. ಯಶ್​ ಅಭಿನಯದ ಈ ಚಿತ್ರದ ಚಿತ್ರೀಕರಣ ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಆರಂಭವಾಗಿದೆ. ಮಂಗಳೂರು, ಹೈದರಾಬಾದ್​ ಹಾಗೂ ಬೆಂಗಳೂರಿನಲ್ಲಿ ಈಗಾಗಲೇ ಚಿತ್ರತಂಡ ಶೂಟಿಂಗ್​ ಮುಗಿಸಿದೆ. ಇನ್ನು ಸಿನಿಮಾದ ಕೊನೆಯ ಹಂತದ ಚಿತ್ರೀಕರಣಕ್ಕೆ ತಯಾರಿ ನಡೆಸಿದೆ. ಇನ್ನು ಸಿನಿಮಾದ ವಿಲನ್​ ಅಧೀರ ಪಾತ್ರಧಾರಿ ಸಂಜಯ್​ ದತ್​ ಮತ್ತೆ ಚಿತ್ರತಂಡ ಸೇರಿಕೊಳ್ಳಲಿದ್ದಾರಂತೆ. ಈ ಹಿಂದೆ ಅವರಿಗೆ ಕ್ಯಾನ್ಸರ್​ ಇರುವುದು ಗೊತ್ತಾಗುತ್ತಿದ್ದಂತೆಯೇ ಅಭಿಮಾನಿಗಳು ಆತಂಕದಲ್ಲಿದ್ದರು. ಆದರೆ ಸಂಜಯ್​ ದತ್​ ಈಗಾಗಲೇ ಮಾತು ಕೊಟ್ಟಂತೆ ಸಹಿ ಮಾಡಿರುವ ಚಿತ್ರಗಳ ಚಿತ್ರೀಕರಣ ಮುಗಿಸಿಕೊಡುತ್ತಿದ್ದಾರೆ. ಈ ಹಿಂದೆಯಷ್ಟೆ ಯಶ್​ ರಾಜ್​ ಸ್ಟುಡಿಯೋದಲ್ಲಿ ಶಂಶೇರಾ ಚಿತ್ರದ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು. ನಂತರ ಮತ್ತೆ ಕೀಮೋ ಮಾಡಿಸಿಕೊಂಡು ಕೆಜಿಎಫ್​ ಚಾಪ್ಟರ್​ 2 ಚಿತ್ರಕ್ಕೆ ಸಿದ್ಧತೆ ಮಾಡಿಕೊಳ್ಳಲಾರಂಭಿಸಿದ್ದರು. 

ದೇಹದ ತೂಕ ಹೆಚ್ಚಿಸಿಕೊಂಡು ಮತ್ತೆ ಮೊದಲಿನಂತೆ ಬಾಡಿ ಬಿಲ್ಡ್​ ಮಾಡುವ ಕಾರ್ಯದಲ್ಲಿ ನಿರತರಾಗಿದ್ದ ಸಂಜಯ್​ ದತ್​ ಅಕ್ಟೋಬರ್​ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೊಸ ಹೇರ್​ ಸ್ಟೈಲ್​ ಜೊತೆಗೆ ಕೆಜಿಎಫ್​ ಚಿತ್ರಕ್ಕೆ ಮಾಡಿಕೊಳ್ಳುತ್ತಿರುವ ತಯಾರಿ ಬಗ್ಗೆಯೂ ಮಾಹಿತಿ ನೀಡಿದ್ದರು.








View this post on Instagram






A post shared by Sanjay Dutt (@duttsanjay)






ನವೆಂಬರ್​ನಲ್ಲಿ ಹೈದರಾಬಾದಿನಲ್ಲಿ ನಡೆದ ಕೆಜಿಎಫ್​ ಚಾಪ್ಟರ್​ 2 ಶೂಟಿಂಗ್​ನಲ್ಲಿ ಭಾಗಿಯಾಗುವುದಾಗಿ ಹೇಳಿದ್ದ ಸಂಜಯ್ ದತ್​, ಆಗ ಚಿತ್ರೀಕರಣಕ್ಕೆ ಹಾಜರಾಗಲಿಲ್ಲ. ಅದಕ್ಕೆ ಈಗ ಅಧೀರ ಕೆಜಿಎಫ್​ ಚಿತ್ರತಂಡ ಸೇರಿಕೊಳ್ಳಲಿದ್ದಾರಂತೆ. ಹೌದು, ಡಿಸೆಂಬರ್​ನಲ್ಲಿ ಹೈದರಾಬಾದಿನಲ್ಲಿ ಕೆಜಿಎಫ್​ 2 ಶೂಟಿಂಗ್​ ನಡೆಯಲಿದ್ದು, ಸಂಜು ಬಾಬಾ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರಂತೆ.








View this post on Instagram






A post shared by Sanjay Dutt (@duttsanjay)






ಡಿಸೆಂಬರ್​ನಲ್ಲಿ ಚಿತ್ರತಂಡ ಕೊನೆ ಹಂತದ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ರಾಕಿ ಭಾಯ್​ ಹಾಗೂ ಅಧೀರ ಎದುರಾಗುವ ದೃಶ್ಯಗಳ ಶೂಟಿಂಗ್ ನಡೆಯಲಿದೆಯಂತೆ. ಇನ್ನು ಈಗಾಗಲೇ ಕ್ಯಾನ್ಸರ್​ನಿಂದ ಗುಣಮುಖರಾಗಿದ್ದು, ಹೋರಾಟದಲ್ಲಿ ಗೆದ್ದಿದ್ದೇನೆ ಎಂದು ಸಂಜಯ್​ ದತ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಕ್ರೂರಿ ಅಧೀರನ ಪಾತ್ರದಲ್ಲಿ ಮಿಂಚಲು ಸಕಲ ಸಿದ್ಧತೆಗಳೊಂದಿಗೆ ಚಿತ್ರತಂಡ ಸೇರಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.










View this post on Instagram






A post shared by Sanjay Dutt (@duttsanjay)






ಈಗಾಗಲೇ ಜಿಮ್​ನಲ್ಲಿ ಬೆವರಿಳಿಸುತ್ತಿರುವ ಸಂಜಯ್​ ದತ್​ ಮತ್ತೆ ಹಿಂದಿನಂತೆ ಬಾಡಿ ಬಿಲ್ಡ್​ ಮಾಡುತ್ತಿದ್ದಾರಂತೆ. ಕಟ್ಟುಮಸ್ತಾದ ದೇಹದೊಂದಿಗೆ ಖಡಕ್​ ವಿಲನ್ ಅಧೀರನಾಗಿ ತೆರೆ ಮೇಲೆ ರಾಕಿ ಭಾಯ್​ಗೆ ಟಕ್ಕರ್​ ಕೊಡಲಿದ್ದಾರೆ ಬಾಲಿವುಡ್​ ಖಳ ನಾಯಕ್​ ಸಂಜಯ್​ ದತ್​. ಪ್ರಶಾಂತ್​ ನೀಲ್​ ನಿರ್ದೇಶನದ ಈ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್​, ಅನಂತ್ ನಾಗ್​, ಪ್ರಕಾಶ್​ ರೈ, ಮಾಳವೀಕಾ ಅವಿನಾಶ್​ ಅವರ ತಾರಗಣವಿದೆ.
Published by:Anitha E
First published: