'ಕೆಜಿಎಫ್ ಅಧ್ಯಾಯ 2' "ಬೆರಗುಗೊಳಿಸುವ ಸಿನಿಮಾ, "ಅದ್ಭುತವಾದ ಸ್ಥಳಗಳ ದೃಶ್ಯ ವೈಭವ! ಸ್ಟೈಲಿಶ್ ಎಕ್ಸಿಕ್ಯೂಶನ್ ಜೊತೆಗೆ ಅದ್ಭುತ ಶೈಲಿ ಮತ್ತು ವಸ್ತುವನ್ನು ಹೊಂದಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
KGF: Chapter 2 ಚಂಡಮಾರುತವು ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಬಿಡುಗಡೆಯ ದಿನಾಂಕವು ಹತ್ತಿರವಾಗುತ್ತಿದ್ದಂತೆ, ನಿರೀಕ್ಷೆಯು ಅಭೂತಪೂರ್ವ ಮಟ್ಟದಲ್ಲಿ ಬೆಳೆಯುತ್ತಿದೆ. 'Baahubali' ಮತ್ತು Spider Man ನಂತಹ ಅದ್ಭುತ ಸಿನಿಮಾಗಳನ್ನೂ ಮೀರಿಸಿ ಮುಂಗಡ ಬುಕ್ಕಿಂಗ್ ವಿಭಾಗದಲ್ಲಿ ನಿರ್ಮಿಸಲಾದ ಹಿಂದಿನ ದಾಖಲೆಗಳ ವೇಗವನ್ನು ಮುರಿಯುತ್ತಿದೆ. 'ಕೆಜಿಎಫ್: ಅಧ್ಯಾಯ 2' ನ ಮೊದಲ ವಿಮರ್ಶೆ (KGF: Chapter 2 Review) ಈಗಾಗಲೇ ಹೊರಬಿದ್ದಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರವು 'ವಿಶ್ವ ದರ್ಜೆಯ ಚಲನಚಿತ್ರ' (World Class Movie) ಎಂದು ಹೇಳಲಾಗಿದೆ. ಯುಎಇ ಮೂಲದ ಚಲನಚಿತ್ರ ವಿಮರ್ಶಕ, ಉಮೈರ್ ಸಂಧು ಅವರು ಚಲನಚಿತ್ರವನ್ನು ವೀಕ್ಷಿಸಿದ್ದಾರೆ. ಅವರು 'ಕೆಜಿಎಫ್: ಅಧ್ಯಾಯ 2' ಕುರಿತು ತಮ್ಮ ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ.
ಚಿಕ್ಕದಾದ ವಿಮರ್ಶೆ ಹಂಚಿಕೊಂಡಿರುವ ಉಮೈರ್ ಅವರು 'ಕೆಜಿಎಫ್ ಅಧ್ಯಾಯ 2' "ಬೆರಗುಗೊಳಿಸುವ ಸಿನಿಮಾ, "ಅದ್ಭುತವಾದ ಸ್ಥಳಗಳ ದೃಶ್ಯ ವೈಭವ! ಸ್ಟೈಲಿಶ್ ಎಕ್ಸಿಕ್ಯೂಶನ್ ಜೊತೆಗೆ ಅದ್ಭುತ ಶೈಲಿ ಮತ್ತು ವಸ್ತುವನ್ನು ಹೊಂದಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಯಶ್ ಮತ್ತು ಚಿತ್ರತಂಡವನ್ನು ಅವರು ಅಭಿನಂದಿಸಿದ್ದಾರೆ.
ಇಷ್ಟು ದೊಡ್ಡದಾಗಿ ಹೆಸರು ಮಾಡಿದ್ದು ಹೇಗೆ? ಇತ್ತೀಚೆಗೆ ಬಾಲಿವುಡ್ ನಟ ಫರ್ಹಾನ್ ಅಖ್ತರ್ ಅವರೊಂದಿಗೆ ಸಂವಾದ ನಡೆಸಿದ ಕೆಜಿಎಫ್ ನಟ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್, ಕೆಜಿಎಫ್ ಇಷ್ಟು ದೊಡ್ಡದಾಗಿ ಹೆಸರು ಗಳಿಸಿದ ಪ್ರಕ್ರಿಯೆಯ ಬಗ್ಗೆ ವಿವರಿಸಿದ್ದಾರೆ. ಸಂಭಾಷಣೆಯ ಸಮಯದಲ್ಲಿ ಪ್ರಶಾಂತ್ ಅವರು ಕೆಜಿಎಫ್ನ 8 ವರ್ಷಗಳ ಸುದೀರ್ಘ ಪ್ರಯಾಣವು ಅವರಿಗೆ ಆತ್ಮವಿಶ್ವಾಸವನ್ನು ನೀಡಿತು. ಅದು ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಸಹಾಯ ಮಾಡಿತು ಎಂದು ಹೇಳಿದರು.
ನಾವು ಪ್ರಾರಂಭಿಸಿದಾಗ ನಾವು ಈ ಹಂತದಲ್ಲಿ ಇರುತ್ತೇವೆ ಎಂದು ನಾವು ಎಂದಿಗೂ ಯೋಚಿಸಲಿಲ್ಲ ಎಂದು ಚಲನಚಿತ್ರ ನಿರ್ಮಾಪಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಯಶ್ ಅವರಿಗೆ ಗೌರವ ಸಲ್ಲಿಸಿದ ನೀಲ್ ಅವರು ಕೃತಜ್ಞತೆ ಸಲ್ಲಿಸಿದರು.
ನಿರೀಕ್ಷೆಗಳನ್ನು ತುಂಬಾ ಹೆಚ್ಚಾಗಿಸಿದೆ "ಈ ದೃಷ್ಟಿ ಹೊಂದಿರುವ ಏಕೈಕ ವ್ಯಕ್ತಿ ಯಶ್. ನಾವು ಇದನ್ನು ಒಂದು ಸಣ್ಣ ಕನ್ನಡ ಯೋಜನೆಯಾಗಿ ಪ್ರಾರಂಭಿಸಿದ್ದೆವು. ಇಂದು ಚಿತ್ರವು ನಿಜವಾಗಿಯೂ ದೊಡ್ಡ ಪ್ರಮಾಣದಲ್ಲಿ ನಿರೀಕ್ಷೆಗಳನ್ನು ತುಂಬಾ ಹೆಚ್ಚಾಗಿಸಿದೆ" ಎಂದು ಅವರು ಹೇಳಿದರು.
ಇಂಗ್ಲಿಷ್ನಲ್ಲೂ ಬರುತ್ತಂತೆ ಕೆಜಿಎಫ್ 2 ಕೆಜಿಎಫ್ 2 ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಯಲ್ಲಿ ಕೆಜಿಎಫ್2 ಅಬ್ಬರಿಸೋಕೆ ರೆಡಿಯಾಗಿದೆ. ಇದೀಗ ಈ ಚಿತ್ರತಂಡ ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲಾ ಈ ಒಂದು ಪ್ರಶ್ನೆ ಕೇಳಿಬರುತ್ತಿದೆ. ಅದು ಏನು ಅಂದರೆ, ಎಲ್ಲಾ ಭಾಷೆಯಲ್ಲಿರುವ ಕೆಜಿಎಫ್ 2 ಇಂಗ್ಲಿಷ್ನಲ್ಲಿ ಯಾಕೆ ಬಂದಿಲ್ಲ ಎಂದು ಹಲವರು ಕೇಳಿದ್ದಾರೆ. ಈ ಪ್ರಶ್ನೆ ಸ್ವತಃ ರಾಕಿ ಭಾಯ್ ಉತ್ತರ ನೀಡಿದ್ದಾರೆ. ಯಶ್ ಕೊಟ್ಟ ಉತ್ತರ ಕೇಳಿ ಕೆಲವರು ನಕ್ಕಿದ್ದಾರೆ. ಹೌದು, ‘ಇಂಗ್ಲಿಷ್ನಲ್ಲಿ ಯಾಕಿಲ್ಲ ಅಂದರೆ, ನಮ್ದು ಬಟ್ಲರ್ ಇಂಗ್ಲಿಷ್ ಕಣಪ್ಪಾ’ ಅದಕ್ಕೆ ಎಂದು ಯಶ್ ಹೇಳಿದ್ದಾರೆ.
ಫನ್ನಿ ಉತ್ತರ ಕೊಟ್ಟ ಬಳಿಕ ಯಶ್ ಸರಿಯಾದ ಉತ್ತರ ಕೊಟ್ಟಿದ್ದಾರೆ. ನಮ್ಮ ನಿರ್ದೇಶಕರು ಪ್ರಶಾಂತ್ ನೀಲ್ ಅವರಿಗೆ ಇಂಗ್ಲಿಷ್ನಲ್ಲಿ ಮಾಡುವ ತಾಕತ್ತು ಇದೆ. ಅವರು ಮಾಡಿ ತೋರಿಸುತ್ತಾರೆ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ. ಇದಕ್ಕೆ ಇಂಗ್ಲಿಷ್ನಲ್ಲಿ ಸಾಂಗ್ಗಳು ಹೇಗಿರಲಿದೆ ಎಂದು ಮತ್ತೊಬ್ಬರು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಾಕಿಂಗ್ ಸ್ಟಾರ್ ಯಶ್ ಅದಕ್ಕೆ ಬೇರೆ ಡಿಸೈನ್ ಮಾಡಲಾಗಿದೆ. ಅದಕ್ಕೆ ಇನ್ನೂ ಟೈಮ್ ಇದೆ ಎಂದು ಹೇಳಿದ್ದಾರೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ