ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಶ್ ಅಭಿನಯಿಸುತ್ತಿರುವ 'ಕೆ.ಜಿ.ಎಫ್ 2' ಸಿನಿಮಾದ ಮೇಲೆ ಇಡೀ ದೇಶದ ಗಮನ ನೆಟ್ಟಿದೆ. ಅಭಿಮಾನಿಗಳು ಕೆ.ಜಿ.ಎಫ್ ಚಾಪ್ಟರ್ 2 ಅಪ್ಡೇಟ್ಗಾಗಿ ಕಾಯುತ್ತಿದ್ದಾರೆ. ಅದಕ್ಕೆ ತಕ್ಕಂತೆ ಪ್ರಶಾಂತ್ ನೀಲ್ ಈಗ ಅಭಿಮಾನಿಗಳಿಗೆ ಒಂದು ಕೆಲಸ ಕೊಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲೂ ಅಭಿಮಾನಿಗಳು 'ಕೆ.ಜಿ.ಎಫ್ ಚಾಪ್ಟರ್ 2' ಚಿತ್ರದ ಅಪ್ಡೇಟ್ಗಾಗಿ ಕಾಯುತ್ತಿದ್ದಾರೆ. ಅದಕ್ಕಾಗಿ ನಿರ್ದೇಶಕರು ಹಾಗೂ ನಿರ್ಮಾಪಕರ ಮೇಲೆ ಟ್ವೀಟ್ ಹಾಗೂ ಪೋಸ್ಟ್ಗಳ ಮೂಲಕ ಒತ್ತಡ ಹೇರುತ್ತಿದ್ದಾರೆ. ಹೀಗಿರುವಾಗಲೇ ನಿರ್ದೇಶಕ ಪ್ರಶಾಂತ್ ನೀಲ್ ಒಂದು ಫೋಟೋ ಹಂಚಿಕೊಂಡಿದ್ದಾರೆ.
ಯಶ್ ಹಾಗೂ ಪ್ರಶಾಂತ್ ನೀಲ್ ಪ್ರತ್ಯೇಕವಾಗಿ ಕ್ಯಾಮೆರಾ ಮುಂದೆ ಕುಳಿತಿರುವ ಫೋಟೋ ಸದ್ಯ ಇನ್ಸ್ಟಾಗ್ರಾಂನಲ್ಲಿ ಹರಿದಾಡುತ್ತಿದೆ. ಇದನ್ನು ಪ್ರಶಾಂತ್ ನೀಲ್ ಹಂಚಿಕೊಂಡಿದ್ದು, ಇಲ್ಲಿ ಏನು ನಡೆಯುತ್ತಿದೆ ಎಂದು ಊಹಿಸಿ ಎಂದಿದ್ದಾರೆ.
ಈ ಫೋಸ್ಟ್ ನೋಡಿದ ನೆಟ್ಟಿಗರು ನಮಗೇನೂ ಬೇಡ, ಮೊದಲು 'ಕೆ.ಜಿ.ಎಫ್ 2' ಅಪ್ಡೇಟ್ ಕೊಡಿ ಸಾಕು ಎನ್ನುತ್ತಿದ್ದಾರೆ. ಮತ್ತೆ ಕೆಲವರು 'ಕೆ.ಜಿ.ಎಫ್ ಚಾಪ್ಟರ್1' ಚಿತ್ರದ ಪ್ರಮೋಷನ್ ವಿಡಿಯೋ ಇದು ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಕಾಯುತ್ತಿರುವ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡಲು ಮಾಡುತ್ತಿರುವ 'ಕೆ.ಜಿ.ಎಫ್. ಚಾಪ್ಟರ್ 2' ಚಿತ್ರದ ವಿಡಿಯೋದಲ್ಲಿ ಯಶ್ ಹಾಗೂ ಪ್ರಶಾಂತ್ ನೀಲ್ ಎಂದೆಲ್ಲ ಊಹಿಸುತ್ತಿದ್ದಾರೆ.
View this post on Instagram
Whats happening....lets keep you guessing???????????? Rocky and Neel 🖤....#kgfchapter1 #rockstars
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ