KGF 2: ತಾಯಿ ಪ್ರೀತಿಗೆ ಮತ್ತೊಂದು ಹಾಡು, ಹೃದಯ ಮೀಟುವ ಹೊಸ ಹಾಡು ಕೇಳಿ

ಕೆಜಿಎಫ್ 2

ಕೆಜಿಎಫ್ 2

Rocking Star Yash: ಇನ್ನು ಕೆಜಿಎಫ್ 2 ಚಿತ್ರದ ಹಾಡುಗಳ ರೈಟ್ಸ್​ ಕೂಡ ದಾಖಲೆಯ ಮೊತ್ತಕ್ಕೆ ಮಾರಾಟವಾಗಿತ್ತು, ಈಗಾಗಲೇ ಹಲವಾರು ದಾಖಲೆಗಳನ್ನು ಬರೆದಿರುವ ಈ ಚಿತ್ರವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.  

  • Share this:

ಕೆಜಿಎಫ್ 2 (KGF Chapter 2) ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಕೆಜಿಎಫ್ ​1ರಂತೆ ಇದು ಸಹ ಅದ್ಭುತವಾಗಿರಲಿದೆ ಎಂದು ಈ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ಇತ್ತೀಚೆಗಷ್ಟೇ ಈ ಚಿತ್ರದ ತೂಫಾನ್ ಹಾಡು ಹಾಗೂ ಟ್ರೈಲರ್​ ಬಿಡುಗಡೆಯಾಗಿ ಧೂಳೆಬ್ಬಿಸಿದೆ. ಇದೀಗ ಮತ್ತೊಂದು ಹಾಡು ಬಿಡುಗಡೆಯಾಗಿದೆ. ತಾಯಿಯ ಸೆಂಟಿಮೆಂಟ್​ (Mother Sentiment) ಇರುವ ಹಾಡೊಂದು ಇಂದು ಬಿಡುಗಡೆಯಾಗಿದ್ದು, ಈಗಾಗಲೇ ಅಭಿಮಾನಿಗಳು ಹಾಡನ್ನು ನೋಡಿ ಇಷ್ಟಪಟ್ಟಿದ್ದಾರೆ. ಹೌದು, ಗಗನ ನೀ ಎನ್ನುವ (Voice Of Every Mother) ರಿಲೀಸ್​ ಆಗಿದೆ.  ಕೆಜಿಎಫ್​: ಚಾಪ್ಟರ್​ 1 ರಲ್ಲಿ ಸಹ ತಾಯಿಯ ಸೆಂಟಿಮೆಂಟ್​ ಕುರಿತಾದ ಗರ್ಭದಿ ನನ್ನಿರಿಸಿ ಹಾಡು ನಿಜಕ್ಕೂ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದು ತಾಯಿ ಮತ್ತು ಮಗನ ನಡುವಿನ ಸಂಬಂಧವನ್ನು ಬಿಚ್ಚಿ ಹೇಳಿತ್ತು, ಈಗ ಮತ್ತೆ ಇದೇ ರೀತಿಯ ಹಾಡು ಬಿಡುಗಡೆಯಾಗಿದ್ದು, ಜನರ ಪ್ರತಿಕ್ರಿಯೆ ಹೇಗಿರಲಿದೆ ಎಂಬುದನ್ನ ಕಾದು ನೋಡಬೇಕಿದೆ.  


ಇನ್ನು ನಟಿ ಅರ್ಚನಾ ಜೋಯಿಸ್​ ಅವರು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿ ನಾಯಕನ ತಾಯಿಯ ಪಾತ್ರದಲ್ಲಿ ನಟಿಸಿದ್ದು, ಟ್ರೇಲರ್​ನ ಕೊನೆಯಲ್ಲಿ ಅಮ್ಮ-ಮಗನ ನಡುವೆ ನಡೆಯುವ ಮಾತುಕತೆ ಜನರಿಗೆ ಇಷ್ಟವಾಗಿದೆ. ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಎಂದರೆ ಕೆಜಿಎಫ್​ 2 ಎನ್ನಬಹುದು. ಏಪ್ರಿಲ್ 14ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಟ್ರೇಲರ್​ ಮೂಲಕ ಕೆಜಿಎಫ್​ 2 ಚಿತ್ರ  ನಿರೀಕ್ಷೆ ಹೆಚ್ಚಿಸಿದ್ದು, ಯಶ್​ ಅಭಿಮಾನಿಗಳು ಬಾಸ್​ ಚಿತ್ರಕ್ಕಾಗಿ  ಕಾಯುತ್ತಿದ್ದಾರೆ.ದಾಖಲೆ ಬೆಲೆಗೆ ಮಾರಾಟವಾಗಿದ್ದ ಹಾಡಿನ ರೈಟ್ಸ್ 


ಈ ಚಿತ್ರದ ಟ್ರೇಲರ್​ ನೋಡಿದರೆ ಭರ್ಜರಿ ಆ್ಯಕ್ಷನ್​ ಜೊತೆಗೆ ಹಾಡುಗಳಿಗೂ ಹೆಚ್ಚು ಮಹತ್ವ ನೀಡಿರುವುದು ತಿಳಿಯುತ್ತದೆ. ಇನ್ನು ಕೆಜಿಎಫ್ 2 ಚಿತ್ರದ ಹಾಡುಗಳ ರೈಟ್ಸ್​ ಕೂಡ ದಾಖಲೆಯ ಮೊತ್ತಕ್ಕೆ ಮಾರಾಟವಾಗಿತ್ತು, ಈಗಾಗಲೇ ಹಲವಾರು ದಾಖಲೆಗಳನ್ನು ಬರೆದಿರುವ ಈ ಚಿತ್ರವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.


ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್​, ಶ್ರೀನಿಧಿ ಶೆಟ್ಟಿ, ಸಂಜಯ್​ ದತ್​, ರವೀನಾ ಟಂಡನ್​, ವಸಿಷ್ಠ ಸಿಂಹ, ಪ್ರಕಾಶ್​ ರಾಜ್​, ರಾವ್​ ರಮೇಶ್​ ಸೇರಿದಂತೆ ಘಟಾನುಘಟಿ ಕಲಾವಿದರ ದಂಡಿದ್ದು, ಚಿತ್ರ ಪ್ರಚಾರ ಭರದಿಂದ ಸಾಗಿದೆ. ಕೇವಲ ಕರ್ನಾಟದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಲ್ಲಿ ಸಹ ಚಿತ್ರ ಬಿಡುಗಡೆಯಾಗುತ್ತಿದ್ದು, ಬೇರೆ ರಾಜ್ಯಗಳಲ್ಲಿ ಸಹ ಚಿತ್ರತಂಡ ಪ್ರಚಾರ ಆರಂಭಿಸಿದೆ.


ಇದನ್ನೂ ಓದಿ: ಬೇಬಿ ಬಂಪ್​ ಫೋಟೋಶೂಟ್​ ಮಾಡಿಸಿದ ಕಾಜಲ್​! ಏನ್​ ಮುದ್ದಾಗಿ ಕಾಣ್ತಾರೆ ನೋಡಿ


ರಾಕಿಂಗ್ ಸ್ಟಾರ್ ಯಶ್ ಆಭಿನಯದ ಕೆಜಿಎಫ್ ಸಿನಿಮಾ ಬಾಲಿವುಡ್ ಹಾಗೂ ಟಾಲಿವುಡ್ ಸೇರಿ ವಿಶ್ವಾದ್ಯಂತ ದೊಡ್ಡ ಮಟ್ಟದ ಹವಾ ಮಾಡಿತ್ತು. ಈ ಕಾರಣಕ್ಕೆ ‘ಕೆಜಿಎಫ್ 2’ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದ್ದು, ‘ಕೆಜಿಎಫ್ 2’ ಚಿತ್ರ ಬಿಡುಗಡೆಗೆ ಸಿನಿ ರಸಿಕರು ಕಾಯುತ್ತಿದ್ದಾರೆ. ಭಾರಿ ಸಂಖ್ಯೆಯ ಚಿತ್ರಮಂದಿರಗಳಲ್ಲಿ 'ಕೆಜಿಎಫ್ 2' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.


ವಿದೇಶದಲ್ಲೂ ಸದ್ದು ಮಾಡ್ತಿದೆ ಕೆಜಿಎಫ್ 2 


ದೇಶದಲ್ಲಷ್ಟೆ ಅಲ್ಲದೆ ವಿದೇಶಗಳಲ್ಲಿಯೂ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳುತ್ತಿದೆ.ಈಗಾಗಲೇ ಗಾಂಧಿನಗರದಲ್ಲಿ ಯಶ್ ಕಟೌಟ್​ಗಳು ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.  ಕೆಜಿಎಫ್​ ಸಿನಿಮಾ ಬಂದಮೇಲೆ ಹೊರ ದೇಶಗಳಲ್ಲೂ ಕನ್ನಡ ಸಿನಿಮಾಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಹೆಚ್ಚಿದೆ. ದಕ್ಷಿಣ ಭಾರತದ ಸಿನಿಮಾಗಳು ವಿದೇಶಗಳಲ್ಲಿ ಹೇಗೆ ದುಡ್ಡು ಮಾಡುತ್ತವೆ ಅನ್ನುವುದಕ್ಕೆ ಇತ್ತೀಚೆಗೆ ತೆರೆಕಂಡಿರುವ ‘ಆರ್​ಆರ್​ಆರ್​’ ಸಿನಿಮಾಗಿಂತ ದೊಡ್ಡ ಉದಾಹರಣೆ ಬೇಕಿಲ್ಲ.


ಇದನ್ನೂ ಓದಿ: ಹಿಜಾಬ್ ಧರಿಸಿ ಗನ್ ಹಿಡಿದುಬಿಟ್ಟಿದ್ದಾರೆ ರಶ್ಮಿಕಾ! ಏನಿದು ಹೊಸಾ ಕಿರಿಕ್?

top videos


    ಇದೀಗ ನಮ್ಮ ಸ್ಯಾಂಡಲ್​ವುಡ್​ನ ರಾಕಿಂಗ್​ ಸ್ಟಾರ್​ ಸರದಿ. ಕೆಜಿಎಫ್​ 2 ನೋಡಲು ಇಡೀ ವಿಶ್ವದ ಜನರು ಕಾಯುತ್ತಿದ್ದಾರೆ. ಹೌದು, ಯುಕೆಯಲ್ಲಿ ಕೇವಲ 12 ಗಂಟೆಗಳಲ್ಲಿ 5000 ಸಾವಿರ ಟಿಕೆಟ್​ ಸೋಲ್ಡ್​ಔಟ್​ ಆಗಿದೆ. ಇದನ್ನು  ನೋಡಿದರೆ ತಿಳಿಯುತ್ತೆ ರಾಕಿಭಾಯ್​ನ ಹವಾ ಎಷ್ಟಿದೆ ಅಂತ.

    First published: