• Home
  • »
  • News
  • »
  • entertainment
  • »
  • KGF 2: ತೂಫಾನ್​ ನಂತರ ಸುಲ್ತಾನ್​ ಅಬ್ಬರ - ರಿಲೀಸ್​ ಆಯ್ತು ಮೂರನೇ ಹಾಡು

KGF 2: ತೂಫಾನ್​ ನಂತರ ಸುಲ್ತಾನ್​ ಅಬ್ಬರ - ರಿಲೀಸ್​ ಆಯ್ತು ಮೂರನೇ ಹಾಡು

ಸುಲ್ತಾನ್ ಹಾಡು ರಿಲೀಸ್​

ಸುಲ್ತಾನ್ ಹಾಡು ರಿಲೀಸ್​

Sandalwood Update: ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಎಂದರೆ ಕೆಜಿಎಫ್​ 2 ಎನ್ನಬಹುದು. ಏಪ್ರಿಲ್ 14ರಂದು ಎಂದರೆ ನಾಳೆ ಸಿನಿಮಾ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ. 

  • Share this:

ಕೆಜಿಎಫ್ 2 (KGF Chapter 2) ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಕೆಜಿಎಫ್ ​1ರಂತೆ ಇದು ಸಹ ಅದ್ಭುತವಾಗಿರಲಿದೆ ಎಂದು ಈ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ಇತ್ತೀಚೆಗಷ್ಟೇ ಈ ಚಿತ್ರದ ತೂಫಾನ್, ಗಗನೀ ಹಾಡು ಹಾಗೂ ಟ್ರೈಲರ್​ ಬಿಡುಗಡೆಯಾಗಿ ಧೂಳೆಬ್ಬಿಸಿದೆ. ಇದೀಗ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಈ ಸಿನಿಮಾದ ಮೂರನೇ ಹಾಡು ರಿಲೀಸ್​ ಆಗಿದ್ದು, ಸುಲ್ತಾನ ಲಿರಿಕಲ್ ಹಾಡು  (Sultan lyrical song) ಬಿಡುಗಡೆಯಾಗಿದೆ. ಈ ಹಾಡು ಈಗಾಗಲೇ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ಜನರು ಹಾಡನ್ನು ನೋಡಿ ಇಷ್ಟಪಟ್ಟಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದು, ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳಂತೆ ಇದು ಸಹ ಧೂಳೆಬ್ಬಿಸಲಿದೆ ಎಂಬುದು ಯಶ್ (Rocking Star Yash)  ಅಭಿಮಾನಿಗಳ ಅಂಬೋಣ.


ರರ್‌ರ್‌ (RRR) ರಣಧೀರ ರುದಿರೆಬ್ಬಿ ನಿಂತ ರಣಧೀರ ನರ ಕಸುತಿ ನಿಂತವೋ ಈಗ ಒಬ್ಬಂಟಿ ನಿಂತ ರಣಧೀರ ಎದೆಗಟ್ಟಿ ನಿಂತವೋ ಈಗ, ಎಂದು ಆರಂಭವಾಗುವ ಈ ಹಾಡು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷನ್‌ನಲ್ಲಿ  ಬಿಡುಗಡೆಯಾಗಿದ್ದು, ಹಾಡು ಬಿಡುಗಡೆಯಾದ ಕೆಲವೇ ಹೊತ್ತಿದೆ ಲಕ್ಷಗಟ್ಟಲೆ ಜನರು ಇದನ್ನು ವೀಕ್ಷಿಸಿದ್ದಾರೆ.ಈಗಾಗಲೇ ಚಿತ್ರ ತಂಡದಿಂದ ತೂಫಾನ್​ ಹಾಗೂ ತಾಯಿಯ ಸೆಂಟಿಮೆಂಟ್​ ಇರುವ ಗಗನ ನೀ ಎನ್ನುವ (Voice Of Every Mother) ರಿಲೀಸ್​ ಆಗಿ, ಸದ್ದು ಮಾಡಿತ್ತು. ಕೆಜಿಎಫ್​ ಚಾಪ್ಟರ್​ 1 ರಲ್ಲಿ ಸಹ ತಾಯಿಯ ಸೆಂಟಿಮೆಂಟ್​ ಕುರಿತಾದ ಗರ್ಭದಿ ನನ್ನಿರಿಸಿ ಹಾಡು ನಿಜಕ್ಕೂ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದು ತಾಯಿ ಮತ್ತು ಮಗನ ನಡುವಿನ ಸಂಬಂಧವನ್ನು ಬಿಚ್ಚಿ ಹೇಳಿತ್ತು.


ನಾಳೆ ತೆರೆಮೇಲೆ ಕೆಜಿಎಫ್ 2 


ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಎಂದರೆ ಕೆಜಿಎಫ್​ 2 ಎನ್ನಬಹುದು. ಏಪ್ರಿಲ್ 14ರಂದು ಎಂದರೆ ನಾಳೆ ಸಿನಿಮಾ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಟ್ರೇಲರ್​ ಮೂಲಕ ಕೆಜಿಎಫ್​ 2 ಚಿತ್ರ  ನಿರೀಕ್ಷೆ ಹೆಚ್ಚಿಸಿದ್ದು, ಯಶ್​ ಅಭಿಮಾನಿಗಳು ಬಾಸ್​ ಚಿತ್ರಕ್ಕಾಗಿ  ಕಾಯುತ್ತಿದ್ದಾರೆ. ಭಾರತದಲ್ಲಿಯೇ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಏಪ್ರಿಲ್ 24ರಂದು ಚಿತ್ರವು ವಿಶ್ವದಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಲಿದೆ.


ಇನ್ನು, ಪ್ಯಾನ್​ ಇಂಡಿಯಾ ಮಟ್ಟದ ಸಿನಿಮಾ ಆಗಿರುವುದರಿಂದ ಚಿತ್ರದ ಪ್ರಚಾರ ಕಾರ್ಯಕ್ಕೆ ಚಿತ್ರತಂಡ ದೊಡ್ಡ ಮಟ್ಟದಲ್ಲಿ ಪ್ಲಾನ್ ಮಾಡಿತ್ತು. . ಭಾರತದಲ್ಲಿ ಮಾತ್ರವಲ್ಲದೇ ವಿದೇಶದ ಚಿತ್ರಮಂದಿರಗಳಲ್ಲಿಯೂ ಸ್ಟ್ಯಾಂಡಿ ಮತ್ತು ಪೋಸ್ಟರ್​ಗಳನ್ನು ಚಿತ್ರತಂಡ ಪ್ರದರ್ಶಿಸಿದ್ದು, ಈಗಾಗಲೇ ಚಿತ್ರದ ಮೊದಲ ರಿವ್ಯೂ ಹೊರ ಬಂದಿದೆ.


ಈ ಚಿತ್ರದ ಟ್ರೇಲರ್​ ನೋಡಿದರೆ ಭರ್ಜರಿ ಆ್ಯಕ್ಷನ್​ ಜೊತೆಗೆ ಹಾಡುಗಳಿಗೂ ಹೆಚ್ಚು ಮಹತ್ವ ನೀಡಿರುವುದು ತಿಳಿಯುತ್ತದೆ. ಇನ್ನು ಕೆಜಿಎಫ್ 2 ಚಿತ್ರದ ಹಾಡುಗಳ ರೈಟ್ಸ್​ ಕೂಡ ದಾಖಲೆಯ ಮೊತ್ತಕ್ಕೆ ಮಾರಾಟವಾಗಿತ್ತು, ಈಗಾಗಲೇ ಹಲವಾರು ದಾಖಲೆಗಳನ್ನು ಬರೆದಿರುವ ಈ ಚಿತ್ರವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.


ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್​, ಶ್ರೀನಿಧಿ ಶೆಟ್ಟಿ, ಸಂಜಯ್​ ದತ್​, ರವೀನಾ ಟಂಡನ್​, ವಸಿಷ್ಠ ಸಿಂಹ, ಪ್ರಕಾಶ್​ ರಾಜ್​, ರಾವ್​ ರಮೇಶ್​ ಸೇರಿದಂತೆ ಘಟಾನುಘಟಿ ಕಲಾವಿದರ ದಂಡಿದ್ದು.


ರಾಕಿಂಗ್ ಸ್ಟಾರ್ ಯಶ್ ಆಭಿನಯದ ಕೆಜಿಎಫ್ ಸಿನಿಮಾ ಬಾಲಿವುಡ್ ಹಾಗೂ ಟಾಲಿವುಡ್ ಸೇರಿ ವಿಶ್ವಾದ್ಯಂತ ದೊಡ್ಡ ಮಟ್ಟದ ಹವಾ ಮಾಡಿತ್ತು. ಈ ಕಾರಣಕ್ಕೆ ‘ಕೆಜಿಎಫ್ 2’ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದ್ದು, ‘ಕೆಜಿಎಫ್ 2’ ಚಿತ್ರ ಬಿಡುಗಡೆಗೆ ಸಿನಿ ರಸಿಕರು ಕಾಯುತ್ತಿದ್ದಾರೆ. ಭಾರಿ ಸಂಖ್ಯೆಯ ಚಿತ್ರಮಂದಿರಗಳಲ್ಲಿ 'ಕೆಜಿಎಫ್ 2' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.


ವಿದೇಶದಲ್ಲೂ ಸದ್ದು ಮಾಡ್ತಿದೆ ಕೆಜಿಎಫ್ 2 


ದೇಶದಲ್ಲಷ್ಟೆ ಅಲ್ಲದೆ ವಿದೇಶಗಳಲ್ಲಿಯೂ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳುತ್ತಿದೆ.ಈಗಾಗಲೇ ಗಾಂಧಿನಗರದಲ್ಲಿ ಯಶ್ ಕಟೌಟ್​ಗಳು ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.  ಕೆಜಿಎಫ್​ ಸಿನಿಮಾ ಬಂದಮೇಲೆ ಹೊರ ದೇಶಗಳಲ್ಲೂ ಕನ್ನಡ ಸಿನಿಮಾಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಹೆಚ್ಚಿದೆ. ದಕ್ಷಿಣ ಭಾರತದ ಸಿನಿಮಾಗಳು ವಿದೇಶಗಳಲ್ಲಿ ಹೇಗೆ ದುಡ್ಡು ಮಾಡುತ್ತವೆ ಅನ್ನುವುದಕ್ಕೆ ಇತ್ತೀಚೆಗೆ ತೆರೆಕಂಡಿರುವ ‘ಆರ್​ಆರ್​ಆರ್​’ ಸಿನಿಮಾಗಿಂತ ದೊಡ್ಡ ಉದಾಹರಣೆ ಬೇಕಿಲ್ಲ. ಇನ್ನು ಈಗಾಗಲೇ ಕರ್ನಾಟಕದಲ್ಲಿ ಸಹ ಟಿಕೆಟ್​ ಬುಕ್ಕಿಂಗ್ ಆಗಿದ್ದು, ಅಭಿಮಾನಿಗಳು ಚಿತ್ರ ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಹಿಂದಿ ಭಾಷೆಯ ಕೆಜಿಎಫ್-2 ಈಗಾಗಲೇ 20 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಇದು ರಾಜಮೌಳಿ ಅವರ ಆರ್ ಆರ್ ಆರ್ ಸಿನಿಮಾದ ದಾಖಲೆಯನ್ನು ಧೂಳಿಪಟ ಮಾಡಿದೆೆ ಎನ್ನಲಾಗುತ್ತಿದೆ.

Published by:Sandhya M
First published: