KGF Chapter 2: ನಿಮ್ಮನೆ ಟಿವಿಯಲ್ಲಿ ಬರಲಿದೆ ಕೆಜಿಎಫ್ ಚಾಪ್ಟರ್-2!

ಕೆಜಿಎಫ್-2 ಸಿನೆಮಾ

ಕೆಜಿಎಫ್-2 ಸಿನೆಮಾ

ಜೀ ಕನ್ನಡ ವಾಹಿನಿಯಲ್ಲಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಪ್ರಸಾರವಾಗಲಿದೆ. ಈ ಬಗ್ಗೆ ಜೀ ಕನ್ನಡ ವಾಹಿನಿ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಘೋಷಿಸಿದೆ.

  • Share this:

ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾ  ಸೂಪರ್ ಡ್ಯೂಪರ್ ಹಿಟ್ ಸಿನಿಮಾ ‘ಕೆಜಿಎಫ್ ಚಾಪ್ಟರ್ 2’ (KGF Chapter 2). ಸಿನಿಮಾ ಇದೀಗ ಕಿರುತೆರೆಗೆ ಬರಲಿದೆ. ಜೀ ಕನ್ನಡ ವಾಹಿನಿಯಲ್ಲಿ (Zee Kannada) ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಪ್ರಸಾರವಾಗಲಿದೆ. ಈ ಬಗ್ಗೆ ಜೀ ಕನ್ನಡ ವಾಹಿನಿ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಘೋಷಿಸಿದೆ. ಪ್ರಪಂಚದಲ್ಲಿರುವ ಬಂಗಾರನೆಲ್ಲ ಅಮ್ಮನಿಗೆ ತಂದುಕೊಡೋ ಧೀರ ಸುಲ್ತಾನ ನಿಮ್ಮನೆ ಪರದೆಯಲ್ಲೂ ಬರ್ತಿದ್ದಾನೆ. ಅಭಿಮಾನಿಗಳು ಟಿವಿಯಲ್ಲಿ (TV) ಚಿತ್ರ ವೀಕ್ಷಿಸಲು ಕಾಯುತ್ತಿದ್ದಾರೆ.
ಕೆಜಿಎಫ್ ಚಾಪ್ಟರ್ 2 ಸಿನಿಮಾ ಅತೀ ಶೀಘ್ರದಲ್ಲಿ


ಕೆಜಿಎಫ್ ಚಾಪ್ಟರ್ 2 ಸಿನಿಮಾ ಅತೀ ಶೀಘ್ರದಲ್ಲಿ ಎಂದು ಜೀ ಕನ್ನಡ ವಾಹಿನಿ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದೆ. ಅಷ್ಟು ಬಿಟ್ಟರೆ, 'ಕೆಜಿಎಫ್: ಚಾಪ್ಟರ್ 2' ಸಿನಿಮಾದ ಪ್ರಸಾರ ದಿನಾಂಕ ಹಾಗೂ ಸಮಯ ನಿಗದಿಯಾಗಿಲ್ಲ.

View this post on Instagram


A post shared by Zee Kannada (@zeekannada)

4 ವರ್ಷಗಳ ಬಳಿಕ ‘ಕೆಜಿಎಫ್ 2’ ಸಿನಿಮಾ ರಿಲೀಸ್


‘ಕೆಜಿಎಫ್’ ಸಿನಿಮಾ 2018ರಲ್ಲಿ ತೆರೆಗೆ ಬಂತು. ಈ ಚಿತ್ರಕ್ಕೆ ಎರಡನೇ ಚಾಪ್ಟರ್​ ಯಾವಾಗ ಬರಲಿದೆ ಎಂದು ಫ್ಯಾನ್ಸ್ ಕಾದಿದ್ದರು. ಮೊದಲ ಚಾಪ್ಟರ್ ತೆರೆಕಂಡ ನಾಲ್ಕು ವರ್ಷಗಳ ಬಳಿಕ ‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಯಿತು. ಪ್ರಶಾಂತ್ ನೀಲ್​ ನಿರ್ದೇಶನದ ಈ ಚಿತ್ರದಲ್ಲಿ ಯಶ್, ಸಂಜಯ್ ದತ್​, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಮೊದಲಾದವರು ನಟಿಸಿದ್ದಾರೆ.


ಈ ಚಿತ್ರ ಮೊದಲ ದಿನವೇ ಹಲವು ದಾಖಲೆ ಬರೆಯಿತು. ಈ ಸಿನಿಮಾ ಹಿಂದಿ ಒಂದರಲ್ಲೇ 430+ ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಈ ಮೂಲಕ ಚಿತ್ರ ಗೆದ್ದು ಬೀಗಿತು. ಸಿನಿಮಾದ ಒಟ್ಟಾರೆ ಕಲೆಕ್ಷನ್ 1250 ಕೋಟಿ ರೂಪಾಯಿ ಆಗಿದೆ. ಈಗ ಜೀ ಕನ್ನಡ ವಾಹಿನಿ ಈ ಬ್ಲಾಕ್​​ಬಸ್ಟರ್ ಸಿನಿಮಾ ರಿಲೀಸ್ ಮಾಡಲು ರೆಡಿ ಆಗಿದೆ.


‘ಅವನು ಬರ್ತಿದ್ದಾನೆ.. ಅದೂ ಒನ್ ವೇಯಲ್ಲಿ'


ಜೀ ಕನ್ನಡ ವಾಹಿನಿ ‘ಕೆಜಿಎಫ್ 2’ ಚಿತ್ರದ ಕೆಲ ದೃಶ್ಯಗಳ ವಿಡಿಯೋವನ್ನು ಪೋಸ್ಟ್ ಮಾಡಿದೆ. ‘ಅವನು ಬರ್ತಿದ್ದಾನೆ.. ಅದೂ ಒನ್ ವೇಯಲ್ಲಿ. ರಾಕಿಂಗ್ ಸ್ಟೈಲಲ್ಲಿ’ ಎಂದು ಕ್ಯಾಪ್ಶನ್ ನೀಡಲಾಗಿದೆ.   ‘ಅತೀ ಶೀಘ್ರದಲ್ಲಿ ನಿಮ್ಮ ಮುಂದೆ ಕೆಜಿಎಫ್ 2’ ಎಂದು ಬರೆಯಲಾಗಿದೆ.


ಯಶ್​ ಮುಂದಿನ ಚಿತ್ರ ಯಾವುದು?


ರಾಕಿಂಗ್​ ಸ್ಟಾರ್​ ಯಶ್​ (Yash) ಅವರು ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಮೆರೆಯುತ್ತಿದ್ದಾರೆ. ಅವರ ಕಾಲ್​ಶೀಟ್​ ಪಡೆಯಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಮುಂದೆ ಬರುತ್ತಿವೆ. ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾ ಹಿಟ್​ ಆದ ಬಳಿಕ ಯಶ್​ ಅವರ ಡಿಮ್ಯಾಂಡ್ ಕೂಡ​ ಹೆಚ್ಚಿದೆ. ಅವರ ಮುಂದಿನ ಚಿತ್ರ ಯಾವುದು. ಹೊಸ ಸಿನಿಮಾದಲ್ಲಿ ಅವ್ರ ಲುಕ್​ ಹೇಗಿರುತ್ತೆ ಅನ್ನೋ ಕುತೂಹಲ ಅಭಿಮಾನಿಗಳಿಗೆ ಹೆಚ್ಚಾಗಿದೆ. ಮುಂಬರುವ ಚಿತ್ರದಲ್ಲಿ ಯಾವ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಕೂಡ ಇದೆ.


ಈಗಾಗಲೇ ನಿರ್ದೇಶಕ ನರ್ತನ್ ಜೊತೆ ಸಿನಿಮಾ ಮಾಡಲು ಯಶ್  ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ರಾಕಿ ಭಾಯ್ ಕೈಯಲ್ಲಿ ಯಾವೆಲ್ಲಾ ಸಿನಿಮಾಗಳಿವೆ ಎಂಬುದನ್ನ ಅಧಿಕೃತವಾಗಿ ತಿಳಿಸಲಿದ್ದಾರೆ. ಯಶ್​ ತಮ್ಮ ಮುಂದಿನ ಚಿತ್ರದಲ್ಲಿ ಹೇರ್​ ಸ್ಟೈಲ್​ ಬದಲಿಸುತ್ತಾರಾ ಅನ್ನೋ ಪ್ರಶ್ನೆ ಅಭಿಮಾನಿಗಳನ್ನು ಕಾಡ್ತಿದೆ.


ಇದನ್ನೂ ಓದಿ:  ರಾಕಿ ಭಾಯ್ ಅಬ್ಬರಕ್ಕೆ ಬೆಚ್ಚಿದ್ದ ಅಮೀರ್​, KGF 2 ಎದುರು ಬರದೇ ಬದುಕಿದೆವು ಎಂದ ಬಾಲಿವುಡ್​ ಮಿಸ್ಟರ್​ ಪರ್ಫೆಕ್ಟ್!


ಡಿಫರೆಂಟ್ ಲುಕ್‌ನಲ್ಲಿ ಬರುತ್ತೇನೆ


ಮೈಸೂರಿನ ಯುವಜನ ಮಹೋತ್ಸವ ಕಾರ್ಯಕ್ರಮಕ್ಕೆ ಯಶ್ ಭಾಗಿಯಾಗಿದ್ದರು. ಈ ವೇಳೆ ತಮ್ಮ ಹೊಸ ಹೇರ್ ಸ್ಟೈಲ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.ನನ್ನ ಸಿನಿಮಾ ಬಗ್ಗೆ ಕುತೂಹಲವಿರಲಿ, ಯಾವ ಸಿನಿಮಾ, ಯಾವ ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುತ್ತೇನೆ ಎಂಬುದನ್ನ ಕಾದುನೋಡಿ ಎಂದು ಯಶ್ ಹೇಳಿದ್ದಾರೆ. ಮುಂದಿನ ಚಿತ್ರದ ಬಗ್ಗೆ ಯಾವುದೇ ರೀತಿಯ ಸುಳಿವು ಕೊಡದೇ, ಡಿಫರೆಂಟ್ ಲುಕ್‌ನಲ್ಲಿ ಬರುತ್ತೇನೆ ಎಂಬ ಸುಳಿವು ನೀಡಿದ್ದಾರೆ.

top videos
    First published: