Rocking Star Yash ಫ್ಯಾನ್ಸ್‌ಗೆ KGF 2 ಚಿತ್ರತಂಡದಿಂದ ಗುಡ್ ನ್ಯೂಸ್! ಭರ್ಜರಿ ಆಫರ್ ಪಡೆಯೋಕೆ ಹೀಗೆ ಮಾಡಿ

‘ಕೆಜಿಎಫ್‌ ಚಾಪ್ಟರ್ 2’ ಚಿತ್ರದ ಪ್ರಚಾರಕ್ಕೆ ಚಿತ್ರತಂಡ ಮುಂದಾಗಿದೆ. ಅಭಿಮಾನಿಗಳನ್ನು ಆಕರ್ಷಿಸಿ, ಅವರನ್ನು ಚಿತ್ರದ ಪ್ರಚಾರಕ್ಕೆ ಬಳಸಿಕೊಂಡು, ಅವರಿಗೆ ಭರ್ಜರಿ ಆಫರ್ ನೀಡಲು ಹೊಂಬಾಳೆ ಫಿಲ್ಮ್ಸ್ ಮುಂದಾಗಿದೆ. ಹಾಗಿದ್ರೆ ಏನಪ್ಪಾ ಅದು ಹೊಸ ಪ್ರಚಾರ ತಂತ್ರ? ಅಭಿಮಾನಿಗಳಿಗೆ ಏನಿದೆ ಭರ್ಜರಿ ಆಫರ್ ಅಂದ್ರಾ? ಇಲ್ಲಿದೆ ಓದಿ ಈ ಬಗ್ಗೆ ಫುಲ್ ಡಿಟೇಲ್ಸ್…

ಕೆಜಿಎಫ್‌ ಚಾಪ್ಟರ್ 2

ಕೆಜಿಎಫ್‌ ಚಾಪ್ಟರ್ 2

  • Share this:
ಬರೀ ಕರ್ನಾಟಕ (Karnataka) ಅಥವಾ ದೇಶವಷ್ಟೇ ಅಲ್ಲ, ವಿಶ್ವದೆಲ್ಲೆಡೆ ‘ಕೆಜಿಎಫ್‌ ಚಾಪ್ಟರ್ 2’ (KGF Chapter 2) ಕ್ರೇಜ್ (Craze) ಜೋರಾಗುತ್ತಿದೆ. ಮೊನ್ನೆ ಮೊನ್ನೆಯಷ್ಟೇ ರಿಲೀಸ್ ಆಗಿರುವ ಚಿತ್ರದ ಮೊದಲ ರಿಲಿಕಲ್ ವಿಡಿಯೋ ಸಾಂಗ್ (Lyrical Video Song) ಅಂತೂ ಧೂಳೆಬ್ಬಿಸುತ್ತಾ ಇದೆ. ಇದೇ ಮಾರ್ಚ್ 27ರಂದು ಟ್ರೇಲರ್‌ (Trailor) ಕೂಡ ರಿಲೀಸ್ ಆಗಲಿದೆ. ಟ್ರೇಲರ್ ನೋಡಿ ಕಣ್ತುಂಬಿಸಿಕೊಂಡು, ಸಿನಿಮಾ (Cinema) ವೀಕ್ಷಿಸಲು ಅಭಿಮಾನಿಗಳಂತೂ (Fans) ತುದಿಗಾಲಲ್ಲಿ ಕಾಯುತ್ತಿದ್ದಾರೆ. ಇನ್ನು ಮುಂದಿನ ತಿಂಗಳು ಅಂದರೆ ಏಪ್ರಿಲ್ 14ರಂದು ವಿಶ್ವದಾದ್ಯಂತ ಅಬ್ಬರಿಸಲು ‘ರಾಕಿಭಾಯ್’ ಸಜ್ಜಾಗಿದ್ದಾನೆ. ಈ ನಡುವೆ ಚಿತ್ರದ ಪ್ರಚಾರಕ್ಕೆ (Pramotion) ಚಿತ್ರತಂಡ ಮುಂದಾಗಿದೆ. ಅಭಿಮಾನಿಗಳನ್ನು ಆಕರ್ಷಿಸಿ, ಅವರನ್ನು ಚಿತ್ರದ ಪ್ರಚಾರಕ್ಕೆ ಬಳಸಿಕೊಂಡು, ಅವರಿಗೆ ಭರ್ಜರಿ ಆಫರ್ (Offer) ನೀಡಲು ಹೊಂಬಾಳೆ ಫಿಲ್ಮ್ಸ್ (Hombale Films) ಮುಂದಾಗಿದೆ. ಹಾಗಿದ್ರೆ ಏನಪ್ಪಾ ಅದು ಹೊಸ ಪ್ರಚಾರ ತಂತ್ರ? ಅಭಿಮಾನಿಗಳಿಗೆ ಏನಿದೆ ಭರ್ಜರಿ ಆಫರ್ ಅಂದ್ರಾ? ಇಲ್ಲಿದೆ ಓದಿ ಈ ಬಗ್ಗೆ ಫುಲ್ ಡಿಟೇಲ್ಸ್…

ಸಿನಿಮಾ ಪ್ರಚಾರಕ್ಕೆ ಹೊಸ ತಂತ್ರ

‘ಕೆಜಿಎಫ್ 2’ ಏಪ್ರಿಲ್ 14ರಂದು ವಿಶ್ವಾದ್ಯಂತ ರಿಲೀಸ್ ಆಗುವುದು ಪಕ್ಕಾ ಆಗಿದೆ. ಕೆಜಿಎಫ್ ಚಾಪ್ಟರ್ 1 ಗಿಂತ ಡಬಲ್ ನಿರೀಕ್ಷೆ ಈ ಸಿನಿಮಾದ ಮೇಲಿದೆ. ಇದೀಗ ಚಿತ್ರದ ಕೊನೆಯ ಹಂತದ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿರುವ ಚಿತ್ರತಂಡ, ಅಭಿಮಾನಿಗಳನ್ನೂ ಪ್ರಚಾರಕ್ಕೆ ಬಳಸಿಕೊಂಡು, ಅವರ ಮೂಲಕವೂ ಸಿನಿಮಾ ಪ್ರಚಾರ ಮಾಡಿಸಲು ಪ್ಲಾನ್ ಮಾಡಿದೆ.

ಅಭಿಮಾನಿಗಳು ರಚಿಸಬಹುದು ‘ರಾಕಿಭಾಯ್’ ಕಲಾಕೃತಿ

ಹೌದು, ನೀವು ಕಲಾಕಾರರಾಗಿದ್ದರೆ ಕೆಜಿಎಫ್ 2 ಟೀಂ ನಿಮಗೊಂದು ಭರ್ಜರಿ ಆಫರ್ ನೀಡಿದೆ. ಚಿತ್ರ ಕಲಾವಿದರು, ಗ್ರಾಫಿಕ್ಸ್ ಡಿಸೈನ್​ಗಳಲ್ಲಿ ಆಸಕ್ತಿಯುಳ್ಳವರು ತಾವು ರಚಿಸಿದ ‘ರಾಕಿ ಭಾಯ್’ ಕಲಾಕೃತಿಗಳನ್ನು ಹೊಂಬಾಳೆ ಫಿಲ್ಮ್ಸ್ ಜತೆ ಹಂಚಿಕೊಳ್ಳಬಹುದು. ಅದು ಚಿತ್ರತಂಡ ವಿಶ್ವಾದ್ಯಂತ ನಡೆಸಲಿರುವ ಪ್ರಚಾರದ ಭಾಗವಾಗಲಿದೆ.

ಇದನ್ನೂ ಓದಿ: KGF-2: ಇಂದೇ ಅಪ್ಪಳಿಸಿದ 'ತೂಫಾನ್', ಧೂಳೆಬ್ಬಿಸುತ್ತಿದೆ 'ಕೆಜಿಎಫ್‌ 2' ಫಸ್ಟ್ Lyrical Song

ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಟ್ವೀಟ್

ಈ ಕುರಿತಂತೆ ಹೊಂಬಾಳೆ ಫಿಲ್ಮ್ಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ‘‘ಕೆಜಿಎಫ್ 1 ರಿಲೀಸ್ ಆಗಿ ಮೂರು ವರ್ಷವಾಗಿದ್ದು, ನಮಗೆ ಸಿಕ್ಕ ಪ್ರೀತಿಗೆ ನಿಮಗೆ ಧನ್ಯವಾದಗಳು. ಇದು ಕೆಜಿಎಫ್​ 2ರ ಪ್ರಯಾಣವನ್ನು ಮತ್ತಷ್ಟು ವಿಶೇಷವಾಗಿಸಿದೆ. ಈ ಚಿತ್ರವು ನಿಮ್ಮೆಲ್ಲರದ್ದು” ಅಂತ ಟ್ವೀಟ್ ಮಾಡಲಾಗಿದೆ.

ಇದು ಭಾರತೀಯ ಚಿತ್ರರಂಗದಲ್ಲೇ ಹೊಸ ಪ್ರಯತ್ನ

“ಭಾರತೀಯ ಸಿನಿಮಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಭಿಮಾನಿ ಕಲಾವಿದರು ರಚಿಸಿದ ಕಲಾಕೃತಿಗಳನ್ನು ಇಟ್ಟುಕೊಂಡು ನಾವು ಪ್ರಚಾರ ನಡೆಸಲಿದ್ದೇವೆ” ಅಂತ ಹೊಂಬಾಳೆ ಫಿಲ್ಮ್ಸ್ ಹೇಳಿದೆ. .ಇಂದಿನಿಂದ ಆರಂಭಿಸಿ.. ನೀವು ರಚಿಸಿದ ರಾಕಿ ಭಾಯ್ ಕಲಾಕೃತಿಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಅದು ಚಿತ್ರತಂಡದ ಮುಖ್ಯ ಪ್ರಚಾರದಲ್ಲಿ ಜತೆಯಾಗಲಿದೆ. ‘ಚಿತ್ರವು ಅಭಿಮಾನಿಗಳ ಹೊರತಾಗಿ ಏನೂ ಅಲ್ಲ ಮತ್ತು ಇದರಿಂದ ರಾಕಿ ಭಾಯ್​ ಅನ್ನು ಜಗತ್ತಿನ ನಕಾಶೆಯಲ್ಲಿ ಗುರುತಿಸಲು ಸಹಾಯಕವಾಗುತ್ತದೆ. ಕಾರಣ, ರಾಕಿ ಭಾಯ್​ಗೆ ಬೇಕಿರುವುದು ‘ದುನಿಯಾ’’’ ಅಂತ ಹೊಂಬಾಳೆ ಫಿಲ್ಮ್ಸ್ ಹೇಳಿಕೊಂಡಿದೆ.ಏಪ್ರಿಲ್​ 13ಕ್ಕೆ ತಮಿಳು ಬೀಸ್ಟ್ಸಿನಿಮಾ ರಿಲೀಸ್​!

ಕೆಜಿಎಫ್​ ಸಿನಿಮಾ ಮೂಲಕ ಯಶ್​ ಮಾಡಿರುವ ದಾಖಲೆಗಳ ಬಳಿ ಬರಲು ಅದೆಷ್ಟೋ ಸಿನಿಮಾಗಳು ಪ್ರಯತ್ನ ನಡೆಸುತ್ತಲೇ ಇದೆ. ಕೆಜಿಎಫ್​ ಚಾಪ್ಟರ್​ 2 ‘ ಸಿನಿಮಾ ಏಪ್ರಿಲ್​ 14ಕ್ಕೆ ಇಡಿ ವಿಶ್ವದಾದ್ಯಂತ ರಿಲೀಸ್​ ಆಗುತ್ತಿರುವುದು ಗೊತ್ತೆ ಇದೆ. ಇದೀಗ ತಮಿಳು ನಟ ವಿಜಯ್​ ಅಭಿನಯದ ‘ಬೀಸ್ಟ್​’ ಸಿನಿಮಾ ಕೂಡ ಏಪ್ರಿಲ್​ 13ಕ್ಕೆ ತೆರೆ  ಬರುವುದಾಗಿ ಚಿತ್ರತಂಡ ಅನೌನ್ಸ್​ ಮಾಡಿದೆ. ವಿಜಯ್ ಸಿನಿಮಾ ‘ಕೆಜಿಎಫ್ 2’ ಜೊತೆಗೆ ಅಖಾಡಕ್ಕೆ ಇಳಿಯಲು ಸಜ್ಜಾಗಿದೆ.

ಇದನ್ನೂ ಓದಿ: KGF 2 v/s Beast: ಬ್ಯಾಡ ಬ್ಯಾಡ ಅಂದ್ರೂ ಮಾತು ಕೇಳದ ವಿಜಯ್​.. ರಾಕಿಭಾಯ್​ಗೆ ಸವಾಲ್​ ಹಾಕಿಯೇ ಬಿಟ್ಟ `ಬೀಸ್ಟ್’​!

ರಾಕಿಭಾಯ್ಎದುರು ತೊಡೆ ತಟ್ಬೇಡಿ ಎಂದ ಫ್ಯಾನ್ಸ್​!

‘ಕೆಜಿಎಫ್​ 2’ ತಮಿಳಿಗೂ ಡಬ್​ ಆಗಿ ತೆರೆಕಾಣುತ್ತಿದೆ. ಒಂದೊಮ್ಮೆ ಯಾವುದೇ ದೊಡ್ಡ ಸಿನಿಮಾಗಳು ರಿಲೀಸ್​ ಆಗದೇ ಇದ್ದರೆ ಈ ಚಿತ್ರದ ಕಮಾಯಿ ಹೆಚ್ಚಲಿದೆ. ಇದಕ್ಕೆ ತಡೆ ನೀಡಬೇಕು ಎಂದು ಪರಭಾಷಿಗರು ಪ್ಲ್ಯಾನ್​ ರೂಪಿಸಿದಂತಿದೆ. ಈ ಕಾರಣಕ್ಕೆ ಕಾಲಿವುಡ್​ನಿಂದ ‘ಬೀಸ್ಟ್​’ ಚಿತ್ರವನ್ನು ಸ್ಪರ್ಧೆಗೆ ಇಳಿಸಲು ಪ್ಲ್ಯಾನ್​ ಮಾಡಿದ್ದಾರೆ ಎನ್ನಲಾಗುತ್ತಿದೆ. ‘ಪ್ಲೀಸ್​ ರಾಕಿ ಬಾಯ್​ ಎದುರು ತೊಡೆ ತಟ್ಬೇಡಿ ಎಂದು ನೆಟ್ಟಿಗರು ಬೀಸ್ಟ್​ ಚಿತ್ರತಂಡದವರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
Published by:Annappa Achari
First published: