'ಕೆ.ಜಿ.ಎಫ್- ಚಾಪ್ಟರ್ 2' ಚಿತ್ರದ ಚಿತ್ರೀಕರಣ ಎಲ್ಲೀವರೆಗೆ ಬಂತು ? ಚಿತ್ರೀಕರಣ ಎಲ್ಲೆಲ್ಲಿ ನಡೀತಿದೆ ? 'ಚಾಪ್ಟರ್ 1'ರ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ ಮಾಡಿರುವ ಮಾಸ್ಟರ್ ಪ್ಲ್ಯಾನ್ ಏನು ? ರಾಕಿಂಗ್ ಸ್ಟಾರ್ ಪಾತ್ರ ಸೀಕ್ವಲ್‍ನಲ್ಲಿ ವಿಭಿನ್ನವಾಗಿರುತ್ತಾ ? ಈ ಎಲ್ಲ ಪ್ರಶ್ನೆಗಳಿಗೂ ಮುಂದೆ ಇದೆ ಉತ್ತರ.
'ಕೆ.ಜಿಎಫ್' ಕನ್ನಡ ಚಿತ್ರರಂಗದ ಪತಾಕೆಯನ್ನು ರಾಜ್ಯದ ಗಡಿ ದಾಟಿಸಿ, ದೇಶದಾದ್ಯಂತ ಗೆಲುವಿನ ಗುರಿ ಮುಟ್ಟಿಸಿದ ಮಾಸ್ಟರ್ ಪೀಸ್ ಸಿನಿಮಾ. ಇಂತಹ 'ಕೆಜಿಎಫ್- ಚಾಪ್ಟರ್ 1' ಮೂಲಕ, ಸ್ಯಾಂಡಲ್‍ವುಡ್‍ನ ರಾಕಿಂಗ್ ಸ್ಟಾರ್ ನ್ಯಾಷನಲ್ ಸ್ಟಾರ್ ಆಗಿ ಶೈನ್ ಆಗಿದ್ದು. ಇನ್ನು 100 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಚಿತ್ರ ಅನ್ನೋ ಹೆಗ್ಗಳಿಕೆಯೂ ಕೋಲಾರ್ ಗೋಲ್ಡ್ ಫೀಲ್ಡ್ಸ್ಗೆ ಸಲ್ಲುತ್ತದೆ. ಅಂದಹಾಗೆ ಕನ್ನಡದಲ್ಲೇ 'ಕೆ.ಜಿ.ಎಫ್' 140 ಕೋಟಿ ರೂಪಾಯಿ ಬಾಚಿಕೊಂಡಿದ್ದು, ಹಿಂದಿ, ತಮಿಳು, ತೆಲುಗು ಮಲಯಾಳಂ ವರ್ಷನ್‍ಗಳನ್ನೂ ಸೇರಿಸಿದ್ರೆ ಗಳಿಕೆ 250 ಕೋಟಿ ರೂಪಾಯಿ ದಾಟುತ್ತೆ.
![KGF Movie Shooting set]()
'ಕೆಜಿಎಫ್ ಚಾಪ್ಟರ್-1'ರ ಸಿನಿಮಾ ಸೆಟ್
'ಚಾಪ್ಟರ್ 1' ರ ಯಶಸ್ಸಿನ ಖುಷಿಯಲ್ಲೇ ಚಿತ್ರತಂಡ ಕೆಲ ತಿಂಗಳ ಹಿಂದಷ್ಟೇ 'ಚಾಪ್ಟರ್- 2' ಪೂಜೆ ನೆರವೇರಿಸಿತು. ಆಡಿಷನ್ಸ್ ಮಾಡಿ ಹೊಸ ಪಾತ್ರಗಳಿಗೆ ಪ್ರತಿಭೆಗಳನ್ನು ಆರಿಸಿಕೊಂಡು, ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡು, ಟೆಸ್ಟ್ ಶೂಟ್ ಕೂಡ ಪ್ರಾರಂಭಿಸಲಾಯ್ತು. ಇದೇ ತಿಂಗಳ 6ರಿಂದ ರಾಕಿ ಭಾಯ್ ಯಶ್ ಕೂಡ ಚಿತ್ರತಂಡ ಸೇರಿಕೊಂಡಿದ್ದಾರೆ. ಕಳೆದ ಒಂದು ವಾರದಿಂದ ಮೈಸೂರಿನಲ್ಲಿ ನಡೆಯುತ್ತಿರುವ ಶೂಟಿಂಗ್‍ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಯಶ್.
350ಕ್ಕೂ ಹೆಚ್ಚು ಮಂದಿ ನಿರ್ಮಿಸ್ತಿದ್ದಾರೆ ಕೆಜಿಎಫ್ ಸೆಟ್ಸ್ : ಮೂರು ಜಾಗಗಳಲ್ಲಿ ನಡೆಯುತ್ತಿದೆ ಚಾಪ್ಟರ್ 2 ಶೂಟಿಂಗ್ !
ಚಾಪ್ಟರ್ ಒಂದಕ್ಕೆ ಕಲಾ ನಿರ್ದೇಶಕರಾಗಿದ್ದ ಶಿವಕುಮಾರ್ ಅವರೇ 'ಚಾಪ್ಟರ್ 2'ಗೂ ಕಲಾನಿರ್ದೇಶಕರಾಗಿದ್ದಾರೆ. ಮೊದಲ ಚಾಪ್ಟರ್ನಲ್ಲಿ ಅವರ ತಂಡ ನಿರ್ಮಿಸಿದ್ದ ಸೈನೈಡ್ ಗುಡ್ಡದ ಬೃಹತ್ ಸೆಟ್‍ಗಳನ್ನು ನೋಡಿ ಪ್ರೇಕ್ಷಕರು ಶಹಬ್ಬಾಸ್ ಎಂದಿದ್ದರು. ಈಗ ಶಿವಕುಮಾರ್ ಮತ್ತು ಟೀಂ ಮೂರು ಜಾಗಗಳಲ್ಲಿ ಬೃಹದಾಕಾರದ ಸೆಟ್‍ಗಳನ್ನು ನಿರ್ಮಿಸುತ್ತಿದ್ದಾರೆ.
ಮೊದಲ ಪಾರ್ಟ್‍ನಲ್ಲಿ 'ಕೆ.ಜಿ.ಎಫ್' ಸ್ಟೋರಿ ಮುಗೀತು, ಇನ್ನು ಸೈನೈಡ್ ಗುಡ್ಡದ ಸಹವಾಸಕ್ಕೆ ಹೋಗಲ್ಲ ಅಂದಿದ್ದ ಚಿತ್ರತಂಡ, ಈಗ 'ಚಾಪ್ಟರ್ 2'ಗಾಗಿ ಮತ್ತೆ ಕೋಲಾರದ ವಿಷಪೂರಿತ ಗುಡ್ಡಕ್ಕೆ ಹೋಗಿದೆ. ಕಳೆದ ಹಲವು ದಿನಗಳಿಂದ ಸೈನೈಡ್ ಗುಡ್ಡದಲ್ಲಿ ಮತ್ತೆ ಬೃಹತ್ ಸೆಟ್‍ಗಳ ನಿರ್ಮಾಣ ಭರದಿಂದ ಸಾಗಿದೆ. ಬರೋಬ್ಬರಿ 150ಕ್ಕೂ ಹೆಚ್ಚು ಮಂದಿ ಕೆಲಸಗಾರರು ಈ ಸೆಟ್‍ಗಳನ್ನು ನಿರ್ಮಿಸುತ್ತಿದ್ದಾರೆ.
![KGF Movie Shooting set]()
ಸೈನೈಡ್ ಹಿಲ್ನಲ್ಲಿ 'ಕೆ.ಜಿ.ಎಫ್ - ಚಾಪ್ಟರ್ 1'ರ ಸಿನಿಮಾ ಸೆಟ್
ಇನ್ನು ಮಿನರ್ವಾ ಮಿಲ್‍ನಲ್ಲೂ ಸಹ ಕೆಲ ಸೆಟ್‍ಗಳನ್ನು ನಿರ್ಮಿಸಲಾಗಿದೆ. ಸುಮಾರು 70 ಮಂದಿ ಕೆಲಸಗಾರರು ಆರ್ಟ್ ಡೈರೆಕ್ಟರ್ ಶಿವಕುಮಾರ್ ನೇತೃತ್ವದಲ್ಲಿ ತರಹೇವಾರಿ ಸೆಟ್‍ಗಳನ್ನು ನಿರ್ಮಿಸುತ್ತಿದ್ದಾರೆ. ಸದ್ಯ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಟೀಂ ಮೈಸೂರಿನಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಿದ್ದು, ಅಲ್ಲೂ ಸುಮಾರು 100 ಮಂದಿ ಸೆಟ್ ಕೆಲಸಗಾರರಿದ್ದಾರೆ ಎನ್ನಲಾಗಿದೆ.
ಹೆಚ್ಚು ಗ್ರಾಫಿಕ್ಸ್ ಬಳಸದೇ ರಿಯಲ್ ಸೆಟ್‍ಗಳಲ್ಲೇ ಸಿನಿಮಾ ಮಾಡುವ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದ ನಿರ್ದೇಶಕ ಪ್ರಶಾಂತ್ ನೀಲ್, 'ಕೆಜಿಎಫ್- ಚಾಪ್ಟರ್ 2'ನಲ್ಲೂ ಅದೇ ರೀತಿ ಸೆಟ್‍ಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಹೀಗಾಗಿಯೇ ಮೂರು ಜಾಗಗಳಲ್ಲಿ ಮುನ್ನೂರೈವತ್ತು ಮಂದಿ ಸೆಟ್ ಕೆಲಸಗಾರರು ಸೆಟ್ ನಿರ್ಮಿಸುತ್ತಿದ್ದು, ಪ್ರತಿ ಹಂತದಲ್ಲೂ ಪ್ರಶಾಂತ್ ನೀಲ್ ಭಾಗಿಯಾಗಿದ್ದಾರೆ.
ಮೊದಲ ಚಾಪ್ಟರ್ಗೆ ಸಿಕ್ಕ ಅದ್ಧೂರಿ ಗೆಲುವು, 'ಕೆ.ಜಿ.ಎಫ್'ನಲ್ಲಿ ಕೆಲಸ ಮಾಡಿದ ಹಾಗೂ ಈಗ 'ಚಾಪ್ಟರ್ 2'ನಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಕಲಾವಿದರು ಹಾಗೂ ತಂತ್ರಜ್ಞರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿಯೇ ಕಥೆ, ಚಿತ್ರಕತೆ, ಕಾಸ್ಟ್ಯೂಮ್ಸ್ ಸೇರಿದಂತೆ ಖುದ್ದು ಯಶ್ ಕೂಡ ಚಿತ್ರದ ಪ್ರತಿ ಹಂತದಲ್ಲೂ ಗಮನಹರಿಸುತ್ತಿದ್ದಾರೆ.
ಇದನ್ನೂ ಓದಿ: 'ಸಾಹೋ' ಮೇಕಿಂಗ್‍ಗೆ ಜೈ ಎಂದ ಹಾಲಿವುಡ್: ಸೂಪರ್ ಸ್ಟಾರ್ಗಳ ದಾಖಲೆಗಳು ಚಿಂದಿ !
ಈ ಸೀಕ್ವಲ್‍ಅನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ಯುವ ಉತ್ಸಾಹದಲ್ಲಿ ನಿರ್ದೇಶಕರು ಹಗಲು, ಇರುಳೆನ್ನದೆ ಸಿನಿಮಾದಲ್ಲಿ ತೊಡಗಿದ್ದಾರೆ. ಈ ಎಲ್ಲ ಗಮನಗಳನ್ನೂ ಹತ್ತಿರದಿಂದ ಗಮನಿಸುತ್ತಿರುವ ಗಾಂಧಿನಗರದ ಮಂದಿ 'ಕೆಜಿಎಫ್- ಚಾಪ್ಟರ್ 1' ಬಾಲಿವುಡ್ ಮಂದಿಯನ್ನು ಬೆರಗಾಗಿಸಿದರೆ, 'ಚಾಪ್ಟರ್- 2' ಹಾಲಿವುಡ್ ಮಂದಿಗೆ ಸರ್ಪ್ರೈಸ್ ನೀಡೋದ್ರಲ್ಲಿ ಅನುಮಾನವೇ ಇಲ್ಲ ಎನ್ನುತ್ತಿದ್ದಾರೆ.
Photos: ಲವ್ ಯೂ ಆಲಿಯಾ ಖ್ಯಾತಿಯ ನಟಿ ಭೂಮಿಕಾ ಮತ್ತೆ ನಾಯಕಿಯಾಗಿ ರಿಎಂಟ್ರಿ..!