KGF Chapter 2: ಎಂಟು ತಿಂಗಳು ಮೊದಲೇ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಸಿನಿಮಾ ಕೆ.ಜಿ.ಎಫ್​ ಚಾಪ್ಟರ್​ 2​..!

KGF Chapter 2: ಕೆ.ಜಿ.ಎಫ್​ ಚಾಪ್ಟರ್​ 2 ಎಂದ ಕೂಡಲೇ ನೆನಪಾಗೋದು ಈ ಸಿನಿಮಾ ಯಾವಾಗ ತೆರೆ ಕಾಣಲಿದೆ ಅನ್ನೋದು. ಇನ್ನು ಈ ಸಿನಿಮಾದ ಹಾಗೂ ಯಶ್​ ಅಭಿಮಾನಿಗಳು ಸದಾ ದಿನಕ್ಕೆ ಒಮ್ಮೆಯಾದರೂ ಇಂಟರ್​ನೆಟ್​ನಲ್ಲಿ ಈ ಸಿನಿಮಾದ ರಿಲೀಸ್​ ದಿನಾಂಕದ ಕುರಿತು ಹುಟುಕಾಡುತ್ತಲೇ ಇರುತ್ತಾರೆ. ಇಷ್ಟೆಲ್ಲ ಕುತೂಹಲ ಹುಟ್ಟಿಸಿರುವ ಈ ಸಿನಿಮಾದ ರಿಲೀಸ್​ ದಿನಾಂಕ ಈಗ ಬಹಿರಂಗವಾಗಿದೆ. 

Anitha E | news18
Updated:August 21, 2019, 6:14 PM IST
KGF Chapter 2: ಎಂಟು ತಿಂಗಳು ಮೊದಲೇ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಸಿನಿಮಾ ಕೆ.ಜಿ.ಎಫ್​ ಚಾಪ್ಟರ್​ 2​..!
ಕೆ.ಜಿ.ಎಫ್​ ಚಾಪ್ಟರ್​ 2ರಲ್ಲಿ ಯಶ್​
Anitha E | news18
Updated: August 21, 2019, 6:14 PM IST
ಕೇವಲ ಸ್ಯಾಂಡಲ್​ವುಡ್​ ಮಾತ್ರವಲ್ಲ ಇಡೀ ದೇಶವೇ ಎದುರು ನೋಡುತ್ತಿರುವ ಸಿನಿಮಾ 'ಕೆ.ಜಿ.ಎಫ್​ ಚಾಪ್ಟರ್​ 2'. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಚಾಪ್ಟರ್ 1 ಈಗಾಗಲೇ ಜಯಭೇರಿ ಬಾರಿಸಿದ್ದು, ಇದರ ಮುಂದುವರಿದ ಭಾಗಕ್ಕಾಗಿ ಎಲ್ಲರೂ ಕಾತರರಾಗಿದ್ದಾರೆ.

'ಕೆ.ಜಿ.ಎಫ್​ ಚಾಪ್ಟರ್​ 2' ಎಂದ ಕೂಡಲೇ ನೆನಪಾಗೋದು ಈ ಸಿನಿಮಾ ಯಾವಾಗ ತೆರೆ ಕಾಣಲಿದೆ ಅನ್ನೋದು. ಇನ್ನು ಈ ಸಿನಿಮಾದ ಹಾಗೂ ಯಶ್​ ಅಭಿಮಾನಿಗಳು ಸದಾ ದಿನಕ್ಕೆ ಒಮ್ಮೆಯಾದರೂ ಇಂಟರ್​ನೆಟ್​ನಲ್ಲಿ ಈ ಸಿನಿಮಾದ ರಿಲೀಸ್​ ದಿನಾಂಕದ ಕುರಿತು ಹುಡುಕಾಡುತ್ತಲೇ ಇರುತ್ತಾರೆ.

'ಕೆ.ಜಿ.ಎಫ್​ ಚಾಪ್ಟರ್​ 2' ಚಿತ್ರೀಕರಣದಲ್ಲಿ ನಿರ್ದೇಶಕ ಪ್ರಶಾಂತ್​ ನೀಲ್​


ಇಷ್ಟೆಲ್ಲ ಕುತೂಹಲ ಹುಟ್ಟಿಸಿರುವ ಈ ಸಿನಿಮಾದ ರಿಲೀಸ್​ ದಿನಾಂಕ ಈಗ ಬಹಿರಂಗವಾಗಿದೆ. ಈ ಹಿಂದೆ 'ಚಾಪ್ಟರ್​ 2' 2020ರ ಡಿಸೆಂಬರ್​ನಲ್ಲಿ ತೆರೆ ಕಾಣಲಿದೆ ಎಂದು ಪ್ರಕಟಿಸಲಾಗಿತ್ತು. ಆದರೆ ಈಗ ಈ ದಿನಾಂಕ ಇನ್ನೂ ಹಿಂದಕ್ಕೆ ಬಂದಿದೆ. ಅಂದರೆ ಡಿಸೆಂಬರ್​ಗೂ ಮೊದಲೇ ಸಿನಿಮಾ ತೆರೆ ಕಾಣಲಿದೆಯಂತೆ. ಅಂದರೆ 2020ರ ಏಪ್ರಿಲ್​ಗೆ ಚಿತತ್ರ ರಿಲೀಸ್​ ಆಗಲಿದೆ.

ಇದನ್ನೂ ಓದಿ: Kichcha Sudeep: ಕಿಚ್ಚ ಸುದೀಪ್​ ಅಭಿನಯದ ಹೊಸ ಸಿನಿಮಾದ ರಿಲೀಸ್​ ಡೇಟ್​ ಫಿಕ್ಸ್: ನಾಲ್ಕು ಭಾಷೆಗಳಲ್ಲಿ ಅಬ್ಬರಿಸಲಿದ್ದಾನೆ ಸಿಖಂದರ್​​..!

ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದ್ದು, ಅಂದುಕೊಂಡ ಸಮಯಕ್ಕಿಂತ ಮುಂಚಿತವಾಗಿಯೇ ಶೂಟಿಂಗ್​ ಕೊನೆಗೊಳ್ಳಲಿದೆಯಂತೆ. ಇದರಿಂದಾಗಿ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಿಗೆ ಸಾಕಷ್ಟು ಸಮಯ ಸಿಗಲಿದ್ದು, ಬೇಗನೆ ಚಿತ್ರವನ್ನು ತೆರೆ ತರಬಹುದು ಎಂದು ಚಿತ್ರತಂಡದ ಮೂಲಗಳಿಂದ ತಿಳಿದು ಬಂದಿದೆ.

yash sanjay dutt
ಸಂಜಯ್​ ದತ್​-ಯಶ್​

Loading...

ಈ ಹಿಂದೆ ಅಂದರೆ 'ಚಾಪ್ಟರ್​ 1' ಸಿನಿಮಾದ ಚಿತ್ರೀಕರಣದ ಸಮಯದಲ್ಲೇ 'ಚಾಪ್ಟರ್​ 2'ಗೂ ತಕ್ಕಮಟ್ಟಿಗೆ ಶೂಟಿಂಗ್​ ಮಾಡಲಾಗಿತ್ತು. ಬೇಗೆ ಸಿನಿಮಾ ತೆರೆಗೆ ತರಬಹುದು ಎಂದು ಚಿತ್ರತಂಡ ಖುಷಿಯಲ್ಲಿದ್ದರೆ, ಎಂಡು ತಿಂಗಳು ಮೊದಲೇ ಈ ರಾಕಿ ಭಾಯ್​ ಅವರನ್ನು ಕಣ್ತುಂಬಿಕೊಳ್ಳಬಹುದು ಎಂದು ಅಭಿಮಾನಿಗಳು ಹಿಗ್ಗುತ್ತಿದ್ದಾರೆ.

ಇದನ್ನೂ ಓದಿ: Tapsee Pannu: ತಾಪ್ಸಿ ಪನ್ನು ಫೋಟೋಗೆ ಹೀಗ್ಯಾಕೆ ಕಮೆಂಟ್​ ಮಾಡಿದ್ರು ವಿವಾದಿತ ನಿರ್ದೇಶಕ ಅನುರಾಗ್​ ಕಶ್ಯಪ್​..!

ಮೊದಲ ಭಾಗಕ್ಕೆ ಹೋದಲಿಸಿಕೊಂಡರೆ ಮುಂದುವರೆದ ಭಾಗದಲ್ಲಿ ಕತೆ ಮತ್ತಷ್ಟು ರೋಷಕವಾಗಿರಲಿದ್ದು, ಖಡಕ್​ ವಿಲನ್​ ಪಾತ್ರದಲ್ಲಿ ಖಳನಾಯಕ್​ ಸಂಜೂ ಬಾಬಾ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರತಂಡ ಸೇರಿಕೊಂಡಿರುವ ಸಂಜಯ್​ ದತ್​ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.

ಈ ಸಿನಿಮಾದ ಚಿತ್ರೀಕರಣದ ಸೆಟ್​ ಅನ್ನು ಕೆ.ಜಿ.ಎಫ್​ನ  ಸೈನೆಡ್​ ಹಿಲ್ಸ್​, ಮೈಸೂರು ಹಾಗೂ ಮಿನರ್ವ ಮಿಲ್ಸ್​ನಲ್ಲಿ ಹಾಕಲಾಗಿದೆ. ಮೂರು ಕಡೆಗಳಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಆದಷ್ಟು ಬೇಗ ಶೂಟಿಂಗ್​ಗೆ ತೆರೆ ಬೀಳಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

Kangana: 600 ರೂಪಾಯಿ ಸೀರೆ ತೊಟ್ಟ ಕಂಗನಾ: ಫಿದಾ ಆದ ನೆಟ್ಟಿಗರು..!

First published:August 21, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...