ಚಾಪ್ಟರ್-​1 ಅನ್ನು ಮೀರಿಸಲಿದೆ ಕೆ.ಜಿ.ಎಫ್-2: ಅದ್ಧೂರಿ ನರಾಚಿ ಸೆಟ್​ ವಿಡಿಯೋ ವೈರಲ್

K.G.F. Chapter 2: ಕನ್ನಡ ಚಿತ್ರರಂಗದಲ್ಲೇ ಹೊಸ ಇತಿಹಾಸ ಸೃಷ್ಟಿಸಿದ ಕೆ.ಜಿ.ಎಫ್ ಚಿತ್ರದ ಎರಡನೇ ಭಾಗದ ಕೆಲಸಗಳು ಭರ್ಜರಿಯಾಗಿ ನಡೆಯುತ್ತಿದ್ದು, ಖಡಕ್ ಲುಕ್, ಜಬರ್ದಸ್ತ್​ ಡೈಲಾಗ್​ಗಳ ಮೂಲಕ ವಿಶ್ವದಾದ್ಯಂತ ಆರ್ಭಟಿಸಿದ್ದ ರಾಕಿ ಭಾಯ್​ಯ ರಿ-ಎಂಟ್ರಿಗೆ ಭರದ ಸಿದ್ಧತೆಗಳು ನಡೆಯುತ್ತಿದೆ.

zahir | news18
Updated:July 24, 2019, 6:57 PM IST
ಚಾಪ್ಟರ್-​1 ಅನ್ನು ಮೀರಿಸಲಿದೆ ಕೆ.ಜಿ.ಎಫ್-2: ಅದ್ಧೂರಿ ನರಾಚಿ ಸೆಟ್​ ವಿಡಿಯೋ ವೈರಲ್
ಕೆ.ಜಿ.ಎಫ್​ ಚಾಪ್ಟರ್​ 2ನಲ್ಲಿ ಯಶ್​
zahir | news18
Updated: July 24, 2019, 6:57 PM IST
ವಿಶ್ವದಾದ್ಯಂತ ಹೊಸ ಕ್ರೇಜ್ ಹುಟ್ಟುಹಾಕಿರುವ 'ಕೆ.ಜಿ.ಎಫ್' ಚಿತ್ರದ 2ನೇ ಭಾಗದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಮೊದಲ ಚಾಪ್ಟರ್​ನಲ್ಲೇ ಸ್ಯಾಂಡಲ್​ವುಡ್ ಕೀರ್ತಿಯನ್ನು ಸಾಗರಾದಚೆ ತಲುಪಿಸಿದ್ದ ರಾಕಿ ಭಾಯ್​ಗಾಗಿ ಈ ಬಾರಿ ಮತ್ತಷ್ಟು ಬಂಡವಾಳ ಹೂಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಅದಕ್ಕಾಗಿ ಭರ್ಜರಿ ಸೆಟ್​ವೊಂದರ ನಿರ್ಮಾಣಕ್ಕೆ ಚಿತ್ರತಂಡ ಕೈ ಹಾಕಿದ್ದು, ಚಾಪ್ಟರ್​-1 ಸೆಟ್​ ಅನ್ನು ಮೀರಿಸುವಂತೆ ಇದರ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಕೆ.ಜಿ.ಎಫ್1 ಸೆಟ್


ಮೊದಲ ಭಾಗದಲ್ಲಿ ಕೆ.ಜಿ.ಎಫ್ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದ ಪ್ರಶಾಂತ್ ನೀಲ್ ಮತ್ತು ತಂಡ ಈ ಬಾರಿ ಬೆಂಗಳೂರಿನಲ್ಲೇ ಅದ್ಧೂರಿ ಸೆಟ್​ ನಿರ್ಮಿಸಲು ಮುಂದಾಗಿದೆ. ಮಿನರ್ವ ಮಿಲ್​ನಲ್ಲಿ ನರಾಚಿ ಸೆಟ್​ ಹಾಕಲಾಗುತ್ತಿದ್ದು, ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೆ.ಜಿ.ಎಫ್1 ಸೆಟ್


ಸ್ಯಾಂಡಲ್​ವುಡ್​ನಲ್ಲಿ ಹಿಂದೆಂದು ಕಂಡರಿಯದ ರೀತಿಯಲ್ಲಿ ಬೆಳಕಿನ ದೃಶ್ಯ ವೈಭವವನ್ನು ತೋರಿಸಿದ್ದ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಕಲಾನಿರ್ದೇಶಕರ ಮುತುವರ್ಜಿಯೊಂದಿಗೆ ನೂರಾರು ಕಾರ್ಮಿಕರು ಸೆಟ್​ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. 80ರ ದಶಕದ ಚಿತ್ರಣವನ್ನು ಮರು ಸೃಷ್ಟಿಸಲು ಈ ಸೆಟ್ ನಿರ್ಮಿಸಲಾಗುತ್ತಿದ್ದು, ದುರಾಸೆ ಮತ್ತು ಹಣದ ಹಪಾಹಪಿಯನ್ನು ಬಿಂಬಿಸುವ 'ನರಾಚಿ' ಪದವನ್ನೇ ಕೆ.ಜಿ.ಎಫ್ ಗಣಿಗಾರಿಕೆ ಕಂಪನಿಗೆ ಇಲ್ಲೂ ಬಳಸಲಾಗಿದೆ.

ಕೆ.ಜಿ.ಎಫ್2 ಸೆಟ್


ಕನ್ನಡ ಚಿತ್ರರಂಗದಲ್ಲೇ ಹೊಸ ಇತಿಹಾಸ ಸೃಷ್ಟಿಸಿದ 'ಕೆ.ಜಿ.ಎಫ್' ಚಿತ್ರದ ಎರಡನೇ ಭಾಗದ ಕೆಲಸಗಳು ಭರ್ಜರಿಯಾಗಿ ನಡೆಯುತ್ತಿದ್ದು, ಖಡಕ್ ಲುಕ್, ಜಬರ್ದಸ್ತ್​ ಡೈಲಾಗ್​ಗಳ ಮೂಲಕ ವಿಶ್ವದಾದ್ಯಂತ ಆರ್ಭಟಿಸಿದ್ದ ರಾಕಿ ಭಾಯ್​ಯ ರಿ-ಎಂಟ್ರಿಗೆ ಭರದ ಸಿದ್ಧತೆಗಳು ನಡೆಯುತ್ತಿದೆ.

ಕೆ.ಜಿ.ಎಫ್2 ಸೆಟ್


ಇನ್ನು ಭಾಗ ಎರಡರಲ್ಲೂ ರಾಕಿ ಭಾಯ್​ ಮತ್ತಷ್ಟು ಖಡಕ್​ ಆಗಿ ಕಾಣಿಸಲಿದ್ದಾರೆ ಎಂಬುದರ ಸೂಚನೆಯನ್ನು ಯಶ್ ನೀಡಿದ್ದಾರೆ. ಸ್ವತಃ ರಾಕಿಂಗ್ ಸ್ಟಾರ್​ ಕ್ಲಿಕ್ಕಿಸಿರುವ ಫೋಟೋವೊಂದು ಕೆಲ ದಿನಗಳ ಹಿಂದೆ ಭಾರೀ ವೈರಲ್ ಆಗಿತ್ತು. 
View this post on Instagram
 

Yash from #kgfchapter2 🤟 . .#kgf #kgfmovie #kgf2018 #tollywood #telugucinema #telugumovie


A post shared by Sandesam (@sandesamweb) on


ಈ ಹಿಂದಿನ ಅವತಾರಕ್ಕಿಂತ ಮತ್ತಷ್ಟು ಭಯಾನಕವಾಗಿರುವ ಯಶ್ ಅವರ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದರು. ಇದೇ ಲುಕ್​ನಲ್ಲಿ ರಾಕಿ ಭಾಯ್​ ಕಾಣಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕೆ.ಜಿ.ಎಫ್1 ಸೆಟ್​ನಲ್ಲಿ ನಿರ್ದೇಶಕ ಪ್ರಶಾಂತ್ ನೀಲ್


ಹಾಗೆಯೇ ಎರಡನೇ ಭಾಗದಲ್ಲಿ ಯಶ್ ಎದುರಾಳಿಯಾಗಿ ಬಾಲಿವುಡ್ ನಟ ಸಂಜಯ್ ದತ್ ಕಾಣಿಸಿಕೊಳ್ಳಲಿದ್ದು, ಇಬ್ಬರ ಕಾಂಬಿನೇಷನ್​ನಿಂದಾಗಿ ಈ ಬಾರಿ ಬಾಕ್ಸಾಫೀಸ್​ ಧೂಳೀಪಟವಾಗುವುದು ಪಕ್ಕಾ ಎನ್ನುತ್ತಿದೆ ಗಾಂಧಿನಗರ.

First published:July 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...