KGF 2: ಮೆಟಾವರ್ಸ್​ನಲ್ಲೂ ರಾಕಿ ಭಾಯ್​ದೇ ಹವಾ.. ಇಡೀ ವಿಶ್ವದಲ್ಲೇ ಹೊಸ ದಾಖಲೆ ಬರೆದ ಕೆಜಿಎಫ್​​ವರ್ಸ್!

ಹೌದು, ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮೆಟಾವರ್ಸ್‌ನಲ್ಲಿ ಕೆಜಿಎಫರ್ಸ್​ ಬರುತ್ತಿದೆ. ಸಾಮಾಜಿಕ ಜಾಲತಾಣ ಮತ್ತು ಗೇಮಿಂಗ್ ನಂತರ ಸಿನಿಮಾಗಳೂ ಈಗ ಮೆಟಾವರ್ಸ್ ತಲುಪಿವೆ. ಮೆಟಾವರ್ಸ್​​​​​ ಇದು ಇಡೀ ಜಗತ್ತಿಗೇ ವಿಚಿತ್ರ,ವಿಶಿಷ್ಠ, ಹುಚ್ಚು ಹಿಡಿಸಿರುವ ಟೆಕ್ನಾಲಜಿ.

ರಾಕಿಂಗ್ ಸ್ಟಾರ್​ ಯಶ್​

ರಾಕಿಂಗ್ ಸ್ಟಾರ್​ ಯಶ್​

  • Share this:
ಕೆಜಿಎಫ್​ 2(KGF 2) ಸಿನಿಮಾವನ್ನು ನೋಡಲು ಇಡಿ ವಿಶ್ವವೇ ಎದುರು ನೋಡುತ್ತಿದೆ. ವಿಶ್ವವ್ಯಾಪಿ ಈಗ ಪ್ರಶಾಂತ್​​ ನೀಲ್(Prashanth Neel) ಸೃಷ್ಟಿಸಿದ ನರಾಚಿ ಲೋಕದ್ದೆ ಸದ್ದು. ಕನ್ನಡ (Kannada), ತಮಿಳು(Tamil), ತೆಲುಗು(Telugu), ಹಿಂದಿ(Hindi), ಮಲೆಯಾಳಂ(Malayalam) ಭಾಷೆಯಲ್ಲಿ ನಿನ್ನೆ ರಿಲೀಸ್ ಆದ ಕೆಜಿಎಫ್ ಚಾಪ್ಟರ್ 2 ಟ್ರೈಲರ್, ಚಿತ್ರ ರಂಗದಲ್ಲಿ ಹೊಸ ಅಧ್ಯಾಯಕ್ಕೆ ಮುನ್ನಡಿ ಬರೆಯುವ ಸೂಚನೆ ಕೊಟ್ಟಿದೆ. ರಿಲೀಸ್ ಗಳಿಗೆಯಿಂದಲೂ ಯೂಟ್ಯೂಬ್​(YouTube)ನಲ್ಲಿ ಸೌಂಡ್ ಮಾಡ್ತಿರುವ ಟ್ರೈಲರ್  ನಂ 1 ಟ್ರೆಂಡಿಂಗ್ ನಲ್ಲಿದೆ‌. ಅಲ್ಲದೆ ರಿಲೀಸ್ ಆದ ಎಲ್ಲಾ ಭಾಷೆಯಲ್ಲೂ ಚಾಪ್ಟರ್ 2 ಮಿಲಿಯನ್ ಗಟ್ಟೆ ವ್ಯೂವ್ಸ್​ ಕಂಡು ಹೊಸ ಸೆನ್ಸೇಷನ್‌(New Sensation) ಕ್ರಿಯೇಟ್ ಮಾಡಿದೆ. ಇದೀಗ ಮತ್ತೊಂದು ಹೊಸ ದಾಖಲೆಯನ್ನು ಸೃಷ್ಟಿ ಮಾಡಲು ಕೆಜಿಎಫ್​ ಸಿನಿಮಾ ತಂಡ ಅಣಿಯಾಗಿದೆ. ಹೌದು ಈ ಹಿಂದೆ ಯಾರು ಮಾಡಿರದ ದಾಖಲೆಯನ್ನು ಕೆಜಿಎಫ್​ ತಂಡ ಮಾಡುತ್ತಿದೆ. ಇದು ಇಡೀ ಭಾರತವೇ ಹೆಮ್ಮೆ ಪಡುವ ಸುದ್ದಿ. 

ಮೆಟಾವರ್ಸ್​​ನಲ್ಲಿ ಬರ್ತಿದೆ ಕೆಜಿಎಫ್​​ವರ್ಸ್

ಹೌದು, ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮೆಟಾವರ್ಸ್‌ನಲ್ಲಿ ಕೆಜಿಎಫರ್ಸ್​ ಬರುತ್ತಿದೆ. ಸಾಮಾಜಿಕ ಜಾಲತಾಣ ಮತ್ತು ಗೇಮಿಂಗ್ ನಂತರ ಸಿನಿಮಾಗಳೂ ಈಗ ಮೆಟಾವರ್ಸ್ ತಲುಪಿವೆ. ಮೆಟಾವರ್ಸ್​​​​​ ಇದು ಇಡೀ ಜಗತ್ತಿಗೇ ವಿಚಿತ್ರ,ವಿಶಿಷ್ಠ, ಹುಚ್ಚು ಹಿಡಿಸಿರುವ ಟೆಕ್ನಾಲಜಿ. ಅಷ್ಟಕ್ಕೂ ಮೆಟಾವರ್ಸ್​​ ಅಂದ್ರೆ ಡಿಜಿಟಲ್ ಜಗತ್ತು. ಕಲ್ಪನೆಯನ್ನೂ ಮಾಡಿಕೊಳ್ಳಲು ಆಗದಂಥ ಟೆಕ್ನಾಲಜಿ ಇದು.ಮಫೇಸ್​​ಬುಕ್​ ಕಂಪನಿಯೇ ತನ್ನ ಹೆಸರನ್ನು ಮೆಟಾ ಅಂತಾ ಬದಲಾಯಿಸಿಕೊಡಿದೆ.

ಮೆಟಾ ಜಗತ್ತಿಗೆ ಎಂಟ್ರಿಯಾದ ಕೆಜಿಎಫ್​!

ಮುಂಬರೋ ದಶಕದಲ್ಲಿ ಮೆಟಾವರ್ಸ್​​ಗಾಗಿಯೇ ಮುಡಿಪಿಟ್ಟಿದೆ. ಇಂಥ ಮೆಟಾ ಜಗತ್ತಿಗೆ ಕೆಜಿಎಫ್​ ಎಂಟ್ರಿಕೊಟ್ಟಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಸಿನಿಮಾವೊಂದು ಮೆಟಾ ಜಗತ್ತಿಗೆ ಎಂಟ್ರಿಯಾದ ದಾಖಲೆಯನ್ನು ಕೆಜಿಎಫ್ ಬರೆದಿದೆ. ಹೌದು.. ಮೆಟಾವರ್ಸ್​​ನಲ್ಲಿ ಕೆಜಿಎಫ್​​ವರ್ಸ್ ಬರ್ತಿದೆ. ಕೆಜಿಎಫ್​ವರ್ಸ್​ ಈಗ ರಾಕಿಭಾಯ್​ ವರ್ಲ್ಡ್​ ಎಂದು ​ಹೊಂಬಾಳೆ ಪ್ರೊಡಕ್ಷನ್ ಹೇಳಿದೆ. ಇಂದು ಈ ಬಗ್ಗೆ ಅಧಿಕೃತ ಮಾಹಿತಿ ಕೊಟ್ಟಿದೆ ಚಿತ್ರತಂಡ. ಕೆಜಿಎಫ್​ರ್ಸ್​ ಬಗ್ಗೆ ರಾಕಿಂಗ್​ ಸ್ಟಾರ್​ ಯಶ್​ ಸಹ ವಿಡಿಯೋ ಪೋಸ್ಟ್​ ಮಾಡಿದ್ದಾರೆ. ಏಪ್ರಿಲ್​ 7ರಂದು ಮೆಟಾವರ್ಸ್​ನಲ್ಲಿ ರಾಕಿ ಭಾಯ್​ ಹವಾ ಶುರುವಾಗಲಿದೆ.








View this post on Instagram






A post shared by Yash (@thenameisyash)





ಇದನ್ನೂ ಓದಿ:ಸ್ಟಾರ್​​​ ವಾರ್​ ಯಾಕೆ, ನಾವೂ ಒಂದೇ ಇಲ್ಲಿ ಎಂಬ ಸಂದೇಶ! ಕೆಜಿಎಫ್​ 2 vs ಬೀಸ್ಟ್​​ ಗುದ್ದಾಟ ಅಂತ್ಯ

ಮೆಟಾವರ್ಸ್​ ಎಂದರೇನು?

ಇದು ವರ್ಚುವಲ್ ರಿಯಾಲಿಟಿ (VR) ನ ಆವೃತ್ತಿಯಂತೆ ಕಾಣಿಸಬಹುದು. ಆದರೆ ಕೆಲವರು ಮೆಟಾವರ್ಸ್ ಇಂಟರ್ನೆಟ್‌ನ ಭವಿಷ್ಯವಾಗಿರಬಹುದು ಎಂದು ಭಾವಿಸುತ್ತಾರೆ. ವಾಸ್ತವವಾಗಿ, 1980ರ ದಶಕದ ಮೊದಲ ಮೊಬೈಲ್ ಫೋನ್‌ಗಳಿಂದ ಆಧುನಿಕ ಸ್ಮಾರ್ಟ್‌ಫೋನ್‌ಗಳಿಗೆ ಹೇಗೆ ಬದಲಾಯ್ತೋ ಅದೇ ರೀತಿ VRಗೆ ಆಗಬಹುದು ಎಂಬುದು ನಂಬಿಕೆ. ಕಂಪ್ಯೂಟರ್‌ನಲ್ಲಿರುವ ಬದಲು, ಮೆಟಾವರ್ಸ್‌ನಲ್ಲಿ ನೀವು ಎಲ್ಲಾ ರೀತಿಯ ಡಿಜಿಟಲ್ ಪರಿಸರ ಸಂಪರ್ಕಿಸುವ ವರ್ಚುವಲ್ ಜಗತ್ತನ್ನು ಪ್ರವೇಶಿಸಲು ಕೇವಲ ಹೆಡ್‌ಸೆಟ್ ಬಳಸಬಹುದು.

ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ KGF 2 Trailer​, 24 ಗಂಟೆಯಲ್ಲಿ 109 ಮಿಲಿಯನ್ ವ್ಯೂವ್ಸ್​!

ಗೇಮಿಂಗ್‌ಗಾಗಿ ಹೆಚ್ಚಾಗಿ ಬಳಸಲಾಗುವ ಪ್ರಸ್ತುತ VRಗಿಂತ ಭಿನ್ನವಾಗಿ, ಈ ವರ್ಚುವಲ್ ಪ್ರಪಂಚವನ್ನು ಪ್ರಾಯೋಗಿಕವಾಗಿ ಕೆಲಸ, ಆಟ, ಸಂಗೀತ ಕಚೇರಿಗಳು, ಸಿನಿಮಾ ಪ್ರವಾಸಗಳು, ಅಥವಾ ಹ್ಯಾಂಗ್‌ಔಟ್ - ಹೀಗೆ ಯಾವುದಕ್ಕಾದರೂ ಬಳಸಬಹುದು. ಹೆಚ್ಚಿನ ಜನರು ನೀವು 3D ಅವತಾರವನ್ನು ಹೊಂದಿರುತ್ತೀರಿ ಎಂದು ಊಹಿಸುತ್ತಾರೆ.
Published by:Vasudeva M
First published: