KGF Chapter 2 ನೋಡಿ ಹಣ, ಸಮಯ ವ್ಯರ್ಥ ಎಂದ ನಟ; ಈತನಿಗೇಕೆ ಹೊಟ್ಟೆಕಿಚ್ಚು?

ಆರ್‌ಆರ್‌ಆರ್’ ಬಿಡುಗಡೆಯಾದಾಗಲೂ ಕಮಾಲ್ ಆರ್ ಖಾನ್ ಇದೇ ರೀತಿ ನೆಗೆಟಿವ್ ರಿವ್ಯೂ ಮಾಡಿದ್ದರು.  ಚಿತ್ರತಂಡ ನೀಡಿದ ಬಾಕ್ಸ್ ಆಫೀಸ್ ಲೆಕ್ಕಾಚಾರ ಸುಳ್ಳು ಎಂದು ವಾದಿಸಿದ್ದರು. ಇದೀಗ ಯಶ್ ಅವರ ಕೆಜಿಎಫ್ ಚಾಪ್ಟರ್ 2 ಬಗ್ಗೆ ವಿವಾದ ಹುಟ್ಟು ಹಾಕಿದ್ದಾರೆ.

ಕಮಾಲ್ ಆರ್ ಖಾನ್

ಕಮಾಲ್ ಆರ್ ಖಾನ್

 • Share this:
  ಕೆಜಿಎಫ್ 2 ಸಿನಿಮಾ (KGF Chapter 2) ಮೂರು ಗಂಟೆ ಟಾಪ್ ಕ್ಲಾಸ್ ಟಾರ್ಚರ್. ಸಿನಿಮಾ ನಿರ್ಮಾಣದ ಹೆಸರಿನಲ್ಲಿ ಹಣ ಮತ್ತು ಸಮಯ ವ್ಯರ್ಥ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಗೆದ್ದರೆ ಬಾಲಿವುಡ್‌ನ ಅಂತ್ಯ. ಯಾಕೆಂದರೆ ಬಾಲಿವುಡ್ ಚಿತ್ರಗಳು ಹೀಗಾದರೆ ಅನಾಹುತವಾಗುತ್ತದೆ. ಥೂ ಎಂದು ರೇಟಿಂಗ್ ನೀಡಿ ನಟ, ಸ್ವಯಂ ಘೋಷಿತ ಚಲನಚಿತ್ರ ವಿಮರ್ಶಕ ಕಮಲ್ ಆರ್ ಖಾನ್ (Kamaal R. Khan) ಟ್ವೀಟ್ ಮಾಡಿದ್ದಾರೆ. ದೇಶವೇ ಮೆಚ್ಚಿ ವೀಕ್ಷಿಸುತ್ತಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾಗೆ ಹೀಗೆ ವಿಮರ್ಶೆ ಮಾಡಿರುವ ಕಮಾಲ್. ಆರ್.ಖಾನ್​ವಿರುದ್ಧ ಭರ್ಜರಿ ಆಕ್ರೋಶ ಕೇಳಿಬಂದಿದೆ. ಯಶ್ ಅಭಿಮಾನಿಗಳು (Actor Yash Fans) ಕಮಾಲ್ ಆರ್ ಖಾನ್ ಬಗ್ಗೆ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ.

  ಕಮಾಲ್ ಆರ್ ಖಾನ್ ಇಷ್ಟಕ್ಕೇ ತಮ್ಮ ವ್ಯಂಗ್ಯದ ಮಾತುಗಳನ್ನು ನಿಲ್ಲಿಸಿಲ್ಲ. ‘ಯಶ್ ಬ್ರೋ.. ಕನ್ನಡಕ ತೆಗೆಯದೇ ಒಂದು ಗಂಟೆಯಲ್ಲಿ ರಷ್ಯಾವನ್ನು ಸೋಲಿಸಬಹುದು. ದಯವಿಟ್ಟು ಅದನ್ನು ಮಾಡಿ ಮತ್ತು ಲಕ್ಷಾಂತರ ಉಳಿಸಿ. ‘ಕೆಜಿಎಫ್ 2’ ಸಿನಿಮಾ ಮಾಡಿದ್ದಕ್ಕೆ ನಾಚಿಕೆಯಾಗಬೇಕು. ಕೆಜಿಎಫ್ ಚಾಪ್ಟರ್ 2 ಸಿನಿಮಾಗೆ ಇದೇ ನನ್ನ ರೇಟಿಂಗ್ 'ಎಂದು ಕಮಲ್ ಆರ್. ಖಾನ್ ಪೋಸ್ಟ್ ಮಾಡಿದ್ದಾರೆ.

  ಕೆಜಿಎಫ್: ಅಧ್ಯಾಯ 2' ಉತ್ತರ ಭಾರತದಲ್ಲಿ ಸಹ ಸೂಪರ್ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರಕ್ಕೆ ಜನ ಫಿದಾ ಆಗಿದ್ದಾರೆ. ಅವರಲ್ಲಿ ಕಮಾಲ್ ಆರ್ ಖಾನ್ ಅವರ ಕೆಟ್ಟ-ನೆಗೆಟಿವ್ ವಿಮರ್ಶೆಗೆ ಯಶ್ ಅಭಿಮಾನಿಗಳು ತೆಗೆದುಕೊಂಡಿದ್ದಾರೆ. ‘ಆರ್‌ಆರ್‌ಆರ್’ ಬಿಡುಗಡೆಯಾದಾಗಲೂ ಕಮಾಲ್ ಆರ್ ಖಾನ್ ಇದೇ ರೀತಿ ನೆಗೆಟಿವ್ ರಿವ್ಯೂ ಮಾಡಿದ್ದರು.  ಚಿತ್ರತಂಡ ನೀಡಿದ ಬಾಕ್ಸ್ ಆಫೀಸ್ ಲೆಕ್ಕಾಚಾರ ಸುಳ್ಳು ಎಂದು ವಾದಿಸಿದ್ದರು. ಇದೀಗ ಯಶ್ ಅವರ ಕೆಜಿಎಫ್ ಚಾಪ್ಟರ್ 2 ಬಗ್ಗೆ ವಿವಾದ ಹುಟ್ಟು ಹಾಕಿದ್ದಾರೆ.

  ಇದನ್ನೂ ಓದಿ: KGF Chapter 2: ರಾಕಿಭಾಯ್ ಆರ್ಭಟಕ್ಕೆ ಎಲ್ಲಾ ದಾಖಲೆ ಪೀಸ್ ಪೀಸ್, ಮೊದಲ ದಿನ ಕಲೆಕ್ಷನ್ ಇಷ್ಟಾಗಿದ್ದು ಹೌದಾ?

  ಕಮಾಲ್ ಆರ್. 2008 ರಲ್ಲಿ, ಖಾನ್ ನಟಿಸಿ 'ಟ್ರೇಟರ್' ಎಂಬ ಸಿನಿಮಾ ನಿರ್ಮಿಸಿದರು. ಇದನ್ನು ನೋಡಿದ ವಿಮರ್ಶಕರು "ಹಿಂದಿ ಚಿತ್ರರಂಗದ ಅತ್ಯಂತ ಕೆಟ್ಟ ಸಿನಿಮಾ" ಎಂದು ಟೀಕಿಸಿದರು. ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಒಟ್ಟು 80 ಲಕ್ಷ ರೂ. ಈಗ ಮತ್ತೆ ಅದೇ ಸಿನಿಮಾವನ್ನು ನೆನಪಿಸಿಕೊಂಡು ಜನ ಕಮೆಂಟ್ ಗಳ ಸುರಿಮಳೆಗೈಯುತ್ತಿದ್ದಾರೆ.

  ಇದನ್ನೂ ಓದಿ: KGF ನಗರದಲ್ಲೇ ತೆರೆಕಾಣಲಿಲ್ಲ ಕೆಜಿಎಫ್-2 ಚಿತ್ರ; ಅಸಲಿ ಕಾರಣ ಏನು ಗೊತ್ತಾ?

  ಬಿಡುಗಡೆ ದಿನದಂತೆ ಭರ್ಜರಿ ರೆಸ್ಪಾನ್ಸ್​ಗಳಿಸಿರುವ ಕೆಜಿಎಫ್ ಚಾಪ್ಟರ್ 2 ವಿಶ್ವದಾದ್ಯಂತ ದಾಖಲೆ ಮಾಡಿದೆ. ಆಕ್ಷನ್ ಥ್ರಿಲ್ಲರ್ ಮೊದಲ ದಿನವೇ 130 ರಿಂದ 140 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಎಂದು ವ್ಯಾಪಾರ ವಿಶ್ಲೇಷಕರು ಭವಿಷ್ಯ ನುಡಿದಿದ್ದರು, ಅದರಂತೆ, 130 ಕೋಟಿಗೂ ಹೆಚ್ಚು ಗಳಿಗೆ ಮಾಡಿದ್ದು, ಅದರ ಆರಂಭದ ದಿನಗಳಲ್ಲಿ ದಿನಕ್ಕೆ 50 ಕೋಟಿ ರೂಪಾಯಿಗಳನ್ನು ಗಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
  Published by:guruganesh bhat
  First published: