KGF Chapter 2 on Prime: ಅಮೆಜಾನ್ ಪ್ರೈಮ್​ನಲ್ಲಿ ಕೆಜಿಎಫ್ 2 ನೋಡೋಕೆ ಬಾಡಿಗೆ ಏಕೆ ಕೊಡಬೇಕು?

ಅಮೆಜಾನ್ ಪ್ರೈಮ್​ 'ಚಲನಚಿತ್ರ ಬಾಡಿಗೆ' ಯೋಜನೆಯ ಭಾಗವಾಗಿ Amazon Prime ವೀಡಿಯೊದಲ್ಲಿ ಕೆಜಿಎಫ್ ಚಾಪ್ಟರ್ 2 ಲಭ್ಯವಿದೆ. ಪ್ಲಾಟ್‌ಫಾರ್ಮ್‌ನಲ್ಲಿ ಅಭಿಮಾನಿಗಳು ಚಲನಚಿತ್ರವನ್ನು ರೂ. 199 ಗೆ ಬಾಡಿಗೆಗೆ ಪಡೆಯಬಹುದು.

ಕೆಜಿಎಫ್ ಚಾಪ್ಟರ್ 2

ಕೆಜಿಎಫ್ ಚಾಪ್ಟರ್ 2

 • Share this:
  ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಕೆಜಿಎಫ್ ಚಾಪ್ಟರ್ 2 (KGF Chapter 2) ಬಾಕ್ಸ್ ಆಫೀಸ್ ನಲ್ಲಿ ಹಲವಾರು ದಾಖಲೆಗಳನ್ನು ಮುರಿಯುತ್ತಿದೆ. 2022 ರ ಅತ್ಯಂತ ಜನಪ್ರಿಯ ಚಲನಚಿತ್ರಗಳಲ್ಲಿ ಒಂದಾಗಿರುವ KGF 2 ವನ್ನು ಈಗಲೇ ನೀವು ಒಟಿಟಿ ವೇದಿಕೆಯಲ್ಲಿ ವೀಕ್ಷಿಸಬಹುದು. ಅಮೆಜಾನ್ ಪ್ರೈಮ್​ನಲ್ಲಿ ಕೆಜಿಎಫ್ ಚಾಪ್ಟರ್ 2 ವೀಕ್ಷಿಸಬಹುದಾಗಿದೆ. ಆದರೆ ಈಗಲೇ ಕೆಜಿಎಫ್ ಚಾಪ್ಟರ್​ 2ವನ್ನು ಅಮೆಜಾನ್ ಪ್ರೈಮ್​ನಲ್ಲಿ (Amazon Prime) ವೀಕ್ಷಿಸೋಕೆ ನೀವು ನಿಮ್ಮಲ್ಲಿರೋ ಪ್ರೈಮ್ ಮೆಂಬರ್​ಶಿಪ್ (Prime Membership) ಬಿಟ್ಟು ಬೇರೆ ಬಾಡಿಗೆ (KGF Chapter 2 on Rent) ನೀಡಬೇಕಾಗುತ್ತದೆ.

  ಅಮೆಜಾನ್ ಪ್ರೈಮ್​ 'ಚಲನಚಿತ್ರ ಬಾಡಿಗೆ' ಯೋಜನೆಯ ಭಾಗವಾಗಿ Amazon Prime ವೀಡಿಯೊದಲ್ಲಿ ಕೆಜಿಎಫ್ ಚಾಪ್ಟರ್ 2 ಲಭ್ಯವಿದೆ. ಪ್ಲಾಟ್‌ಫಾರ್ಮ್‌ನಲ್ಲಿ ಅಭಿಮಾನಿಗಳು ಚಲನಚಿತ್ರವನ್ನು ರೂ. 199 ಗೆ ಬಾಡಿಗೆಗೆ ಪಡೆಯಬಹುದು. ಕೆಜಿಎಫ್ 2 ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ 5 ಭಾಷೆಗಳಲ್ಲಿ ಪ್ರೇಕ್ಷಕರಿಗೆ ಲಭ್ಯವಾಗಲಿದೆ.  ಏನೆಲ್ಲ ನಿಯಮಗಳಿವೆ?
  ಅಮೆಜಾನ್ ಪ್ರೈಮ್​ನಲ್ಲಿ ನೀವು ಮೆಂಬರ್​ಶಿಪ್​ ಹೊಂದಿದ್ದರೂ ಹೆಚ್ಚುವರಿ 199 ರೂ. ಹಣವನ್ನು ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು ಬಾಡಿಗೆಗೆ ಪಡೆಯಬೇಕು. ಬಾಡಿಗೆಗೆ ಪಡದು ಸಿನಿಮಾ ವೀಕ್ಷಿಸಲು ಆರಂಭಿಸಿದ ಸಮಯದಿಂದ ಒಟ್ಟು 48 ಗಂಟೆಗಳವರೆಗೆ ಮಾತ್ರ ನೀವಿ ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು ಅಮೆಜಾನ್ ಪ್ರೈಮ್​ನಲ್ಲಿ ವೀಕ್ಷಿಸಬಹುದು.

  ಕೆಜಿಎಫ್ 3 ಬರುತ್ತಾ?
  ರಾಕಿಂಗ್ ಸ್ಟಾರ್ ಯಶ್  ಅಭಿನಯದ ಬ್ಲಾಕ್ ಬಸ್ಟರ್ ಕೆಜಿಎಫ್ ಚಿತ್ರದ ಚಾಪ್ಟರ್ 1ಕ್ಕಿಂತ ಹೆಚ್ಚಾಗಿ ಚಾಪ್ಟರ್ 2 (KGF Chapter 2) ಸದ್ದು ಮಾಡಿದೆ. ಸರಣಿ ದಾಖಲೆಗಳನ್ನು ಮಾಡುವ ಮೂಲಕ, ಈಗಾಗಲೇ ಇದ್ದ ದಾಖಲೆಗಳನ್ನು ಪುಡಿ ಮಾಡಿದ ಸ್ಯಾಂಡಲ್​ವುಡ್​ ಹೆಮ್ಮೆಯ ಚಿತ್ರ ಕೆಜಿಎಫ್ ಎನ್ನಬಹುದು. ಇದೀಗ ಎಲ್ಲಡೆ ಕೆಜಿಎಫ್ 3 ಕುರಿತ ಚರ್ಚೆಗಳು ಆರಂಭವಾಗಿದೆ.

  ಚಿತ್ರದ ನಿರ್ಮಾಪಕ ವಿಜಯ್ ಕಿರಂಗದೂರು ಕೆಜಿಎಫ್ 3 ಕುರಿತು ಹೇಳಿಕೆಯನ್ನು ನೀಡಿ 2024ರಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದಿದ್ದರು. ಆದರೆ ಈಗೊಂದು ಸುದ್ದಿ ಬಂದಿದ್ದು, ಕೆಜಿಎಫ್ 3 ಶೂಟಿಂಗ್ ಸದ್ಯಕ್ಕಿಲ್ಲ ಎನ್ನುವ ಅಂಶ ಬಹಿರಂಗವಾಗಿದೆ.

  ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಹೇಳಿದ್ದೇನು?
  ಅಕ್ಟೋಬರ್​ನಲ್ಲಿ ಕೆಜಿಎಫ್ 3 ಶೂಟಿಂಗ್ ಆರಂಭವಾಗಲಿದೆ ಎಂದು ಹೇಳಲಾಗುತ್ತಿತ್ತು, ಆದರೆ ಇದೀಗ ಕೆಜಿಎಫ್ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಕೆಜಿಎಫ್-2 ನೋಡಿ ಫುಲ್ ಖುಷ್ ಆಗಿದ್ದ ಅಭಿಮಾನಿಗಳು ಕೆಜಿಎಫ್-3ಗಾಗಿ ಕಾತರದಿಂದ ಕಾಯುತ್ತಿದ್ದರು. ಆದರೀಗ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದಿದ್ದಾರೆ.

  ಇದನ್ನೂ ಓದಿ: KGF Chapter 3: ಸದ್ಯಕ್ಕಿಲ್ಲ ಚಾಪ್ಟರ್​ 3 ಶೂಟಿಂಗ್, ಫುಲ್ ಡೀಟೆಲ್ಸ್ ಕೊಟ್ಟ ಚಿತ್ರತಂಡ

  ಅರೇ ಏನಪ್ಪಾ ಇದು ಅಂತ ಅಶ್ಚರ್ಯವಾಗಬೇಡಿ. ಈ ಬಗ್ಗೆ ಕಾರ್ತಿಕ್ ಗೌಡ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಹರಿದಾಡುತ್ತಿರುವ ಸುದ್ದಿಗಳೆಲ್ಲ ಸುಳ್ಳು. ನಾವು ಈಗ ಅನೇಕ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದೀವಿ. ಹೊಂಬಾಳೆ ಫಿಲ್ಮ್ಸ್ ಸದ್ಯದಲ್ಲೇ ಕೆಜಿಎಫ್-3 ಪ್ರಾರಂಭ ಮಾಡುವುದಿಲ್ಲ. ನಾವು ಕೆಜಿಎಫ್-3 ಪ್ರಾರಂಭ ಮಾಡಿದಾಗ ಮಾಹಿತಿ ನೀಡುತ್ತೇವೆ ಎಂದು ಹೇಳಿದ್ದಾರೆ.

  10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್
  ಯಶ್ ಅಭಿಮಾನಿಗಳು ಹಬ್ಬದಂತೆ ಆಚರಣೆ ಮಾಡಿ ಚಿತ್ರ ಬಿಡುಗಡೆಯನ್ನು ಸಂಭ್ರಮಿಸಿದ್ದರು. ಸುಮಾರು 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್ ಗಳಲ್ಲಿ ಚಿತ್ರ ತೆರೆಕಂಡು ದಾಖಲೆ ಬರೆದಿರುವ ಈ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಕೂಡ ಒಂದು ದಾಖಲೆ ಎನ್ನಬಹುದು.

  ಇದನ್ನೂ ಓದಿ: Highest Grossing Movies: ಇಂಡಿಯನ್​ ಬಾಕ್ಸ್​ ಆಫೀಸ್​ ಲೂಟಿ ಮಾಡಿದ ದಕ್ಷಿಣ ಭಾರತದ ಟಾಪ್​ 10 ಸಿನಿಮಾಗಳಿವು

  ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾ ಎಲ್ಲಾ ಭಾಷೆಯಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಹಿಂದಿಯಲ್ಲಿ ಸಿನಿಮಾ ಬರೋಬ್ಬರಿ 420 ಕೋಟಿ ರೂ. ಗಳಿಕೆ ಮಾಡಿದೆ ಎಂದು ಸಹ ಹೇಳಲಾಗುತ್ತಿದೆ.
  Published by:guruganesh bhat
  First published: