Yash GQ India Interview: ರಾಕಿಂಗ್​ ಸ್ಟಾರ್​ ಯಶ್​ಗೆ ಕನ್ನಡದ ಈ ಸ್ಟಾರ್​ ನಟ ಸ್ಫೂರ್ತಿಯಂತೆ!

ನನಗೆ ಸ್ಫೂರ್ತಿ ನೀಡಿದವರ ಸಾಲಿನಲ್ಲಿ ಸಾಕಷ್ಟು ಜನರು ನಿಲ್ಲುತ್ತಾರೆ. ಪ್ರತಿಯೊಬ್ಬರಿಂದಲೂ ನಾನು ಒಳ್ಳೆಯ ಅಂಶವನ್ನು ಸ್ವೀಕರಿಸುತ್ತೇನೆ ಎನ್ನುವುದು ಯಶ್​ ಮಾತು.

Rajesh Duggumane | news18-kannada
Updated:November 12, 2019, 3:47 PM IST
Yash GQ India Interview: ರಾಕಿಂಗ್​ ಸ್ಟಾರ್​ ಯಶ್​ಗೆ ಕನ್ನಡದ ಈ ಸ್ಟಾರ್​ ನಟ ಸ್ಫೂರ್ತಿಯಂತೆ!
ಯಶ್​
  • Share this:
ಪ್ರತಿ ಕಲಾವಿದರಿಗೂ ಸ್ಫೂರ್ತಿದಾಯಕ ವ್ಯಕ್ತಿಗಳು ಇದ್ದೇ ಇರುತ್ತಾರೆ. ಇದಕ್ಕೆ ‘ಕೆಜಿಎಫ್​’ ನಾಯಕ ಯಶ್ ಕೂಡ ಹೊರತಾಗಿಲ್ಲ. ಜೀವನದಲ್ಲಿ ಮುಖ್ಯವಾಗಿ ಮೂರು ಜನರು ಯಶ್​ಗೆ ಸ್ಫೂರ್ತಿಯಾಗಿದ್ದಾರೆ.

ಜಿಕ್ಯೂ ಇಂಡಿಯಾ ನೀಡುವ ದೇಶದ 50 ಅತ್ಯಂತ ಪ್ರಭಾವಿ ಯುವಕರ ಪಟ್ಟಿಯಲ್ಲಿ ಯಶ್ ಹೆಸರು ಕೂಡ ಸೇರ್ಪಡೆಗೊಂಡಿದೆ. ಈ ಗೌರವ ಸ್ವೀಕರಿಸಲು ಅವರು ಮುಂಬೈಗೆ ತೆರಳಿದ್ದರು. ಈ ವೇಳೆ ಯಶ್ ಮಾತನಾಡಿದ್ದು, ಹಲವು ಸಿಕ್ರೆಟ್​ ಬಿಟ್ಟುಕೊಟ್ಟಿದ್ದಾರೆ.

ಪ್ರತಿ ವ್ಯಕ್ತಿಗಳಿಂದಲೂ ಒಳ್ಳೆಯ ಅಂಶವನ್ನು ಯಶ್​ ಸ್ವೀಕರಿಸುತ್ತಾರಂತೆ. “ನನಗೆ ಸ್ಫೂರ್ತಿ ನೀಡಿದವರ ಸಾಲಿನಲ್ಲಿ ಸಾಕಷ್ಟು ಜನರು ನಿಲ್ಲುತ್ತಾರೆ. ಪ್ರತಿಯೊಬ್ಬರಿಂದಲೂ ನಾನು ಒಳ್ಳೆಯ ಅಂಶವನ್ನು ಸ್ವೀಕರಿಸುತ್ತೇನೆ,” ಎನ್ನುವುದು ಯಶ್​ ಮಾತು. ಈ ವೇಳೆ ಮೂರು ಜನರ ಹೆಸರನ್ನು ನೀವು ಹೇಳಲೇಬೇಕು ಎಂದು ಸಂದರ್ಶಕಿ ಹೇಳಿದರು. ಇದಕ್ಕೆ ಯಶ್​ ಉತ್ತರಿಸಿದ್ದಾರೆ.

“ನನಗೆ ನಟ-ನಿರ್ದೇಶಕ ಶಂಕರ್​ ನಾಗ್​ ನನಗೆ ದೊಡ್ಡ ಸ್ಫೂರ್ತಿ. ಇಂದು ಅವರು ನಮ್ಮ ಜೊತೆ ಇಲ್ಲ. ಆದಾಗ್ಯೂ ಅವರ ಕೆಲಸಗಳು ನನಗೆ ಚೈತನ್ಯ ನೀಡುತ್ತವೆ. ಎಂಸ್​ ಧೋನಿ ಹಾಗೂ ನರೇಂದ್ರ ಮೋದಿ ಕೂಡ ನನಗೆ ಸ್ಫೂರ್ತಿ,” ಎಂದು ರಹಸ್ಯ ಬಿಚ್ಚಿಟ್ಟರು.



ಯಶಸ್ಸಿನ ಮಂತ್ರವನ್ನು ಬಿಟ್ಟುಕೊಟ್ಟ ಯಶ್​, “ನಾವು ಏನನ್ನು ಮಾಡುತ್ತೇವೋ ಅದನ್ನು ಪ್ರೀತಿಸಬೇಕು. ಹೀಗೆ ಪ್ರೀತಿಸಿದ್ದು ನಮಗೆ ಸುಲಭವಾಗಿ ಒಲಿಯುತ್ತದೆ. ಇದೇ ನನ್ನ ಯಶಸ್ಸಿನ ಮಂತ್ರ,” ಎಂದರು ಯಶ್​, ತಾವು ಮಾಡಿದ ಕೂಲೆಸ್ಟ್​ಥಿಂಗ್​ ಎಂದರೆ ಮದುವೆ,” ಎನ್ನುವ ಮೂಲಕ ಎಲ್ಲರ ಹುಬ್ಬೇರಿಸಿದರು.
First published:November 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ