ನಟ ರಾಕಿಂಗ್ ಸ್ಟಾರ್ (Rocking Star) ಯಶ್(Yash) ಅಭಿನಯದ ಬಹುನಿರೀಕ್ಷಿತ ‘ಕೆಜಿಎಫ್: ಚಾಪ್ಟರ್ 2’(KGF Chapter 2) ಸಿನಿಮಾದ ಬಿಡುಗಡೆಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಏಪ್ರಿಲ್ 24ರಂದು ಚಿತ್ರವು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ನಡುವೆ ನಿಧಾನವಾಗಿ ಚಿತ್ರತಂಡ ಚಿತ್ರದ ಪ್ರಮೋಷನ್ ಅನ್ನು ಪ್ರಾರಂಭಿಸಿದೆ. ಹೌದು, ಕೆಲ ದಿನಗಳ ಹಿಂದೆ ಚಿತ್ರದ ಟ್ರೈಲರ್ (Trailer) ಮಾರ್ಚ್ 27ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಇದೀಗ ಅದೇ ರೀತಿಯಲ್ಲಿ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಇದನ್ನು ಕೇಳಿದ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಹೌದು, ಮಾ.21ರಂದು ‘ತೂಫಾನ್’ ಎಂಬ ಲಿರಿಕಲ್ ಸಾಂಗ್ (Toofan Lyrical Video) ಬಿಡುಗಡೆ ಮಾಡುವುದಾಗಿ ತಿಳಿಸಿದೆ.
ಚಿತ್ರದ ಮೊದಲ ಸಾಂಗ್ ರಿಲೀಸ್:
ಕೆಜಿಎಫ್ -2 ಚಿತ್ರದ ಮೊದಲ ಇರಿಕಲ್ ಸಾಂಗ್ ಆದ ‘ತೂಫಾನ್‘ ಹಾಡು ಮಾರ್ಚ್ 21ರಂದು ಬೆಳಗ್ಗೆ 11.07ಕ್ಕೆ ಬಿಡುಗಡೆ ಮಾಡುವುದಾಗಿ ಹೊಂಬಾಳೆ ಫಿಲ್ಸ್ಮ್ ಟ್ವಿಟರ್ ಮೂಲಕ ತಿಳಿಸಿದೆ. ಈ ಸಾಂಗ್ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಿಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇನ್ನು, ಈಗಾಗಲೇ ಕೆಜಿಎಫ್ 1 ರಲ್ಲಿ ರವಿ ಬಸ್ರೂರು ಅವರ ಸಂಗೀತ ಎಲ್ಲಡೇ ಸಖತ್ ಹಿಟ್ ಆಗಿದ್ದವು. ಹೀಗಾಗಿ ಕೆಜಿಎಫ್ 2ರ ಈ ಮೊದಲ ಸಾಂಗ್ ಮೇಲೆ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ.
Get Ready! #Toofan is coming 🔥
'Toofan' Lyrical Video will be out on March 21st at 11:07 AM.#KGFChapter2 #KGF2onApr14@Thenameisyash @prashanth_neel @VKiragandur@hombalefilms @HombaleGroup @duttsanjay @TandonRaveena @SrinidhiShetty7 @bhuvangowda84 @RaviBasrur @LahariMusic pic.twitter.com/tlkvs4ZPAq
— Hombale Films (@hombalefilms) March 18, 2022
‘ಕೆಜಿಎಫ್ 2’ ಮೇಲಿನ ನಿರೀಕ್ಷೆಗಳು ಬೆಟ್ಟದಷ್ಟಿವಿ. ಈಗಾಗಲೇ ಟೀಸರ್ ನಿರೀಕ್ಷೆಗಳ ಮಟ್ಟ ಎಷ್ಟಿದೆ ಅನ್ನೋದರ ಝಲಕ್ ತೋರಿಸಿದೆ. ಈ ಹೊತ್ತಲ್ಲೇ ಟ್ರೈಲರ್ ರಿಲೀಸ್‌ಗೂ ಸಿದ್ಧತೆ ನಡೆದಿದೆ. ಹೌದು, ಮಾರ್ಚ್ 27ಕ್ಕೆ ಸಂಜೆ 6:40ಕ್ಕೆ ಕೆಜಿಎಫ್ 2 ಟ್ರೈಲರ್ ರಿಲೀಸ್ ಆಗಲಿದೆ. ಇನ್ನು, ಟ್ರೈಲರ್ ಬಿಡುಗಡೆಯ ನಂತರ ಕೆಜಿಎಫ್ -2 ಮೇಲಿನ ನಿರೀಕ್ಷೆ ದುಪ್ಪಟ್ಟು ಆಗಲಿದೆ.
ಇದನ್ನೂ ಓದಿ: RRR ಮೇಲೆ KGF- 2 ಅಭಿಮಾನಿಗಳ ಕಿಡಿ: KGF ಪ್ರಚಾರದ ವಿಳಂಬಕ್ಕೆ ರಾಜಮೌಳಿ ಕಾರಣ ಎನ್ನುತ್ತಿದ್ದಾರೆ ಅಭಿಮಾನಿಗಳು
ಕೆಜಿಎಫ್ - 2 ಪ್ರೀಮಿಯರ್ ಶೋ:
ಕೆಜಿಎಫ್: ಚಾಪ್ಟರ್ 2 ಏಪ್ರಿಲ್ 13ರಂದು ಪ್ರೀಮಿಯರ್ ಶೋ ನಡೆಸುವುದಾಗಿ ತಿಳಿಸಿದೆ. ಆದರೆ ಪ್ರೀಮಿಯರ್ ಶೊ ಉತ್ತರ ಅಮೇರಿಕಾದಲ್ಲಿ ನಡೆಯಲಿದೆ. ಹೌದು, ಈ ಕುರಿತು ಟ್ವೀಟ್ ಮಾಡಿರುವ ಹೊಂಬಾಳೆ ಫಿಲ್ಸ್ಮ್, ‘ಉತ್ತರ ಅಮೆರಿಕ ನಾನು ಬರುತ್ತಿದ್ದೇನೆ. ಸಿಡಿಲಿನ ಅನುಭವ ಪಡೆಯಲು ತಯಾರಾಗಿ‘ ಎಂದು ಬರೆದುಕೊಂಡಿದೆ. ಇನ್ನು, ದಕ್ಷಿಣ ಭಾರತದಲ್ಲಿನ ಪ್ರೀಮಿಯರ್ ಶೋ ಅನ್ನು ಸರೆಗಮ ಸಿನಿಮಾಸ್ ಆಯೋಜನೆ ಮಾಡಲಿದೆ.
ಏಪ್ರಿಲ್ 14ಕ್ಕೆ ಕೆಜಿಎಫ್: ಚಾಪ್ಟರ್ 2 ಬಿಡುಗಡೆ:
ಕೆಜಿಎಫ್ -1 ಡಿಸೆಂಬರ್ 21, 2018ರಲ್ಲಿ ಬಿಡುಗಡೆಯಾಗಿತ್ತು. ಅದಾಗಿ ಸರಿಸುಮಾರು 44 ವರ್ಷಗಳ ಬಳಿಕ ಚಾಪ್ಟರ್ 2 ಬಿಡುಗಡೆಯಾಗುತ್ತಿದ್ದು, ಭಾರತದಲ್ಲಿಯೇ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಏಪ್ರಿಲ್ 24ರಂದು ಚಿತ್ರವು ವಿಶ್ವದಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಇನ್ನು, ಪ್ಯಾನ್ ಇಂಡಿಯಾ ಮಟ್ಟದ ಸಿನಿಮಾ ಆಗಿರುವುದರಿಂದ ಚಿತ್ರದ ಪ್ರಚಾರ ಕಾರ್ಯಕ್ಕೆ ಚಿತ್ರತಂಡ ದೊಡ್ಡ ಮಟ್ಟದಲ್ಲಿ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶದ ಚಿತ್ರಮಂದಿರಗಳಲ್ಲಿಯೂ ಸ್ಟ್ಯಾಂಡಿ ಮತ್ತು ಪೋಸ್ಟರ್ಗಳನ್ನು ಪ್ರದರ್ಶಿಸಲು ಚಿತ್ರತಂಡ ತೀರ್ಮಾನಿಸಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: KGF Chapter 2: ಬಂದ.. ಬಂದ.. ರಣಬೇಟೆಗಾರ ಬಂದ! ಮಾರ್ಚ್ 27ಕ್ಕೆ ಕೆಜಿಎಫ್ 2 ಟ್ರೈಲರ್ ರಿಲೀಸ್!
ಚಿತ್ರದಲ್ಲಿ ದೊಡ್ಡ ತಾರಾಬಳಗದ ದಂಡು:
ಕೆಜಿಎಫ್: ಚಾಪ್ಟರ್ 2 ಚಿತ್ರದಲ್ಲಿ ನಟ ಯಶ್ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಬಾಲಿವುಡ್ ನ ಸಂಜಯ್ ದತ್, ರವೀನಾ ಟಂಡನ್ ನಟಿಸಿದ್ದಾರೆ. ಅಲ್ಲದೇ ಪ್ರಕಾಶ್ ರಾಜ್, ಮಾಳವಿಕಾ, ಸರ್ಚನಾ ಜೋಯಿಸ್, ರಾವ್ ರಮೇಶ್, ಈಶ್ವರಿ ರಾವ್ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗದ ದಂಡೆ ಸೇರಿಕೊಂಡಿದೆ. ಇನ್ನು, ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದು, ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದು, ಭುವನ್ ಗೌಡ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ