KGF-2: ಇಂದೇ ಅಪ್ಪಳಿಸಿದ 'ತೂಫಾನ್', ಧೂಳೆಬ್ಬಿಸುತ್ತಿದೆ 'ಕೆಜಿಎಫ್‌ 2' ಫಸ್ಟ್ Lyrical Song

ಕೆಜಿಎಫ್ 2 ಚಿತ್ರದ ಮೊದಲ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆಗಿದೆ. ‘ತೂಫಾನ್​’ ಎಂಬ ಸಾಂಗ್​  ಬಿಡುಗಡೆ ಆದ ಕ್ಷಣದಿಂದಲೇ ಧೂಳೆಬ್ಬಿಸುತ್ತಿದೆ. ಈ ಹಾಡಿನ್ನು ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರೇ ಬರೆದು, ಸಂಗೀತ ನೀಡಿದ್ದಾರೆ.

ಕೆಜಿಎಫ್ 2 ತೂಫಾನ್ ಸಾಂಗ್

ಕೆಜಿಎಫ್ 2 ತೂಫಾನ್ ಸಾಂಗ್

  • Share this:
ನಟ ರಾಕಿಂಗ್ ಸ್ಟಾರ್ (Rocking Star) ಯಶ್(Yash) ಅಭಿನಯದ ಬಹುನಿರೀಕ್ಷಿತ ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಸಿನಿಮಾದ ಬಿಡುಗಡೆಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಏಪ್ರಿಲ್ 24ರಂದು ಚಿತ್ರವು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ನಡುವೆ ನಿಧಾನವಾಗಿ ಚಿತ್ರತಂಡ ಚಿತ್ರದ ಪ್ರಮೋಷನ್​ ಅನ್ನು ಪ್ರಾರಂಭಿಸಿದೆ. ಕೆಲ ದಿನಗಳ ಹಿಂದೆ ಚಿತ್ರದ ಟ್ರೈಲರ್ (Trailer) ಮಾರ್ಚ್ 27ರಂದು​ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಇದೀಗ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆಗಿದೆ.  ‘ತೂಫಾನ್​’ ಎಂಬ ಲಿರಿಕಲ್​ ಸಾಂಗ್​ (Toofan Lyrical Video) ಇಂದು ಬಿಡುಗಡೆ ಆಗಿದೆ. ಬಿಡುಗಡೆಯಾದ ಕ್ಷಣದಿಂದಲೇ ಯೂಟ್ಯೂಬ್ (YouTube) ಸೇರಿದಂತೆ ಇತರೇ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಾಂಗ್ ಧೂಳೆಬ್ಬಿಸುತ್ತಿದ್ದು, ಸಖತ್ ವೈರಲ್ (Viral) ಆಗಿದೆ.

 ಬಿಡುಗಡೆಯಾದ ಕ್ಷಣದಿಂದಲೇ ತೂಫಾನ್ ಅಬ್ಬರ

ಇಂದು ಬೆಳಗ್ಗೆ 11.07ಕ್ಕೆ ‘ತೂಫಾನ್​’ ಲಿರಿಕಲ್​ ವಿಡಿಯೋ ಬಿಡುಗಡೆ ಆಯಿತು. ರಿಲೀಸ್​ ಆದ ಕೆಲವೇ ನಿಮಿಷಗಳಲ್ಲಿ ಕನ್ನಡ ವರ್ಷನ್​ ಹಾಡು ಲಕ್ಷಾಂತರ ವೀವ್ಸ್​ ಪಡೆದುಕೊಂಡಿದೆ.

ಐದು ಭಾಷೆಗಳಲ್ಲಿ ಲಿರಿಕಲ್ ಸಾಂಗ್ ರಿಲೀಸ್

ಇನ್ನು ಕೆಜಿಎಫ್‌ 2 ಫಸ್ಟ್ ರಿಲಿಕಲ್ ಸಾಂಗ್ ಕನ್ನಡ ಮಾತ್ರವಲ್ಲದೇ, ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗಿನಲ್ಲಿಯೂ ಬಿಡುಗಡೆ ಆಗಿದೆ. ಎಲ್ಲ ಭಾಷೆಯಲ್ಲೂ ಜನರಿಂದ ಸಖತ್​ ರಿಯಾಕ್ಷನ್​ ಸಿಗುತ್ತಿದೆ.

ರವಿ ಬಸ್ರೂರ್‌ ಸಂಗೀತದಲ್ಲಿ ಬಂದ ಸಾಂಗ್

ಈ ಹಾಡಿನ್ನು ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರೇ ಬರೆದು, ಸಂಗೀತ ನೀಡಿದ್ದಾರೆ. ಇನ್ನು ಸಂತೋಷ್ ವೆಂಕಿ, ಮೋಹನ್ ಕೃಷ್ಣ, ಸಚಿನ್ ಬಸ್ರೂರ್, ಪುನೀತ್ ರುದ್ರರಂಗ, ವರ್ಷಾ ಆಚಾರ್ಯ ಸೇರಿದಂತೆ ಅನೇಕ ಗಾಯಕರು ದನಿ ನೀಡಿದ್ದಾರೆ. ಜೊತೆಗೆ ಜ್ಯೂನಿಯರ್ ಸಿಂಗರ್‌ ಸಹ ಹಾಡಿದ್ದಾರೆ.


ಮಾರ್ಚ್ 27ಕ್ಕೆ ಟ್ರೈಲರ್ ರಿಲೀಸ್

‘ಕೆಜಿಎಫ್‌ 2’ ಮೇಲಿನ ನಿರೀಕ್ಷೆಗಳು ಬೆಟ್ಟದಷ್ಟಿದೆ. ಈಗಾಗಲೇ ಟೀಸರ್‌ ನಿರೀಕ್ಷೆಗಳ ಮಟ್ಟ ಎಷ್ಟಿದೆ ಅನ್ನೋದರ ಝಲಕ್‌ ತೋರಿಸಿದೆ. ಈ ಹೊತ್ತಲ್ಲೇ ಟ್ರೈಲರ್‌ ರಿಲೀಸ್‌ಗೂ ಸಿದ್ಧತೆ ನಡೆದಿದೆ. ಮಾರ್ಚ್​ 27ಕ್ಕೆ ಸಂಜೆ 6:40ಕ್ಕೆ ಕೆಜಿಎಫ್​ 2 ಟ್ರೈಲರ್​ ರಿಲೀಸ್​ ಆಗಲಿದೆ. ಇನ್ನು, ಟ್ರೈಲರ್ ಬಿಡುಗಡೆಯ ನಂತರ ಕೆಜಿಎಫ್ -2 ಮೇಲಿನ ನಿರೀಕ್ಷೆ ದುಪ್ಪಟ್ಟು ಆಗಲಿದೆ.

ಕೆಜಿಎಫ್ - 2 ಪ್ರೀಮಿಯರ್ ಶೋ:

ಕೆಜಿಎಫ್: ಚಾಪ್ಟರ್ 2 ಏಪ್ರಿಲ್ 13ರಂದು ಪ್ರೀಮಿಯರ್‌ ಶೋ ನಡೆಸುವುದಾಗಿ ತಿಳಿಸಿದೆ. ಆದರೆ ಪ್ರೀಮಿಯರ್ ಶೊ ಉತ್ತರ ಅಮೇರಿಕಾದಲ್ಲಿ ನಡೆಯಲಿದೆ. ಹೌದು, ಈ ಕುರಿತು ಟ್ವೀಟ್ ಮಾಡಿರುವ ಹೊಂಬಾಳೆ ಫಿಲ್ಸ್ಮ್​, ‘ಉತ್ತರ ಅಮೆರಿಕ ನಾನು ಬರುತ್ತಿದ್ದೇನೆ. ಸಿಡಿಲಿನ ಅನುಭವ ಪಡೆಯಲು ತಯಾರಾಗಿ‘ ಎಂದು ಬರೆದುಕೊಂಡಿದೆ. ಇನ್ನು, ದಕ್ಷಿಣ ಭಾರತದಲ್ಲಿನ ಪ್ರೀಮಿಯರ್ ಶೋ ಅನ್ನು ಸರೆಗಮ ಸಿನಿಮಾಸ್ ಆಯೋಜನೆ ಮಾಡಲಿದೆ.

ಏಪ್ರಿಲ್ 14ಕ್ಕೆ ಕೆಜಿಎಫ್: ಚಾಪ್ಟರ್ 2 ಬಿಡುಗಡೆ:

ಕೆಜಿಎಫ್ -1 ಡಿಸೆಂಬರ್ 21, 2018ರಲ್ಲಿ ಬಿಡುಗಡೆಯಾಗಿತ್ತು. ಅದಾಗಿ ಸರಿಸುಮಾರು 44 ವರ್ಷಗಳ ಬಳಿಕ ಚಾಪ್ಟರ್ 2 ಬಿಡುಗಡೆಯಾಗುತ್ತಿದ್ದು, ಭಾರತದಲ್ಲಿಯೇ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಏಪ್ರಿಲ್ 24ರಂದು ಚಿತ್ರವು ವಿಶ್ವದಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಲಿದೆ.

ಇದನ್ನೂ ಓದಿ: KGF: ಬಚ್ಚನ್ ಪಾಂಡೆ ಚಿತ್ರದಲ್ಲಿ KGF ಉಲ್ಲೇಖ, ಬಾಲಿವುಡ್​ನಲ್ಲೂ ರಾಕಿಬಾಯ್ ಹವಾ..!


ಇನ್ನು, ಪ್ಯಾನ್​ ಇಂಡಿಯಾ ಮಟ್ಟದ ಸಿನಿಮಾ ಆಗಿರುವುದರಿಂದ ಚಿತ್ರದ ಪ್ರಚಾರ ಕಾರ್ಯಕ್ಕೆ ಚಿತ್ರತಂಡ ದೊಡ್ಡ ಮಟ್ಟದಲ್ಲಿ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶದ ಚಿತ್ರಮಂದಿರಗಳಲ್ಲಿಯೂ ಸ್ಟ್ಯಾಂಡಿ ಮತ್ತು ಪೋಸ್ಟರ್​ಗಳನ್ನು ಪ್ರದರ್ಶಿಸಲು ಚಿತ್ರತಂಡ ತೀರ್ಮಾನಿಸಿದೆ ಎಂದು ಹೇಳಲಾಗಿದೆ.
Published by:Annappa Achari
First published: