KGF Chapter 2: ರಾಕಿಭಾಯ್ ಆರ್ಭಟಕ್ಕೆ ಎಲ್ಲಾ ದಾಖಲೆ ಪೀಸ್ ಪೀಸ್, ಮೊದಲ ದಿನ ಕಲೆಕ್ಷನ್ ಇಷ್ಟಾಗಿದ್ದು ಹೌದಾ?
KGF @ first Day Collection: KGF 2 ಹಿಂದಿ ಭಾಷೆಯಲ್ಲಿ ಮುಂಗಡ ಬುಕಿಂಗ್ನಲ್ಲಿ ದಾಖಲೆಯನ್ನ ಬರೆದಿದೆ. ಇದು ಆರ್ ಆರ್ ಆರ್ ಚಿತ್ರ ಬುಕಿಂಗ್ಗಿಂತಲೂ ಹೆಚ್ಚು ಎನ್ನಲಾಗುತ್ತಿದೆ. ಟ್ರೇಡ್ ತಜ್ಞರು ಹಿಂದಿ ಅವತರಣಿಕೆಯು ಮೊದಲ ದಿನವೇ 30 ಕೋಟಿ ರೂ.ಗಳನ್ನು ಗಳಿಸಲಿದೆ ಎಂದು ಅಂದಾಜಿಸಿದ್ದರು.
ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ ಕೆಜಿಎಫ್ ಚಾಪ್ಟರ್ 2 (KGF Chapter 2) ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ್ದು, ಅದ್ಭುತ ಪ್ರತಿಕ್ರಿಯೆ ಪಡೆದಿದೆ. ಯಶ್ ಅಭಿಮಾನಿಗಳು ಹಬ್ಬದಂತೆ ಆಚರಣೆ ಮಾಡಿ ಚಿತ್ರ ಬಿಡುಗಡೆಯನ್ನು ಸಂಭ್ರಮಿಸಿದ್ದಾರೆ. ಸುಮಾರು 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್ ಗಳಲ್ಲಿ ಚಿತ್ರ ತೆರೆಕಂಡು ದಾಖಲೆ ಬರೆದಿರುವ ಈ ಚಿತ್ರ ಬಾಕ್ಸ್ ಆಫೀಸ್ ಕಲೆಕ್ಷನ್ ಕೂಡ ಭರ್ಜರಿಯಾಗಿದೆ. ಟ್ರೇಡ್ ವರದಿಗಳ ಪ್ರಕಾರ, ಚಿತ್ರವು ತನ್ನ ಮೊದಲ ದಿನದಲ್ಲಿ 130 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, ದಾಖಲೆಗಳನ್ನು ಧೂಳಿಪಟ ಮಾಡಿದೆ. ಸಾಧ್ಯತೆಯಿದೆ. ಕೆಜಿಎಫ್ ಚಾಪ್ಟರ್ 2 ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಅಗಾಧವಾದ ಮೆಚ್ಚುಗೆ ಪಡೆಯುತ್ತಿದೆ. ಅತಿಹೆಚ್ಚು ಸ್ಕ್ರೀನ್ಗಳಲ್ಲಿ ಹೆಚ್ಚಿನ ಪ್ರದರ್ಶನ ಕಂಡಿರುವ ‘ಕೆಜಿಎಫ್-2’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕೊಳ್ಳೆ ಹೊಡೆದಿದೆ. ಕೆಜಿಎಫ್ 2 ಮುಂಬರುವ ದಿನಗಳಲ್ಲಿ ಇನ್ನೂ ಹಲವು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯಲಿದೆ ಎನ್ನಲಾಗುತ್ತಿದೆ.
ಹಲವು ಬಾರಿ ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟ ನಂತರ ಕೂಡ ಕೆಜಿಎಫ್ ಚಾಪ್ಟರ್ 2 ಅಂತಿಮವಾಗಿ ಏಪ್ರಿಲ್ 14 ರಂದು ಐದು ಭಾಷೆಗಳಲ್ಲಿ ಥಿಯೇಟರ್ಗಳಲ್ಲಿ ಬಿಡುಗಡೆಯಾಗಿದ್ದು, ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಬಿಡುಗಡೆ ದಿನದಂತೆ ಭರ್ಜರಿ ರೆಸ್ಪಾನ್ಸ್ಗಳಿಸಿರುವ ಕೆಜಿಎಫ್ ಚಾಪ್ಟರ್ 2 ವಿಶ್ವದಾದ್ಯಂತ ದಾಖಲೆ ಮಾಡಿದೆ. ಆಕ್ಷನ್ ಥ್ರಿಲ್ಲರ್ ಮೊದಲ ದಿನವೇ 130 ರಿಂದ 140 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಎಂದು ವ್ಯಾಪಾರ ವಿಶ್ಲೇಷಕರು ಭವಿಷ್ಯ ನುಡಿದಿದ್ದರು, ಅದರಂತೆ, 130 ಕೋಟಿಗೂ ಹೆಚ್ಚು ಗಳಿಗೆ ಮಾಡಿದ್ದು, ಅದರ ಆರಂಭದ ದಿನಗಳಲ್ಲಿ ದಿನಕ್ಕೆ 50 ಕೋಟಿ ರೂಪಾಯಿಗಳನ್ನು ಗಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
If Premieres are reported separately for #KGFChapter2 for Wed - Apr 13th, it would have debuted at No.3 in #USA Box Office..
ಅದ್ಭುತ ವಿಮರ್ಶೆಗಳನ್ನು ಸ್ವೀಕರಿಸಿದ ನಂತರ, ದೇಶಾದ್ಯಂತ ಥಿಯೇಟರ್ಗಳಲ್ಲಿ ಕೆಜಿಎಫ್ ಹೆಚ್ಚಿನ ಪ್ರದರ್ಶನ ಕಂಡಿದ್ದು, ಚಾಪ್ಟರ್ 2 ನ ಎರೆಡನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ದಿನ 1 ಕ್ಕಿಂತ ಹೆಚ್ಚಾಗುವ ನಿರೀಕ್ಷೆಯಿದೆ.
KGF 2 ಹಿಂದಿ ಭಾಷೆಯಲ್ಲಿ ಮುಂಗಡ ಬುಕಿಂಗ್ನಲ್ಲಿ ದಾಖಲೆಯನ್ನ ಬರೆದಿದೆ. ಇದು ಆರ್ ಆರ್ ಆರ್ ಚಿತ್ರ ಬುಕಿಂಗ್ಗಿಂತಲೂ ಹೆಚ್ಚು ಎನ್ನಲಾಗುತ್ತಿದೆ. ಟ್ರೇಡ್ ತಜ್ಞರು ಹಿಂದಿ ಅವತರಣಿಕೆಯು ಮೊದಲ ದಿನವೇ 30 ಕೋಟಿ ರೂ.ಗಳನ್ನು ಗಳಿಸಲಿದೆ ಎಂದು ಅಂದಾಜಿಸಿದ್ದರು. ಆದರೆ ಕೆಜಿಎಫ್ ಈ ಅಂದಾಜನ್ನು ಸಹ ಮೀರಿದ್ದು, ಹೆಚ್ಚಿನ ಗಳಿಕೆ ಮಾಡಿದೆ. ಇದು ಕನ್ನಡದ ಡಬ್ಬಿಂಗ್ ಸಿನಿಮಾದ ದೊಡ್ಡ ದಾಖಲೆ ಎನ್ನಬಹುದಾಗಿದೆ.
No Film in Indian cinema History has collected 60 Cr GROSS 'excluding south' in India! #KGFChapter2 (All Langs) ALL TIME RECORD GROSS in "Hindi Belt" is Over ₹61 Cr! (Excluding South) (#Baahubali2 ₹58 Cr in 40% ET era) pic.twitter.com/suDBxdF6E2
ಬಾಹುಬಲಿ ಹಿಂದಿ ಆವೃತ್ತಿಯ ದಾಖಲೆಯನ್ನು ಹಿಂದಿಕ್ಕಿ ಕೆಜಿಎಫ್ ಹಿಂದಿ ಚಿತ್ರವು 60 ಕೋಟಿ ರೂ.ಗಳನ್ನು ಗಳಿಸಿದೆ ಎಂದು ಹೇಳಲಾಗುತ್ತಿದೆ. “ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಯಾವುದೇ ಚಲನಚಿತ್ರವು ಭಾರತದಲ್ಲಿ ದಕ್ಷಿಣವನ್ನು ಹೊರತುಪಡಿಸಿ 60 ಕೋಟಿ ಸಂಗ್ರಹಿಸಿಲ್ಲ! ಎಂದು AndhraBoxOffice.com ಟ್ವೀಟ್ ಮಾಡಿದೆ.
Published by:Sandhya M
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ