KGF 2: ರಾಜ್ಯದಾದ್ಯಂತ ರಾಕಿ ಭಾಯ್ ಅಬ್ಬರ - ಥಿಯೇಟರ್ ಎದುರು ಪಟಾಕಿ ಸಿಡಿಸಿ ಸಂಭ್ರಮಾಚರಣೆ

KGF 2: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಈ ದಿನ ಫುಲ್ ಟಿಕೆಟ್ಗಳು ಮಾರಾಟವಾಗಿದ್ದು, ನಾಳೆಗೂ ಸಹ ಮುಂಗಡ ಬುಕ್ಕಿಂಗ್ ಆಗಿದೆ. ಬೆಳಗಿನ ಜಾವದಿಂದಲೇ ರಾಕಿಬಾಯ್ ಅಬ್ಬರ ಪ್ರಾರಂಭವಾಗಿದ್ದು, ಎಲ್ಲಡೆ ತೂಫಾನ್ ಬೀಸಲು ಆರಂಭಿಸಿದೆ.

ಕೆಜಿಎಫ್‌ ಚಾಪ್ಟರ್ 2

ಕೆಜಿಎಫ್‌ ಚಾಪ್ಟರ್ 2

  • Share this:
ಬಹುನಿರೀಕ್ಷಿತ ಯಶ್ (Rocking Star Yash) ಅಭಿನಯದ ಕೆಜಿಎಫ್ 2 (KGF  2) ಚಿತ್ರ ಬಿಡಗಡೆಯಾಗಿದ್ದು, ಯಶ್ ಅಭಿಮಾನಿಗಳು ಹಬ್ಬದಂತೆ ಆಚರಣೆ ಮಾಡುತ್ತಿದ್ದಾರೆ. ಸುಮಾರು 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್ ಗಳಲ್ಲಿ ಚಿತ್ರ ತೆರೆಕಂಡು ದಾಖಲೆ ಬರೆದಿದೆ. ರಾಜ್ಯದಲ್ಲಿ ಯಶ್ ಅಭಿಮಾನಿಗಳು ರಾತ್ರಿಯಿಂದಲೇ ಥಿಯೇಟರ್ ಬಳಿ ಬಂದಿದ್ದು, ಯಶ್ ಕಟೌಟ್ಗೆ ಅಭಿಷೇಕ ಮಾಡಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಬೆಂಗಳೂರಿನ  ಗೌಡನ ಪಾಳ್ಯದಲ್ಲಿರುವ ಶ್ರೀನಿವಾಸ ಚಿತ್ರಮಂದಿರದಲ್ಲಿ ನಾಲ್ಕು ಗಂಟೆಗೆ ಆರಂಭವಾದ ಎರಡನೇ ಫ್ಯಾನ್ ಷೋ ಆರಂಭವಾಗಿದ್ದು, ಬೆಳಂ ಬೆಳಗ್ಗೆ ಹುಮ್ಮಸ್ಸಿನಿಂದಲೇ ಥಿಯೇಟರ್ ಗೆ ಯಶ್ ಫ್ಯಾನ್ (Yash Fans)  ಆಗಮಿಸುತ್ತಿದ್ದು, ಶ್ರೀ ನಿವಾಸ ಥಿಯೇಟರ್ ನ 630 ಸೀಟ್ ಗಳು ಸೋಲ್ಡ್ ಔಟ್ ಆಗಿದೆ. ಈ ನಡುವೆ ಯಶ್ ಪೋಸ್ಟರ್ ಗೆ ಹಾಲಿನ ಅಭಿಷೇಕ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಸಂಭ್ರಮ ಆಚರಿಸಲಾಗುತ್ತಿದೆ.

ರಾಕಿ ಅಬ್ಬರದಲ್ಲೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮರೆಯದ ಅಭಿಮಾನಿಗಳು, ಅವರ ಪೋಸ್ಟರ್ ಗೂ ಹಾಲಿನ ಅಭಿಷೇಕ ಮಾಡಿದ್ದಾರೆ. ಅಲ್ಲದೇ, ಬೆಳಗಿನ ಜಾವ ಸಿನಿಮಾ ನೋಡಲು ಬಂದ ಜನಕ್ಕೆ ಯಶ್ ಫ್ಯಾನ್ಸ್ ತಿಂಡಿ ವಿತರಿಸಿದ್ದು, ಎಲ್ಲೆಡೆ ರಾಜಿ ಭಾಯ್ , ರಾಕಿ ಭಾಯ್ ಎಂಬ ಸದ್ದೇ ಕೇಳಿ ಬರುತ್ತಿದೆ.

ಇನ್ನು ಬೆಂಗಳೂರಿನ ಕೆಲವೆಡೆ ಮಧ್ಯರಾತ್ರಿಯಿಂದಲೇ ಚಿತ್ರಮಂದಿರಗಳಲ್ಲಿ ಮೂವಿ ರಿಲೀಸ್ ಆಗಿದ್ದು, ವೀರಭದ್ರೇಶ್ವರ ಥಿಯೇಟರ್,ಗೌಡನ್ ಪಾಳ್ಯದ ಶ್ರೀನಿವಾಸ ಥಿಯೇಟರ್, ಊರ್ವಶಿ, ಶಂಕರ್ ನಾಗ್ ಥಿಯೆಟರ್ ಸೇರಿದಂತೆ ಹಲವು ಥಿಯೇಟರ್ ಗಳಲ್ಲಿ ಗಳಲ್ಲಿ 12ಗಂಟೆಯಿಂದಲೇ ಕೆ.ಜಿಎಫ್ 2 ಶೋ ಆರಂಭವಾಗಿದೆ.

ಊರ್ವಶಿ ಥಿಯೇಟರ್ನಲ್ಲಿ ಮಿಡ್ನೈಟ್ ಶೋ ಫುಲ್ ಹೌಸ್ ಆಗಿ, ಈಗಾಗಲೇ ಎರಡು ಶೋ ಪ್ರದರ್ಶನವಾಗಿದೆ. ಬೆಳಗ್ಗೆ 7 ಗಂಟೆಗೆ ಮಾರ್ನಿಂಗ್ ಶೋ ಆರಂಭವಾಗಲಿದ್ದು, ಊರ್ವಶಿ ಥಿಯೇಟರ್ ಸುತ್ತಲೂ ರಾಕಿಂಗ್ ಸ್ಟಾರ್ ಯಶ್ ಕಟೌಟ್ ಹಾಕಿ ಅಭಿಮಾನಿಗಳು, ನೆಚ್ಚಿನ ನಟನ ಚಿತ್ರ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಬೆಂಗಳೂರಿನ ನವರಂಗ್ ಥಿಯೇಟರ್ನಲ್ಲಿ ಅಭಿಮಾನಿಗಳಿಗಾಗಿ ಸ್ಪೆಷಲ್ ಶೋ ಆಯೋಜಿಸಲಾಗಿದ್ದು, ಬೆಳಗ್ಗೆ 6 ಗಂಟೆಗೆ ಸಿನಿಮಾ ಆರಂಭವಾಗಿದೆ.

ಇದನ್ನೂ ಓದಿ: ಇಂದು ರಾಜ್ಯಾದ್ಯಂತ KGF 2 ಅಬ್ಬರ ಶುರು, 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ರಾಕಿ ಬಾಯ್ ಆರ್ಭಟ

ಕೆಜಿಎಫ್ 1 ರ ಬರೋಬ್ಬರಿ ಮೂರು ವರ್ಷದ ಬಳಿಕ ಚಾಪ್ಟರ್ 2 ಬಿಡುಗಡೆಯಾಗುತ್ತಿದ್ದು, ಈಗಾಗಲೇ ಬಹಳಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಐದು ಭಾಷೆಗಳಲ್ಲಿ ಅಂದರೆ ಕನ್ನಡ, ತೆಲುಗು, ತಮಿಳ್, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಈ ಚಿತ್ರ ತೆರೆಗೆ ಬರುತ್ತಿದ್ದು, ರಾಜ್ಯದಾದ್ಯಂತ ರಾಕಿ ಭಾಯ್ ಹವಾ ಹೆಚ್ಚಿದೆ.

ವಿವಿಧ ಜಿಲ್ಲೆಗಳಲ್ಲಿ ಸಹ ಚಿತ್ರ ಅಬ್ಬರ ಆರಂಭವಾಗಿದ್ದು, ಕೋಲಾರದಲ್ಲಿ ಕೆಜಿಎಪ್ ಚಾಪ್ಟರ್ 2 ಬೆಳಗ್ಗೆ 5 ಗಂಟೆಗೆ ಪ್ಯಾನ್ ಶೋ ಆರಂಭವಾಗಿದೆ. ನಗರದ ಶಾರದಾ ಥಿಯೇಟರ್ ನಲ್ಲಿ ಸಿನಿಮಾ ಆರಂಭವಾಗಿದ್ದು, ತಮಟೆ ವಾದ್ಯ ನುಡಿಸಿ, ಪಟಾಕಿ ಸಿಡಿಸಿ ಸಿನಿಮಾಗೆ ಅಭಿಮಾನಿಗಳು ಶುಭ ಕೋರಿದ್ದಾರೆ. ಸಿನಿಮಾ ಥಿಯೇಟರ್ ಗೆ ಕಟೌಟ್ ಕಟ್ಟಿ, ವಿದ್ಯುತ್ ಲೈಟ್ ಗಳಿಂದ ಸಿಂಗಾರ ಮಾಡಲಾಗಿದ್ದು, ಅಭಿಮಾನಿಗಳ ಸಂಭ್ರಮಕ್ಕೆ ಎಲ್ಲೆ ಇಲ್ಲದಂತಾಗಿದೆ.

ಕೊಪ್ಪಳದ ಗಂಗಾವತಿಯಲ್ಲಿ 4.15ಕ್ಕೆ ಚಿತ್ರ ಪ್ರದರ್ಶನ ಆರಂಭವಾಗಿದ್ದು, ಚಿತ್ರ ಆರಂಭಕ್ಕೂ ಮೊದಲು ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಅಲ್ಲದೇ,
ಟಿಕೆಟ್ ಖರೀದಿಗೆ ನೂಕು ನುಗ್ಗಲಾಗಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಟ್ಟಿದ್ದಾರೆ. ಟಿಕೆಟ್ ಖರೀದಿಗೆ ನಿನ್ನೆ ರಾತ್ರಿಯಿಂದಲೇ ಚಿತ್ರ ಮಂದಿರಕ್ಕೆ ಅಭಿಮಾನಿಗಳು ಬಂದಿದ್ದು, ನಿನ್ನೆ ರಾತ್ರಿ 10 ಗಂಟೆಯಿಂದ ಟಿಕೆಟ್ ಕೌಂಟರ್ ಮುಂದೆ ಕ್ಯೂ ನಿಂತಿದ್ದಾರೆ.

ಇದನ್ನೂ ಓದಿ: ರೆಕಾರ್ಡ್ಸ್ ಬ್ರೇಕ್ ಮಾಡೋಕೆ ಆರಂಭಿಸಿದ ರಾಕಿಬಾಯ್, ಎಲ್ಲಡೆ ಸುಲ್ತಾನ್​ದೆ ಹವಾ..!

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಈ ದಿನ ಫುಲ್ ಟಿಕೆಟ್ಗಳು ಮಾರಾಟವಾಗಿದ್ದು, ನಾಳೆಗೂ ಸಹ ಮುಂಗಡ ಬುಕ್ಕಿಂಗ್ ಆಗಿದೆ. ಬೆಳಗಿನ ಜಾವದಿಂದಲೇ ರಾಕಿಬಾಯ್ ಅಬ್ಬರ ಪ್ರಾರಂಭವಾಗಿದ್ದು, ಎಲ್ಲಡೆ ತೂಫಾನ್ ಬೀಸಲು ಆರಂಭಿಸಿದೆ. ಸುಲ್ತಾನನ ಅಬ್ಬರಕ್ಕೆ ಸಧ್ಯ ಒಂದೊಂದೇ ದಾಖಲೆಗಳು ಉಡೀಸ್ ಆಗುತ್ತಿದ್ದು, ಬಿಡುಗಡೆ ದಿನವೇ ದಾಖಲೆಯ ಕಲೇಕ್ಷನ್ ಮಾಡುವ ಎಲ್ಲಾ ನಿರೀಕ್ಷೆಯಿದೆ. ಅಲ್ಲದೇ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆಯಲು ಯಶ್ ಮುನ್ನುಡಿ ಬರೆದಿದ್ದಾರೆ.
Published by:Sandhya M
First published: