ಕಾಂತಾರ ಭಯಂಕರ, ರಾಘವೇಂದ್ರ ಸ್ಟೋರ್ಸ್ ಕಚಗುಳಿ! KGF 2 ಜೊತೆ ಇವುಗಳ ಟೀಸರ್ ನೋಡಿ

ಕೆಜಿಎಫ್ ಚಾಪ್ಟರ್ 2 ಸಿನಿಮಾ ಜೊತೆಯೇ ಕಾಂತಾರ ಮತ್ತು ರಾಘವೇಂದ್ರ ಸ್ಟೋರ್ಸ್ ಎಂಬ ಎರಡು ಸಿನಿಮಾಗಳ ಟೀಸರ್ ಬಿಡುಗಡೆಯಾಗಿದೆ.

ಕಾಂತಾರ

ಕಾಂತಾರ

 • Share this:

  ಕಾಂತಾರ- ಈ ಹೆಸರೇ ಕೊಂಚ ವಿಚಿತ್ರವೂ ವಿಭಿನ್ನವೂ ಅನಿಸುವಂತಿದೆ. ಇದು ಕೆಜಿಎಫ್ ಚಾಪ್ಟರ್ 1 ಮತ್ತು 2 (KGF Chapter 1 and 2) ಎರಡನ್ನೂ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್ (Hombale Films)​ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರದ ಹೆಸರು. ರಿಷಬ್ ಶೆಟ್ಟಿ (Rishab Shetty) ನಿರ್ದೇಶನ ಮತ್ತು ಅಭಿನಯದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಟೀಸರ್ ಬಿಡುಗಡೆಗೊಂಡಿದೆ. ಕೆಜಿಎಫ್ ಚಾಪ್ಟರ್ 2 ಸಿನಿಮಾ ಜೊತೆಯೇ ಕಾಂತಾರ (Kanthara Teaser) ಮತ್ತು ರಾಘವೇಂದ್ರ ಸ್ಟೋರ್ಸ್ (Raghavendra Stores Teaser)ಎಂಬ ಎರಡು ಸಿನಿಮಾಗಳ ಟೀಸರ್ ಬಿಡುಗಡೆಯಾಗಿದೆ.


  ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ಕರಾವಳಿ ಭಾಗದ ಗ್ರಾಮೀಣ ಯುವಕನಾಗಿ ಕಾಣಿಸಿಕೊಂಡಿದ್ದಾರೆ. ಕರಾವಳಿಯ ಧಾರ್ಮಿಕ ಆಚಾರ ವಿಚಾರ, ಸಂಪ್ರದಾಯ, ಆಚರಣೆಗಳನ್ನು ನಂಬಿಕೊಂಡು ಬರುತ್ತಿರುವ ಸಮುದಾಯಕ್ಕೆ ಪೊಲೀಸ್ ಆಫೀಸರ್ ಆಗಿರುವ ಕಿಶೋರ್ ಸೆಡ್ಡು ಹೊಡೆಯುತ್ತಾರೆ. ಪೊಲೀಸ್ ಅಧಿಕಾರಿ ಮತ್ತು ಕರಾವಳಿ ಯುವಕನ ನಡುವಿನ ತಿಕ್ಕಾಟಗಳು ಚಿತ್ರವನ್ನು ತುದಿಗಾಲಲ್ಲಿ ಕುಳಿತು ನೋಡುವಂತೆ ಮಾಡುತ್ತವೆ ಎಂದು ಟೀಸರ್ ನೋಡಿ ಅನಿಸುತ್ತದೆ.  ಅಷ್ಟೇ ಅಲ್ಲದೇ ಕೆಜಿಎಫ್ ಚಾಪ್ಟರ್ 2 ಸಿನಿಮಾ ಜೊತೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯ ಇನ್ನೊಂದು ಸಿನಿಮಾ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಟೀಸರ್ ಸಹ ಬಿಡುಗಡೆಗೊಂಡಿದೆ.   ಇದೇ ಮೊದಲ ಬಾರಿಗೆ ಹೊಂಬಾಳೆ ಫಿಲ್ಮ್ಸ್ ಜಗ್ಗೇಶ್ ಅವರ ಚಿತ್ರಕ್ಕೆ ಹಣ ಹೂಡಿದೆ. ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ 40 ವರ್ಷ ದಾಟಿದರೂ ಮದುವೆಯಾಗದ ಅಡುಗೆ ಭಟ್ಟರ ಪಾತ್ರದಲ್ಲಿ ಜಗ್ಗೇಶ್ ಕಚಗುಳಿ ಇಟ್ಟಿದ್ದಾರೆ. ಇಡೀ ಟೀಸರ್ ನಗೆಗಡಲಲ್ಲಿ ಉಕ್ಕಿಸುತ್ತದೆ.  ಇದನ್ನೂ ಓದಿ: KGF Chapter 2 ನಂತರ ಕೆಜಿಎಫ್ ಚಾಪ್ಟರ್ 3 ಬರಲಿದೆಯೇ?

  ವಿಶ್ವದಾದ್ಯಂತ 10,500 ಅಧಿಕ ಸ್ಕ್ರೀನ್​ಗಳಲ್ಲಿ ಕೆಜಿಎಫ್ ಚಾಪ್ಟರ್-2 ತೆರೆಕಂಡಿದೆ. ಭಾರತದಲ್ಲಿ 6000 ಅಧಿಕ ಸ್ಕ್ರೀನ್​ಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಉತ್ತರ ಭಾರತದಲ್ಲಿ 4000 ಸ್ಕ್ರೀನ್​ಗಳಲ್ಲಿ ಸಿನಿಮಾ (KGF-2 Movie) ರಿಲೀಸ್ ಆಗಿದ್ದು ಕರ್ನಾಟಕದಲ್ಲಿ 550 ಥಿಯೇಟರ್ಗಳಲ್ಲಿ ಕೆಜಿಎಫ್ ಚಾಪ್ಟರ್ 2 (KGF Chapter 2) ಅಬ್ಬರಿಸುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಕೆಜಿಎಫ್ ಚಾಪ್ಟರ್ 3 (KGF Chapter 3) ಬರುವ ಕುರಿತು ಮಾತನಾಡುತ್ತಿದ್ದಾರೆ. ಕೆಜಿಎಫ್ ಚಾಪ್ಟರ್ 2ನಲ್ಲಿ ಕೆಜಿಎಫ್ ಚಾಪ್ಟರ್ 3 ಕುರಿತು ಸಣ್ಣ ಹಿಂಟ್ ಕೊಡಲಾಗಿದೆ ಎಂದೇ ಅಭಿಮಾನಿಗಳು (Rocking Star Yash Fans) ಗುಸುಗುಸು ಪಿಸುಮಾತನಾಡುತ್ತಿದ್ದಾರೆ.

  ಸಿನಿ ಪ್ರೇಮಿಗಳಲ್ಲಿ ಪ್ರಶಾಂತ್ ನೀಲ್ ಮನವಿ
  ಈ ಮಧ್ಯೆ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್, ಅಭಿಮಾನಿಗಳು ಜನರಲ್ಲಿ ಒಂದು ಮನವಿ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಚಿತ್ರ ರಸಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ. “ಚಿತ್ರ ರಿಲೀಸ್ ಆದ ಮೇಲೆ ಯಾರೂ ಕೂಡ ಚಿತ್ರದ ವಿಡಿಯೋ ತುಣುಕು ಮತ್ತು ಫೋಟೋಗಳನ್ನು ಆನ್ ಲೈನ್ ನಲ್ಲಿ ಹಂಚಿಕೊಳ್ಳಬೇಡಿ” ಎಂದು ಮನವಿ ಮಾಡಿದ್ದಾರೆ.

  ಇದನ್ನೂ ಓದಿKGF Chapter 2 Piracy Leak: ಕೆಜಿಎಫ್ 2ಗೆ ಪೈರಸಿ ಶಾಕ್: ಕೆಲ ವೆಬ್​ಸೈಟ್​ಗಳಲ್ಲಿ ಇಡೀ ಚಿತ್ರ ಲೀಕ್

  ಆದರೆ ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೆ ಮುನ್ನವೇ ನಿರ್ದೇಶಕ ಪ್ರಶಾಂತ್ ನೀಲ್ ಅವರು 'ಕೆಜಿಎಫ್: ಅಧ್ಯಾಯ 3' ಕುರಿತು ಎದ್ದಿರುವ ಪ್ರಶ್ನೆಗಳಿಗೆ ಅಂತ್ಯ ಹಾಡಿದ್ದರು. ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ್ದ ಸಂದರ್ಶನದಲ್ಲಿ ಈಕುರಿತು ಸ್ಪಷ್ಟನೆ ನೀಡಿದ್ದ ಅವರು, ಕೇವಲ ಮುಂದುವರೆಸುವ ಸಲುವಾಗಿಯೇ ಕೆಜಿಎಫ್ ಅಧ್ಯಾಯದ ಸರಣಿಯನ್ನು ವಿಸ್ತರಿಸುವ ಉದ್ದೇಶವಿಲ್ಲ ಎಂದು ಹೇಳಿಕೊಂಡಿದ್ದರು.
  Published by:guruganesh bhat
  First published: