- ಅನಿತಾ ಈ,
ಸ್ಯಾಂಡಲ್ವುಡ್ ಬಗ್ಗೆ ರಾಷ್ಟ್ರಮಟ್ಟದಲ್ಲಿ ಎಲ್ಲರೂ ಮಾತನಾಡುವಂತೆ ಮಾಡಿದ ಸಿನಿಮಾ 'ಕೆ.ಜಿ.ಎಫ್'. ಹೌದು, ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಐದು ಭಾಷೆಗಳಲ್ಲಿ ತೆರೆ ಕಂಡಿದ್ದ ಕನ್ನಡದ ಮೊದಲ ಸಿನಿಮಾ 'ಕೆ.ಜಿ.ಎಫ್'. ಈ ಸಿನಿಮಾ ಬಿಡುಗಡೆಯಾಗಿ ಕನ್ನಡದಲ್ಲೇ ನೂರು ಕೋಟಿಯ ಕ್ಲಬ್ ಸೇರಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.
ಟಾಲಿವುಡ್, ಬಾಲಿವುಡ್, ಮಾಲಿವುಡ್ ಹಾಗೂ ಕಾಲಿವುಡ್ನಲ್ಲೂ ಕನ್ನಡದ ಸಿನಿಮಾ ಹಾಗೂ ಯಶ್ ಬಗ್ಗೆ ಸಾಕಷ್ಟು ಮಾತುಕತೆ ನಡೆದಿತ್ತು. ಕಳೆದ ವರ್ಷದ ಬ್ಲಾಕ್ಬಸ್ಟರ್ ಹಿಟ್ ಆಗ ಈ ಸಿನಿಮಾದ 'ಚಾಪ್ಟರ್ 2' ಬಗ್ಗೆ ಈಗ ಬೆಟ್ಟದಷ್ಟು ನಿರೀಕ್ಷೆ ಇದೆ.
ಇದನ್ನೂ ಓದಿ: KGF Chapter 2: ನಿನ್ನೆಯಿಂದ ಆರಂಭವಾಗಿದೆ 'ಕೆ.ಜಿ.ಎಫ್ ಚಾಪ್ಟರ್ 2' ಚಿತ್ರೀಕರಣ
ಮೊದಲ ಸಿನಿಮಾವನ್ನು 80 ಕೋಟಿ ಬಜೆಟ್ನಲ್ಲಿ ವಿಜಯ್ ಕಿರಂಗದೂರು ಅವರು ನಿರ್ಮಿಸಿದ್ದರು. ಈಗ ಇದೇ ನಿರ್ಮಾಪಕ 'ಚಾಪ್ಟರ್ 2'ಗೆ ನೂರು ಕೋಟಿ ಹಣ ಹೂಡಲಿದ್ದಾರಂತೆ. ಈಗಾಗಲೇ ಈ ಸಿನಿಮಾ ಚಿತ್ರೀಕರಣ ಆರಂಭವಾಗಿದ್ದು, ಚಿತ್ರೀಕರಣ ಭರದಿಂದ ಸಾಗಿದೆ.
ಹೀಗಿರುವಾಗಲೇ 'ಕೆ.ಜಿ.ಎಫ್' ಅಡ್ಡಾದಿಂದ ಹೊಸದೊಂದು ಸುದ್ದಿ ಹೊರ ಬಿದ್ದಿದೆ. ಅದೇ ಸಿನಿಮಾದ ಬಜೆಟ್. ಹೌದು, ಈ ಸಿನಿಮಾದ ಚಿತ್ರೀಕರಣದ ಒಟ್ಟು ವೆಚ್ಚ ಈಗಾಗಲೇ ನೂರು ದಾಟಿದೆ ಎಂದು ಅಂದಾಜಿಸಲಾಗುತ್ತಿದೆ.
KGF Chapter 2: 'ಕೆ.ಜಿ.ಎಫ್ ಚಾಪ್ಟರ್ 2' ಚಿತ್ರೀಕರಣದ ಸೆಟ್ನಲ್ಲಿ ಪ್ರಶಾಂತ್ ನೀಲ್ ಹಾಗೂ ಭುವನ್ ಗೌಡ
ಇದನ್ನೂ ಓದಿ: ಯೂಟ್ಯೂಬ್ನಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದ ಹಾಡಾಗಿ ಹೊರ ಹೊಮ್ಮಿದ 'ಚುಟು ಚುಟು...' ಗೀತೆ..!
ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಶೇ 90ರಷ್ಟು ಮುಗಿದಿದೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಈ ಹಿಂದೆಯೇ ತಿಳಿಸಿದ್ದರು. ಮೊದಲ ಭಾಗ ಹಿಟ್ ಆದ ಕಾರಣಕ್ಕೆ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದ್ದು, ಅದನ್ನು ಮುಟ್ಟುವ ಸಲುವಾಗಿ ಸಿನಿಮಾದ ಬಜೆಟ್ ಸಹ ಹೆಚ್ಚು ಮಾಡಲಾಗಿದೆಯಂತೆ. ಹೀಗಾಗಿ 'ಚಾಪ್ಟರ್ 2' ಬಿಗ್ ಬೆಟ್ ಸಿನಿಮಾ ಆಗುವುದರಲ್ಲಿ ಯಾವುದೇ ಅನುಮಾವಿಲ್ಲ ಎನ್ನುತ್ತಿದೆ ಗಾಂಧಿನಗರ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ