KGF 2: ಮುಂದುವರೆದ 'ನರಾಚಿ ಅಧಿಪತಿ'ಯ ಓಟ! ಸಾವಿರ ಕೋಟಿ ಕ್ಲಬ್​ ಸೇರಿದ ಕನ್ನಡದ ಕೆಜಿಎಫ್​ 2

ರಾಕಿಂಗ್ ಸ್ಟಾರ್ ಯಶ್ (Rcoking Star Yash) ಮತ್ತು ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ 'ಕೆಜಿಎಫ್ - 2‘ (KGF 2) ಚಿತ್ರವು ದಿನೇ ದಿನೇ ಒಂದಿಲ್ಲಾ ಒಂದು ದಾಖಲೆಯನ್ನು ಮಾಡುತ್ತಿದೆ. ಅದರೊಂದಿಗೆ ಬಾಕ್ಸ್ ಆಫೀಸ್​ ನಲ್ಲಿ ಭರ್ಜರಿ ಕಲೇಕ್ಷನ್ ಮಾಡುತ್ತಿದ್ದು, ರಾಕಿ ಬಾಯ್ ಅಬ್ಬರವನ್ನು ತಡಯಲು ಯಾರಿಂದಲೂ ಆಗುತ್ತಿಲ್ಲ. 

ರಾಕಿಂಗ್​ ಸ್ಟಾರ್​ ಯಶ್​​

ರಾಕಿಂಗ್​ ಸ್ಟಾರ್​ ಯಶ್​​

  • Share this:
ಇದುವರೆಗೂ ಕನ್ನಡ ಚಿತ್ರ ಮಾಡಿರದ ದಾಖಲೆ ರಾಕಿಭಾಯ್ (Rocky Bhai) ಸಿನಿಮಾ ಮಾಡಿದೆ. ಬರೋಬ್ಬರಿ ಒಂದು ಸಾವಿರ ಕೋಟಿ ಕಲೆಕ್ಷನ್ (1000 Crore Collection) ಮಾಡೋ ಮೂಲಕ ಭಾರತೀಯ ಸಿನಿರಂಗದಲ್ಲಿ ಯಶ್ ಚಿತ್ರ ದಾಖಲೆ ಬರೆದಿದೆ. ರಾಕಿಂಗ್ ಸ್ಟಾರ್ ಯಶ್ (Rcoking Star Yash) ಮತ್ತು ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ 'ಕೆಜಿಎಫ್ - 2‘ (KGF 2) ಚಿತ್ರವು ದಿನೇ ದಿನೇ ಒಂದಿಲ್ಲಾ ಒಂದು ದಾಖಲೆಯನ್ನು ಮಾಡುತ್ತಿದೆ. ಅದರೊಂದಿಗೆ ಬಾಕ್ಸ್ ಆಫೀಸ್​ ನಲ್ಲಿ ಭರ್ಜರಿ ಕಲೇಕ್ಷನ್ ಮಾಡುತ್ತಿದ್ದು, ರಾಕಿ ಬಾಯ್ ಅಬ್ಬರವನ್ನು ತಡಯಲು ಯಾರಿಂದಲೂ ಆಗುತ್ತಿಲ್ಲ. ಕೆಜಿಎಫ್ (KGF-2) ಸಿನಿಮಾ ರಿಲೀಸ್ ಆಗಿ 3 ವಾರ ಕಳೆದರು ರಾಕಿಭಾಯ್ ಖದರ್ ಮಾತ್ರ ಕಮ್ಮಿಯಾಗಿಲ್ಲ. ಬಾಲಿವುಡ್ (Bollywood) ಬಾಕ್ಸ್ಆಫೀಸ್ನಲ್ಲಿ ಹಿಂದಿ ಸಿನಿಮಾಗಳೇ ಮಾಡಿರದ ದಾಖಲೆಯನ್ನ ಕೆಜಿಎಫ್ 2′ ಸಿನಿಮಾ ಮಾಡಿದೆ. ಇದೀಗ ಬಾಕ್ಸ್ಆಫೀಸ್​​ನಲ್ಲಿ ಸಾವಿರ ಕೋಟಿ ಕ್ಲಬ್ ಸೇರಿದೆ.

ಸಾವಿರ ಕೋಟಿ ಕ್ಲಬ್​ ಸೇರಿದ ಮೊದಲ ಕನ್ನಡ ಸಿನಿಮಾ!

ರಾಕಿ ಭಾಯ್​ ಹಾಗೂ ಪ್ರಶಾಂತ್​ ನೀಲ್​ ಕಾಂಬಿನೇಷನ್​ನಲ್ಲಿ ಬಂದಿದ್ದ ಕೆಜಿಎಫ್​ ಚಾಪ್ಟರ್​ ಒನ್​​ ಸಿನಿಮಾ ಸಖತ್ ಸೌಂಡ್ ಮಾಡಿತ್ತು, ಕೆಜಿಎಫ್​ ಚಾಪ್ಟರ್​​​2 ಮೇಲೆ ಹೆಚ್ಚು ನಿರೀಕ್ಷೆ ಬರುವಂತೆ ಮಾಡಿತ್ತು. ಕೆಜಿಎಫ್​ 2 ರಿಲೀಸ್​​ ಆದ ನಂತರ ಇಡೀ ವಿಶ್ವದಲ್ಲೇ ರೂಲ್​ ಮಾಡುತ್ತಿದ್ದೆ. ಕರ್ನಾಟಕದಲ್ಲಿ 153.8 ಕೋಟಿ, ತೆಲುಗು ರಾಜ್ಯದಲ್ಲಿ 125.7 ಕೋಟಿ, ತಮಿಳುನಾಡು 94.24 ಕೋಟಿ, ಕೇರಳದಲ್ಲಿ 53.8 ಕೋಟಿ, ಇತರೆಡೆ 402.9 ಕೋಟಿ, ಒಟ್ಟು 816.3 ಕೋಟಿ ಗಳಿಗೆ, ವಿದೇಶದಲ್ಲಿ 164.2 ಕೋಟಿ ರೂಪಾಯಿ, ಒಟ್ಟು 980.5 ಕೋಟಿ ಕಲೆಕ್ಷನ್ ಮಾಡಿದೆ.

ಹಿಂದಿ ಬಾಕ್ಸ್​ಆಫೀಸ್​ ಲೂಟಿ ಮಾಡಿದ ರಾಕಿ ಭಾಯ್​

ಎಲ್ಲೆಲ್ಲೂ `ಕೆಜಿಎಫ್ 2′ ಹಬ್ಬ ಜೋರಾಗಿದೆ. ಸಿನಿಮಾ ರಿಲೀಸ್ 2 ವಾರ ಕಳೆದರು ರಾಕಿಭಾಯ್ ಖದರ್ ಮಾತ್ರ ಕಮ್ಮಿಯಾಗಿಲ್ಲ. ಬಾಲಿವುಡ್ ಬಾಕ್ಸ್ಆಫೀಸ್‌ನಲ್ಲಿ ಹಿಂದಿ ಸಿನಿಮಾಗಳೇ ಮಾಡಿರದ ದಾಖಲೆಯನ್ನ `ಕೆಜಿಎಫ್ 2′ ಸಿನಿಮಾ ಮಾಡಿದೆ.  ಪ್ರಸ್ತುತ ಹಿಂದಿ ಬಾಕ್ಸ್ಆಫೀಸ್​ನಲ್ಲಿ 353.06 ಕೋಟಿ ಬಾಚಿದೆ. ಈ ಮೂಲಕ ಬಾಕ್ಸ್ಆಫೀಸ್ ನರಾಚಿ ಅಧಿಪತಿಯ ಸುಂಟರಗಾಳಿ ಓಟ ಮುಂದುವರೆದಿದೆ. ರಾಕಿಭಾಯ್ ಇಂಡಿಯನ್ ಸಿನಿಮಾ ಬಾಕ್ಸ್ಆಫೀಸ್‌ನ ಮಾನ್‌ಸ್ಟರ್ ಮುನ್ನುಗ್ಗುತ್ತಿದ್ದಾರೆ. ಅಭಿಮಾನಿಗಳು ಕೆಜಿಎಫ್ 3ಗಾಗಿ ಎದುರು ನೋಡ್ತಿದ್ದಾರೆ.

ಇದನ್ನೂ ಓದಿ: ಗೋವಾದಲ್ಲಿ ಕೆಜಿಎಫ್​ 2 ನೋಡಿದ ರಾಧಿಕಾ ಪಂಡಿತ್​ & ಫ್ಯಾಮಿಲಿ! ಅಪ್ಪನ ಸಿನಿಮಾ ನೋಡಿ ಮಕ್ಕಳು ಹೀಗಂದ್ರು

ಗೋವಾದಲ್ಲಿ ಕೆಜಿಎಫ್ 2 ನೋಡಿದ ರಾಧಿಕಾ & ಫ್ಯಾಮಿಲಿ!

ಹೌದು, ರಾಕಿಂಗ್​ ಸ್ಟಾರ್​ ಯಶ್​ ಕುಟುಂಬ ಸದ್ಯ ಗೋವಾದಲ್ಲಿ ಬಿಡು ಬಿಟ್ಟಿದೆ. ರಾಧಿಕಾ ಪಂಡಿತ್ ಅವರ ಫ್ಯಾಮಿಲಿ ಕೂಡ ಗೋವಾದಲ್ಲಿ. ಹೀಗೆ ಎಲ್ಲರೂ ಒಟ್ಟಾಗಿ ಕೆಜಿಎಫ್​ 2 ಸಿನಿಮಾ ನೋಡಿದ್ದಾರೆ. ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ರಾಧಿಕಾ ಪಂಡಿತ್​ ಅಪ್​ಡೇಟ್​ ನೀಡಿದ್ದಾರೆ. ಕಸಿನ್ಸ್​ ಹಾಗೂ ಅಮ್ಮನ ಜೊತೆ ಕೆಜಿಎಫ್​ 2 ಸಿನಿಮಾ ನೋಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಅವರ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ: KGF 2 ಅಬ್ಬರಕ್ಕೆ ಬಾಲಿವುಡ್ ಶೇಕ್, ಬಾಕ್ಸ್ ಆಫೀಸ್ ಸುಲ್ತಾನನಾದ ರಾಕಿ ಬಾಯ್!​

ಯಶ್​ ಕೆನ್ನೆಗೆ ಮುತ್ತಿಟ್ಟ ಪ್ರಶಾಂತ್ ನೀಲ್​ - ವಿಜಯ್​ ಕಿರಗಂದೂರ್​!

ಕೆಜಿಎಫ್​ ಚಾಪ್ಟರ್​​ 1 ಸಿನಿಮಾ ಸೂಪರ್​ ಡೂಪರ್​ ಹಿಟ್​ ಆಗಿತ್ತು. ಆಗಲು ಕೆಜಿಎಫ್​ ಟೀಂ ರಿಲ್ಯಾಕ್ಸ್​ಗಾಗಿ ಟ್ರಿಪ್​ ಹೋಗಿತ್ತು. ಈಗಲೂ ಕೆಜಿಎಫ್​ ಟೀಂ ಗೋವಾಗೆ ತೆರಳಿದೆ. ಕಳೆದ ಬಾರಿಯಂತೆ ಸೆಲೆಬ್ರೇಷನ್​ ಮಾಡಿದ್ದಾರೆ. ಕೆಜಿಎಫ್​ 1 ಹಿಟ್​ ಆದಾಗ, ಯಶ್​ ಕೆನ್ನೆಗೆ ನಿರ್ದೇಶಕ  ಪ್ರಶಾಂತ್​ ನೀಲ್​ ಹಾಗೂ ನಿರ್ಮಾಪಕ ವಿಜಯ್​ ಕಿರಗಂದೂರ್​ ಕಿಸ್​ ಕೊಟ್ಟಿದ್ದರು. ಈಗಲೂ ಅಷ್ಟೇ ಪ್ರಶಾಂತ್​ ಹಾಗೂ ವಿಜಯ್​ ರಾಕಿ ಭಾಯ್​ ಕೆನ್ನೆಗೆ ಮುತ್ತು ಕೊಟ್ಟು ಕೇಕ್​ ಕತ್ತರಿಸಿ ಸೆಲೆಬ್ರೇಷನ್​ ಮಾಡಿದ್ದಾರೆ. ಕೇಕ್​ನಲ್ಲಿ ಇದು ಕೇವಲ ಆರಂಭ ಎಂದು ಬರೆಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Published by:Vasudeva M
First published: