ವಿಶ್ವದ ಮೂಲೆ ಮೂಲೆಯಲ್ಲೂ ಕೆಜಿಎಫ್ 2(KGF 2) ಅಬ್ಬರ ಜೋರಾಗಿದೆ. ಬಾಕ್ಸ್ ಆಫೀಸ್(Box Office)ನಲ್ಲಿ ರಾಕಿ ಭಾಯ್ ಧೂಳೆಬ್ಬಿಸುತ್ತಿದ್ದಾರೆ. ಯಾರೂ ಊಹಿಸಿರದ ರೀತಿಯಲ್ಲಿ ಕಮಾಲ್ ಮಾಡುತ್ತಿದೆ. ಮೊದಲ ದಿನವೇ 160ಕ್ಕೂ ಹೆಚ್ಚು ಕೋಟಿ ಕಲೆಕ್ಷನ್(Collection) ಮಾಡಿದ್ದ ಕೆಜಿಎಫ್ 2, ಎರಡನೇ ದಿನವೂ ತನ್ನ ಓಟ ಮುಂದುವರೆಸಿದೆ. ರಾಕಿಂಗ್ ಸ್ಟಾರ್ ಯಶ್(Rocking Star Yash) ಅಭಿನಯದ ‘ಕೆಜಿಎಫ್: ಚಾಪ್ಟರ್ 2’(KGF Chapter 2) ಸಿನಿಮಾ ಬಾಕ್ಸ್ ಆಫೀಸ್ ದಾಖಲೆ(Record)ಗಳ ಪಟ್ಟಿಯಲ್ಲಿ ಇತರೆ ಚಿತ್ರಗಳೆದುರು ತೊಡೆ ತಟ್ಟಿ ನಿಂತಿದೆ. ಕಲೆಕ್ಷನ್ ಲೆಕ್ಕಾಚಾರದಲ್ಲಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಮುನ್ನುಗ್ಗುತ್ತಿದೆ. ‘ಕೆಜಿಎಫ್: ಚಾಪ್ಟರ್ 2’ ಚಿತ್ರ ಎರಡು ದಿನಗಳಲ್ಲಿ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ? ಈ ದಾಖಲೆಯನ್ನು ಟಚ್ ಮಾಡುವುದರಲಿ, ಈ ದಾಖಲೆಯತ್ತರ ಬರೋದಕ್ಕೂ ಮತ್ತೆ ರಾಕಿನೇ ಬರಬೇಕು ಅಂತಿದ್ದಾರೆ ಸಿನಿಪಂಡಿತರು. ಒಂದು ಕನ್ನಡ ಸಿನಿಮಾ ಈ ಮಟ್ಟಕ್ಕೆ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವುದು ಕನ್ನಡಿಗರ ಹೆಮ್ಮೆ ಎಂದರೆ ತಪ್ಪಾಗಲಾರದು.
ಎರಡನೇ ದಿನ 240 ಕೋಟಿ ರೂಪಾಯಿ ಕಲೆಕ್ಷನ್!
ಅಬ್ಬಬ್ಬಾ.. ಹೌದು, ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿರುವ ಪ್ರಕಾರ, ಎರಡು ದಿನಗಳಲ್ಲಿ ಚಿತ್ರ ಭಾರತದಲ್ಲಿ ಬರೋಬ್ಬರಿ 240 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ವಿಚಾರ ತಿಳಿದು ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಬಾಲಿವುಡ್ನಲ್ಲಂತೂ ‘ಕೆಜಿಎಫ್: ಚಾಪರ್ 2’ ಸಿನಿಮಾ ಅಕ್ಷರಶಃ ಸುನಾಮಿಯೇ ಸೃಷ್ಟಿಸಿದೆ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಹಿಂದಿ ವರ್ಷನ್ ಬಿಡುಗಡೆಯಾದ ಮೊದಲ ದಿನ ಭಾರತದಲ್ಲಿ 53.95 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನ ‘ಕೆಜಿಎಫ್: ಚಾಪ್ಟರ್ 2’ ಹಿಂದಿ ವರ್ಷನ್ ಭಾರತದಲ್ಲಿ ಒಟ್ಟು 46.79 ಕೋಟಿ ರೂಪಾಯಿ ಬಾಚಿಕೊಂಡಿದೆ.
ಹಿಂದಿಯಲ್ಲಿ ಸರ್ವಕಾಲಿಕ ದಾಖಲೆ ಬರೆದ ಕೆಜಿಎಫ್ 2!
ಎರಡು ದಿನಗಳಲ್ಲಿ ಹಿಂದಿ ವರ್ಷನ್ 100.74 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಾಗಂತ ಟ್ರೇಡ್ ಎಕ್ಸ್ಪರ್ಟ್ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.ಎರಡು ದಿನಗಳಲ್ಲೇ 100.74 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಬಾಲಿವುಡ್ನಲ್ಲಿ ‘ಕೆಜಿಎಫ್: ಚಾಪ್ಟರ್ 2’ ಹೊಸ ದಾಖಲೆ ನಿರ್ಮಿಸಿದೆ.
ಇದನ್ನೂ ಓದಿ: ರಾಕಿ ಅಬ್ಬರದ ನಡುವೆ ದೊಡ್ಡದಾಗಿ ಸೌಂಡ್ ಮಾಡ್ತಿರೋ `ದೊಡ್ಡಮ್ಮ’! ಇದರ ಸ್ಪೆಷಾಲಿಟಿ ಏನ್ ಅಂತ ಇಲ್ಲಿದೆ
ವರ್ಲ್ಡ್ ವೈಡ್ ಕೆಜಿಎಫ್ 2 ಕಲೆಕ್ಷನ್ ಎಷ್ಟು?
ವಿಶ್ವದಾದ್ಯಂತ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಎರಡು ದಿನಗಳಲ್ಲಿ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಅಂತ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಪಕ್ಕಾ ಸಾವಿರ ಕೋಟಿ ಕ್ಲಬ್ ಸೇರುತ್ತೆ ಅಂತ ಸಿನಿಪಂಡಿತರು ಹೇಳುತ್ತಿದ್ದಾರೆ.
ಮೊದಲ ದಿನ 135 ಕೋಟಿ ಕಲೆಕ್ಷನ್!
ಕೆಜಿಎಫ್ 2 ಮೊದಲ ದಿನದಲ್ಲಿ 130 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, ದಾಖಲೆಗಳನ್ನು ಧೂಳಿಪಟ ಮಾಡಿದೆ. ಸಾಧ್ಯತೆಯಿದೆ. ಕೆಜಿಎಫ್ ಚಾಪ್ಟರ್ 2 ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಅಗಾಧವಾದ ಮೆಚ್ಚುಗೆ ಪಡೆಯುತ್ತಿದೆ. ಅತಿಹೆಚ್ಚು ಸ್ಕ್ರೀನ್ಗಳಲ್ಲಿ ಹೆಚ್ಚಿನ ಪ್ರದರ್ಶನ ಕಂಡಿರುವ ‘ಕೆಜಿಎಫ್-2’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕೊಳ್ಳೆ ಹೊಡೆದಿದೆ. ಕೆಜಿಎಫ್ 2 ಮುಂಬರುವ ದಿನಗಳಲ್ಲಿ ಇನ್ನೂ ಹಲವು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: KGF Chapter 2 ನೋಡಿ ಹಣ, ಸಮಯ ವ್ಯರ್ಥ ಎಂದ ನಟ; ಈತನಿಗೇಕೆ ಹೊಟ್ಟೆಕಿಚ್ಚು?
ದೊಡ್ಡಮ್ಮ ಅಂದರೆ M1919 ಮಿಷನ್ ಗನ್!
ಹೌದು ಟ್ರೈಲರ್ ಸೇರಿದಂತೆ ಸಿನಿಮಾದಲ್ಲಿ ದೊಡ್ಡಮ್ಮ ಅಬ್ಬರ ಜೋರಾಗಿದೆ. ಯಶ್ ಗನ್ನಿಂದ ಸಿಗರೇಟ್ ಹಚ್ಚುವ ದೃಶ್ಯ ಸಖತ್ ವೈರಲ್ ಆಗಿತ್ತು. ಈಗಲೂ ಆಗುತ್ತಿದೆ. ಈ ದೃಶ್ಯದಲ್ಲಿ ಮಿಷನ್ ಗನ್ ಬಳಸಿ ಠಾಣೆಯನ್ನೇ ಉಡೀಸ್ ಮಾಡುತ್ತಾರೆ. ಈ ಗನ್ ಹೆಸರೇ ದೊಡ್ಡಮ್ಮ. ಅಷ್ಟಕ್ಕೂ ಈ ದೊಡ್ಡಮ್ಮನ ನಿಜವಾದ ಹೆಸರು M1919. ಇದನ್ನು .30 ಕ್ಯಾಲ್ ಎಂದೂ ಕರೆಯುತ್ತಾರೆ. ಇದು ಮೆಷಿನ್ ಗನ್ ಆಗಿದ್ದು, ಇದನ್ನು ವರ್ಲ್ಡ್ ವಾರ್ 2ನಲ್ಲಿ ಬಳಸಲಾಗಿತ್ತು. ಕೊರಿಯನ್ ಯುದ್ಧ ಮತ್ತು ವಿಯೆಟ್ನಾಂ ಯುದ್ಧ ಸೇರಿದಂತೆ ಅನೇಕ ಯುದ್ಧಗಳಲ್ಲಿ ಬಳಸಲಾಯಿತು. ಇದನ್ನು ಜಾನ್ ಬ್ರೌನಿಂಗ್ ಎಂಬ ಎಂಜಿನಿಯರ್ 7.62 ಎಂಎಂ ಕ್ಯಾಲಿಬರ್ನಲ್ಲಿ ಅಭಿವೃದ್ಧಿಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ