KGF 2: ರಾಕಿಂಗ್​ ಸ್ಟಾರ್​ ಯಶ್​ - ಸಿಇಓ, ಇಂಡಿಯಾ! ರೆಕಾರ್ಡ್​ ಮೇಲೆ ರೆಕಾರ್ಡ್ ಯಾರೂ ತಡೆಯೋಕ್ಕಾಗಲ್ಲ

ಯಶ್ ಅವರ ಕೆಜಿಎಫ್: ಚಾಪ್ಟರ್ 2 ಚಿತ್ರ ಎರಡನೇ ವಾರವು ತನ್ನ ಅಟ್ಟಹಾಸ ಮೆರೆಯುತ್ತಾ ಮುಂದೆ ಸಾಗಿದೆ ಎಂದು ಹೇಳಬಹುದು. ಇದು ಬರೀ ಕರ್ನಾಟಕದಲ್ಲಿ ಅಲ್ಲದೇ ವಿಶ್ವಾದ್ಯಂತ ಗಲ್ಲಾ ಪೆಟ್ಟಿಗೆಯಲ್ಲಿ ಅಭೂತ ಪೂರ್ವ ಪ್ರದರ್ಶನ ಕಾಣುತ್ತಿದೆ.

ರಾಕಿಂಗ್​ ಸ್ಟಾರ್​ ಯಶ್​

ರಾಕಿಂಗ್​ ಸ್ಟಾರ್​ ಯಶ್​

  • Share this:
ರಾಕಿಂಗ್ ಸ್ಟಾರ್ ಯಶ್ (Rocking Star Yash) ನಟನೆಯ ಕೆಜಿಎಫ್: ಚಾಪ್ಟರ್ 2 (KGF Chapter 2) ಚಿತ್ರವು ಅನೇಕ ಭಾಷೆಗಳಲ್ಲಿ ದೇಶಾದ್ಯಂತ ಬಿಡುಗಡೆಯಾಗಿ ಎರಡು ವಾರ ಆಗುತ್ತಾ ಬಂದರೂ ಸಹ ಈ ಚಿತ್ರದ ಹವಾ ಮಾತ್ರ ಸ್ವಲ್ಪವೂ ಕಡಿಮೆ ಆಗಿಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕನ್ನಡ (Kannada) ಚಲನಚಿತ್ರೋದ್ಯಮದ ಒಂದು ಚಿತ್ರ ದೇಶಾದ್ಯಂತ ಬಾಕ್ಸ್ ಆಫೀಸ್ (Box Office) ಗಲ್ಲಾ ಪೆಟ್ಟಿಗೆಯಲ್ಲಿ ಇಷ್ಟೊಂದು ಹಣ ಗಳಿಸಿ ಮತ್ತು ಬೇರೆ ಬೇರೆ ರಾಜ್ಯ(Other State) ದ ಚಲನಚಿತ್ರೋದ್ಯಮದಲ್ಲಿ ಈ ರೀತಿ ದೊಡ್ಡ ಸುದ್ದಿ ಮಾಡಿದ ಚಿತ್ರ ಮತ್ತೊಂದಿರಲಿಲ್ಲ ಎಂದು ಹೇಳಬಹುದು. 

ಯಶ್ ಅವರ ಕೆಜಿಎಫ್: ಚಾಪ್ಟರ್ 2 ಚಿತ್ರ ಎರಡನೇ ವಾರವು ತನ್ನ ಅಟ್ಟಹಾಸ ಮೆರೆಯುತ್ತಾ ಮುಂದೆ ಸಾಗಿದೆ ಎಂದು ಹೇಳಬಹುದು. ಇದು ಬರೀ ಕರ್ನಾಟಕದಲ್ಲಿ ಅಲ್ಲದೇ ವಿಶ್ವಾದ್ಯಂತ ಗಲ್ಲಾ ಪೆಟ್ಟಿಗೆಯಲ್ಲಿ ಅಭೂತ ಪೂರ್ವ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವು ತನ್ನ ಎರಡನೇ ವಾರದಲ್ಲಿ 900 ಕೋಟಿ ರೂಪಾಯಿಗಳ ಕ್ಲಬ್ ಅನ್ನು ಪ್ರವೇಶಿಸಿತು ಮತ್ತು ಇನ್ನೂ ಬಲವಾಗಿ ಸಾಗುತ್ತಿದೆ ಎಂದು ಹೇಳಬಹುದು.

ಶೀಘ್ರದಲ್ಲೇ ಸಾವಿರ ಕೋಟಿ ಕ್ಲಬ್​ ಸೇರಲಿದೆ ಕೆಜಿಎಫ್​ 2!

ಶೀಘ್ರದಲ್ಲಿಯೇ ಕೆಜಿಎಫ್: ಚಾಪ್ಟರ್ 2 1000 ಕೋಟಿ ರೂಪಾಯಿಗಳ ಗಡಿ ದಾಟಲಿದೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಹೇಳುವುದಾದರೆ ಕೆಜಿಎಫ್: ಚಾಪ್ಟರ್ 2 ಚಿತ್ರವು ಲಾಭದ ದೃಷ್ಟಿಯಿಂದ ತೆಲುಗು ಚಿತ್ರೋದ್ಯಮದ ಜನಪ್ರಿಯ ನಿರ್ದೇಶಕರಾದ ಎಸ್.ಎಸ್.ರಾಜಮೌಳಿ ಅವರ ‘ಆರ್‌ಆರ್‌ಆರ್’ ಚಿತ್ರಗಿಂತಲೂ ಕೆಜಿಎಫ್: ಚಾಪ್ಟರ್ 2 ಚಿತ್ರವು ದೊಡ್ಡ ಮಟ್ಟದ ಹಿಟ್ ಕಂಡಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರ ಚಿತ್ರಕ್ಕಾಗಿ ವಿಶ್ವಾದ್ಯಂತ ಚಿತ್ರ ಮಂದಿರಗಳಲ್ಲಿ ಹೆಚ್ಚಿನ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.

ಯಶ್ 'ಕೆ.ಜಿ.ಎಫ್': ಚಾಪ್ಟರ್ 2 ಚಿತ್ರದ ಹವಾ

ಕೆಜಿಎಫ್: ಚಾಪ್ಟರ್ 2 ಚಿತ್ರವು ಏಪ್ರಿಲ್ 14 ರಂದು ಚಿತ್ರಮಂದಿರಗಳಲ್ಲಿ ತೆರೆ ಕಂಡಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಏಕಾಂಗಿಯಾಗಿ ಪ್ರಾಬಲ್ಯ ಸಾಧಿಸಿದೆ. ದಳಪತಿ ವಿಜಯ್ ಅವರ ‘ಬೀಸ್ಟ್’, ಶಾಹಿದ್ ಕಪೂರ್ ಅವರ ‘ಜೆರ್ಸಿ’ ಮತ್ತು ರಾಜಮೌಳಿ ಅವರ ‘ಆರ್‌ಆರ್‌ಆರ್’ ಚಿತ್ರಗಳನ್ನು ಕೆಜಿಎಫ್ 2 ಚಿತ್ರ ಚಿತ್ರಮಂದಿರಗಳಲ್ಲಿ ಹಿಂದಿಕ್ಕುವಲ್ಲಿ ಯಶಸ್ವಿಯಾಯಿತು. ಈ ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಅಪಾರ ವಿಮರ್ಶೆಗಳನ್ನು ಪಡೆಯಿತು.

ಇದನ್ನೂ ಓದಿ: ವ್ಹಾ, ಕೊನೆಗೂ ಕೆಜಿಎಫ್​ 3 ಸುಳಿವು ಕೊಟ್ಟ ಯಶ್​​! ಅದ್ರಲ್ಲಿ ಮತ್ಯಾವ ಸಾಮ್ರಜ್ಯ ಆಳ್ತಾರೋ ರಾಕಿ ಭಾಯ್​​?

ವಾಣಿಜ್ಯ ವಿಶ್ಲೇಷಕ ರಮೇಶ್ ಬಾಲಾ ಅವರ ಪ್ರಕಾರ, ಕೆಜಿಎಫ್: ಚಾಪ್ಟರ್ 2 ಚಿತ್ರವು ಕರ್ನಾಟಕದಲ್ಲಿ 11 ದಿನಗಳಲ್ಲಿ 145 ಕೋಟಿ ರೂಪಾಯಿ ಗಳಿಕೆ ಮಾಡಿದೆ. ತಮಿಳು ನಟ ದಳಪತಿ ವಿಜಯ್ ಅವರ ‘ಬೀಸ್ಟ್’ ಚಿತ್ರವು 12.10 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದಲ್ಲಿ ಮಾತ್ರವಲ್ಲದೇ, ಕೆಜಿಎಫ್: ಚಾಪ್ಟರ್ 2 ಅಮೆರಿಕ ಮತ್ತು ಯುಕೆಯಲ್ಲಿಯೂ ಅಸಾಧಾರಣ ಪ್ರದರ್ಶನ ಕಾಣುತ್ತಿದೆ. ಅಮೆರಿಕದಲ್ಲಿ ಕೆಜಿಎಫ್: ಚಾಪ್ಟರ್ 2 ಚಿತ್ರವು ಗಳಿಕೆಯಲ್ಲಿ ಮುಂದಿದ್ದರೆ, ಎರಡನೇ ಸ್ಥಾನದಲ್ಲಿ ‘ಜೆರ್ಸಿ’ ಮತ್ತು ಮೂರನೆಯ ಸ್ಥಾನದಲ್ಲಿ ‘ಆರ್‌ಆರ್‌ಆರ್’ ಚಿತ್ರವಿದೆ ಎಂದು ಹೇಳಲಾಗುತ್ತಿದೆ. ದಳಪತಿ ವಿಜಯ್ ಅಭಿನಯದ ‘ಬೀಸ್ಟ್’ ಚಿತ್ರ ಗಳಿಕೆಯಲ್ಲಿ ನಾಲ್ಕನೆಯ ಸ್ಥಾನದಲ್ಲಿದೆ.

ಏನಿದು ಕೆಜಿಎಫ್: ಚಾಪ್ಟರ್ 2 ಚಿತ್ರ

ನಿರ್ದೇಶಕ ಪ್ರಶಾಂತ್ ನೀಲ್ ಅವರ ಕೆಜಿಎಫ್ ಚಿತ್ರ (ಕೋಲಾರ ಗೋಲ್ಡ್ ಫೀಲ್ಡ್ಸ್) ಯಶ್ ನಿರ್ವಹಿಸಿದ ರಾಕಿ ಭಾಯ್ ಅವರ ಜೀವನ ಪ್ರಯಾಣದ ಕಥೆಯನ್ನು ಹೇಳುತ್ತದೆ. ಎರಡನೇ ಭಾಗದಲ್ಲಿ, ಬಾಲಿವುಡ್ ನಟ ಸಂಜಯ್ ದತ್ ಅವರ ಅಧೀರ ಮತ್ತು ನಟಿ ರವೀನಾ ಟಂಡನ್ ಅವರ ರಮಿಕಾ ಸೇನ್ ಪಾತ್ರಗಳಲ್ಲಿ ಅವರು ದೊಡ್ಡ ಖಳನಾಯಕರನ್ನು ಕಂಡುಕೊಳ್ಳುತ್ತಾರೆ.

ಇದನ್ನೂ ಓದಿ : ರಾಕಿ ಭಾಯ್​ ಸ್ಟೈಲ್​ ಫಾಲೋ ಮಾಡಿದ ಶಿಲ್ಪಾ ಶೆಟ್ಟಿ! ಇವ್ರಿಗೂ ವೈಲೆನ್ಸ್​​ ಅಂದ್ರೆ ಇಷ್ಟ ಇಲ್ವಂತೆ

ಕೆಜಿಎಫ್: ಚಾಪ್ಟರ್ 2 ಅನ್ನು ಹೊಂಬಾಳೆ ಫಿಲ್ಮ್ಸ್‌ನವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ರವಿ ಬಸ್ರೂರ್ ಸಂಗೀತ ಸಂಯೋಜಿಸಿದರೆ, ಉಜ್ವಲ್ ಕುಲಕರ್ಣಿ ಮತ್ತು ಭುವನ್ ಗೌಡ ಕ್ರಮವಾಗಿ ಸಂಕಲನ ಮತ್ತು ಛಾಯಾಗ್ರಹಣದ ಜವಾಬ್ದಾರಿಯನ್ನು ಹೊತ್ತಿದ್ದರು ಎಂದು ಹೇಳಲಾಗುತ್ತಿದೆ.
Published by:Vasudeva M
First published: