KGF Chapter 2: ಸಿನಿರಂಗದಲ್ಲಿ ಬಂಗಾರದ ಬೆಳೆ ತೆಗೆದ 'ಕೆಜಿಎಫ್‌-2'! 1000 ಕೋಟಿ ಗಳಿಸಿದ 2ನೇ ಭಾರತೀಯ ಸಿನಿಮಾ

KGF Chapter 2: ರಾಜಾಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ 1000 ಕೋಟಿ ಗಳಿಸಿದ ಮೊದಲ ಚಿತ್ರವಾಗಿದ್ದು, ಎರಡನೇ ಸ್ಥಾನವನ್ನು ಕೆಜಿಎಫ್​ 2 ಅಲಂಕರಿಸಿದೆ.

KGF 2

KGF 2

  • Share this:
ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ  ಕೆಜಿಎಫ್ ಚಾಪ್ಟರ್  2  (KGF Chapter 2) ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದು, ಅದ್ಭುತ ಪ್ರತಿಕ್ರಿಯೆ ಪಡೆದಿದೆ. ಯಶ್ ಅಭಿಮಾನಿಗಳು ಹಬ್ಬದಂತೆ ಆಚರಣೆ ಮಾಡಿ ಚಿತ್ರ ಬಿಡುಗಡೆಯನ್ನು ಸಂಭ್ರಮಿಸಿದ್ದಾರೆ. ಸುಮಾರು 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್ ಗಳಲ್ಲಿ ಚಿತ್ರ ತೆರೆಕಂಡು ದಾಖಲೆ ಬರೆದಿರುವ ಈ ಚಿತ್ರ ಬಾಕ್ಸ್​ ಆಫೀಸ್​ ಕಲೆಕ್ಷನ್​ ಕೂಡ ಭರ್ಜರಿಯಾಗಿತ್ತು. ರಾಕಿ ಬಾಯ್ ಅಬ್ಬರವನ್ನು ತಡೆಯಲು ಯಾರಿಂದಲೂ ಆಗುತ್ತಿಲ್ಲ. ಕೆಜಿಎಫ್ (KGF-2) ಸಿನಿಮಾ ರಿಲೀಸ್ ಆಗಿ 3 ವಾರ ಕಳೆದರು ರಾಕಿಭಾಯ್ ಖದರ್ ಮಾತ್ರ ಕಮ್ಮಿಯಾಗಿಲ್ಲ. ಬಾಲಿವುಡ್ (Bollywood) ಬಾಕ್ಸ್ಆಫೀಸ್​ನಲ್ಲಿ ಹಿಂದಿ ಸಿನಿಮಾಗಳೇ ಮಾಡಿರದ ದಾಖಲೆಯನ್ನ ಕೆಜಿಎಫ್ 2′ ಸಿನಿಮಾ ಮಾಡಿದೆ. ಅದೇನು ಅಂದ್ರೆ ಭಾರತದ ಚಿತ್ರರಂಗದ ಇತಿಹಾಸದಲ್ಲಿ ಸಾವಿರ ಕೋಟಿ ಕ್ಲಬ್​ ಸೇರಿರುವ 2ನೇ ಚಿತ್ರ ಎಂಬ ದಾಖಲೆಯನ್ನು ಬರೆದಿದೆ.

ಹೌದು, 'ಕೆಜಿಎಫ್ 2' ಬಾಲಿವುಡ್ ಸಿನಿಮಾಗಳನ್ನು ಹಿಂದಿಕ್ಕಿದ್ದು, ಇತಿಹಾಸ ನಿರ್ಮಿಸಿದೆ ಎಂದರೆ ತಪ್ಪಾಗಲಾರದು. ಸಾಮಾನ್ಯವಾಗಿ 100 ಕೋಟಿ ಎಂಬ ಆಲೋಚನೆಯಲ್ಲಿ ಯಾವುದೇ ಸಿನಿಮಾವಾದರೂ ಇರುತ್ತದೆ. ಆದರೆ ಕೆಜಿಎಫ್​ 2 ಮಾತ್ರ ಎಲ್ಲಾ ನಿರೀಕ್ಷೆಗಳ ಮೀರಿ 1000 ಕೋಟಿ ರೂ ಗಡಿ ದಾಟುವ ಮೂಲಕ ಮತ್ತೊಂದು ಗರಿ ಪಡೆದಿದೆ.  ಕೆಜಿಎಫ್​ ಮಾಡದೇ ಇರುವ ದಾಖಲೆಗಳು ಒಂದೆರಡಲ್ಲ , ಬಿಡಿಗಡೆಯಾಗುವ ಮೊದಲಿನಿಂದಲೂ ಸಹ ದಾಖಲೆಗಳನ್ನು ಮಾಡುತ್ತಿರುವ ಈ ಚಿತ್ರ, ಬಿಡುಗಡೆಯಾದ ನಂತರ ಸಹ ಸರಣಿ ದಾಖಲೆಗಳ ಸರದಾರ ಎಂದು ಬಿರುದು ಪಡೆದಿದೆ.

ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ ಕೆಜಿಎಫ್​ 2

ರಾಕಿ ಭಾಯ್​ ಹಾಗೂ ಪ್ರಶಾಂತ್​ ನೀಲ್​ ಕಾಂಬಿನೇಷನ್​ನಲ್ಲಿ ಬಂದಿದ್ದ ಕೆಜಿಎಫ್​ ಚಾಪ್ಟರ್​ ಒನ್​​ ಸಿನಿಮಾ ಸಖತ್ ಸೌಂಡ್ ಮಾಡಿತ್ತು, ಕೆಜಿಎಫ್​ ಚಾಪ್ಟರ್​​​2 ಮೇಲೆ ಹೆಚ್ಚು ನಿರೀಕ್ಷೆ ಬರುವಂತೆ ಮಾಡಿತ್ತು. ಕೆಜಿಎಫ್​ 2 ರಿಲೀಸ್​​ ಆದ ನಂತರ ಇಡೀ ವಿಶ್ವದಲ್ಲೇ ರೂಲ್​ ಮಾಡುತ್ತಿದ್ದೆ. ಕರ್ನಾಟಕದಲ್ಲಿ 153.8 ಕೋಟಿ, ತೆಲುಗು ರಾಜ್ಯದಲ್ಲಿ 125.7 ಕೋಟಿ, ತಮಿಳುನಾಡು 94.24 ಕೋಟಿ, ಕೇರಳದಲ್ಲಿ 53.8 ಕೋಟಿ, ಇತರೆಡೆ 402.9 ಕೋಟಿ, ಒಟ್ಟು 816.3 ಕೋಟಿ ಗಳಿಗೆ, ವಿದೇಶದಲ್ಲಿ 164.2 ಕೋಟಿ ರೂಪಾಯಿ, ಒಟ್ಟು 980.5 ಕೋಟಿ ಕಲೆಕ್ಷನ್ ಮಾಡಿದೆ.

ಒಂದು ಕನ್ನಡದ ಸಿನಿಮಾ ಇಡೀ ಭಾರತೀಯ ಚಿತ್ರರಂಗದಲ್ಲೇ ಸಾವಿರ ಕೋಟಿ ಗಳಿಸಿ ಎರಡನೇ ಸ್ಥಾನ ಪಡೆದುಕೊಂಡಿರುವುದು ಸ್ಯಾಂಡಲ್​ವುಡ್​ಗೆ ಒಂದು ಹೆಮ್ಮೆಯ ವಿಚಾರ ಎನ್ನಬಹುದು. ಅಲ್ಲದೇ ಕನ್ನಡದಲ್ಲಿ ಸಾವಿರ ಕೋಟಿ ಕಲೆಕ್ಷನ್​ ಮಾಡಿದ ಮೊದಲ ಚಿತ್ರವಾಗಿದ್ದು, ಕನ್ನಡ ಸಿನಿ ರಂಗದಲ್ಲಿ ಸಹ ಒಂದು ಹೊಸ ದಾಖಲೆ ಬರೆದಿದೆ.

ಇದನ್ನೂ ಓದಿ: ಸ್ನೇಹಿತೆಯ ಮದುವೆಯಲ್ಲಿ ಮಿಂಚಿದ ಪುಷ್ಪ ಸುಂದರಿ - ಫೋಟೋ ನೋಡಿ ಕ್ಯೂಟ್​ ಎಂದ ಅಭಿಮಾನಿಗಳು

ರಾಜಾಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ 1000 ಕೋಟಿಗಳಿಸಿದ ಮೊದಲ ಚಿತ್ರವಾಗಿದ್ದು, ಎರಡನೇ ಸ್ಥಾನವನ್ನು ಕೆಜಿಎಫ್​ 2 ಅಲಂಕರಿಸಿದೆ.

ಸದ್ಯಕ್ಕಿಲ್ಲ ಕೆಜಿಎಫ್​ ಚಾಪ್ಟರ್​ 2 ಶೂಟಿಂಗ್ 

ಇದೀಗ ಎಲ್ಲಡೆ ಕೆಜಿಎಫ್ 3 ಕುರಿತ ಚರ್ಚೆಗಳು ಆರಂಭವಾಗಿದೆ. ಚಿತ್ರದ ನಿರ್ಮಾಪಕ ವಿಜಯ್ ಕಿರಂಗದೂರು ಕೆಜಿಎಫ್ 3 ಕುರಿತು ಹೇಳಿಕೆಯನ್ನು ನೀಡಿ 2024ರಲ್ಲಿ ಚಿತ್ರ ಬಿಡಿಗಡೆಯಾಗಲಿದೆ ಎಂದಿದ್ದರು. ಆದರೆ ಈಗೊಂದು ಸುದ್ದಿ ಬಂದಿದ್ದು, ಕೆಜಿಎಫ್ 3 ಶೂಟಿಂಗ್ ಸಧ್ಯಕ್ಕಿಲ್ಲ ಎನ್ನುವ ಅಂಶ ಬಹಿರಂಗವಾಗಿದೆ.

ಹೌದು, ಅಕ್ಟೋಬರ್​ನಲ್ಲಿ ಕೆಜಿಎಫ್ 3 ಶೂಟಿಂಗ್ ಆರಂಭವಾಗಲಿದೆ ಎಂದು ಹೇಳಲಾಗುತ್ತಿತ್ತು, ಆದರೆ ಇದೀಗ ಕೆಜಿಎಫ್ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಕೆಜಿಎಫ್-2 ನೋಡಿ ಫುಲ್ ಖುಷ್ ಆಗಿದ್ದ ಅಭಿಮಾನಿಗಳು ಕೆಜಿಎಫ್-3ಗಾಗಿ ಕಾತರದಿಂದ ಕಾಯುತ್ತಿದ್ದರು. ಆದರೀಗ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದಿದ್ದಾರೆ.

ಇದನ್ನೂ ಓದಿ: ಭಾವನೆಗಳೇ ಬದುಕು ಎನ್ನುವ 'ಚಾರ್ಲಿ' - ರಕ್ಷಿತ್​ ಸಿನೆಮಾದ ಟ್ರೇಲರ್​ ನೋಡಿ ಎಮೋಷನಲ್​ ಆದ ಅಭಿಮಾನಿಗಳು

ಅರೇ ಏನಪ್ಪಾ ಇದು ಅಂತ ಅಶ್ಚರ್ಯವಾಗಬೇಡಿ. ಈ ಬಗ್ಗೆ ಕಾರ್ತಿಕ್ ಗೌಡ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಹರಿದಾಡುತ್ತಿರುವ ಸುದ್ದಿಗಳೆಲ್ಲ ಸುಳ್ಳು. ನಾವು ಈಗ ಅನೇಕ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದೀವಿ. ಹೊಂಬಾಳೆ ಫಿಲ್ಮ್ಸ್ ಸದ್ಯದಲ್ಲೇ ಕೆಜಿಎಫ್-3 ಪ್ರಾರಂಭ ಮಾಡುವುದಿಲ್ಲ. ನಾವು ಕೆಜಿಎಫ್-3 ಪ್ರಾರಂಭ ಮಾಡಿದಾಗ ಮಾಹಿತಿ ನೀಡುತ್ತೇವೆ ಎಂದು ಹೇಳಿದ್ದಾರೆ. ಇದು ಸ್ವಲ್ಪ ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ಕೆಜಿಎಫ್ 3 ನೋಡಲು ಇನ್ನೂ ಹೆಚ್ಚು ದಿನ ಕಾಯಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Published by:Sandhya M
First published: