ಬಹು ನಿರೀಕ್ಷಿತ ಕೆಜಿಎಫ್ 2 ಚಿತ್ರದ ಹಾಡುಗಳ ರೈಟ್ಸ್ ಸೇಲ್ ಆಗಿದೆ. ಹೆಸರಾಂತ ಆಡಿಯೋ ಸಂಸ್ಥೆ ಲಹರಿ ಆಡಿಯೋಸ್ ಕಂಪನಿಯ ಪಾಲಾಗಿದೆ. ಕೆಜಿಎಫ್ 2 (KGF Chapter 2 Songs) ಸಿನಿಮಾದ ಹಾಡುಗಳನ್ನು ಲಹರಿ ಸಂಸ್ಥೆ (Lahari Music Company) ದಾಖಲೆ ಮೊತ್ತಕ್ಕೆ ಖರೀದಿಸಿದೆ.
ಇವತ್ತು ಲಹರಿ ಆಡಿಯೋ ಸಂಸ್ಥೆ ಮಾಲೀಕರಾದ ಮನೋಹರ್ ನಾಯ್ಡು ಹಾಗೂ ಲಹರಿ ವೇಲು ಅವರನ್ನು ಭೇಟಿಯಾದ ನಿರ್ಮಾಪಕ ವಿಜಯ್ ಕಿರಗಂದೂರ್ ಕೆಜಿಎಫ್ 2 (KGF Chapter 2 Movie Audio Rights) ಚಿತ್ರದ ಆಡಿಯೋ ರೈಟ್ಸ್ ಮಾರಾಟದ ಪ್ರತಿಯನ್ನು ಹಸ್ತಾಂತರಿಸಿದ್ದಾರೆ.
ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ ರಾಕಿಂಗ್ ಸ್ಟಾರ್ ಯಶ್ (Rocking Star Yash) ನಾಯಕನಾಗಿ ನಟಿಸಿರುವ ಹೊಂಬಾಳೆ ಫಿಲ್ಮ್ಸ್ (Hombale Films) ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ ಬಹುನಿರೀಕ್ಷಿತ ಕೆಜಿಎಫ್ 2 (KGF 2) ಚಿತ್ರ ತೆರೆಗೆ ಬರಲು ರೆಡಿಯಾಗಿದೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬಿಜಿಯಾಗಿರುವ ಚಿತ್ರತಂಡ ಸದ್ಯ ಆಡಿಯೋ ಹಕ್ಕುಗಳನ್ನು ಮಾರಾಟ ಮಾಡಿದೆ.
ಕೆಜಿಎಫ್ 1 (KGF Movie) ಚಿತ್ರದ ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆಯೇ ಖರೀದಿಸಿತ್ತು. ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಹೀಗೆ ಒಟ್ಟು ಐದು ಭಾಷೆಗಳಿಂದ ಬರೋಬ್ಬರಿ ಮೂರೂವರೆ ಕೋಟಿ ರೂಪಾಯಿಗಳನ್ನು ನೀಡಿತ್ತು. ಈಗ ಕೆಜಿಎಫ್ 2 ಚಿತ್ರದ ಹಾಡುಗಳನ್ನು ಸಹ ಲಹರಿ ಸಂಸ್ಥೆಯೇ ಖರೀದಿ ಮಾಡಿದೆ.
ಇದನ್ನೂ ಓದಿ: Murder News: ಪ್ರೇಯಸಿಯನ್ನು ಕೊಂದು ಅಡುಗೆಮನೆಯಲ್ಲೇ ಸಮಾಧಿ; ಪೇಂಟಿಂಗ್ನಿಂದ ಬಯಲಾಯ್ತು ಕೊಲೆ ರಹಸ್ಯ!
ಕೆಜಿಎಫ್ 2 ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು, ಕೆಜಿಎಫ್ 1 ಗಿಂತಲೂ ಭರ್ಜರಿ ಮೊತ್ತಕ್ಕೆ ಮಾರಾಟವಾಗಿದೆ ಎನ್ನಲಾಗಿದೆ. ಆ ಮೂಲಕ ರಿಲೀಸ್ಗೂ ಮುನ್ನವೇ ಕೆಜಿಎಫ್ ಚಿತ್ರ ಹೊಸ ದಾಖಲೆ ನಿರ್ಮಿಸಿದೆ.
ಕೆಜಿಎಫ್ 1 ನಂತೆಯೇ ಕೆಜಿಎಫ್ 2 ಚಿತ್ರ ಸಹ ಸಾಕಷ್ಟು ನಿರೀಕ್ಷೆ, ಕುತೂಹಲ ಹುಟ್ಟುಹಾಕಿದೆ. ಸ್ಟಾರ್ ಸಹ ಅದ್ದೂರಿಯಾಗಿದ್ದು ಅಧೀರರಾಗಿ ಬಾಲಿವುಡ್ ಸೂಪರ್ ಸ್ಟಾರ್ ಸಂಜಯ್ ದತ್ ರಿಮಿಕಾ ಸೇನ್ ಪಾತ್ರದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್, ತೆಲುಗು ನಟ ರಾವ್ ರಮೇಶ್ ಹಾಗೂ ಪ್ರಕಾಶ್ ರಾಜ್ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ. ಈಗಾಗಲೇ ಸಂಜಯ್ ದತ್ ಅವರ ಅಧೀರ ಪಾತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಕೆಜಿಎಫ್ 2 ಬಗೆಗಿನ ಎಕ್ಸ್ಪೆಕ್ಟೇಷನ್ಸ್ ಅನ್ನ ಜಾಸ್ತಿ ಮಾಡಿದೆ. ಮಾತ್ರವಲ್ಲ ಭಾರತದ ಪ್ರಧಾನಿ ರಮಿಕಾ ಸೆನ್ ಪಾತ್ರದಲ್ಲಿ ಪಾತ್ರದಲ್ಲಿ ರವೀನಾ ಟಂಡನ್ ಅವರು ನಟಿಸಿದ್ದು, ಅವರ ಲುಕ್ ಕೂಡ ಸಾಕಷ್ಟು ಕುತೂಹಲ ಮೂಡಿಸುವಂತಿದೆ.
ಒಟ್ಟಾರೆ ತೆರೆ ಮೇಲೆ ಅಬ್ಬರಿಸಿ ಬೊಬ್ಬಿರಿಯಲು ರಾಕಿಬಾಯ್ ರೆಡಿ ಆಗಿದ್ದಾನೆ. ಆದರೆ ಅದಕ್ಕೂ ಮುನ್ನ ಹಾಡುಗಳ ಮೂಲಕ ರಂಜಿಸಲು ಸಿದ್ಧತೆ ನಡೆಸಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ