KGF 2: ಮುಂದಿನ​ ಸಿನಿಮಾಗೆ ಈ ಪಾಟಿ ದುಡ್ಡು ಕೇಳಿದ್ರಾ ರಾಕಿ ಭಾಯ್​ ಬೆಡಗಿ? ಶ್ರೀನಿಧಿ ಶೆಟ್ಟಿ ಇನ್ಮುಂದೆ ಸಿಕ್ಕಾಪಟ್ಟೆ ಕಾಸ್ಟ್ಲಿ!

ಯಶ್​ ಎಂಬ ಸ್ಯಾಂಡಲ್​ವುಡ್​​ ಸ್ಟಾರ್​ ನಟ ಕೆಜಿಎಫ್​ ಸಿನಿಮಾದಿಂದ ನ್ಯಾಷನಲ್​ ಸ್ಟಾರ್​ ಆಗಿದ್ದಾರೆ. ಪ್ರಶಾಂತ್​ ನೀಲ್​ ಎಂಬ ಉದಯೋನ್ಮುಖ ನಿರ್ದೇಶಕ ಇಂದು ಸ್ಟಾರ್​ ಡೈರೆಕ್ಟರ್​ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಜೊತೆಗೆ ಈ ಸಿನಿಮಾದಲ್ಲಿ ನಟಿಸಿದ ಪ್ರತಿಯೊಬ್ಬರೂ ಕೂಡ ಸಿಕ್ಕಾಪಟ್ಟೆ ಫೇಮಸ್​ ಆಗಿದ್ದಾರೆ.

ನಟಿ ಶ್ರೀನಿಧಿ ಶೆಟ್ಟಿ

ನಟಿ ಶ್ರೀನಿಧಿ ಶೆಟ್ಟಿ

  • News18
  • Last Updated :
  • Share this:
ಕೆಜಿಎಫ್​​  (KGF) ಈ ಹೆಸರು ಕೇಳಿದರೆ ಏನೋ ಒಂಥರಾ ರೋಮಾಂಚನವಾಗೋದು ಸತ್ಯ. ಕೆಜಿಎಫ್ ಕನ್ನಡಿಗರ ಹೆಮ್ಮೆ. ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ (New Record) ಬರೆದ ಸಿನಿಮಾ ಅನ್ನುವುದು ಎಲ್ಲರಿಗೂ ಗೊತ್ತಿದೆ. ಕೆಜಿಎಫ್​ ಈ ಒಂದು ಸಿನಿಮಾದಿಂದ ಹಲವರ ಬದುಕು ಬದಲಾಗಿದೆ. ಯಶ್ (Yash)​ ಎಂಬ ಸ್ಯಾಂಡಲ್​ವುಡ್​​ ಸ್ಟಾರ್ (Sandalwood Star)​ ನಟ ಕೆಜಿಎಫ್​ ಸಿನಿಮಾದಿಂದ ನ್ಯಾಷನಲ್​ ಸ್ಟಾರ್ (National Star)​ ಆಗಿದ್ದಾರೆ. ಪ್ರಶಾಂತ್​ ನೀಲ್ (Prashanth Neel)​ ಎಂಬ ಉದಯೋನ್ಮುಖ ನಿರ್ದೇಶಕ (Director) ಇಂದು ಸ್ಟಾರ್​ ಡೈರೆಕ್ಟರ್​ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಜೊತೆಗೆ ಈ ಸಿನಿಮಾದಲ್ಲಿ ನಟಿಸಿದ ಪ್ರತಿಯೊಬ್ಬರೂ ಕೂಡ ಸಿಕ್ಕಾಪಟ್ಟೆ ಫೇಮಸ್​ ಆಗಿದ್ದಾರೆ. ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಕೂಡ ಫೇಮಸ್​ ಆಗಿದ್ದಾರೆ. ಕೆಜಿಎಫ್​ 2 ಸಿನಿಮಾ ಏಪ್ರಿಲ್​ 14ರಂದು ಬಿಡುಗಡೆಗೊಂಡು ಹೊಸ ಸುನಾಮಿ ಸೃಷ್ಟಿ ಮಾಡಿತ್ತು.

ಕೆಜಿಎಫ್​ 2 ಬಳಿಕ ಫೇಮಸ್​ ಆದ ಶ್ರೀ ನಿಧಿ ಶೆಟ್ಟಿ !

ರಾಕಿ ಭಾಯ್ ನೋಡಿದವರೆಲ್ಲಾ ಯಶ್ ಜಪ ಮಾಡುತ್ತಾ ಇದ್ದಾರೆ. ರಾಕಿ ಭಾಯ್ ಪಾತ್ರದ ಮೇಲೆ 'ಕೆಜಿಎಫ್' ಚಿತ್ರದ ಇಡೀ ಕಥೆ ನಿಂತಿದೆ. ಇನ್ನು ಚಿತ್ರದಲ್ಲಿ ರಾಕಿಗೆ ಚಿತ್ರದಲ್ಲಿ ಸಾಥ್ ನೀಡುವ ನಾಯಕಿ ರೀನಾ ಪಾತ್ರ ಅಷ್ಟಾಗಿ ಪ್ರೇಕ್ಷಕರ ಮನಸ್ಸಲ್ಲಿ ಉಳಿಯುವುದಿಲ್ಲ. ಆದರೂ ಈ ಪಾತ್ರದಲ್ಲಿ ನಟಿಸಿರುವ ಶ್ರೀನಿಧಿ ಶೆಟ್ಟಿ ಮುದ್ದಾಗಿ ಈ ಪಾತ್ರದಲ್ಲಿ ನಟಿಸಿ ಎಲ್ಲರ ಮನಸ್ಸು ಗೆದ್ದಿದ್ದರು.ನಟಿ ಶ್ರೀನಿಧಿ ಪಾತ್ರ 'ಕೆಜಿಎಫ್' ಭಾಗ ಒಂದರಲ್ಲಿ ತುಂಬಾ ಚಿಕ್ಕದಾಗಿತ್ತು. ನಟಿ ಶ್ರೀನಿಧಿ ಪಾತ್ರ ಹಾಗೆ ಬಂದು ಹೀಗೆ ಹೋಗಿತ್ತು. ಇನ್ನು ಮೊದಲ ಭಾಗದಲ್ಲಿ ರಾಕಿ ಮತ್ತು ರೀನಾ ಲವ್ ಸ್ಟೋರಿ ಕೂಡ ಅಷ್ಟಾಗಿ ಇರಲಿಲ್ಲ. ಕೆಜಿಎಫ್​ 2ನಲ್ಲಿ ಈ ಪಾತ್ರ ಅಂತ್ಯಗೊಳ್ಳುತ್ತೆ.

ಭಾರಿ ಸಂಭಾವನೆಗೆ ಕೆಜಿಎಫ್​ ಬೆಡಗಿ ಡಿಮ್ಯಾಂಡ್​?

ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿರುವ ಕೆಜಿಎಫ್-2 (KGF 2)ನಲ್ಲಿ ಶ್ರೀನಿಧಿ ರೀನಾ ಪಾತ್ರದ ಮೂಲಕ ಮಿಂಚಿದ್ದಾರೆ. ದೇಶ-ವಿದೇಶಗಳಲ್ಲಿ ಸದ್ದು ಮಾಡುತ್ತಿರುವ ಕೆಜಿಎಫ್-2ನಲ್ಲಿ ನಾಯಕಿಯಾಗಿ ಮಿಂಚಿರುವ ಶ್ರೀನಿಧಿ ಶೆಟ್ಟಿ ಇದೀಗ ಮುಂದಿನ ಸಿನಿಮಾಗೆ  ಭಾರಿ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಹೊಸ ಗುಸು ಗುಸು ಶುರುವಾಗಿದೆ. ಹಾಗಿದ್ರೆ ಶ್ರೀ ನಿಧಿ ಶೆಟ್ಟಿ ಡಿಮ್ಯಾಂಡ್​ ಮಾಡಿದ ಮೊತ್ತವಾದರೂ ಎಷ್ಟು ಗೊತ್ತಾ? ಇಲ್ಲಿದೆ ನೋಡಿ..

ಇದನ್ನೂ ಓದಿ: ಅನ್ಮೋಲ್- ಆದಿತ್ಯ ಜೋಡಿಯ ಮುಡಿಗೆ ಡ್ಯಾನ್ಸಿಂಗ್ ಚಾಂಪಿಯನ್ ಪಟ್ಟ

2 ಕೋಟಿಗೆ ಡಿಮ್ಯಾಂಡ್​ ಮಾಡಿದ್ರಂತೆ ಶ್ರೀನಿಧಿ!

ನಟಿ ಶ್ರೀನಿಧಿ ಕೆಜಿಎಫ್​ ಸಿನಿಮಾಗಾಗಿ ತನ್ನ ಸಿನಿ ಜೀವನದ ಅನೇಕ ವರ್ಷಗಳನ್ನು ಮೀಸಲಿಟ್ಟಿದ್ದರು. ಕೆಜಿಎಫ್​ 2 ಬಳಿಕ ಹೆಚ್ಚಿನ ಅವಕಾಶಗಳು ಸಿಗಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೂ,  ಶ್ರೀ ನಿಧಿ ಶೆಟ್ಟಿಗೆ ಕೇವಲ ಬೆರಳಿಕೆಯಷ್ಟು ಅವಕಾಶಗಳು ಬರುತ್ತಿವೆ ಎಂದು ಹೇಳಲಾಗಿದೆ. ಈ ನಡುವೆ ಇದೀಗ ಸಂಭಾವನೆ ಹೆಚ್ಚಿಸಿಕೊಂಡಿದ್ದಾರಂತೆ. ಶ್ರೀನಿಧಿ ತೆಲುಗು ಸಿನಿಮಾಗೆ 2 ಕೋಟಿ ರೂಪಾಯಿ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ತೆಲುಗು ನಿರ್ಮಾಪಕರೊಬ್ಬರು ಶ್ರೀನಿಧಿ ಶೆಟ್ಟಿಗೆ ಸಿನಿಮಾ ಆಫರ್‌ಗಾಗಿ ಸಂಪರ್ಕ ಮಾಡಿದ್ದು ಶ್ರೀನಿಧಿ ಭಾರಿ ಸಂಭಾವನೆ ಕೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಇಂದು ಸ್ಯಾಂಡಲ್​ವುಡ್​ ಕ್ರೇಜಿಸ್ಟಾರ್​ ಜನ್ಮದಿನ - 'ಬೋಪಣ್ಣ'ಗೆ ಭರ್ಜರಿ ಬರ್ತ್ ಡೇ ಗಿಫ್ಟ್

ಜೂ.ಎನ್​ಟಿಆರ್​ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ!

ಜೂ.ಎನ್ ಟಿ ಆರ್ ಸಿನಿಮಾದ ನಾಯಕಿ ಪಾತ್ರಕ್ಕೆ ಶ್ರೀನಿಧಿಗೆ ಆಫರ್ ಮಾಡಲಾಗಿದಂತೆ. ಆದರೆ ತೆಲುಗಿನ ಮೊದಲ ಸಿನಿಮಾಗೆ ಈ ಪರಿ ಸಂಭಾವನೆ ಕೇಳಿದ್ದು ನೋಡಿ ತೆಲುಗು ನಿರ್ಮಾಪಕರು ಬೆಚ್ಚಿಬಿದ್ದಿದ್ದಾರೆ ಎನ್ನಲಾಗುತ್ತಿದೆ. ಬಾಲಿವುಡ್ ನಟಿ, ವಿಶ್ವಸುಂದರಿ ಮಾನುಷಿ ಚಿಲ್ಲರ್ ಮೊದಲ ಸಿನಿಮಾಗೆ 2.5 ಕೋಟಿ ಸಂಭಾವನೆ ಕೇಳಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
Published by:Vasudeva M
First published: