ಕೆಜಿಎಫ್ ಚಾಪ್ಟರ್ ಒಂದು ಮಾಡಿದ ನಂತರ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಯಶ್ ನ್ಯಾಷನಲ್ ಸ್ಟಾರ್ಗಳಾದರು. ಈ ಸಿನಿಮಾದ ಮೂಲಕ ಬೇರೆ ಚಿತ್ರರಂಗಗಳು ಕನ್ನಡ ಸಿನಿಮಾರಂಗದತ್ತ ನೋಡುವಂತಾಯಿತು. ಇಂತಹ ಸಿನಿಮಾದ ಮುಂದುವರೆದ ಭಾಗವಾಗಿರುವ ಕೆಜೆಎಫ್ ಚಾಪ್ಟರ್ 2 ಸಿನಿಮಾದ ಬಗ್ಗೆ ಸಿನಿರಸಿಕರಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇದೆ.ನರಾಚಿಯಲ್ಲಿ ರಾಕಿ ಭಾಯ್ ಸಾಮಾಜ್ಯ ಸ್ಥಾಪನೆಯ ರೋಚಕ ಘಟ್ಟವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಇನ್ನೂ ಯಶ್ ಹುಟ್ಟುಹಬ್ಬಕ್ಕೂ ಒಂದು ದಿನ ಮೊದಲು ಕೆಜಿಎಫ್ ಚಾಪ್ಟರ್ 2 ಟೀಸರ್ ಅನ್ನು ರಿಲೀಸ್ ಮಾಡಲಾಗಿತ್ತು. ಅದು ರಿಲೀಸ್ ಆಗುತ್ತಿದಂತೆಯೇ ದಾಖಲೆಗಳನ್ನು ಮಾಡಿತ್ತು. ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಜನ ವೀಕ್ಷಿಸಿರುವ ಟೀಸರ್ ಎಂ ಬ ಖ್ಯಾತಿಗೂ ಪಾತ್ರವಾಗಿದೆ. ಈಗ ಇದೇ ಟೀಸರ್ ಮತ್ತೊಂದು ಹೊದ ದಾಖಲೆ ಮಾಡಿದೆ. ಹೌದು, ಈ ವಿಷಯವನ್ನು ಹೊಂಬಾಳೆ ಫಿಲಂಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಹೌದು, ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ರಾಕಿಂಗ್ ಯಶ್ ನಟಿಸುತ್ತಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾ ಟೀಸರ್ ಈಗ ಹೊಸ ದಾಖಲೆ ಬರೆದಿದೆ. ಟೀಸರ್ ರಿಲೀಸ್ ಆಗಿ ನಾಲ್ಕು ತಿಂಗಳಾಗಿದ್ದು, ಯೂಟ್ಯೂಬ್ನಲ್ಲಿ ಈ ಟ್ರೇಲರ್ಗೆ 10 ಲಕ್ಷಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.
1M COMMENTS FOR KGF2 TEASER pic.twitter.com/ThKKkYURvM
— Hombale Films (@hombalefilms) May 31, 2021
ಯಶ್ ಹುಟ್ಟುಹಬ್ಬದಂದು ಕೆಜಿಎಫ್ ಚಾಪ್ಟ್ 2 ಸಿನಿಮಾದ ಟೀಸರ್ ರಿಲೀಸ್ಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಅದಕ್ಕೂ ಮುಂಚಿತವಾಗಿಯೇ ಅಂದರೆ ಹಿಂದಿನ ದಿನ ರಾತ್ರಿಯೇ ಟೀಸರ್ ಲೀಕ್ ಆಗಿತ್ತು. ಅದಕ್ಕಾಗಿಯೇ ಚಿತ್ರತಂಡ ಆಗಲೇ ಅಧಿಕೃತವಾಗಿ ಟೀಸರ್ ರಿಲೀಸ್ ಮಾಡಿತ್ತು.
ಇದನ್ನೂ ಓದಿ: Manoranjan Ravichandran: ಮುದ್ದಿನ ಸಾಕು ನಾಯಿಯ ಹುಟ್ಟುಹಬ್ಬ ಆಚರಿಸಿದ ಮನೋರಂಜನ್ ರವಿಚಂದ್ರನ್..!
ಟೀಸರ್ ರಿಲೀಸ್ ಆಗುತ್ತಿದಂತೆಯೇ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಜಿಎಫ್ ಚಾಪ್ಟರ್ 2 ಟೀಸರ್ ಬಿಡುಗಡೆಯಾದ ಒಂದೇ ದಿನದಲ್ಲಿ 6 ಕೋಟಿಗೂ ಅಧಿಕ ಜನರು ವೀಕ್ಷಿಸಿದ್ದರು. ಈ ಮೂಲಕ ಈ ಹಿಂದಿನ ಎಲ್ಲ ದಾಖಲೆಗಳನ್ನೂ ಇದು ಮುರಿದಿತ್ತು. ವಿಜಯ್ ಕಿರಗಂದೂರು ನಿರ್ಮಾಣದ ಈ ಸಿನಿಮಾ ಜು.16ಕ್ಕೆ ರಿಲೀಸ್ ದಿನಾಂಕ ಪ್ರಕಟಿಸಿದೆ. ಆದರೆ ಸದ್ಯ ಲಾಕ್ಡೌನ್ ಇದ್ದು, ಚಿತ್ರಮಂದಿರಗಳು ಮುಚ್ಚಿವೆ. ಅಲ್ಲದೆ ಇನ್ನೂ ಸಿನಿಮಾದ ಪೋಸ್ಟ್ ಪೋಡಕ್ಷನ್ ಕೆಲಸಗಳು ಲಾಕ್ಡೌನ್ ಆರಂಭವಾಗುವ ಮುನ್ನ ನಡೆಯುತ್ತತ್ತು. ಈ ಎಲ್ಲ ಕಾರಣಗಳಿಂದಾಗಿ ಸಿನಿಮಾ ರಿಲೀಸ್ ದಿನಾಂಕ ಮುಂದೆ ಹೋದರೂ ಆಶ್ಚರ್ಯ ಪಡಬೇಕಿಲ್ಲ.
ಇದನ್ನೂ ಓದಿ: Pawan Kalyan - Akira Nandan: ವೈರಲ್ ಆಗುತ್ತಿವೆ ಪವನ್ ಕಲ್ಯಾಣ್ ಮಗ ಅಕಿರಾ ನಂದನ್ ಲೆಟೆಸ್ಟ್ ಫೋಟೋಗಳು
ಕೆಜಿಎಫ್ ಚಾಪ್ಟರ್ 2 ಚಿತ್ರ ನಿರ್ಮಿಸುತ್ತಿರುವ ಹೊಂಬಾಳೆ ಫಿಲಂಸ್ ಈ ಹಿಂದೆ ಸಲಾರ್ ಸಿನಿಮಾ ಪ್ರಕಟಿಸಿದಾಗ ಕೆಜಿಎಫ್ ಅಭಿಮಾನಿಗಳು ಸಿಟ್ಟಿಗೆದ್ದಿದ್ದರು. ಹೊಸ ಸಿನಿಮಾ ಪ್ರಕಟಿಸುತ್ತಾ ಟೈಟಲ್ ಪೋಸ್ಟರ್ ರಿಲೀಸ್ ಮಾಡುತ್ತಿರುವ ನಿರ್ಮಾಪಕರು, ಕೆಜಿಎಫ್ ಚಾಪ್ಟರ್ ಚಿತ್ರದ ಅಪ್ಡೇಟ್ ಬಗ್ಗೆ ಮಾತನಾಡುತ್ತಿಲ್ಲ ಎಂದು ಕೋಪಗೊಂಡಿದ್ದರು. ಇದೇ ಕಾರಣದಿಂದ ಯಶ್ ಅಭಿಮಾನಿಗಳು ಈ ಹಿಂದೆ ಸಹ ಕೆಜಿಎಫ್ ಚಾಪ್ಟರ್ 2 ಟೀಸರ್ ಬಿಡುಗಡೆ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಒತ್ತಡ ಹೇರಿದ್ದರು. ಇನ್ನಾದರೂ ಟೀಸರ್ ರಿಲೀಸ್ ಮಾಡಿ ಎಂದು ನಿರ್ದೇಶಕ ಹಾಗೂ ನಿರ್ಮಾಪಕರನ್ನು ಆಗ್ರಹಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ