ಭಾನುವಾರ ಆರಂಭವಾಗಲಿದೆ ‘ಕೆಜಿಎಫ್’ ಚಿತ್ರದ ಮುಂಗಡ ಬುಕಿಂಗ್

ಗಾಂಧಿ ನಗರದಲ್ಲಿ ಯಾವುದು ಮುಖ್ಯಚಿತ್ರ ಮಂದಿರ ಎನ್ನುವ ಕುತೂಹಲಕ್ಕೂ ಈಗ ತೆರೆ ಬಿದ್ದಿದೆ. ನರ್ತಕಿ ‘ಕೆಜಿಎಫ್​’ನ ಮುಖ್ಯ ಚಿತ್ರಮಂದಿರವಂತೆ.

Rajesh Duggumane | news18
Updated:December 14, 2018, 3:53 PM IST
ಭಾನುವಾರ ಆರಂಭವಾಗಲಿದೆ ‘ಕೆಜಿಎಫ್’ ಚಿತ್ರದ ಮುಂಗಡ ಬುಕಿಂಗ್
ಯಶ್
  • News18
  • Last Updated: December 14, 2018, 3:53 PM IST
  • Share this:
ಬಹುನಿರೀಕ್ಷಿತ ಚಿತ್ರಗಳು ತೆರೆಕಾಣುವಾಗ ಅದಕ್ಕೆ ತಕ್ಕನಾದ ಸಿದ್ಧತೆ ಮಾಡಿಕೊಳ್ಳಬೇಕು. ಈ ವಿಚಾರದಲ್ಲಿ ‘ಕೆಜಿಎಫ್​’ ಚಿತ್ರದ ನಿರ್ದೇಶಕ ಪ್ರಶಾಂತ್​ ನೀಲ್ ಹಿಂದೆ ಬಿದ್ದಿಲ್ಲ. ಸಾಕಷ್ಟು ಪ್ರಚಾರದೊಂದಿಗೆ ಸಿನಿಮಾ ತೆರೆಗೆ ತರುತ್ತಿದ್ದಾರೆ. ಈಗ ಚಿತ್ರತಂಡದಿಂದ ಸಿಗುತ್ತಿರುವ ಮಾಹಿತಿ ಏನೆಂದರೆ, ಭಾನುವಾರದಿಂದಲೇ ‘ಕೆಜಿಎಫ್​’ನ ಆನ್​ಲೈನ್​ ಮುಂಗಡ ಬುಕಿಂಗ್​ ಆರಂಭವಾಗಲಿದೆಯಂತೆ.

ರಾಜ್ಯಾಂದ್ಯಂತ 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘ಕೆಜಿಎಫ್​’ ಸಿನಿಮಾ ಬಿಡುಗಡೆ ಆಗುತ್ತಿದೆ. ಈಗ ಭಾನುವಾರದಿಂದಲೇ ಆನ್​ಲೈನ್​ನಲ್ಲಿ ಬುಕಿಂಗ್​ ಆರಂಭಗೊಳ್ಳುತ್ತಿರುವುದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ಬೆಂಗಳೂರಿನಲ್ಲಿ ಮುಂಜಾನೆ 6-7ಗಂಟೆಗೆ ಸಿನಿಮಾ ಪ್ರದರ್ಶನ ಕಾಣುವುದು ತೀರ ಅಪರೂಪ.  ಈಗ ‘ಕೆಜಿಎಫ್​’ ಕೂಡ ಮುಂಜಾನೆ 6 ಗಂಟೆಯಿಂದ ಪ್ರದರ್ಶನ ಕಾಣುತ್ತಿರುವುದು ವಿಶೇಷ. ಮುಂದಿನ ದಿನಗಳಲ್ಲಿ ಚಿತ್ರಮಂದಿರದ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆಯಂತೆ.

ಸ್ಯಾಂಡಲ್​ವುಡ್​ಗೂ ಗಾಂಧಿನಗರಕ್ಕೂ ಮೊದಲಿನಿಂದಲೂ ನಂಟು ಬೆಳೆದುಕೊಂಡು ಬಂದೇ ಇದೆ. ಹಾಗಾಗಿ ಗಾಂಧಿ ನಗರದಲ್ಲಿ ಯಾವುದು ಮುಖ್ಯಚಿತ್ರ ಮಂದಿರ ಎನ್ನುವ ಕುತೂಹಲಕ್ಕೂ ಈಗ ತೆರೆ ಬಿದ್ದಿದೆ. ನರ್ತಕಿ ‘ಕೆಜಿಎಫ್​’ನ ಮುಖ್ಯ ಚಿತ್ರಮಂದಿರವಂತೆ. ಡಿ.21ರಂದು 'ಕೆಜಿಎಫ್​' ಚಿತ್ರ ಐದು ಭಾಷೆಗಳಲ್ಲಿ ತೆರೆಕಾಣುತ್ತಿದೆ. ಯಶ್​ ನಟನೆಯ ಈ ಚಿತ್ರಕ್ಕೆ ಪ್ರಶಾಂತ್​ ನೀಲ್​ ನಿರ್ದೇಶನವಿದೆ. 'ಹೊಂಬಾಳೆ ಫಿಲ್ಮ್ಸ್​​' ಚಿತ್ರಕ್ಕೆ ಬಂಡವಾಳ ಹೂಡಿದೆ.  ಶ್ರೀನಿಧಿ ಶೆಟ್ಟಿ ಯಶ್​​ಗೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:  ತಮಿಳಲ್ಲಿ ಮಾತನಾಡಿ ಕಾಲಿವುಡ್​ ಪ್ರೇಕ್ಷಕರ ಮನಗೆದ್ದ ರಾಕಿಂಗ್​ ಸ್ಟಾರ್: ಪರ ಭಾಷೆಯಲ್ಲಿ ಮಾತನಾಡುವ ಕಲಾವಿದರಿಗೆ ಯಶ್​ ಹೇಳಿದ್ದೇನು..?

First published:December 14, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading