KGF Chapter 2: ಅಧೀರ... ಅವೆಂಜರ್ಸ್​: ಎಂಡ್​ ಗೇಮ್​ನ ಥ್ಯಾನೋಸ್​ ಅಷ್ಟೇ ಪವರ್​ಫುಲ್​ ಪಾತ್ರವಂತೆ..!

KGF Chapter 2: ಈ ಸಿನಿಮಾದಲ್ಲಿ ನಟ ಯಶ್​ ಅವರ ಪಾತ್ರವನ್ನು ಮಾನ್​ಸ್ಟರ್​ ಎಂದೇ ಕರೆಯಲಾಗುತ್ತದೆ. ಅಂತಹ ಪಾತ್ರದ ಎದುರು ವಿಲನ್​ ಅಂದ್ರೆ ಸುಮ್ಮನೇನಾ..! ಅದಕ್ಕೆ ನಿರ್ದೇಶಕ ಪ್ರಶಾಂತ್​ ನೀಲ್​ ಸಿಕ್ಕಾಪಟ್ಟೆ ಹುಡುಕಾಡಿ ಸಂಜಯ್​ ದತ್​ ಅವರನ್ನು ಅಧೀರನ ಪಾತ್ರಕ್ಕೆ ಫಿಕ್ಸ್​ ಮಾಡಿದ್ದಾರೆ. ಈಗ ಸಂಜು ಬಾಬಾ ತಮ್ಮ ಪಾತ್ರದ ಬಗ್ಗೆ ಕೆಲವೊಂದು ವಿಷಯಗಳನ್ನು ಬಿಟ್ಟುಕೊಟ್ಟಿದ್ದಾರೆ.

Anitha E | news18
Updated:July 31, 2019, 12:26 PM IST
KGF Chapter 2: ಅಧೀರ... ಅವೆಂಜರ್ಸ್​: ಎಂಡ್​ ಗೇಮ್​ನ ಥ್ಯಾನೋಸ್​ ಅಷ್ಟೇ ಪವರ್​ಫುಲ್​ ಪಾತ್ರವಂತೆ..!
ಕೆ.ಜಿ.ಎಫ್​- ಚಾಪ್ಟರ್​ 2ನಲ್ಲಿ ಯಶ್​ಗೆ ಎದುರಾಗಲಿದ್ದಾರೆ ಖಳನಾಯಕ್​ ಸಂಜಯ್​ ದತ್​
  • News18
  • Last Updated: July 31, 2019, 12:26 PM IST
  • Share this:
'ಕೆ.ಜಿ.ಎಫ್​ ಚಾಪ್ಟರ್​ 2'ರ ಮೂಲಕ ಬಾಲಿವುಡ್​ ಖಳನಾಯಕ್​ ಸಂಜಯ್​ ದತ್​ ಇದೇ ಮೊದಲ ಬಾರಿಗೆ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಅದೂ ಅವರು 60ನೇ ವಸಂತಕ್ಕೆ ಕಾಲಿಟ್ಟನಂತರ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಈ ಸಿನಿಮಾದಲ್ಲಿ ನಟ ಯಶ್​ ಅವರ ಪಾತ್ರವನ್ನು ಮಾನ್​ಸ್ಟರ್​ ಎಂದೇ ಕರೆಯಲಾಗುತ್ತದೆ. ಅಂತಹ ಪಾತ್ರದ ಎದುರು ವಿಲನ್​ ಅಂದ್ರೆ ಸುಮ್ಮನೇನಾ..! ಅದಕ್ಕೆ ನಿರ್ದೇಶಕ ಪ್ರಶಾಂತ್​ ನೀಲ್​ ಸಿಕ್ಕಾಪಟ್ಟೆ ಹುಡುಕಾಡಿ ಸಂಜಯ್​ ದತ್​ ಅವರನ್ನು ಅಧೀರನ ಪಾತ್ರಕ್ಕೆ ಫಿಕ್ಸ್​ ಮಾಡಿದ್ದಾರೆ.

Sanjay Dutt as Adheera in KGF Chapter 2
ಅಧೀರನಾದ ಸಂಜಯ್​ ದತ್​


ಇನ್ನೂ ಮಾನ್​ಸ್ಟರ್​ ಮುಂದೆ ತೊಡೆ ತಟ್ಟಲಿರುವ ಅಧೀರನ ಪಾತ್ರ ಸಹ ಸಿಕ್ಕಾಪಟ್ಟೆ ಪವರ್​ಫುಲ್​ ಇದೆಯಂತೆ. ಇದನ್ನು ನಾವು ಸುಮ್ಮನೆ ಹೇಳುತ್ತಿಲ್ಲ. ಅಧೀರ ಸಿನಿಮಾದಲ್ಲಿ ಎಷ್ಟು ಬಲಶಾಲಿ ಎಂದರೆ ಹಾಲಿವುಡ್​ನ 'ಅವೆಂಜರ್ಸ್​: ಎಂಡ್​ಗೇಮ್​'ನ ಶಕ್ತಿಶಾಲಿ ವಿಲನ್​ ಥ್ಯಾನೋಸ್​ನಷ್ಟು ಪವರ್​ಫುಲ್​ ಅಂತೆ. ಅದಕ್ಕೆ ಈ ಪಾತ್ರಕ್ಕೆ ಸಂಜಯ್​ ಒಪ್ಪಿಕೊಂಡಿರುವುದಾಗಿ ಅವರು ಸುದ್ದಿಗೋಷ್ಠಿಯೊಂದರಲ್ಲಿ ಹೇಳಿಕೊಂಡಿದ್ದಾರೆ.

Sanjay Dutt in Prastanam movie
'ಪ್ರಸ್ತಾನಮ್​' ಚಿತ್ರದಲ್ಲಿ ಸಂಜಯ್​ ದತ್​


ಇದನ್ನೂ ಓದಿ: Kurukshetra: ಕುರುಕ್ಷೇತ್ರದಲ್ಲಿ ದರ್ಶನ್​ ಇರುವುದೇ ವಿಶೇಷ: ನಿಖಿಲ್ ಕುಮಾರಸ್ವಾಮಿ​..!

ಸಂಜಯ್​ ದತ್​ ಅವರ ಪ್ರೊಡಕ್ಷನ್​ನಲ್ಲೇ ನಿರ್ಮಿಸಲಾಗುತ್ತಿರುವ 'ಪ್ರಸ್ತಾನಮ್​'ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಜಯ್​ ಈ ಮಾತುಗಳನ್ನಾಡಿದ್ದಾರೆ. ಸಂಜು ಹೇಳಿರುವ ವಿಷಯಗಳನ್ನು ಗಮನಿಸಿದರೆ ಸಾಕು 'ಕೆ.ಜಿ.ಎಫ್​ ಚಾಪ್ಟರ್​ 2' ಯಾವ ಮಟ್ಟದಲ್ಲಿರಲಿದೆ ಎಂದು ನೀವೇ ಊಹಿಸಿಕೊಳ್ಳಬಹುದು.ಥ್ಯಾನೋಸ್​ ಅನ್ನು ಶಕ್ತಿಶಾಲಿಗಳಾದ ಅವೆಂಜರ್ಸ್​ ಎಲ್ಲರೂ ಸೇರಿದರೂ ಬಗ್ಗು ಬಡಿಯೋಕೆ ಒದ್ದಾಡುತ್ತಾರೆ. ಅಂದರೆ ಅಷ್ಟೇ ಪವರ್​ಫುಲ್ ಪಾತ್ರ ಅಧೀರನನ್ನು ರಾಕಿಂಗ್​ ಮಾನ್​ಸ್ಟರ್​ ಹೇಗೆ ಎದುರಿಸುತ್ತಾರೆ ಅನ್ನೋದೇ ಈ ಸಿನಿಮಾದ ಹೈಲೈಟ್​.

Topless Yoga Pose: ಸಂಚಲನ ಮೂಡಿಸಿದೆ ಕಿರುತೆರೆ ನಟಿಯ ಟಾಪ್​ಲೆಸ್​ ಯೋಗಾ ಪೋಸ್​..!


First published: July 31, 2019, 11:46 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading